ಈ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಗೆ ಇಡೀ ಟೆಕ್ ವಲಯವೇ ಕಾದು ನಿಂತಿದೆ ಯಾಕೆ?
ಈ ವರ್ಷದ ಆರಂಭದಿಂದಲೂ ಕೂಡ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳ ಭರಾಟೆ ಜೋರಾಗಿದೆ. ನವೀನ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಸ್ಮಾರ್ಟ್‌ಫೋನ್ ಪ್ರಿಯರಿಗೆ ಹಲವು ಆಯ್ಕೆಗಳು ಲಭ್ಯವಾಗುತ್ತಿವೆ. ಅಲ್ಲದೆ ಜೂನ್ ಜುಲೈ ತಿಂಗಳಿನಲ್ಲಿಯೂ ಕೂಡ ಅನೇಕ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಗೆ ಸರದಿ ಸಾಲಿನಲ್ಲಿ ನಿಂತಿವೆ.
ಹೌದು, ಈ ತಿಂಗಳ ಅಂತ್ಯದಲ್ಲಿ ಹಾಗೂ ಜುಲೈ ತಿಂಗಳ ಆರಂಭದಲ್ಲಿ ಹಲವು ಆಕರ್ಷಕ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ನೀಡೋದು ಪಕ್ಕಾ ಆಗಿದೆ. ಈ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದ್ದು, ತಮ್ಮ ಫೀಚರ್ಸ್ ಲೀಕ್ ಹಾಗೂ ಡಿಸೈನ್ ಮೂಲಕ ಸ್ಮಾರ್ಟ್‌ಫೋನ್ ಪ್ರಿಯರು ತುದಿಗಾಲಲ್ಲಿ ನಿಲ್ಲುವಂತೆ ಮಾಡಿವೆ. ಸದ್ಯ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸೋಕೆ ಸಜ್ಜಾಗಿರುವ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜುಲೈನಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳಲ್ಲಿ ಗ್ಯಾಲಕ್ಸಿ Z ಫ್ಲಿಪ್ 5 ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 Gen 2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಸ್ಮಾರ್ಟ್‌ಫೋನ್ 8 GB RAM ಮತ್ತು 128 GB ಇಂಟರ್ ಸ್ಟೋರೇಜ್ ಆಯ್ಕೆಯಲ್ಲಿ ಬರುವ ಸಾಧ್ಯತೆಯಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 5
ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 ಸ್ಮಾರ್ಟ್‌ಫೋನ್ ಜುಲೈ ತಿಂಗಳ ಅಂತ್ಯದಲ್ಲಿ ಭಾರತಕ್ಕೆ ಎಂಟ್ರಿ ನೀಡಲಿದೆ. ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 Gen 2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಅಡ್ವಾನ್ಸ್ ಅಂಡರ್-ಡಿಸ್‌ಪ್ಲೇ ಸೆಲ್ಫಿ ಕ್ಯಾಮೆರಾಗಳನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಇದರ ಕ್ಯಾಮೆರಾ ಸೆಟ್‌ಅಪ್ ಹೇಗಿರಲಿದೆ ಎಂಬುದು ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ನಥಿಂಗ್ ಫೋನ್ (2)
ಇನ್ನು ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ನಥಿಂಗ್ ಕಂಪೆನಿ ಸಂಚಲನ ಸೃಷ್ಟಿಸಿದೆ. ಈ ಭಾರಿ ತನ್ನ ಹೊಸ ನಥಿಂಗ್ ಫೋನ್ (2) ಮೂಲಕ ಹೊಸ ಅಲೆ ಎಬ್ಬಿಸುವ ಸೂಚನೆ ನೀಡಿದೆ. ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಕೂಡ ಹಿಂಭಾಗದಲ್ಲಿ ಸುಧಾರಿತ ಗ್ಲಿಫ್ ಲೈಟಿಂಗ್ ಅನ್ನು ಪ್ಯಾಕ್ ಮಾಡುತ್ತದೆ ಎನ್ನಲಾಗಿದೆ. ಇದರ ಕ್ಯಾಮೆರಾ ಸೆಟ್‌ಅಪ್ ಕೂಡ ಇನ್ನಷ್ಟು ಆಕರ್ಷಣೀಯವಾಗಿರಲಿದೆ ಎನ್ನಲಾಗಿದೆ.

ಮೊಟೊರೊಲಾ ರೇಜರ್ 40 ಸರಣಿ
ಮೊಟೊರೊಲಾ ರೇಜರ್ ಭಾರತಕ್ಕೆ ಶೀಘ್ರದಲ್ಲೇ ಎಂಟ್ರಿ ನೀಡೋದು ಪಕ್ಕಾ ಆಗಿದೆ. ಈ ಸರಣಿಯಲ್ಲಿ ಮೊಟೊ ರೇಜರ್ 40 ಮತ್ತು ಮೊಟೊ ರೇಜರ್ 40 ಅಲ್ಟ್ರಾ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲಿದೆ. ಈ ಸ್ಮಾರ್ಟ್‌ಫೋನ್ ಫೋಲ್ಡಬಲ್ ವಿನ್ಯಾಸದೊಂದಿಗೆ ಬರಲಿದ್ದು, ರೇಜರ್ 40 ಅಲ್ಟ್ರಾ ಫ್ಲಿಪ್-ಶೈಲಿಯ ಫೋಲ್ಡಬಲ್‌ನಲ್ಲಿ 3.6 ಇಂಚಿನ pOLED ಕವರ್ ಡಿಸ್‌ಪ್ಲೇ ಹೊಂದಿರಲಿದೆ. ಇದರ ಕ್ಯಾಮೆರಾ ಸೆಟ್‌ಅಪ್ ಬಗ್ಗೆ ಇನ್ನುಯ ಮಾಹಿತಿ ಬಹಿರಂಗವಾಗಿಲ್ಲ.
ಐಕ್ಯೂ ನಿಯೋ 7 ಪ್ರೊ
ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್‌ಫೋನ್ ಇದೇ ಜುಲೈ 4 ರಂದು ಬಿಡುಗಡೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 120Hz ರಿಫ್ರೆಶ್ ರೇಟ್ ಬೆಂಬಲಿಸುವ ಡಿಸ್‌ಪ್ಲೇಯನ್ನು ಒಳಗೊಂಡಿರಲಿದೆ. ಇನ್ನು ಸ್ಮಾರ್ಟ್‌ಫೋನ್ ಇನ್ ಡಿಸ್‌ಪ್ಲೇ ಸೆನ್ಸಾರ್ ಕ್ಯಾಮೆರಾ ಒಳಗೊಂಡಿದೆ ಎನ್ನಲಾಗಿದೆ. ಇದು ಯಾವ ಬೆಲೆಯಲ್ಲಿ ಬರಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.


Click it and Unblock the Notifications








