Just In
Don't Miss
- News
Bengaluru Airport: ಫೆ.15 ರಿಂದ ಟರ್ಮಿನಲ್2 ನಲ್ಲಿ ಏರ್ ಏಷ್ಯಾ ಸಂಸ್ಥೆಯಿಂದ ವಿಮಾನ ಕಾರ್ಯಾಚರಣೆ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Sports
ಜಿಂಬಾಬ್ವೆ vs ವೆಸ್ಟ್ ಇಂಡೀಸ್: ಮೊದಲ ಟೆಸ್ಟ್ 2ನೇ ದಿನ: Live score
- Movies
"ಪಪ್ಪಾ ನಿನ್ನ ಬೈಸಿಪ್ಸ್ಗಿಂತ ನನ್ನ ಬೈಸಿಪ್ಸ್ ಗಟ್ಟಿ": ನಾನೇ ಬಾಹುಬಲಿ ಎಂದ ಯಥರ್ವ್
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಳಕೆಗೆ ಲಭ್ಯವಿರುವ ಎಂಟು ಅತ್ಯುತ್ತಮ ಕ್ಲೌಡ್ ಸ್ಟೋರೇಜ್ ಅಪ್ಲಿಕೇಶನ್‌ಗಳು!
ಟೆಕ್ನಾಲಜಿ ಮುಂದುವರೆದಂತೆ ಸ್ಮಾರ್ಟ್‌ಫೋನ್‌ಗಳ ಸ್ಟೋರೇಜ್ ಸಾಮರ್ಥ್ಯ ಕೂಡ ಹೆಚ್ಚಾಗುತ್ತಿದೆ. ಆದರೂ ಗ್ರಾಹಕರಿಗೆ ಇದು ಕಡಿಮೆ ಎನಿಸುತ್ತದೆ. ಏಕೆಂದರೆ ಅಧಿಕ ಡೇಟಾ ಆಪ್‌ಗಳು, ಸಾಫ್ಟ್‌ವೇರ್‌ಗಳು ಇಂಟರ್ ಸ್ಟೋರೇಜ್ ಅನ್ನು ಕಬಳಿಸಿಬಿಡುತ್ತವೆ. ಅಲ್ಲದೆ ಫೊಟೋಸ್, ವೀಡಿಯೋಸ್, ಕಂಟ್ಯಾಕ್ಟ್‌ಗಳು ಸ್ಟೋರೇಜ್ ಫುಲ್ ಮಾಡಿ ಬಿಡುತ್ತವೆ. ಇದೇ ಕಾರಣಕ್ಕೆ ಹೆಚ್ಚಿನ ಜನರು ಕ್ಲೌಡ್ ಸ್ಟೋರೇಜ್ ಆಯ್ಕೆಗೆ ಮುಂದಾಗುತ್ತಾರೆ. ಬಳಕೆದಾರರ ಆಸಕ್ತಿಗೆ ಅನುಗುಣವಾಗಿ ಕ್ಲೌಡ್ ಸ್ಟೋರೇಜ್ ಅಪ್ಲಿಕೇಶನ್‌ಗಳು ಲಭ್ಯವಿರೋದ್ರಿಂದ ಕ್ಲೌಡ್ ಸ್ಟೋರೇಜ್ ಸೇವೆಗಳಿಗೆ ಹೆಚ್ಚಿನ ಬೇಡಿಕೆ ಇದೆ.
ಹೌದು, ತಮ್ಮ ಸ್ಮಾರ್ಟ್‌ಫೋನ್‌ಗಳ ಸ್ಟೋರೇಜ್ ಸಾಕಾಗದೆ ಹೆಚ್ಚಿನ ಜನರು ಕ್ಲೌಡ್ ಸ್ಟೋರೇಜ್ ಸೇವೆಗಳ ಪಡೆದುಕೊಳ್ಳುತ್ತಾರೆ. ಇದು ಬಳಕೆದಾರರಿಗೆ ಹೆಚ್ಚಿನ ಸ್ಥಳವಾಕಾಶವನ್ನು ನೀಡುವುದಲ್ಲದೆ ಉಚಿತವಾಗಿ ಸ್ಟೋರೇಜ್ ನಿಡುವುದರಿಂದ ಎಲ್ಲರನ್ನು ಆಕರ್ಷಿಸುತ್ತಿವೆ. ಆದರೆ ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳು ಕ್ಲೌಡ್ ಸ್ಟೋರೇಜ್ ಸೇವೆಗಳನ್ನು ಪರಿಚಯಿಸಿದ್ದು, ಇವುಗಳಲ್ಲಿ ಹೆಚ್ಚಿನ ಜನರಿಗೆ ಅವುಗಲ ಹೆಸರೇ ತಿಳಿದಿಲ್ಲ. ಆದರಿಂದ ಈ ಲೇಖನದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮವಾದ ಕ್ಲೌಡ್ ಸ್ಟೋರೇಜ್ ಸೇವೆಗಳ ಬಗ್ಗೆ ತಿಳಿಸಿಕೊಡ್ತೀವಿ ಮುಂದೆ ಓದಿರಿ.

Google ಡ್ರೈವ್
ಗೂಗಲ್ ಡ್ರೈವ್ ಪ್ರಸಿದ್ಧ ಕ್ಲೌಡ್ ಸ್ಟೋರೇಜ್ ಅಪ್ಲಿಕೇಶನ್ ಸೇವೆಗಳಲ್ಲಿ ಒಂದಾಗಿದೆ. ಇದು ಗೂಗಲ್‌ನ ಸ್ವಂತ ಕ್ಲೌಡ್ ಸ್ಟೋರೇಜ್ ಆಗಿದ್ದು, ಇದು ಗೂಗಲ್‌ನ ಸೇವೆಗಳೊಂದಿಗೆ ಸಂಯೋಜಿಸಲ್ಪಟ್ಟಿದೆ. ನೀವು ಅತ್ಯಾಸಕ್ತಿಯ ಆಂಡ್ರಾಯ್ಡ್ ಬಳಕೆದಾರರಾಗಿದ್ದರೆ ಮತ್ತು ಸಾಕಷ್ಟು Google ಸೇವೆಗಳನ್ನು ಬಳಸುತ್ತಿದ್ದರೆ, ಇದು ನಿಮಗೆ ಉತ್ತಮ ಆಯ್ಕೆಯಾಗಿರಲಿದೆ. ಇನ್ನು ಗೂಗಲ್ ಡ್ರೈವ್ 15GB ಫ್ರಿ ಸ್ಟೊರೇಜ್ ಅನ್ನು ಹೊಂದಿದೆ. ಅಲ್ಲದೆ ಸ್ಟೋರೇಜ್ ಅನ್ನು ಗೂಗಲ್ ಡ್ರೈವ್, ಜಿಮೇಲ್ ಮತ್ತು ಗೂಗಲ್ ಫೋಟೋಗಳಲ್ಲಿ ಶೇರ್ ಮಾಡಿಕೊಳ್ಳಲಾಗುತ್ತದೆ. ಇದಲ್ಲದೆ ಇದರಲ್ಲಿ ನಿಮಗೆ ಹೆಚ್ಚುವರಿ ಸಂಗ್ರಹಣೆ ಅಗತ್ಯವಿದ್ದರೆ ನೀವು ಪ್ರೀಮಿಯಂ ಚಂದಾದಾರಿಕೆಗೆ ಅಪ್‌ಗ್ರೇಡ್ ಮಾಡಬಹುದು.
ಮೈಕ್ರೋಸಾಫ್ಟ್ ಒನ್‌ಡ್ರೈವ್
ಜನಪ್ರಿಯ ಕ್ಲೌಡ್ ಸ್ಟೋರೇಜ್ ಸೇವೆಗಳಲ್ಲಿ ಮೈಕ್ರೋಸಾಫ್ಟ್ ಒನ್ ಡ್ರೈವ್ ಕೂಡ ಒಂದಾಗಿದೆ. ಒನ್‌ಡ್ರೈವ್ ನಿಮ್ಮ ಗೋ-ಟು ಕ್ಲೌಡ್ ಸ್ಟೋರೇಜ್ ಸೇವೆಯಾಗಿದೆ. ಈ ಹಿಂದೆ ಸ್ಕೈಡ್ರೈವ್ ಎಂದು ಕರೆಯಲಾಗುತ್ತಿದ್ದ ಒನ್‌ಡ್ರೈವ್ 5GB ಫ್ರಿ ಸ್ಟೋರೇಜ್ ಅನ್ನು ನಿಡುತ್ತದೆ. ಆದರೆ ನೀವು ಮೈಕ್ರೋಸಾಫ್ಟ್ 365 ಚಂದಾದಾರಿಕೆಗೆ ಅಪ್‌ಗ್ರೇಡ್ ಮಾಡಿದರೆ ನಿಮಗೆ 1TB ಸ್ಟೋರೇಜ್‌ಗೆ ಅವಕಾಶವಿರುತ್ತದೆ. ಇನ್ನು ಈ ಅಪ್ಲಿಕೇಶನ್ ನಿಮ್ಮ ಕ್ಯಾಮೆರಾ ರೋಲ್‌ನಿಂದ ಫೋಟೋಗಳನ್ನು ಸ್ವಯಂಚಾಲಿತವಾಗಿ ಬ್ಯಾಕಪ್ ಮಾಡಬಹುದು, ಆದರೆ ಸ್ವಯಂಚಾಲಿತ ಟ್ಯಾಗಿಂಗ್‌ಗೆ ಮಾಡಬೇಕಾಗುತ್ತದೆ. ಇದರಲ್ಲಿ ನೀವು ಪಾಸ್‌ವರ್ಡ್-ರಕ್ಷಿತ ಅಥವಾ ಅವಧಿ ಮೀರುವ ಶೇರ್ ಲಿಂಕ್‌ಗಳನ್ನು ಇಲ್ಲಿ ಹೊಂದಿಸಬಹುದು ಮತ್ತು ನಿಮ್ಮ ಡಾಕ್ಯುಮೆಂಟ್‌ಗಳಲ್ಲಿ ಒಂದನ್ನು ಎಡಿಟ್ ಮಾಡಿದಾಗ ನೊಟೀಫಿಕೇಷನ್‌ಗಳನ್ನು ಸಹ ಪಡೆಯಬಹುದು.

ಡ್ರಾಪ್‌ಬಾಕ್ಸ್
ಡ್ರಾಪ್‌ಬಾಕ್ಸ್ ಮತ್ತೊಂದು ಜನಪ್ರಿಯ ಕ್ಲೌಡ್ ಸ್ಟೋರೇಜ್ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ 2TB ಸ್ಟೋರೇಜ್ ಅನ್ನು ಒಳೊಂಡಿದ್ದು, ಫ್ಯಾಮಿಲಿಗಳಿಗೆ ಸೂಕ್ತವಾಗಿದೆ. ಇದರಲ್ಲಿ ಫ್ಯಾಮಿಲಿ ಫ್ಲ್ಯಾನ್‌ಗೆ ತಿಂಗಳಿಗೆ $16.99 ಚಂದಾದಾರಿಕೆಯನ್ನು ಹೊಮದಿದೆ. ಇದು 6 ಜನರಿಗೆ ಬೆಂಬಲ ನೀಡುತ್ತದೆ. ಈ ಅಪ್ಲಿಕೇಶನ್ ಸ್ವಯಂ ಫೋಟೋ ಅಪ್‌ಲೋಡ್‌ಗಳನ್ನು ಸಹ ಬೆಂಬಲಿಸುತ್ತದೆ. ಜೊತೆಗೆ ಇದು ಸುಲಭ ಹಂಚಿಕೆ ಆಯ್ಕೆಗಳನ್ನು ನೀಡುತ್ತದೆ. ಇನ್ನು ಈ ಅಪ್ಲಿಕೇಶನ್ ಮೈಕ್ರೋಸಾಫ್ಟ್ ಆಫೀಸ್ ಬೆಂಬಲವನ್ನು ನೀಡುತ್ತದೆ.
ಬಾಕ್ಸ್
ಬಾಕ್ಸ್ ಬ್ಯುಸಿನೆಸ್ ವಲಯಗಳಲ್ಲಿ ಅತ್ಯಂತ ಪ್ರಸಿದ್ಧವಾದ ಕ್ಲೌಡ್ ಸ್ಟೋರೇಜ್ ಅಪ್ಲಿಕೇಶನ್ ಆಗಿದೆ. ಇದನ್ನು ಇತ್ತಿಚಿನ ದಿನಗಳಲ್ಲಿ ಅನೇಕ ಗ್ರಾಹಕರು ಬಳಸುತ್ತಿದ್ದಾರೆ. ಆದರೂ ಇದು ಸಾಮಾನ್ಯ ಗ್ರಾಹಕರಿಗೂ ಲಭ್ಯವಿದೆ. ಇದು ಸರಳ ಮತ್ತು ಸುವ್ಯವಸ್ಥಿತ ವಿನ್ಯಾಸವನ್ನು ನೀಡುತ್ತದೆ. ಇನ್ನು ಬಾಕ್ಸ್ ಅಪ್ಲಿಕೇಶನ್ ಹೊಸ ಬಳಕೆದಾರರಿಗೆ 10GB ಫ್ರೀ ಸ್ಟೋರೇಜ್ ಸ್ಪೇಸ್ ಅನ್ನು ನೀಡುತ್ತದೆ. ಇದರಲ್ಲಿ ನಿಮ್ಮ ಡಾಕ್ಯುಮೆಂಟ್‌ಗಳು, ಇಮೇಜ್‌ಗಳು, ವೀಡಿಯೊಗಳು ಅಥವಾ ನೀವು ಬ್ಯಾಕಪ್ ಮಾಡಿದ ಯಾವುದನ್ನಾದರೂ ನೀವು ಸುಲಭವಾಗಿ ಶೇರ್ ಮಾಡಬಹುದು. ಅಲ್ಲದೆ ನೀವು ಕೆಲವು ಫೈಲ್‌ಗಳು ಮತ್ತು ಫೋಲ್ಡರ್‌ಗಳಿಗೆ ಆಫ್‌ಲೈನ್ ಪ್ರವೇಶವನ್ನು ಸಹ ಸೆಟ್ ಮಾಡಬಹುದು.

ಮೆಗಾ
ನಿಮಗೆ ಒಂದು ಟನ್ ಸಾಮರ್ಥ್ಯದ ಫ್ರೀ ಸ್ಟೋರೇಜ್ ಅಪ್ಲಿಕೇಶನ್ ಬಯಸುವುದಾದರೆ ಮೆಗಾ ಅಪ್ಲಿಕೇಶನ್ ಉತ್ತಮ ಆಯ್ಕೆಯಾಗಿದೆ. ಇದು ಬೋನಸ್ ಸಾಧನೆಗಳೊಂದಿಗೆ 50GB ಫ್ರೀ ಕ್ಲೌಡ್ ಸ್ಟೋರೇಜ್ ಅನ್ನು ನೀಡುತ್ತದೆ. ಅಲ್ಲದೆ ನೀವು ತಿಂಗಳಿಗೆ €4.99 ಪಾವತಿಸುವ ಮೂಲಕ 400GB ಹೆಚ್ಚುವರಿ ಸ್ಟೋರೇಜ್ ಆಯ್ಕೆಯನ್ನು ಪಡೆದುಕೊಳ್ಳಬಹುದಾಗಿದೆ. ಕ್ಲೌಡ್ ಸ್ಟೋರೇಜ್ ಅಪ್ಲಿಕೇಶನ್‌ನಿಂದ ನೀವು ಬಯಸುವ ಎಲ್ಲಾ ಮೂಲಭೂತ ಅಂಶಗಳನ್ನು ಈ ಅಪ್ಲಿಕೇಶನ್ ಹೊಂದಿದೆ. ಇದು ಭದ್ರತೆಗೆ ಹೆಚ್ಚಿನ ಒತ್ತು ನೀಡುತ್ತದೆ. ಇದರಲ್ಲಿ ನೀವು ಬಯಸಿದಂತೆ ನಿಮ್ಮ ಫೈಲ್‌ಗಳನ್ನು ಡೌನ್‌ಲೋಡ್ ಮಾಡಬಹುದು, ಸ್ಟ್ರೀಮ್ ಮಾಡಬಹುದು, ವೀಕ್ಷಿಸಬಹುದು, ಶೇರ್ ಮಾಡಬಹುದು.
ಅಮೆಜಾನ್ ಡ್ರೈವ್
ಇನ್ನು ನೀವು ಅಮೆಜಾನ್ ಪ್ರೈಮ್ ಬಳಕೆದಾರರಾಗಿದ್ದರೆ, ನಿಮಗೆ ಅಮೆಜಾನ್ ಡ್ರೈವ್ ಸ್ಟೋರೇಜ್ ಕೂಡ ಉತ್ತಮ ಆಯ್ಕೆಯಾಗಿದೆ. ಇದು ನಿಮಗೆ 5GB ಫ್ರೀ ಸ್ಟೋರೇಜ್ ಮತ್ತು ಫೋಟೋಗಳು ಮತ್ತು ವೀಡಿಯೊಗಳಿಗಾಗಿ ಅನಿಯಮಿತ ಬ್ಯಾಕಪ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇನ್ನುಹೆಚ್ಚಿನ ಜನರು ಫೋಟೋ ಮತ್ತು ವೀಡಿಯೊ ಬ್ಯಾಕಪ್‌ಗಳಿಗಾಗಿ ಕ್ಲೌಡ್ ಸ್ಟೋರೇಜ್ ಅನ್ನು ಬಳಸುತ್ತಾರೆ. ಇನ್ನು ನೀವು ಪ್ರೈಮ್ ಖಾತೆಯನ್ನು ಹೊಂದಿಲ್ಲದಿದ್ದರೆ, ನೀವು ವರ್ಷಕ್ಕೆ $ 12 ಪಾವತಿಸುವ ಮೂಲಕ ಅನಿಯಮಿತ ಫೋಟೋ ಬ್ಯಾಕಪ್ ಪಡೆಯಬಹುದು. ಇದು ಫೋಟೋಗಳು, ವೀಡಿಯೊಗಳು, ಪಿಡಿಎಫ್, ಪಠ್ಯ ಮತ್ತು ವರ್ಡ್ ಡಾಕ್ಯುಮೆಂಟ್‌ಗಳ ಪೂರ್ವವೀಕ್ಷಣೆ ಮಾಡಲು ನಿಮಗೆ ಅನುಮತಿಸುತ್ತದೆ.

ಡೆಗೊ
Degoo ಎಂಬುದು ಉತ್ತಮ ಕ್ಲೌಡ್ ಸ್ಟೋರೇಜ್ ಸೇವೆಯಾಗಿದೆ. ಇನ್ನು ಈ ಅಪ್ಲಿಕೇಶನ್ 100GB ಫ್ರೀ ಸ್ಟೋರೇಜ್ ಅನ್ನು ನೀಡಲಿದೆ, ಆದರೆ ನೀವು ಅದನ್ನು ಪಡೆಯುವುದಿಲ್ಲ ಎಂದು ಗಮನಿಸಿ. ಐಚ್ಛಿಕ ಪ್ರಾಯೋಜಿತ ವೀಡಿಯೊಗಳನ್ನು ನೋಡುವ ಮೂಲಕ ಹೆಚ್ಚುವರಿ ಸ್ಟೋರೇಜ್ ಅನ್ನು ಗಳಿಸಬಹುದು. ಈ ಅಪ್ಲಿಕೇಶನ್ ನಿಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಸ್ವಯಂಚಾಲಿತವಾಗಿ ಬ್ಯಾಕಪ್ ಮಾಡಲು ಅವಕಾಶ ನೀಡಲಿದೆ. ಇದು ಸರಳ ಫೈಲ್ ಎಕ್ಸ್‌ಪ್ಲೋರರ್‌ನೊಂದಿಗೆ ಬರುತ್ತದೆ, ಅಲ್ಲದೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಜಿ ಕ್ಲೌಡ್ ಬ್ಯಾಕಪ್
ಜಿ ಕ್ಲೌಡ್ ಬ್ಯಾಕಪ್ ಉತ್ತಮ ಬ್ಯಾಕಪ್ ಅಪ್ಲಿಕೇಶನ್ ಆಗಿದೆ, ಆದರೆ ಇದು ಕ್ಲೌಡ್ ಸ್ಟೋರೇಜ್ ಸೇವೆಯಲ್ಲ. ಆದರೂ ಇದು ನಿಮ್ಮ ಡೇಟಾವನ್ನು ಕ್ಲೌಡ್ ಬ್ಯಾಕಪ್ ಮಾಡುವ ಕಡೆಗೆ ಹೋಗುತ್ತದೆ. ಇದು ನಿಮ್ಮ ಸಂಪರ್ಕಗಳು, ಸಂದೇಶಗಳು, ಫೋಟೋಗಳು, ವೀಡಿಯೊಗಳು, ಸಂಗೀತ, ಡಾಕ್ಯುಮೆಂಟ್‌ಗಳು, ಕರೆ ಲಾಗ್‌ಗಳು, ಫೈಲ್‌ಗಳು ಮತ್ತು ಹೆಚ್ಚಿನದನ್ನು ಬ್ಯಾಕಪ್ ಮಾಡಬಹುದು. ಜಿ ಕ್ಲೌಡ್ ಬ್ಯಾಕಪ್ ನಿಮಗೆ 1GB ಫ್ರೀ ಸ್ಟೋರೇಜ್ ಅನ್ನು ನೀಡುತ್ತದೆ, ಆದರೂ ನೀವು 10GB ವರೆಗೆ ಸುಲಭವಾಗಿ ಬಳಸಬಹುದಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470