Home
ಸುದ್ದಿಜಾಲ

ಇ-ಕಾಮರ್ಸ್‌ ಸೈಟ್‌ಗಳಲ್ಲಿ ಡಿಸ್ಕೌಂಟ್‌ನಲ್ಲಿ ದೊರೆಯುವ ಟಾಪ್ 5 ಸ್ಮಾರ್ಟ್‌ಫೋನ್‌ಗಳು!

ಇತ್ತೀಚಿನ ದಿನಗಳಲ್ಲಿ ಇ-ಕಾಮರ್ಸ್‌ ಸೈಟ್‌ಗಳು ಹೆಚ್ಚಿನ ರಿಯಾಯಿತಿ ದರದಲ್ಲಿ ಪ್ರಾಡಕ್ಟ್‌ಗಳನ್ನು ಖರೀದಿಸಲು ಅವಕಾಶ ನೀಡುತ್ತಿವೆ. ಸದ್ಯ ಇದೀಗ ಜನಪ್ರಿಯ ಇ-ಕಾಮರ್ಸ್‌ ಸೈಟ್‌ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ ಅನ್ನು ಇದೇ ಜುಲೈ 25 ರಂದು ಪ್ರಾರಂಭಿಸುತ್ತಿದೆ. ಹಾಗೆಯೇ ಇ-ಕಾಮರ್ಸ್‌ ದೈತ್ಯ ಅಮೆಜಾನ್ ತನ್ನ ಪ್ರೈಮ್ ಡೇ ಸೇಲ್ ಅನ್ನು ಜುಲೈ 26 ರಂದು ಪ್ರಾರಂಭಿಸುತ್ತಿದೆ. ಈ ಎರಡೂ ಸೇಲ್‌ಗಳನ್ನು ಗ್ರಾಹಕರಿಗೆ ಭರ್ಜರಿ ರಿಯಾಯಿತಿ ದೊರೆಯಲಿದೆ.

ಇ-ಕಾಮರ್ಸ್‌ ಸೈಟ್‌ಗಳಲ್ಲಿ ಡಿಸ್ಕೌಂಟ್‌ನಲ್ಲಿ ದೊರೆಯುವ ಟಾಪ್ 5 ಫೋನ್‌ಗಳು!
ಹೌದು, ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ ಮತ್ತು ಅಮೆಜಾನ್‌ ಪ್ರೈಮ್‌ ಡೇ ಸೇಲ್‌ಗೆ ಒಂದು ದಿನದ ಆಂತರದಲ್ಲಿ ಪ್ರಾರಂಭವಾಗುತ್ತಿದೆ. ಈ ಸೇಲ್‌ನಲ್ಲಿ ಭರ್ಜರಿ ಡಿಸ್ಕೌಂಟ್‌ಗಳನ್ನು ನೀಡಲಾಗಿದೆ. ಅದರಲ್ಲೂ ವಿವಿಧ ವಿಭಾಗಗಳಲ್ಲಿನ ಉತ್ಪನ್ನಗಳ ಮೇಲೆ ಆಕರ್ಷಕ ರಿಯಾಯಿತಿಗಳು ಮತ್ತು ಕೊಡುಗೆಗಳು ಇರುತ್ತವೆ. ಜೊತೆಗೆ ಸ್ಮಾರ್ಟ್‌ಫೋನ್‌ಗಳ ಮೇಲೆ ಸಾಕಷ್ಟು ರಿಯಾಯಿತಿ ನೀಡಲಾಗ್ತಿದೆ. ಹಾಗಾದ್ರೆ ಈ ಸೇಲ್‌ಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಯಾವೆಲ್ಲಾ ರಿಯಾಯಿತಿ ಇದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆಪಲ್ ಐಫೋನ್ 12
ಇ-ಕಾಮರ್ಸ್ ಸೈಟ್‌ ಫ್ಲಿಪ್‌ಕಾರ್ಟ್‌ನಲ್ಲಿ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ ಸಮಯದಲ್ಲಿ, ಆಪಲ್ ಐಫೋನ್ 12 ಅನ್ನು 67,999 ರೂ.ಗಳಿಗೆ ಖರೀದಿಸಬಹುದಾಗಿದೆ. ಅಲ್ಲದೆ ಹೆಚ್ಚುವರಿ ರಿಯಾಯಿತಿ, ನೋ ಕಾಸ್ಟ್‌ ಇಎಂಐ ಮತ್ತು ಇತರ ಹಲವು ಆಯ್ಕೆಗಳನ್ನು ನೀಡಲಾಗಿದೆ.

ರಿಯಲ್‌ಮಿ ಎಕ್ಸ್ 7 ಮ್ಯಾಕ್ಸ್ 5ಜಿ
ನೀವು ರಿಯಲ್‌ಮಿ ಎಕ್ಸ್ 7 ಮ್ಯಾಕ್ಸ್ 5 ಜಿ ಸ್ಮಾರ್ಟ್ಫೋನ್ ಅನ್ನು ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ 23,499 ರೂ.ಗಳಿಗೆ ಖರೀದಿಸಬಹುದಾಗಿದೆ. ಆಕರ್ಷಿಸುವ ರಿಯಾಯಿತಿಗಳನ್ನು ಪಡೆಯಲು ಮಾರಾಟದ ಸಮಯದಲ್ಲಿ ಆನ್‌ಲೈನ್ ಚಿಲ್ಲರೆ ವ್ಯಾಪಾರಿಗಳ ಸೈಟ್‌ಗೆ ಬೇಟಿ ನೀಡಿರಿ.

ರೆಡ್ಮಿ ನೋಟ್ 10 ಟಿ 5 ಜಿ
ರೆಡ್ಮಿ ನೋಟ್ 10 ಟಿ 5 ಜಿ ಸ್ಮಾರ್ಟ್‌ಫೋನ್‌ನಲ್ಲಿ ಕೆಲವು ಅಧಿಕೃತ ರಿಯಾಯಿತಿಗಳು ಇತ್ತೀಚೆಗೆ ಅಧಿಕೃತವಾಗಿವೆ. ಅಮೆಜಾನ್ ಪ್ರೈಮ್ ಡೇ ಸೇಲ್‌ 2021 ರಲ್ಲಿ ನೀವು ಈ ಸ್ಮಾರ್ಟ್ಫೋನ್ ಅನ್ನು ರಿಯಾಯಿತಿಯಲ್ಲಿ ಪಡೆಯಬಹುದು.

ಮೋಟೋ ಜಿ 40 ಫ್ಯೂಷನ್
ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರುವ ಮೋಟೋ ಜಿ 40 ಫ್ಯೂಷನ್ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಮೊಟೊರೊಲಾ ಸಂಸ್ಥೆಯ ಸ್ಮಾರ್ಟ್‌ಫೋನ್ ನೀವು ಕೇವಲ 13,499 ರೂ.ಗಳಿಗೆ ಖರೀದಿಸಬಹುದಾಗಿದೆ.

ಪೊಕೊ ಎಕ್ಸ್ 3 ಪ್ರೊ
ಹೊಸದಾಗಿ ಬಿಡುಗಡೆಯಾದ ಸ್ಮಾರ್ಟ್‌ಫೋನ್‌ಗಳಲ್ಲಿ ಪೊಕೊ ಎಕ್ಸ್ 3 ಪ್ರೊ ಕೂಡ ಒಂದಾಗಿದೆ. ಇದನ್ನು ಫ್ಲಿಪ್‌ಕಾರ್ಟ್‌ನ ಸೇಲ್‌ನಲ್ಲಿ 17,249ರೂ,ಗಳಿಗೆ ಖರೀದಿಸಬಹುದಾಗಿದೆ. ಜೊತೆಗೆ ನೋ ಕಾಸ್ಟ್‌ ಇಎಂಐ ಪಾವತಿ ಆಯ್ಕೆಗಳು ಮತ್ತು ವಿನಿಮಯ ರಿಯಾಯಿತಿಗಳೊಂದಿಗೆ ನೀವು ಅದನ್ನು ಪಡೆಯಬಹುದು.

Best Mobiles in India

English summary
Flipkart Big Saving Days sale will debut on July 25 and Amazon Prime Day Sale is scheduled to debut on July 26.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+