Subscribe to Gizbot

ಟಾಪ್‌ 7 ಮೊಸ್ಟ್‌ ಪಾಪ್ಯುಲರ್‌ ಆನಿಮೇಟೆಡ್‌ ವಿಡಿಯೋಗಳು

Posted By: Super
<ul id="pagination-digg"><li class="next"><a href="/news/top-7-disney-pixar-videos-have-a-look-2.html">Next »</a></li></ul>
ಟಾಪ್‌ 7 ಮೊಸ್ಟ್‌ ಪಾಪ್ಯುಲರ್‌ ಆನಿಮೇಟೆಡ್‌ ವಿಡಿಯೋಗಳು

ವೀಕೆಂಡ್‌ ಬಂದಾಗಿದೆ ವಾರಾಂತ್ಯದಲ್ಲಿ ಮೂಡ್‌ ಚಿಲ್ ಮಾಡ್ಕೋಳೋಣ ಅಂತಾ ಏನಾದ್ರು ಪ್ಲಾನಿಂಗ್ಸ್ ಮಾಡಿಯೇ ಇರುತ್ತೀರಾ ಅಲ್ಲವೇ? ಅಂದಹಾಗೆ ಈಗಂತೂ ಕೆಲಸ ಕೆಲಸ ಕೆಲಸ ಎಂದು ವಾರವಿಡೀ ದುಡಿದು ನಮ್ಮ ಮೈ ಮನ ಎಲ್ಲವೂ ಕೂಡಾ ಸುಸ್ತಾಗಿ ಹೋಗಿರುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ಬಾಲ್ಯದ ನೆನಪುಗಳು ಖಡಿತವಾಗಿಯೂ ಬಂದೇ ಬರುತ್ತದೆ ಅಲ್ಲವೇ ಆದಿನಗಳು ಮತ್ತೆ ಬರಲಾರವು ಆದರೆ ಆ ನೆನಪುಗಳು ಮಾತ್ರ ನಮ್ಮನ್ನು ಈಗಲೂ ಕೂಡಾ ಮಕ್ಕಳ್ಳನ್ನಾಗಿಸಿ ಬಿಡುತ್ತದೆ. ಈಗಲೂ ಕೂಡಾ ಜಂಗಲ್‌ ಬುಕ್, ಡಕ್‌ ಟೇಲ್ಸ್‌, ಅಲಾದೀನ್‌ ಕಾರ್ಟೂನ್‌ಗಳು ಕಣ್ಣೆದುರು ಬಂದು ಬಿಡುತ್ತದೆ. ವಾರಾಂತ್ಯದಲ್ಲಿ ಅಂದರೆ ಶನಿವಾರದಂದು ಶಾಲೆ ಅರ್ಧ ದಿನ ಮಾತ್ರ ಮುಗಿದ ಬಳಿಕ ಓಡೋಡಿ ಮನೆಗೆ ಬಂದು ನಾಲ್ಕು ಗಂಟೆಗೆ ಸರಿಯಾಗಿ ಡಿಡಿ ಯಲ್ಲಿ ಪ್ರಸಾರ ಮಾಡಲಾಗುತ್ತಿದ್ದ ಆನಿಮೇಟೆಡ್‌ ಕಾರ್ಟೋನ್‌ಗಳ್ಳನ್ನು ಕಾದು ಕುಳಿತು ನೋಡುತ್ತಿದ್ದು ನೆನಪಿಗೆ ಬರುತ್ತದೆ.

ಅಂದಹಾಗೆ ಈ ವಾರಾಂತ್ಯದಲ್ಲಿ ನೀವೂಕೂಡ ನಿಮ್ಮ ಬಾಲ್ಯದ ನೆನಪಿಗೆ ಹೋಗಿಬಿಡಿ ಆದರೆ ಅಂದಿನ ಅನಿಮೇಟೆಡ್‌ ವಿಡಿಯೋಗಳ ಬದಲಾಗಿ ಇಂದಿನ ನವ ಪೀಳಿಗೆಯ ಟಾಪ್‌ 7 ಮೋಸ್ಟ್‌ ಪಾಪ್ಯುಲರ್‌ ವಿಡಿಯೋಗಳನ್ನು ವೀಕ್ಷಿಸಿ ಕೆಲ ಹೊತ್ತು ಮಕ್ಕಳಂತೆ ಮೈಮರೆತು ನೋಡಿ ಆನಂದಿಸಿ. ಪಟ್ಟಿಯಲ್ಲಿನ ಲೆಟೆಸ್ಟ್‌ ಆನಿಮೇಟೆಡ್‌ ವಿಡಿಯೋಗಳು ಸಧ್ಯದಲ್ಲಿನ ಅತ್ಯುತ್ತಮ ಆನಿಮೇಟೆಡ್‌ ಸಿನಿಮಾಗಳಾಗಿದ್ದು ಅವುಗಳ ಟ್ರೇಲರ್‌ಗಳನ್ನು ನೀಡಲಾಗಿದೆ ಒಂದೊಂದೇ ಪುಟ ತಿರುಗಿಸಿ ವಿಡಿಯೋಗಳ ಮಜ ಪಡೆಯಿರಿ...

<ul id="pagination-digg"><li class="next"><a href="/news/top-7-disney-pixar-videos-have-a-look-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot