2019ರ ಟಾಪ್ ಸ್ಮಾರ್ಟ್‌ವಾಚ್‌ಗಳು!
ಪ್ರಸ್ತುತ ಟೆಕ್ ಮಾರುಕಟ್ಟೆಯಲ್ಲಿ ಎಲ್ಲವೂ ಸ್ಮಾರ್ಟ್ ಆಗುತ್ತಿದೆ. ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಾಂಚ್ ಆದಷ್ಟೇ ಸಂಖ್ಯೆಯಲ್ಲಿ ಸ್ಮಾರ್ಟ್‌ವಾಚ್‌ಗಳು ಕೂಡ ಮಾರುಕಟ್ಟೆಗೆ ದಾಂಗುಡಿ ಇಡ್ತಾ ಇರೋದು ನಿಮಗೆ ಗೊತ್ತೆ ಇದೆ. ಬಾಡಿ ಫಿಟ್ನೆಸ್ ಮಾಹಿತಿಯನ್ನ ನೀಡಬಲ್ಲ ಫಿಟ್ನೆಸ್ ಬ್ಯಾಂಡ್‌ಗಳು ಕೂಡ ಮಾರುಕಟ್ಎಯಲ್ಲಿ ಸೌಂಡ್ ಮಾಡಿವೆ. ಸ್ಮಾರ್ಟ್‌ವಾಚ್‌ಗಳು ಕೇವಲ ಸಮಯವನ್ನ ತಿಳಿಸುವುದಕ್ಕೆ ಸೀಮಿತವಾಗಿಲ್ಲ ಬದಲಿಗೆ ಬಳಕೆದಾರನ ದೇಹದ ರಕ್ತದ ಗುಣಮಟ್ಟವನ್ನು ಅಳೆಯಬಲ್ಲಷ್ಟು ಸ್ಮಾರ್ಟ್ ಆಗಿವೆ.

ಹೌದು ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ವಾಚ್‌ಗಳ ಭರಾಟೆ ಜೋರಾಗಿಯೇ ಇದೆ. ಬಾಡಿ ಫಿಟ್ನೆಸ್ ಆಧಾರಿತ ಸಾಕಷ್ಟು ವಿಭಿನ್ನ ಫಿಚರ್ಸ್‌ಗಳುಳ್ಳ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಗೆ ದಾಂಗುಡಿ ಇಟ್ಟಿವೆ. ಸದ್ಯ ಈಗಾಗಲೇ ಸಾಕಷ್ಟು ಸೌಂಡ್ ಮಾಡಿರೋ ಸ್ಮಾರ್ಟ್‌ವಾಚ್‌ಗಳ ಪೈಕಿ 2019ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಸೌಂಡ್ ಮಾಡಿದ ಟಾಪ್ 5 ಸ್ಮಾರ್ಟ್‌ವಾಚ್‌ಗಳು ಯಾವುದು ಅನ್ನೊದನ್ನ ತಿಳಿಯೋದಕ್ಕೆ ಈ ಲೇಖನವನ್ನ ಓದಿ.

ಆಪಲ್ ವಾಚ್ 5
2019ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ವಾಚ್ ಪ್ರಿಯರಿಗೆ ಅತಿ ಹೆಚ್ಚು ಪ್ರಿಯವಾದ ಸ್ಮಾರ್ಟ್‌ವಾಚ್ ಆಪಲ್ ವಾಚ್ 5 ಆಗಿದೆ. ಈ ಸ್ಮಾರ್ಟ್‌ವಾಚ್ ಓಎಸ್ 6 ನಿಂದ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಆನ್ ಡಿಸ್‌ಪ್ಲೇ ವೈಶಿಷ್ಟ್ಯತೆಯನ್ನ ಹೊಂದಿದ್ದು. ಆರೋಗ್ಯ ಮಾಹಿತಿಯ ಜೊತೆಗೆ ಟಾಪ್-ಆಫ್-ಲೈನ್ ಇಸಿಜಿ ಪತ್ತೆ ಮಾಡುವ ವಿಶೇಷತೆಯನ್ನ ಒಳಗೊಂಡಿದೆ. ಜೊತೆಗೆ ಆಪಲ್ ವಾಚ್ 5ನಲ್ಲಿ ಸಂಕಷ್ಟ ಸಂದರ್ಭದಲ್ಲಿ ತುರ್ತುಕರೆಗಳನ್ನ ಮಾಡಲು ಕೂಡ ಅವಕಾಶವನ್ನ ಸಹ ನೀಡಲಾಗಿದೆ. ಅಲ್ಲದೆ ನ್ಯಾವಿಗೇಟ್ ಫೀಚರ್ಸ್‌ಅನ್ನು ಸಹ ಕಲ್ಪಿಸಲಾಗಿದೆ. ಈ ಸ್ಮಾರ್ಟ್‌ವಾಚ್ ಭಾರತದಲ್ಲಿ 40,900 ರೂ ಬೆಲೆಯನ್ನ ಹೊಂದಿದ್ದು, ಅಲ್ಯೂಮಿನಿಯಂ, ಸ್ಟೇನ್ಲೆಸ್ ಸ್ಟೀಲ್, ಸೆರಾಮಿಕ್ ಕಲರ್‌ನಲ್ಲಿ ಖರೀದಿಗೆ ಲಭ್ಯವಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 4G
ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 4G ಇ-ಸಿಮ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸುವ ಸ್ಯಾಮ್‌ಸಂಗ್‌ನ ಮೊದಲ ಸ್ಮಾರ್ಟ್ ವಾಚ್ ಆಗಿದೆ. ಈ ಸ್ಮಾರ್ಟ್‌ವಾಚ್ ಎಲ್ ಟಿಇ ಸಂಪರ್ಕವನ್ನ ಹೊಂದಿದ್ದು ಸ್ಮಾರ್ಟ್‌ಫೋನ್ ಬದಲಿಗೆ ಈ ವಾಚ್ ಅನ್ನು ಬಳಸಬಹುದಾಗಿದೆ. ಇನ್ನು ಈ ವಾಚ್ ಜಿಪಿಎಸ್ ಮ್ಯಾಪಿಂಗ್, ಸ್ಟ್ರೀಮ್ ಮ್ಯೂಸಿಕ್ ಅವಕಾಶವನ್ನ ಸಹ ಬಳಕೆದಾರರಿಗೆ ಕಲ್ಪಿಸಿದೆ. ಇನ್ನ ಈ ಸ್ಮಾರ್ಟ್‌ವಾಚ್‌ನ ಬಳಕೆದಾರರು ಏರ್‌ಟೆಲ್ ಅಥವಾ ರಿಲಯನ್ಸ್ ಜಿಯೋ ಮೂಲಕ ಇ-ಸಿಮ್ ನೋಂದಾಯಿಸಿಕೊಳ್ಳಬಹುದಾಗಿದೆ. ಅಲ್ಲದೆ ಈ ಸ್ಮಾರ್ಟ್‌ವಾಚ್ 39 ರೀತಿಯ ಆರೋಗ್ಯಕರ ಮಾಹಿತಿಯನ್ನ ಬಳಕೆದಾರರಿಗೆ ನೀಡುತ್ತದೆ. ಇದು ನಿದ್ರೆ ಮತ್ತು ಒತ್ತಡ ಟ್ರ್ಯಾಕಿಂಗ್ ಫೀಚರ್ಸ್ ಅನ್ನ ಒಳಗೊಂಡಿದೆ. ಇದರ ಬೆಲೆ 30,990.ರೂ ಆಗಿದೆ.

ಹುವಾವೇ ವಾಚ್ ಜಿಟಿ 2
ಹುವಾವೇ ವಾಚ್ ಜಿಟಿ 2 ಸ್ಮಾರ್ಟ್‌ವಾಚ್ ಕಿರಿನ್ ಎ1 ಎಸ್‌ಒಸಿ ಪ್ರೊಸೆಸರ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು 455mAh ಬ್ಯಾಟರಿ ಪ್ಯಾಕ್‌ಆಪ್‌ನ ಹೊಂದಿದ್ದು 14 ದಿನಗಳ ಬ್ಯಾಟರಿ ಅವಧಿಯನ್ನು ಒಳಗೊಂಡಿದೆ. ಇದು 15 ರೀತಿಯ ಸ್ಪೋರ್ಟ್ಸ ಟ್ರ್ಯಾಕಿಂಗ್ ಕಾರ್ಯವನ್ನು ಹೊಂದಿದದ್ದು ರನ್ನಿಂಗ್, ವಾಕಿಂಗ್, ಕ್ಲೈಂಬಿಂಗ್, ಹೈಕಿಂಗ್ ಟ್ರಯಲ್ ರನ್ನಿಂಗ್, ಸೈಕ್ಲಿಂಗ್, ಓಪನ್ ವಾಟರ್, ಟ್ರಯಥ್ಲಾನ್ ಕ್ರೀಡೆಗಳನ್ನ ಟ್ರ್ಯಾಕ್ ಮಾಡಲಿದೆ. ಇನ್ನು ಹುವಾವೇ ವಾಚ್ ಜಿಟಿ 2ನ ಬೆಲೆ 14,990 ರೂ ಆಗಿದೆ.

ಫೋಸೀಲ್ ಜನ್ 5
ಈ ಸ್ಮಾರ್ಟ್‌ವಾಚ್ ವೇರ್ ಓಎಸ್ ಪ್ರೊಸೆಸರ್ ಒಳಗೊಂಡಿದ್ದು, ವಾಟರ್ ಪ್ರೋಪ್ ಸ್ಮಾರ್ಟ್‌ವಾಚ್ ಆಗಿದೆ. ಇದು ನಡೆಸಲ್ಪಡುವ ಪಳೆಯುಳಿಕೆ, ಬೆಳೆಯುತ್ತಿರುವ ಭಾರತ ಧರಿಸಬಹುದಾದ ಮಾರುಕಟ್ಟೆಯಲ್ಲಿ Gen 22,995 ಗೆ ಜನ್ 5 ಸ್ಮಾರ್ಟ್ ವಾಚ್ ಅನ್ನು ಪರಿಚಯಿಸಿದೆ, ಇದು 1.28-ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನ ಹೊಂದಿದ್ದು 328 ಪಿಪಿಐ ಪಿಕ್ಸೆಲ್ ಸೆನ್ಸಾರ್ ಅನ್ನ ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್ ಹೃದಯ ಬಡಿತ ಮಾನಿಟರ್, ಅಕ್ಸೆಲೆರೊಮೀಟರ್, ಗೈರೊಸ್ಕೋಪ್, ಅಲ್ಟಿಮೀಟರ್ ಮತ್ತು ಆಂಬಿಯೆಂಟ್ ಲೈಟ್ ಸೆನ್ಸಾರ್ ಫೀಚರ್ಸ್ ಒಳಗೊಂಡಿದೆ. ಇನ್ನು ಇದರಲ್ಲಿ ಸ್ಪಾಟಿಫೈ, ಸುರಕ್ಷತಾ ಅಪ್ಲಿಕೇಶನ್, ನೂನ್‌ಲೈಟ್ ಮತ್ತು ನೈಕ್ ರನ್ ಆಪ್‌ಗಳನ್ನ ಇನಸ್ಟಾಲ್ ಮಾಡುವ ಅವಕಾಶ ಸಹ ಇದೆ.

ಅಮಾಜ್‌ಫಿಟ್ ಜಿಟಿಆರ್
ಸ್ಮಾರ್ಟ್‌ವಾಚ್ ಗಳಲ್ಲಿ ಅತ್ಯುತ್ತಮ ಎನಿಸಬಹುದಾದ ಸ್ಮಾರ್ಟ್‌ವಾಚ್‌ಗಳಲ್ಲಿ ಅಮಾಜ್‌ಫೀಟ್ ಸ್ಮಾರ್ಟ್‌ವಾಚ್ ಕೂಡ ಒಂದಾಗಿದ್ದು, ಈ ಸ್ಮಾರ್ಟ್ ವಾಚ್ 24 ದಿನಗಳ ಬ್ಯಾಟರಿ ಬಾಳಿಕೆ ಸಾಮರ್ಥ್ಯವನ್ನ ಹೊಂದಿದ್ದು, 1.39 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನ ಹೊಂದಿದೆ, ಜೊತೆಗೆ ಕಾರ್ನಿಂಗ್ ಗೊರಿಲ್ಲಾ 3 ಟೆಂಪರ್ಡ್ ಗ್ಲಾಸ್ ಆಂಟಿ-ಫಿಂಗರ್‌ಪ್ರಿಂಟ್ ವಿನ್ಯಾಶವನ್ನ ಸಹ ಹೊಂದಿದ್ದು, ಇದು ‘ಬಯೋಟ್ರ್ಯಾಕರ್ ಪಿಪಿಜಿ' ಆಪ್ಟಿಕಲ್ ಹೃದಯ ಬಡಿತ ಸೆನ್ಸಾರ್, ವೇಗವರ್ಧಕ ಸೆನ್ಸಾರ್, ಒತ್ತಡ ಸೆನ್ಸಾರ್, ಆಂಬಿಯೆಂಟ್ ಲೈಟ್ ಸೆನ್ಸಾರ್, ಗುಣಲಕ್ಷಣಗಳನ್ನು ಒಳಗೊಂಡಿದೆ. ಅಲ್ಲದೆ ಈ ಸ್ಮಾರ್ಟ್ ವಾಚ್ 12 ವಿಭಿನ್ನ ಕ್ರೀಡಾ ವಿಧಾನಗಳೊಂದಿಗೆ ಬರುತ್ತದೆ, ಇದರಲ್ಲಿ ಓಟ, ಸೈಕ್ಲಿಂಗ್, ಸ್ವಿಮ್ಮಿಂಗ್, ಪರ್ವತಾರೋಹಣ, ಟ್ರಯಲ್ ರನ್ನಿಂಗ್ ಮತ್ತು ತಾಲೀಮು ಆಟೋ ಟ್ರ್ಯಾಕಿಂಗ್ ಅವಕಾಶವಿದೆ. ಇದರ ಬೆಲೆ 10,999 ರೂ ಆಗಿದೆ.


Click it and Unblock the Notifications








