Home
ಸುದ್ದಿಜಾಲ

ಫೆಬ್ರವರಿ ತಿಂಗಳಿನಲ್ಲಿ ಅಬ್ಬರಿಸಲಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳ ವಿವರ ಇಲ್ಲಿದೆ!

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೊಸ ವರ್ಷದ ಆರಂಭದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಆದರೆ ಫೆಬ್ರವರಿ ತಿಂಗಳಿನಲ್ಲಿ ಮೊಬೈಲ್‌ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಯಾಗೋದು ಪಕ್ಕಾ ಆಗಿದೆ. ಯಾಕೆಂದರೆ ಈಗಾಗಲೇ ಆನ್‌ಲೈನ್‌ನಲ್ಲಿ ಸಾಕಷ್ಟು ಹಲ್‌ಚಲ್‌ ಎಬ್ಬಿಸಿರುವ ಮೊಬೈಲ್‌ಗಳು ಫೆಬ್ರವರಿ ತಿಂಗಳಿನಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಲು ತಯಾರಿ ನಡೆಸಿವೆ. ಜನಪ್ರಿಯ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳ ಪ್ರಮುಖ ಸ್ಮಾರ್ಟ್‌ಫೋನ್‌ಗಳು ಫೆಬ್ರವರಿ ತಿಂಗಳಿನಲ್ಲಿ ಲಾಂಚ್‌ ಡೇಟ್‌ ಫಿಕ್ಸ್‌ ಮಾಡಿವೆ.

ಫೆಬ್ರವರಿ ತಿಂಗಳಿನಲ್ಲಿ ಅಬ್ಬರಿಸಲಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳ ವಿವರ ಇಲ್ಲಿದೆ

ಹೌದು, ಫೆಬ್ರವರಿ 2023 ಸ್ಮಾರ್ಟ್‌ಫೋನ್‌ ವಲಯದಲ್ಲಿ ಹೊಸ ಅಲೆಯನ್ನು ಎಬ್ಬಿಸುವ ನಿರೀಕ್ಷೆಯನ್ನು ಇಡಲಾಗಿದೆ. ಸ್ಯಾಮ್‌ಸಂಗ್‌, ಒನ್‌ಪ್ಲಸ್‌, ವಿವೋ, ಪೊಕೊ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಫೆಬ್ರವರಿಯಲ್ಲಿ ಬಿಡುಗಡೆಯಾಗಲಿವೆ. ಇದರಿಂದ ಫೆಬ್ರವರಿ ತಿಂಗಳು ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ನಿರ್ಣಾಯಕ ತಿಂಗಳು ಎನಿಸಿಕೊಂಡಿದೆ. ಹಾಗಾದ್ರೆ ಫೆಬ್ರವರಿ 2023 ರಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫೆಬ್ರವರಿ ತಿಂಗಳಿನಲ್ಲಿ ಅಬ್ಬರಿಸಲಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳ ವಿವರ ಇಲ್ಲಿದೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಸರಣಿ
ಸ್ಯಾಮ್‌ಸಂಗ್‌ ಕಂಪೆನಿಯ ಸ್ಮಾರ್ಟ್‌ಫೋನ್‌ ಬಯಸೋರು ಫೆಬ್ರವರಿಯ ಮೊದಲ ವಾರದವರೆಗೆ ಮೊಬೈಲ್‌ ಖರೀದಿಗೆ ಕಾಯುವುದು ಉತ್ತಮ. ಯಾಕೆಂದ್ರೆ ಫೆಬ್ರವರಿ ತಿಂಗಳಿನಲ್ಲಿ ಸ್ಯಾಮ್‌ಸಂಗ್‌ ಕಂಪೆನಿಯ ಬಹು ನಿರೀಕ್ಷಿತ ಗ್ಯಾಲಕ್ಸಿ S23 ಸರಣಿ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಈ ಸ್ಮಾರ್ಟ್‌ಫೋನ್‌ ಇದೇ ಫೆಬ್ರವರಿ 1, 2023 ಬಿಡುಗಡೆಯಾಗಲಿದೆ. ಇನ್ನು ಈ ಸರಣಿಯಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23, ಗ್ಯಾಲಕ್ಸಿ S23+ ಮತ್ತು ಗ್ಯಾಲಕ್ಸಿ S23 ಅಲ್ಟ್ರಾ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ನೀಡಲಿವೆ. ಈ ಮೂರು ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 2 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಅದರಲ್ಲೂ ಗ್ಯಾಲಕ್ಸಿ S23 ಅಲ್ಟ್ರಾ ಸ್ಮಾರ್ಟ್‌ಫೋನ್‌ 200 ಮೆಗಾಫಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾವನ್ನು ಹೊಂದಿರಲಿದೆ ಎನ್ನಲಾಗಿದೆ.

ಒನ್‌ಪ್ಲಸ್‌ 11 5G
ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳಲ್ಲಿ ಒನ್‌ಪ್ಲಸ್‌ ಕಂಪೆನಿಯ ಒನ್‌ಪ್ಲಸ್‌ 11 5G ಫೋನ್‌ ಕೂಡ ಸೇರಿದೆ. ಈ ಸ್ಮಾರ್ಟ್‌ಫೋನ್‌ ಫೆಬ್ರವರಿ 7 ರಂದು ಬಿಡುಯಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.7 ಇಂಚಿನ E4 OLED LTPO 3.0 ಡಿಸ್‌ಪ್ಲೇ ಹೊಂದಿರಲಿದ್ದು, 120Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದೆ. ಇದು ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿರಲಿದೆ ಎಂದು ಹೇಳಲಾಗಿದೆ. ಜೊತೆಗೆ 100W ವೇಗದ ಚಾರ್ಜಿಂಗ್ ಬೆಂಬಲಿಸುವ 5000mAh ಬ್ಯಾಟರಿಯೊಂದಿಗೆ ಬರಲಿದೆ ಎನ್ನಲಾಗಿದೆ.

ಫೆಬ್ರವರಿ ತಿಂಗಳಿನಲ್ಲಿ ಅಬ್ಬರಿಸಲಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳ ವಿವರ ಇಲ್ಲಿದೆ

ಒಪ್ಪೋ ಫೈಂಡ್‌ N2 ಸರಣಿ
ಬಹು ನಿರೀಕ್ಷಿತ ಒಪ್ಪೋ ಫೈಂಡ್‌ N2 ಸರಣಿ ಸ್ಮಾರ್ಟ್‌ಫೋನ್‌ ಫೆಬ್ರವರಿ ತಿಂಗಳಿನಲ್ಲಿ ನಡೆದಯಲಿರುವ MWC 2023 ಸಮಯದಲ್ಲಿ ಅನಾವರಣಗೊಳ್ಳಲಿದೆ. ಈ ಸರಣಿಯಲ್ಲಿ ಒಪ್ಪೋ ಫೈಂಡ್‌ N2 ಮತ್ತು ಒಪ್ಪೋ ಫೈಂಡ್‌ N2 ಫ್ಲಿಪ್ ಫೋನ್‌ ಬಿಡುಗಡೆಯಾಗಲಿವೆ. ಇದರಲ್ಲಿ ಒಪ್ಪೋ ಫೈಂಡ್‌ N2 ಫ್ಲಿಪ್ ಒಪ್ಪೋ ಕಂಪೆನಿಯ ಮೊದಲ ಕ್ಲಾಮ್‌ಶೆಲ್ ಶೈಲಿಯ ಫೋಲ್ಡಬಲ್ ಸ್ಮಾರ್ಟ್‌ಫೋನ್ ಆಗಿದೆ.

ಮೊಟೊರೊಲಾ ಎಡ್ಜ್‌ 40 ಪ್ರೊ
ಮೊಟೊರೊಲಾ ಎಡ್ಜ್‌ 40 ಪ್ರೊ ಸ್ಮಾರ್ಟ್‌ಫೋನ್‌ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಡಿವೈಸ್‌ಗಳಲ್ಲಿ ಒಂದಾಗಿದೆ. ಈ ಸ್ಮಾರ್ಟ್‌ಫೋನ್‌ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಸ್ಮಾರ್ಟ್‌ಫೋನ್‌ ಕಪ್ಪು ಮತ್ತು ನೀಲಿ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗುವ ಸಾಧ್ಯತೆಯಿದ್ದು, ಇದರ ಬೆಲೆ ಅಂದಾಜು 74,700ರೂ. ಆಗಿರಲಿದೆ. ಇನ್ನುಳಿದಂತೆ ಈ ಫೋನ್‌ನ ಫೀಚರ್ಸ್‌ ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ.

ಫೆಬ್ರವರಿ ತಿಂಗಳಿನಲ್ಲಿ ಅಬ್ಬರಿಸಲಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳ ವಿವರ ಇಲ್ಲಿದೆ

ಐಕ್ಯೂ ನಿಯೋ 7 5G
ಐಕ್ಯೂ ನಿಯೋ 7 5G ಸ್ಮಾರ್ಟ್‌ಫೋನ್‌ ಈಗಾಗಲೇ ಮಾರುಕಟ್ಟೆಯಲ್ಲಿ ಭಾರಿ ಹವಾ ಕ್ರಿಯೆಟ್‌ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಇದೇ ಫೆಬ್ರವರಿ 16ರಂದು ಬಿಡುಗಡೆಯಾಗಲಿದೆ. ಈ ಮೂಲಕ ಸ್ಮಾರ್ಟ್‌ಫೋನ್‌ ಪ್ರಿಯರ ಪಾಳಿಗೆ ಮತ್ತೊಂದು ಅತ್ಯುತ್ತಮ ಆಯ್ಕೆ ಲಭ್ಯವಾಗಲಿದೆ. ಇದು 6.78-ಇಂಚಿನ AMOLED ಡಿಸ್ಪ್ಲೇ ಹೊಂದಿರಲಿದ್ದು, ಡೈಮೆನ್ಸಿಟಿ 8200 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ.

ವಿವೋ X90 ಸರಣಿ
ವಿವೋ X90 ಸರಣಿಯು ಫೆಬ್ರವರಿ ತಿಂಗಳಿನಲ್ಲಿ ಭಾರತಕ್ಕೆ ಎಂಟ್ರಿ ನೀಡೋದು ಪಕ್ಕಾ ಆಗಿದೆ. ಈ ಸರಣಿಯಲ್ಲಿ ವಿವೋ X90, ವಿವೋ X90 ಪ್ರೊ ಮತ್ತು ವಿವೋ X90 ಪ್ರೊ ಪ್ಲಸ್‌ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿವೆ. ಇದರಲ್ಲಿ ವಿವೋ X90 ಪ್ರೊ+ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್‌ 8 Gen 2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿರುವ ವಿವೋದ ಮೊದಲ ಸ್ಮಾರ್ಟ್‌ಫೋನ್‌ ಎನಿಸಿಕೊಂಡಿದೆ.

Best Mobiles in India

English summary
February 2023 is expected to be a blockbuster month for the smartphone market.know more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+