ಭಾರತದಲ್ಲಿ ನೀವು ಖರೀದಿಸಬಹುದಾದ ಟಾಪ್ 5 ಬ್ಲೂಟೂತ್ ಪಾರ್ಟಿ ಸ್ಪೀಕರ್‌ಗಳು
ಇಂದಿನ ದಿನಗಳಲ್ಲಿ ಬ್ಲೂಟೂತ್ ಸ್ಪೀಕರ್‌ಗಳು ಸಾಕಷ್ಟು ಪ್ರಸಿದ್ದಿಯನ್ನು ಪಡೆದುಕೊಂಡಿವೆ. ಇದೇ ಕಾರಣಕ್ಕೆ ಹಲವು ಜನಪ್ರಿಯ ಬ್ರ್ಯಾಂಡ್‌ಗಳು ಕೂಡ ವಿಭಿನ್ನ ಮಾದರಿಯ ಬ್ಲೂಟೂತ್ ಸ್ಪಿಕರ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಅದರಲ್ಲೂ ವಾಯರ್‌ಲೆಸ್ ಬ್ಲೂಟೂತ್ ಸ್ಪೀಕರ್‌ಗಳಿಗೆ ಭಾರಿ ಡಿಮ್ಯಾಂಡ್ ಕ್ರಿಯೆಟ್ ಮಾಡಿವೆ.
ಹೌದು, ಭಾರತದಲ್ಲಿ ಬ್ಲೂಟೂತ್ ಸ್ಪೀಕರ್‌ಗಳು ಜನಪ್ರಿಯತೆಯನ್ನು ಪಡೆದಿವೆ. ವೈವಿಧ್ಯಮಯ ಮತ್ತು ಡೈನಾಮಿಕ್ ಟೆಕ್ ಲ್ಯಾಂಡ್‌ಸ್ಕೇಪ್‌ನೊಂದಿಗೆ ಗಮನಸೆಳೆದಿವೆ. ಆದ್ದರಿಂದ, ಪರಿಪೂರ್ಣ ಬ್ಲೂಟೂತ್ ಸ್ಪೀಕರ್ ಅನ್ನು ನೀವು ಹುಡುಕುತ್ತಿದ್ದರೆ, ನಿಮಗೆ ಸೂಕ್ತ ಎನಿಸುವ ಬ್ಲೂಟೂತ್ ಸ್ಪೀಕರ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ರಿಬಿಟ್ ಸ್ಟಾರ್ಮ್‌ಬಾಕ್ಸ್ ಬ್ಲಾಸ್ಟ್ ಬ್ಲೂಟೂತ್ ಪಾರ್ಟಿ ಸ್ಪೀಕರ್
ಟ್ರಿಬಿಟ್ ಸ್ಟಾರ್ಮ್‌ಬಾಕ್ಸ್ ಬ್ಲಾಸ್ಟ್ ಪಾರ್ಟಿ ಸ್ಪೀಕರ್ ಯುವಜನರ ಹಾಟ್‌ಫೇವರಿಟ್ ಎನಿಸಿಕೊಂಡಿದೆ. ಇದು 90W ಪೋರ್ಟಬಲ್ ಸ್ಪೀಕರ್ ಅನ್ನು ನೀಡುತ್ತದೆ. ಜೊತೆಗೆ XBass ತಂತ್ರಜ್ಞಾನದೊಂದಿಗೆ, ಅತ್ಯುತ್ತಮ ಬಾಸ್ ಎಕ್ಸ್‌ಪಿರಿಯನ್ಸ್ ಒದಗಿಸಲಿದೆ. ಅದರಲ್ಲೂ ಇದು CNET ಪ್ರಕಾರ 2023ಕ್ಕೆ ಅತ್ಯುತ್ತಮ ವಾಯರ್‌ಲೆಸ್ ಬ್ಲೂಟೂತ್ ಬೂಮ್‌ಬಾಕ್ಸ್ ಆಗಿದೆ. ಇನ್ನು 30 ಗಂಟೆಗಳ ಪ್ಲೇ ಟೈಂ, ರನ್‌ಸ್ಟ್ರೆಚ್ ತಂತ್ರಜ್ಞಾನ ಮತ್ತು ಬೀಟ್‌ಗಳಿಗೆ ಸಿಂಕ್ರೊನೈಸ್ ಮಾಡಲಾದ 32 LED ಲೈಟ್‌ಗಳನ್ನು ಒಳಗೊಂಡಿದೆ.
ಬೋಸ್ ಸೌಂಡ್‌ಲಿಂಕ್ ಫ್ಲೆಕ್ಸ್ ಬ್ಲೂಟೂತ್ ಪೋರ್ಟಬಲ್ ಸ್ಪೀಕರ್
ಬೋಸ್ ಸೌಂಡ್‌ಲಿಂಕ್ ಫ್ಲೆಕ್ಸ್ ಬ್ಲೂಟೂತ್ ಪೋರ್ಟಬಲ್ ಸ್ಪೀಕರ್ ಕೂಡ ಯುವ ಜನರ ನೆಚ್ಚಿನ ಆಯ್ಕೆಗಳಲ್ಲಿ ಒಂದಾಗಿದೆ. ಇದು ಒಟ್ಟು 20W ಔಟ್‌ಪುಟ್‌ನೊಂದಿಗೆ ಬರಲಿದೆ. ಈ ಪೋರ್ಟಬಲ್ ಸ್ಪೀಕರ್ ಪ್ರಭಾವಶಾಲಿ ಆಡಿಯೊ ಗುಣಮಟ್ಟವನ್ನು ನೀಡುತ್ತದೆ. ಇದರಲ್ಲಿ ನ್ಯೂ PositionIQ ತಂತ್ರಜ್ಞಾನವು ಸ್ಪೀಕರ್ ಅನ್ನು ಫ್ಲಿಪ್ ಮಾಡುವುದಕ್ಕೆ ಅವಕಾಶ ನೀಡಲಿದೆ. ಜೊತೆಗೆ, IP67 ರೇಟಿಂಗ್‌ನೊಂದಿಗೆ ಅದರ ಜಲನಿರೋಧಕ ಮತ್ತು ಧೂಳು ನಿರೋಧಕ ವಿನ್ಯಾಸವನ್ನು ಸಹ ಪಡೆದಿದೆ. ಇನ್ನು ಬ್ಲೂಟೂತ್ ಆವೃತ್ತಿ 4.2 ಅನ್ನು ಬೆಂಬಲಿಸಲಿದ್ದು, 12 ಗಂಟೆಗಳವರೆಗೆ ಪ್ಲೇ ಟೈಂ ನೀಡಲಿದೆ.

ಸೋನಿ SRS-XE300 ಫ್ಲೆಕ್ಸ್ ಬ್ಲೂಟೂತ್ ಪೋರ್ಟಬಲ್ ಸ್ಪೀಕರ್
ಸೋನಿ SRS-XE300 ಫ್ಲೆಕ್ಸ್ ಬ್ಲೂಟೂತ್ ಪೋರ್ಟಬಲ್ ಸ್ಪೀಕರ್ ನೆಚ್ಚಿನ ಸ್ಪೀಕರ್‌ಗಳಲ್ಲಿ ಒಂದೆನಿಸಿಕೊಂಡಿದೆ. ಇದು ಆಕರ್ಷಕವಾದ ಶ್ರವಣೇಂದ್ರಿಯ ಅನುಭವವನ್ನು ನೀಡುತ್ತದೆ. ಇನ್ನು ಸ್ಪೀಕರ್‌ನ IP67 ನೀರು, ಧೂಳು ಮತ್ತು ಆಘಾತ ನಿರೋಧಕ ವಿನ್ಯಾಸವು ಹೊರಾಂಗಣ ಸಾಹಸಗಳಿಗೆ ಸೂಕ್ತವಾಗಿದೆ. ಅಲ್ಲದೆ ಇದರಲ್ಲಿ ಎಕ್ಸ್-ಬ್ಯಾಲೆನ್ಸ್ಡ್ ಸ್ಪೀಕರ್‌ಗಳಿಂದ ನಡೆಸಲ್ಪಡುತ್ತಿದೆ, ಇದು ಶಕ್ತಿ, ಸ್ಪಷ್ಟತೆ ಮತ್ತು ಅಸ್ಪಷ್ಟತೆ-ಮುಕ್ತ ಧ್ವನಿಯ ಮಿಶ್ರಣವನ್ನು ಒದಗಿಸಲಿದೆ. ಇನ್ನು ಈ ಸ್ಪೀಕರ್ 24 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ.
JBL ಚಾರ್ಜ್ 5 ಬ್ಲೂಟೂತ್ ಪೋರ್ಟಬಲ್ ಸ್ಪೀಕರ್
JBL ಚಾರ್ಜ್ 5 ಬ್ಲೂಟೂತ್ ಪೋರ್ಟಬಲ್ ಸ್ಪೀಕರ್ JBL ಪ್ರೊ ಸೌಂಡ್‌ನೊಂದಿಗೆ ನಿಮ್ಮ ಶ್ರವಣೇಂದ್ರಿಯ ಅನುಭವವನ್ನು ಮರು ವ್ಯಾಖ್ಯಾನಿಸುತ್ತದೆ. ಇದು ಪ್ರಭಾವಶಾಲಿ ಪ್ರೊ-ಲೆವೆಲ್ ಸ್ಪಷ್ಟ ಆಡಿಯೊವನ್ನು ನೀಡುತ್ತದೆ. ಇನ್ನು ಈ ಸ್ಪೀಕರ್ 20 ಗಂಟೆಗಳ ಪ್ಲೇ ಟೈಂ ಅನ್ನು ಹೊಂದಿದ್ದು, IP67 ಜಲನಿರೋಧಕ ಮತ್ತು ಧೂಳು ನಿರೋಧಕ ರೇಟಿಂಗ್ ಬಾಳಿಕೆಯನ್ನು ಖಾತ್ರಿಗೊಳಿಸುತ್ತದೆ. ಇದರೊಂದಿಗೆ 7500mAh ಪವರ್ ಬ್ಯಾಂಕ್ ಅನ್ನು ಸಹ ನೀಡಲಾಗಿದ್ದು, ನಿಮ್ಮ ಡಿವೈಸಗಳಿಗೆ ಚಾರ್ಜ್ ನೀಡಲಿದೆ. ಪಾರ್ಟಿಬೂಸ್ಟ್ ಟೆಕ್ನಾಲಜಿ ಅನಿಯಮಿತ JBL ಪಾರ್ಟಿಬೂಸ್ಟ್-ಆಕ್ಟಿವ್ ಮಾಡಿದ ಸ್ಪೀಕರ್‌ಗಳನ್ನು ಜೋಡಿಸುವ ಮತ್ತು ಲಿಂಕ್ ಮಾಡುವ ಮೂಲಕ ನಿಮ್ಮ ಪಾರ್ಟಿ ಪವರ್ ಅನ್ನು ದ್ವಿಗುಣಗೊಳಿಸಲಿದೆ.

ಸೋನಿ SRS-XG300
ಸೋನಿ SRS-XG300 X-ಸರಣಿ ವಾಯರ್‌ಲೆಸ್ ಪೋರ್ಟಬಲ್ ಬ್ಲೂಟೂತ್ ಪಾರ್ಟಿ ಸ್ಪೀಕರ್ ಕೂಡ ಅತ್ಯುತ್ತಮ ಬ್ರ್ಯಾಂಡ್ ಎನಿಸಿಕೊಂಡಿದೆ. ಅಲ್ಟ್ರಾ-ಲೈಟ್‌ವೈಟ್ ಮತ್ತು ಪೋರ್ಟಬಲ್ ವಿನ್ಯಾಸ ಎಲ್ಲರ ಗಮನಸೆಳೆದಿದೆ. ಇನ್ನು ಸ್ಪೀಕರ್ IP67 ರೇಟಿಂಗ್ ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಯನ್ನು ನೀಡಲಿದೆ. ಜೊತೆಗೆ ಸಿಂಗಲ್ ಚಾರ್ಜ್‌ನಲ್ಲಿ 25 ಗಂಟೆಗಳವರೆಗೆ ಪ್ಲೇಟೈಮ್ ಅನ್ನು ಆನಂದಿಸಲಿದೆ. ಇದಲ್ಲದೆ ಸೋನಿ SRS-XG300 ಸ್ಪೀಕರ್ USB ಪೋರ್ಟ್ ಮೂಲಕ ನಿಮ್ಮ ಡಿವೈಸ್‌ಗಳನ್ನು ಚಾರ್ಜ್ ಮಾಡಬಹುದಾಗಿದೆ.


Click it and Unblock the Notifications








