Home
ಸುದ್ದಿಜಾಲ

10,000ರೂ ಗಿಂತ ಕಡಿಮೆ ಬೆಲೆಗೆ ಲಭ್ಯವಾಗುವ ಅತ್ಯುತ್ತಮ ವಾಷಿಂಗ್‌ ಮೆಷಿನ್‌ಗಳ ವಿವರ ಇಲ್ಲಿದೆ!

ಆಧುನಿಕ ಜೀವನ ಶೈಲಿ ಬದಲಾದಂತೆ ಮನೆಗಳಲ್ಲಿ ವಾಷಿಂಗ್‌ ಮೆಷಿನ್‌ ಅಗತ್ಯವಾಗಿ ಇರಬೇಕಾದ ವಸ್ತುಗಳ ಸಾಲಿಗೆ ಸೇರಿಕೊಂಡಿದೆ. ಪ್ರತಿಯೊಬ್ಬರು ಕೂಡ ಮನೆಯಲ್ಲೊಂದು ವಾಷಿಂಗ್‌ ಮೆಷಿನ್‌ ಹೊಂದುವುದಕ್ಕೆ ಬಯಸುತ್ತಾರೆ. ಗ್ರಾಹಕರ ಆಯ್ಕೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಹಾಗೂ ವಿಭಿನ್ನ ಬೆಲೆ ಶ್ರೇಣಿಯ ವಾಷಿಂಗ್‌ ಮೆಷಿನ್‌ಗಳು ಲಭ್ಯವಾಗುತ್ತಿವೆ.

ಹೌದು, ಕೆಲವು ನಿಮಿಷಗಳಲ್ಲಿಯೇ ನಿಮ್ಮ ಬಟ್ಟೆಗಳನ್ನು ಸ್ವಚ್ಛಗೊಳಿಸುವ ವಾಷಿಂಗ್‌ ಮೆಷಿನ್‌ಗಳ ಮೇಲೆ ಎಲ್ಲರಿಗೂ ವ್ಯಾಮೋಹ ಇರುತ್ತದೆ. ಹಾಗಂತ ಹೆಚ್ಚಿನ ಬೆಲೆಯ ವಾಷಿಂಗ್‌ ಮೆಷಿನ್‌ಗಳನ್ನು ಎಲ್ಲರೂ ಕೊಂಡುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಾಗಂತ ಚಿಂತಿಸಬೇಕಾದ ಅನಿವಾರ್ಯತೆ ಕೂಡ ಇಲ್ಲ. ಏಕೆಂದರೆ 10,000ರೂ ಗಿಂತ ಕಡಿಮೆ ಬೆಲೆಯಲ್ಲಿಯೂ ಕೂಡ ವಾಷಿಂಗ್ ಮೆಷಿನ್‌ಗಳನ್ನು ಖರೀದಿಸಬಹುದಾಗಿದೆ. ಹಾಗಾದ್ರೆ 10,000ರೂ ಒಳಗಿನ ಬೆಲೆಯಲ್ಲಿ ಲಭ್ಯವಾಗುವ ವಾಷಿಂಗ್‌ ಮೆಷಿನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

10,000ರೂ ಗಿಂತ ಕಡಿಮೆ ಬೆಲೆಗೆ ಲಭ್ಯವಾಗುವ  ವಾಷಿಂಗ್‌ ಮೆಷಿನ್‌ಗಳ ವಿವರ ಇಲ್ಲಿದೆ!

ವರ್ಲ್‌ಪೂಲ್ 7KG 5 ಸ್ಟಾರ್ ಸೂಪರ್ಬ್ ATOM ಸೆಮಿ-ಆಟೋಮ್ಯಾಟಿಕ್‌ ಟಾಪ್ ಲೋಡಿಂಗ್ ವಾಷಿಂಗ್ ಮೆಷಿನ್
ವರ್ಲ್‌ಪೂಲ್ 7KG 5 ಸ್ಟಾರ್ ಸೂಪರ್ಬ್ ATOM ಸೆಮಿ-ಆಟೋಮ್ಯಾಟಿಕ್‌ ಟಾಪ್ ಲೋಡಿಂಗ್ ವಾಷಿಂಗ್ ಮೆಷಿನ್ ಪ್ರಸ್ತುತ ಅಮೆಜಾನ್‌ನಲ್ಲಿ 9,890ರೂ ಬೆಲೆಗೆ ಲಭ್ಯವಾಗುತ್ತಿದೆ. ಇನ್ನು ಈ ವಾಷಿಂಗ್‌ ಮೆಷಿನ್‌ 7 ಕೆಜಿ ಸಾಮರ್ಥ್ಯವನ್ನು ಹೊಂದಿದ್ದು, ಟರ್ಬೋಸ್ಕ್ರಬ್ ಟೆಕ್ನಾಲಜಿಯನ್ನು ಒಳಗೊಂಡಿದೆ. ಇದು ಸೆಮಿ-ಆಟೋಮ್ಯಾಟಿಕ್‌ ವಿನ್ಯಾಸವು ತೊಳೆಯುವ ಮತ್ತು ತೊಳೆಯುವ ಚಕ್ರಗಳಲ್ಲಿ ಅನುಕೂಲವನ್ನು ನೀಡುತ್ತದೆ. ಇದಕ್ಕೆ ಎನರ್ಜಿ ರೇಟಿಂಗ್ 5 ಸ್ಟಾರ್ ನೀಡಲಾಗಿದ್ದು, ಟಾಪ್‌ ಲೋಡಿಂಗ್‌ ವಾಷಿಂಗ್‌ ಮೆಷಿನ್‌ ಇದಾಗಿದೆ.

ವರ್ಲ್‌ಪೂಲ್ 6KG 5 ಸ್ಟಾರ್ ಸೂಪರ್ಬ್ ATOM ಸೆಮಿ-ಆಟೋಮ್ಯಾಟಿಕ್‌ ಟಾಪ್ ಲೋಡಿಂಗ್ ವಾಷಿಂಗ್ ಮೆಷಿನ್
ವರ್ಲ್‌ಪೂಲ್ 6KG 5 ಸ್ಟಾರ್ ಸೂಪರ್ಬ್ ATOM ಸೆಮಿ-ಆಟೋಮ್ಯಾಟಿಕ್‌ ಟಾಪ್ ಲೋಡಿಂಗ್ ವಾಷಿಂಗ್ ಮೆಷಿನ್ ಅಮೆಜಾನ್‌ನಲ್ಲಿ 8,590ರೂ ಬೆಲೆಗೆ ದೊರೆಯಲಿದೆ. ಇದು 6KG ಸಾಮರ್ಥ್ಯ ಮತ್ತು ಟರ್ಬೋಸ್ಕ್ರಬ್ ಟೆಕ್ನಾಲಜಿಯನ್ನು ಹೊಂದಿದ್ದು, ಪರಿಣಾಮಕಾರಿ ಶುಚಿಗೊಳಿಸುವಿಕೆಯನ್ನು ಖಚಿತಪಡಿಸುತ್ತದೆ. ಇದರ ಸೆಮಿ-ಆಟೋಮ್ಯಾಟಿಕ್‌ ವಿನ್ಯಾಸವು ತೊಳೆಯುವ ಮತ್ತು ತೊಳೆಯುವ ಚಕ್ರಗಳ ಸಮಯದಲ್ಲಿ ನಮ್ಯತೆಯನ್ನು ನೀಡುತ್ತದೆ. ಇದು 5-ಸ್ಟಾರ್ ಎನರ್ಜಿ ರೇಟಿಂಗ್ ಹೊಂದಿದ್ದು, ವಿಶ್ವಾಸಾರ್ಹ ತೊಳೆಯುವ ಪರಿಹಾರವನ್ನು ನೀಡಲಿದೆ.

10,000ರೂ ಗಿಂತ ಕಡಿಮೆ ಬೆಲೆಗೆ ಲಭ್ಯವಾಗುವ  ವಾಷಿಂಗ್‌ ಮೆಷಿನ್‌ಗಳ ವಿವರ ಇಲ್ಲಿದೆ!

ಸ್ಯಾಮ್‌ಸಂಗ್ 6KG 5 ಸ್ಟಾರ್ ಸೆಮಿ-ಆಟೋಮ್ಯಾಟಿಕ್‌ ವಾಷಿಂಗ್ ಮೆಷಿನ್
ಸ್ಯಾಮ್‌ಸಂಗ್ 6KG 5 ಸ್ಟಾರ್ ಸೆಮಿ-ಆಟೋಮ್ಯಾಟಿಕ್‌ ವಾಷಿಂಗ್ ಮೆಷಿನ್ ಅಮೆಜಾನ್‌ನಲ್ಲಿ 8,990ರೂ ಬೆಲೆಗೆ ಲಭ್ಯವಾಗಲಿದೆ. ಇದು 6 ಕೆಜಿ ಸಾಮರ್ಥ್ಯವನ್ನು ಹೊಂದಿದ್ದು, 5-ಸ್ಟಾರ್ ಎನರ್ಜಿ ರೇಟಿಂಗ್ ಅನ್ನು ಒಳಗೊಂಡಿದೆ. ಇದು ಸಾಕಷ್ಟು ಸಾಮರ್ಥ್ಯ ಮತ್ತು ಇಂಧನ ಉಳಿತಾಯ ಎರಡನ್ನೂ ಖಾತರಿಪಡಿಸುತ್ತದೆ. ಇದರಲ್ಲಿರುವ ಏರ್ ಟರ್ಬೊ ಡ್ರೈಯಿಂಗ್ ಫೀಚರ್ಸ್‌ ಬಟ್ಟೆಗಳನ್ನು ತ್ವರಿತವಾಗಿ ಒಣಗಿಸುವುದನ್ನು ಖಾತ್ರಿಗೊಳಿಸುತ್ತದೆ.

ಪ್ಯಾನಾಸೋನಿಕ್ 6KG 5 ಸ್ಟಾರ್ ಸೆಮಿ-ಆಟೋಮ್ಯಾಟಿಕ್ ಟಾಪ್ ಲೋಡಿಂಗ್ ವಾಷಿಂಗ್ ಮೆಷಿನ್
ಪ್ಯಾನಾಸೋನಿಕ್ 6KG 5 ಸ್ಟಾರ್ ಸೆಮಿ-ಆಟೋಮ್ಯಾಟಿಕ್ ಟಾಪ್ ಲೋಡಿಂಗ್ ವಾಷಿಂಗ್ ಮೆಷಿನ್ 6.5 ಕೆಜಿ ಸಾಮರ್ಥ್ಯವನ್ನು ಹೊಂದಿದೆ. ಇದು 5-ಸ್ಟಾರ್ ಎನರ್ಜಿ ರೇಟಿಂಗ್ ಅನ್ನು ಒಳಗೊಂಡಿದ್ದು, ಸಾಕಷ್ಟು ಸ್ಥಳಾವಕಾಶ ಮತ್ತು ಶಕ್ತಿಯ ದಕ್ಷತೆಯನ್ನು ಖಾತರಿಪಡಿಸುತ್ತದೆ. ಇದರ ಶಕ್ತಿಯುತ ಮೋಟಾರ್, ಆಕ್ಟಿವ್ ಫೋಮ್ ಸಿಸ್ಟಮ್ ಮತ್ತು ಎಫೆಕ್ಟಿವ್ ವಾಶ್ ಪಲ್ಸೇಟರ್ ಸಂಪೂರ್ಣ ಶುಚಿಗೊಳಿಸುವಿಕೆಯನ್ನು ನೀಡಲಿದೆ. ಇದು ಅಮೆಜಾನ್‌ನಲ್ಲಿ 8,990ರೂ ಬೆಲೆಯನ್ನು ಹೊಂದಿದೆ.

10,000ರೂ ಗಿಂತ ಕಡಿಮೆ ಬೆಲೆಗೆ ಲಭ್ಯವಾಗುವ  ವಾಷಿಂಗ್‌ ಮೆಷಿನ್‌ಗಳ ವಿವರ ಇಲ್ಲಿದೆ!

ಸ್ಯಾಮ್‌ಸಂಗ್ 6KG 5ಸ್ಟಾರ್ ಸೆಮಿ-ಆಟೋಮ್ಯಾಟಿಕ್ ವಾಷಿಂಗ್ ಮೆಷಿನ್
ಸ್ಯಾಮ್‌ಸಂಗ್ 6KG 5ಸ್ಟಾರ್ ಸೆಮಿ-ಆಟೋಮ್ಯಾಟಿಕ್ ವಾಷಿಂಗ್ ಮೆಷಿನ್ 6.5 ಕೆಜಿ ಸಾಮರ್ಥ್ಯವನ್ನು ಪಡೆದಿದೆ. ಇದು ಪ್ರಭಾವಶಾಲಿ 5-ಸ್ಟಾರ್ ಶಕ್ತಿ ಸಾಮರ್ಥ್ಯದ ರೇಟಿಂಗ್ ಅನ್ನು ಹೊಂದಿದೆ. ಇದರ ಏರ್ ಟರ್ಬೊ ಡ್ರೈಯಿಂಗ್ ಫೀಚರ್ಸ್‌ ಹೆಚ್ಚುವರಿ ತೇವಾಂಶವನ್ನು ಪರಿಣಾಮಕಾರಿಯಾಗಿ ಹೊರತೆಗೆಯಲಿದ್ದು ಬಟ್ಟೆಯನ್ನು ಬೇಗ ಒಣಗಿಸಲಿದೆ. ಇದು ನಿಮಗೆ ಅನೆಜಾನ್‌ನಲ್ಲಿ ಕೇವಲ 9,990ರೂ ಬೆಲೆಯಲ್ಲಿ ಲಭ್ಯವಾಗುತ್ತಿದೆ.

Best Mobiles in India

English summary
Top 5 Washing machines under Rs 10000 in india! Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+