ಟಾಪ್ 7 ಪ್ರವಾಸಿ ತಾಣಗಳ ಮಾಹಿತಿ ವೆಬ್ಸೈಟ್

Posted By: Varun
ಟಾಪ್ 7 ಪ್ರವಾಸಿ ತಾಣಗಳ ಮಾಹಿತಿ ವೆಬ್ಸೈಟ್

ಅಂತರ್ಜಾಲದಲ್ಲಿ ನೀವು ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ವೆಬ್ಸೈಟ್ ಹುಡುಕಿದರೂ ಸಿಗುತ್ತದೆ. ಆದರೆ ಅವುಗಳಲ್ಲಿ ಯಾವುದು ಒಳ್ಳೆಯ ವೆಬ್ಸೈಟ್ ಎಂದು ನಿರ್ಧರಿಸುವುದು ಕಷ್ಟ. ಅದರಲ್ಲೂ ಪ್ರವಾಸಕ್ಕೆ ಹೋಗುವ ತಾಣಗಳ ಬಗ್ಗೆ, ಒಳ್ಳೆಯ ಆಫರ್ ಗಳ ಬಗ್ಗೆ ಯಾವ ವೆಬ್ಸೈಟ್ ಒಳ್ಳೆಯ ಮಾಹಿತಿ, ಸೇವೆ ಒದಗಿಸುತ್ತದೆ ಎಂದು ಪತ್ತೆ ಹಚ್ಚುವುದು ಕಷ್ಟ. ಹಾಗಾಗಿ ನೀವು ಎಲ್ಲಿಗಾದರೂ ಪ್ರವಾಸ ಮಾಡಲು ನಿರ್ಧರಿಸಿದ್ದರೆ ಇಲ್ಲವೆ ಮುಂದೆ ಯಾವಾಗಾದರೂ ಪ್ಪ್ಲಾನ್ ಮಾಡಿದ್ದರೆ, ಈ ಪಟ್ಟಿ ನಿಮ್ಮ ಹಣ ಹಾಗು ಸಮಯ ಉಳಿಸುತ್ತದೆ.

ಇಲ್ಲಿದೆ ಟಾಪ್ 7 ಪ್ರವಾಸಿ ತಾಣಗಳಮಾಹಿತಿಇರುವ ವೆಬ್ಸೈಟ್ ಗಳ ಪಟ್ಟಿ:

1) Incredibleindia.org- ನೀವು ಎಲ್ಲಿಗೆ ಹೋಗಬೇಕು ಎಂದು ಗೊತ್ತಾಗದೆ ಗೊಂದಲದಲ್ಲಿದ್ದರೆ, ಯಾವುದು ಬೆಸ್ಟ್ ಎಂದು ಹುಡುಕಲು ಇದು ಹೇಳಿ ಮಾಡಿಸಿದಂಥ ವೆಬ್ಸೈಟ್. ಸುಮಾರು 238 ತಾಣಗಳ ಬಗ್ಗೆ ಸಂಪೂರ್ಣ ಮಾಹಿತಿ ಇದರಲ್ಲಿದೆ. ಯಾವುದೇ ತಾಣವಾಗಲಿ, ಅದಕ್ಕೆ ಹೇಗೆ ಹೋಗಬೇಕು, ಎಲ್ಲಿ ಉಳಿದುಕೊಳ್ಳಬೇಕು, ಏನು ಮಾಡಬೇಕು ಎಂದು ಕೂಡ ತಿಳಿಸುತ್ತದೆ.

2) Tripadvisor.in- ಎಲ್ಲಿಗೆ ಹೋಗಬೇಕು ಎಂದು ಈಗಾಗಲೇ ನಿರ್ಧರಿಸಿದ್ದರೆ, ನಿಮ್ಮ ಬಜೆಟ್ ಗೆ ಹೊಂದುವ ಹೋಟೆಲ್ ಬಗ್ಗೆ ಮಾಹಿತಿ ಕೊಡುತ್ತದೆ.

3) iXiGO.com- ಇದನ್ನು ಪ್ರವಾಸಿ ತಾಣಗಳ ಗೂಗಲ್ ಎಂದೇ ಹೇಳಬಹುದು. ಫ್ಲೈಟ್ ಗಳ ಬಗ್ಗೆ, ಹೋಟಲ್ ಗಳ ಬಗ್ಗೆ, ಟ್ರೈನ್ ನ ಪ್ಯಾಕೇಜ್ ಗಳ ಬಗ್ಗೆಗಿನ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯ.

4) Expedia.co.in- ಈಗಾಗಲೇ ಈ ವೆಬ್ಸೈಟ್ ನ ಜಾಹೀರಾತು ಸಾಕಷ್ಟು ಜನಪ್ರಿಯಗೊಂಡಿದ್ದು, ಅತ್ಯುತ್ತಮ ಹೋಟೆಲ್ ಡೀಲ್ ಹುಡುಕಿಕೊಡುವ ಅತ್ಯುತ್ತಮ ವೆಬ್ಸೈಟ್ ಆಗಿದೆ. ನಿಮಗೇನಾದರೂ ಈ ವೆಬ್ಸೈಟ್ ಕೊಡುವ ಡೀಲ್ ಗಿಂತಾ ಉತ್ತಮ ಡೀಲ್ ಅದೇ ಹೋಟೆಲ್ ನಲ್ಲಿ ಸಿಕ್ಕರೆ, Expedia ನಿಮಗೆ, ನೀವು ಕೊಟ್ಟಿರುವ ಹಣದ ಜೊತೆ 2500 ಕೂಪನ್ ಉಚಿತವಾಗಿ ಕೊಡುತ್ತದೆ.

5) Bid2Travel.com- 60% ವರೆಗೂ ಹೋಟೆಲ್ ಗಳ ಬುಕಿಂಗ್ ಮೇಲೆ ಡಿಸ್ಕೌಂಟ್ ಕೊಡುವ ಈ ವೆಬ್ಸೈಟ್ ನಲ್ಲಿ ಸುಮಾರು 2,500 ಹೋಟೆಲುಗಳ ನೆಟ್ವರ್ಕ್ ಹೊಂದಿದೆ.

6) Seatguru.com- ನೀವೇನಾದರೂಫ್ಲೈಟ್ ನಲ್ಲಿ ಹೋಗುವಿರಾದರೆ, ಪ್ರತಿ ಫ್ಲೈಟ್ ನ ಮಾಹಿತಿ ಅದರಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿ ಕೊಡುತ್ತದೆ. ಸುಮಾರು 100 ಕ್ಕೂ ಹೆಚ್ಚು ಏರ್ಲೈನ್ ಗಳ 700 ಕ್ಕೂ ಹೆಚ್ಚು ಸೀಟ್ ಮ್ಯಾಪ್ ಗಳು ಲಭ್ಯವಿದೆ.

7) Seat61.com- ರೈಲಿನಲ್ಲಿ ಪ್ರಯಾಣಮಾಡುವ ಹಾಗಿದ್ದರೆ ಈ ಜಾಲತಾಣ ತುಂಬಾ ಉಪಯುಕ್ತವಾಗಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot