Subscribe to Gizbot

ನಿತ್ಯ ಜೀವನದ ಉಪಯುಕ್ತ ಅಪ್ಲಿಕೇಶನ್‌ಗಳು

Written By:

ಮೊಬೈಲ್ ಬಳಕೆಯನ್ನು ನಾವು ಹೇಗೆ ಮಾಡುತ್ತೇವೆಯೋ ಅಂತೆಯೇ ನಮ್ಮ ನಿತ್ಯ ಜೀವನದಲ್ಲಿ ಅಪ್ಲಿಕೇಶನ್‌ಗಳು ಮುಖ್ಯ ಪಾತ್ರವನ್ನು ವಹಿಸುತ್ತವೆ. ಆಂಡ್ರಾಯ್ಡ್ ಮತ್ತು ಐಫೋನ್‌ಗಳೆರಡರಲ್ಲೂ ಕಾರ್ಯ ನಿರ್ವಹಿಸುವ ಈ ಅಪ್ಲಿಕೇಶನ್‌ಗಳು ನಮ್ಮ ದೈನಂದಿನ ಬದುಕಿನಲ್ಲಿ ಮುಖ್ಯ ಕಾರ್ಯವನ್ನು ನಿರ್ವಹಿಸುವಂತವುಗಳಾಗಿವೆ. ಈ ಅಪ್ಲಿಕೇಶನ್‌ಗಳ ಪ್ರಯೋಗದಿಂದಲೇ ಇಂದು ಸ್ಮಾರ್ಟ್‌ಫೋನ್ ವ್ಯವಹಾರ ಟಾಪ್ ಸ್ಥಿತಿಯಲ್ಲಿದೆ.

ಇದನ್ನೂ ಓದಿ: ಮೂರು ವಿಧಾನದಲ್ಲಿ ಐಕ್ಲೌಡ್ ಅನ್ನು ನಿಷ್ಕ್ರಿಯಗೊಳಿಸಿ

ನಾವು ವಿವಿಧ ಉದ್ದೇಶಗಳಿಗಾಗಿ ಬಳಸುವಂತಹ ಅಪ್ಲಿಕೇಶನ್‌ಗಳು ಕೂಡ ಲಭ್ಯವಿದೆ. ಕೆಲವೊಂದು ನಿಮ್ಮ ಚಿತ್ರಗಳನ್ನು ಉತ್ತಮವಾಗಿ ಫಿಲ್ಟರ್ ಮಾಡಲು ಸಹಾಯಕವಾಗಿರುವಂಥದ್ದಾಗಿದ್ದರೆ ಇನ್ನು ಕೆಲವು ನಿಮ್ಮ ಆರೋಗ್ಯ, ಚಟುವಟಿಕೆಗಳ ಮೇಲೆ ನಿಗಾ ಇಟ್ಟು ಪ್ರಯೋಜನವನ್ನು ಕೂಡ ನಿಮಗೆ ಒದಗಿಸುತ್ತದೆ. ಇದೇ ರೀತಿಯ ಕೆಲವೊಂದು ಅಪ್ಲಿಕೇಶನ್‌ಗಳ ಮಾಹಿತಿಯನ್ನು ನಾವಿಲ್ಲಿ ನೀಡುತ್ತಿದ್ದ ಇದು ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದೆನಿಸಲಿದೆ. ಹಾಗಿದ್ದರೆ ಇಲ್ಲಿದೆ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿರುವ ಟಾಪ್ ಐದು ಅಪ್ಲಿಕೇಶನ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬುಕ್ ಮೈ ಶೋ

#1

ನೀವು ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ವಾರಾಂತ್ಯದ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಬುಕ್ ಮಾಡಿಕೊಳ್ಳಬಹುದು. ಇದು ಶೋಗಳ ಸಮಯವನ್ನು ಮಾತ್ರ ನಿಮಗೆ ತಿಳಿಸದೇ ನೀವು ಅಪ್ಲಿಕೇಶನ್ ಅನ್ನು ಬಳಸಿಕೊಂಡು ಟಿಕೇಟ್ ಅನ್ನು ಕೂಡ ಬುಕ್ ಮಾಡಬಹುದು.

ಐಪಿಎಲ್ ಅಧಿಕೃತ ಅಪ್ಲಿಕೇಶನ್

#2

ಇನ್ನು ನಿಮ್ಮ ಕ್ರಿಕೆಟ್ ಜ್ವರವನ್ನು ತಣಿಸುವ ಅಪ್ಲಿಕೇಶನ್ ಆಗಿ ಐಪಿಎಲ್ ಮಿಂಚಿದೆ. ಕ್ರಿಕೆಟ್‌ನ ಕುರಿತಾದ ನಿಖರ ಮಾಹಿತಿಯನ್ನು ಈ ಅಪ್ಲಿಕೇಶನ್ ಬಳಸಿಕೊಂಡು ನಿಮಗೆ ದಾಖಲಿಸಬಹುದಾಗಿದೆ.

ಜೊಮಾಟೊ

#3

ನಗರದ ಉತ್ತಮ ಹೋಟೆಲ್‌ಗಳ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡುವ ಈ ಅಪ್ಲಿಕೇಶನ್ ಹೆಚ್ಚು ಪ್ರಯೋಜನಕಾರಿ ಎಂದೆನಿಸಲಿದೆ. ಇದರಲ್ಲಿ ಹೆಚ್ಚಿನ ಫಿಲ್ಟರ್‌ಗಳನ್ನು ಬಳಸಿ ನಿಮಗೆ ಬೇಕಾದ್ದನ್ನು ಆರಿಸಬಹುದಾಗಿದೆ. ಇದು ನಿಜಕ್ಕೂ ಪ್ರಯೋಜನಕಾರಿ ಎಂದೆನಿಸಲಿದೆ.

ಫ್ಲಿಪ್‌ಕಾರ್ಟ್

#4

ಬಹು ಪ್ರಸಿದ್ಧ ರೀಟೈಲ್ ತಾಣವಾಗಿರುವ ಫ್ಲಿಪ್‌ಕಾರ್ಟ್ ಶಾಪಿಂಗ್ ತಾಣವಾಗಿ ಬಹು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ನಿಮ್ಮ ಫೋನ್‌ನಲ್ಲಿ ಹೆಚ್ಚು ಮುಖ್ಯವಾಗಿ ಬೇಕಾಗಿರುವ ಅಪ್ಲಿಕೇಶನ್ ಇದಾಗಿದೆ.

ವಾಟ್ಸಾಪ್

#5

ಇನ್ನು ಕೊನೆಯದಾಗಿ ನಿಮ್ಮ ಫೋನ್ ಹೊಂದಿರಲೇಬೇಕಾದ ಅತಿ ಮುಖ್ಯವಾದ ಅಪ್ಲಿಕೇಶನ್ ಆಗಿದೆ ವಾಟ್ಸಾಪ್. ಇದು ನಿಜಕ್ಕೂ ಹೆಚ್ಚು ಪ್ರಯೋಜನಕಾರಿ ಎಂದೆನಿಸಲಿರುವ ಅಪ್ಲಿಕೇಶನ್ ಆಗಿದ್ದು ನಿಮ್ಮ ದಿನವನ್ನು ಹೆಚ್ಚು ಮಹತ್ವಪೂರ್ಣವನ್ನಾಗಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Top 5 Must-Have Apps Every Indian Should Download.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot