ಭಾರತದಲ್ಲಿ ಲಭ್ಯವಿರುವ ಟಾಪ್‌ 5 ಮ್ಯೂಸಿಕ್‌ ಸ್ಟ್ರೀಮಿಂಗ್‌ ಆಪ್ಸ್‌!

|

ಒತ್ತಡದ ಸಂದರ್ಭವಾಗಿರಲಿ, ಸಂತೋಷದ ಘಳಿಗೆ ಆಗಿರಲಿ ಅಲ್ಲಿ ಮ್ಯೂಸಿಕ್‌ ಅನ್ನೊದು ಇದ್ದರೆ ಸಾಕು ಸಮಯ ಸಾಗುವುದೇ ತಿಳಿಯೊದಿಲ್ಲ. ಹಾಡು ಹಲೆಯದಾದರೇನು ರಾಗ ನವ ನವೀನ ಅನ್ನೊ ಹಾಗೇ ಮ್ಯೂಸಿಕ್‌ ಮೇಲಿನ ಪ್ರೀತಿ ಹೊಸದೇನು ಅಲ್ಲ. ಆದರೆ ಅದನ್ನ ಅನುಭವಿಸುವ ಹಾಗೂ ಸ್ವೀಕರಿಸುವ ರೀತಿ ನೀತಿಗಳಲ್ಲಿ ಬದಲಾವನೆ ಆಗಿದೆ ಅಷ್ಟೆ. ಸದ್ಯ ನಿಮಗೆಲ್ಲಾ ತಿಳಿದಿರುವ ಹಾಗೇ ಟೆಕ್ನಾಲಜಿಯ ಈ ಜಮಾನದಲ್ಲಿ ಮ್ಯೂಸಿಕ್‌ ಕೇಳುವುದಕ್ಕೆ ಅಂತಾನೆ ಸಾಕಷ್ಟು ವಿಭಿನ್ನ ಮಾದರಿಯ ಮ್ಯೂಸಿಕ್‌ ಸ್ಟ್ರೀಮಿಂಗ್‌ ಸೇವೆ ನೀಡುವ ಆಪ್‌ಗಳಿವೆ.

ಮ್ಯೂಸಿಕ್‌

ಹೌದು, ಟೆಕ್‌ ವಲಯದಲ್ಲಿ ಮ್ಯೂಸಿಕ್‌ ಸ್ಟ್ರೀಮಿಂಗ್‌ ಸೇವೆ ನಿಡುವ ಸಾಕಷ್ಟು ವೈವಿಧ್ಯಮಯವಾದ ಅಪ್ಲಿಕೇಶನ್‌ಗಳು ಲಭ್ಯವಿವೆ. ಇವುಗಳಲ್ಲಿ ಹಲವು ಮ್ಯೂಸಿಕ್‌ ಆಪ್‌ಗಳು ಮ್ಯೂಸಿಕ್‌ ಪ್ರಿಯರ ನೆಚ್ಚಿನ ಆಪ್‌ಗಳಾಗಿ ಗುರುತಿಸಿಕೊಂಡಿವೆ. ಆದರೂ ಲಭ್ಯವಿರುವ ಮ್ಯೂಸಿಕ್‌ ಸ್ಟ್ರೀಮಿಂಗ್‌ ಆಪ್‌ಗಳಲ್ಲಿ ಟಾಪ್‌ 5 ಮ್ಯೂಸಿಕ್‌ ಸ್ಟ್ರೀಮಿಂಗ್‌ ಆಪ್ಸ್‌ ಯಾವುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಪಾಟಿಫೈ

ಸ್ಪಾಟಿಫೈ

ಸದ್ಯ ಮ್ಯೂಸಿಕ್‌ ಸ್ಟ್ರೀಮಿಂಗ್‌ ಸೇವೆ ನಿಡುವ ಆಪ್‌ಗಳಲ್ಲಿ ಟಾಪ್‌ 5 ಅಪ್ಲಿಕೇಶನ್‌ಗಳಲ್ಲಿ ಸ್ಪಾಟಿಫೈ ಮ್ಯೂಸಿಕ್‌ ಸ್ಟ್ರೀಮಿಂಗ್ ಅಪ್ಲಿಕೇಶನ್‌ ಕೂಡ ಒಂದಾಗಿದೆ. ಹೊಸ ಮಾದರಿಯ ಮ್ಯೂಸಿಕ್‌ ಮತ್ತು ಆರ್ಟಿಸ್ಟ್‌ಗಳ ಮ್ಯೂಸಿಕ್‌ ಅನುಭವಿಸೋದಕ್ಕೆ ಇದು ಅತ್ಯುತ್ತಮ ಅಪ್ಲಿಕೇಶನ್ ಆಗಿದೆ. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಾಕಷ್ಟು ಹೊಸ ಮಾದರಿಯ ಮ್ಯೂಸಿಕ್‌ ಲೈಬ್ರರಿಯನ್ನ ಇದು ಹೊಂದಿದ್ದು, ಹೊಸ ರೀತಿಯ ಮ್ಯೂಸಿಕ್‌ ಅನುಭವ ಪಡೆದುಕೊಳ್ಳುವುದಕ್ಕೆ ಇದು ಉತ್ತಮ ಅಪ್ಲಿಕೇಶನ್‌ ಆಗಿದೆ. ಇದಲ್ಲದೆ ಈ ಅಪ್ಲಿಕೇಶನ್‌ ಅಲ್ಲಿ ದಿನಕ್ಕೆ 13 ರೂ.ಗಳೊಂದಿಗೆ ಒಂದು ದಿನದ ಪ್ರೀಮಿಯಂ ಸೇವೆ, ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿಗಳು ತಿಂಗಳಿಗೆ 59 ರೂ., ಉಚಿತ 3 ತಿಂಗಳ ಪ್ರಾಯೋಗಿಕ ಅವಧಿ ಮತ್ತು 6 ಖಾತೆಗಳೊಂದಿಗೆ ಫ್ಯಾಮಿಲಿ ಪ್ಯಾಕ್‌ಗಳನ್ನು ಸಹ ನೀಡಲಿದೆ.

ವಿಂಕ್

ವಿಂಕ್

ಸದ್ಯ ಲಭ್ಯವಿರುವ ಮ್ಯೂಸಿಕ್‌ ಸ್ಟ್ರೀಮಿಂಗ್‌ ಆಪ್ಲಿಕೇಶನ್‌ಗಳಲ್ಲಿ ಉತ್ತಮವಾದ ಮತ್ತೊಂದು ಅಪ್ಲಿಕೇಶನ್‌ ಅಂದರೆ ಅದು ವಿಂಕ್‌ ಮ್ಯೂಸಿಕ್‌ ಆಗಿದೆ. ಸ್ಪಾಟಿಫೈ ಮ್ಯೂಸಿಕ್‌ ಆಪ್‌ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸುವ ಮೊದಲು, ಈ ಆನ್‌ಲೈನ್ ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಸಂಗೀತ ಪ್ರಿಯರಿಗೆ ಉನ್ನತ ಆಯ್ಕೆಯಾಗಿತ್ತು, ಸದ್ಯ ಇದೀಗ ಲಾಕ್‌ಡೌನ್ ಸಮಯದಲ್ಲಿ ವಿಂಕ್ ಜನಪ್ರಿಯ ಕಲಾವಿದರೊಂದಿಗೆ # ವಿಂಕ್‌ಕಾನ್ಸರ್ಟ್ ಹೊಂದಿದ್ದು, ಜನಪ್ರಿಯ ಸಂಗೀತದ ಉತ್ತಮ ಆಯ್ಕೆಯನ್ನು ನಿಡಿದೆ. ಇನ್ನು ಈ ಸೇವೆ ಪಡೆದುಕೊಳ್ಳಲು ಏರ್‌ಟೆಲ್‌ ಚಂದಾದಾರರಾಗಿರಬೇಕು ಹಾಗೂ ಈ ಮ್ಯೂಸಿಕ್‌ ಸ್ಟ್ರೀಮಿಂಗ್‌ ಅಪ್ಲಿಕೇಶನ್‌ ಅಲ್ಲಿ ನಿಮ್ಮ ನಂಬರ್ ಒನ್ ಪಿಕ್ ಆಗಿರಬೇಕು.

ಜಿಯೋಸಾವ್ನ್

ಜಿಯೋಸಾವ್ನ್

ಆನ್‌ಲೈನ್ ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜಿಯೋ ಸಾವ್ನ್ ಕೂಡ ಉತ್ತಮ ಅಪ್ಲಿಕೇಶನ್‌ ಆಗಿದೆ. ಬಳಕೆದಾರರಿಗೆ ಉತ್ತಮ ಮ್ಯೂಸಿಕ್‌ ಅನುಭವ ನಿಡುವಲ್ಲಿ ಉತ್ತಮ ಆಯ್ಕೆಯಾಗಿದ್ದು, ಇದು ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಇದು ಜಿಯೋ ಗ್ರಾಹಕರಿಗೆ ಮೂರು ತಿಂಗಳ ಪ್ರಾಯೋಗಿಕ ಅವಧಿಯನ್ನು ಹೊಂದಿದೆ. ಇದರಲ್ಲಿ ವಿಶೇಷವಾಗಿ ಪ್ರಾದೇಶಿಕ ಮತ್ತು ಹಿಂದಿ ಹಾಡುಗಳಿಗೆ ಮ್ಯೂಸಿಕ್‌ ಲೈಬ್ರರಿಯಲ್ಲಿ ಬೃಹತ್‌ ಆಯ್ಕೆಯನ್ನ ನೀಡಲಿದೆ.

ಗಾನಾ

ಗಾನಾ

ಇನ್ನು ಗಾನಾ ಭಾರತದ ಮೊದಲ ಆನ್‌ಲೈನ್ ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆಗಳಲ್ಲಿ ಒಂದಾಗಿದೆ. ಇದಲ್ಲದೆ ಭಾರತದಲ್ಲಿ ಹೆಚ್ಚು ಆದ್ಯತೆಯ ಮ್ಯೂಸಿಕ್‌ ಸ್ಟ್ರೀಮಿಂಗ್ ಸೇವೆಯನ್ನ ನೀಡಲಿದೆ ಎನ್ನಲಾಗ್ತಿದೆ. ಮ್ಯೂಸಿಕ್‌ ಲೈಬ್ರರಿಯಲ್ಲಿ 21 ಭಾಷೆಗಳಲ್ಲಿ ಹಾಡುಗಳನ್ನು ಹೊಂದಿದೆ. ಇದರಲ್ಲಿ ಪ್ರೀಮಿಯಂ ಮತ್ತು ಉಚಿತ ಆವೃತ್ತಿ ಎರಡೂ ಆವೃತ್ತಿಗಳಲ್ಲಿಯೂ ಸಹ ನೀಡಲಿದೆ. ಇದಲ್ಲದೆ ಉತ್ತಮ ಇಂಟರ್‌ಫೇಸ್‌ ಮತ್ತು ಮನೆಯಲ್ಲಿ ಬೆಳೆದ ಅಪ್ಲಿಕೇಶನ್, ಪಟ್ಟಿಯಲ್ಲಿರುವ ಏಕೈಕ ಸಂಪೂರ್ಣ ಭಾರತೀಯ ಆನ್‌ಲೈನ್ ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆ ಇದಾಗಿದೆ.

ಆಪಲ್ ಮ್ಯೂಸಿಕ್‌

ಆಪಲ್ ಮ್ಯೂಸಿಕ್‌

ಮ್ಯೂಸಿಕ್‌ ಸ್ಟ್ರೀಮಿಂಗ್‌ ಸೇವೆಗಳಲ್ಲಿ ಆಪಲ್ ಮ್ಯೂಸಿಕ್ ಸೇವೆ ಕೂಡ ಒಂದಾಗಿದೆ. ಸದ್ಯ ತನ್ನ ಮ್ಯೂಸಿಕ್‌ ಸ್ಟ್ರೀಮಿಂಗ್‌ ಸೇವೆಗಳಲ್ಲಿ ಹೊಸ ಮಾದರಿಯ ಫೀಚರ್ಸ್‌ಗಳನ್ನ ಸೇರಿಸಿದ್ದು, ಇದು ಆಂಡ್ರಾಯ್ಡ್ ಮತ್ತು ಐಒಎಸ್ ಡಿವೈಸ್‌ಗಳಲ್ಲಿ ಲಭ್ಯವಿದೆ. ಆದರೆ ಆಪಲ್ ಬಳಕೆದಾರರಿಗೆ ಮಾತ್ರ ಇದು ಹೆಚ್ಚು ಅನುಕೂಲಕರವಾಗಿದೆ. ಇನ್ನು ಈ ಸ್ಟ್ರೀಮಿಂಗ್‌ ಸೇವೆ ಆಪಲ್ ವಾಚ್, ಐಪಾಡ್‌ಗಳು, ಸಿರಿ ಮತ್ತು ಐಟ್ಯೂನ್ಸ್‌ನಂತಹ ಇತರ ಆಪಲ್ ಡಿವೈಸ್‌ಗಳೊಂದಿಗೆ ಮಾತ್ರ ಸಿಂಕ್ ಆಗುವುದರಿಂದ ಆಪಲ್ ಬಳಕೆದಾರರಿಗೆ ಉತ್ತಮವಾಗಿದೆ.

Best Mobiles in India

Read more about:
English summary
list of various online music streaming services available in India to cater to your needs.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X