Airtel Xstream fiberನ ಅತ್ಯುತ್ತಮ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಇಲ್ಲಿವೆ!

|

ಪ್ರಸ್ತುತ ದಿನಗಳಲ್ಲಿ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ತಡೆರಹಿತ ಇಂಟರ್‌ನೆಟ್‌ ಪಡೆಯುವುದಕ್ಕಾಗಿ ಹೆಚ್ಚಿನ ಜನರು ಬ್ರಾಡ್‌ಬ್ಯಾಂಡ್‌ ಸೇವೆಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಟೆಲಿಕಾಂ ಸಂಸ್ಥೆಗಳು ಸೇರಿದಂತೆ ಅನೇಕ ಖಾಸಗಿ ಸಂಸ್ಥೆಗಳು ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ಪರಿಚಯಿಸಿವೆ. ಈ ಪೈಕಿ ಏರ್‌ಟೆಲ್‌ ಕಂಪೆನಿ ತನ್ನ ಬ್ರಾಡ್‌ಬ್ಯಾಂಡ್‌ ಸೇವೆಗಳನ್ನು ಏರ್‌ಟೆಲ್‌ ಎಕ್ಸ್‌ಸ್ಟ್ರೀಮ್ ಫೈಬರ್ ಹೆಸರಿನಲ್ಲಿ ನೀಡುತ್ತಿದೆ. ಈ ಮೂಲಕ ರಿಲಯನ್ಸ್ ಜಿಯೋ ಫೈಬರ್, ಟಾಟಾ ಸ್ಕೈ ಬ್ರಾಡ್‌ಬ್ಯಾಂಡ್, ಎಸಿಟಿ ಫೈಬರ್‌ನೆಟ್‌ನಂತಹ ಬ್ರಾಂಡ್‌ಗಳ ಜೊತೆಗೆ ಸ್ಪರ್ಧಿಸಲು ಹೊಸ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಹೊಂದಿದೆ.

ಏರ್‌ಟೆಲ್

ಹೌದು, ಏರ್‌ಟೆಲ್ ಪ್ರಸ್ತುತ ದೇಶದಲ್ಲಿ ವಿಶಾಲವಾದ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ವ್ಯಾಪ್ತಿಯನ್ನು ಹೊಂದಿದೆ. ಈ ಮೂಲಕ ಬ್ರಾಡ್‌‌ಬ್ಯಾಂಡ್‌ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಇನ್ನು ಏರ್‌ಟೆಲ್‌ ಎಕ್ಸ್‌ಸ್ಟ್ರೀಮ್ ಫೈಬರ್ ಪ್ಲಾನ್‌ಗಳು 499ರೂ.ಗಳಿಂದ ಪ್ರಾರಂಭವಾಗಲಿದ್ದು 3,999ರೂ. ವರೆಗೆ ಲಭ್ಯವಿದೆ. ಇನ್ನು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್‌ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳಲ್ಲಿ ಅನಿಯಮಿತ ಕರೆ, ಅನಿಯಮಿತ ಡೇಟಾ ಪ್ರಯೋಜನದ ಜೊತೆಗೆ OTT ವಿಷಯಗಳಿಗೆ ಪ್ರವೇಶವನ್ನು ಸಹ ಪಡೆಯಬಹುದಾಗಿದೆ. ಇನ್ನುಳಿದಂತೆ ಏರ್‌ಟೆಲ್‌ ಎಕ್ಸ್‌ಸ್ಟ್ರೀಮ್ ಫೈಬರ್ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಯಾವೆಲ್ಲಾ ವಿಶೇಷತೆ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಎಕ್ಸ್‌ಸ್ಟ್ರೀಮ್

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳು ಅನಿಯಮಿತ ಡೇಟಾಗೆ ಪ್ರವೇಶವನ್ನು ನೀಡಲಿವೆ. ಆದರೆ ಈ ಅನಿಮಿತ ಡೇಟಾ ತಮ್ಮ ಕನೆಕ್ಟಿವಿಟಿಹೊಂದಿರುವ ಲ್ಯಾಂಡ್‌ಲೈನ್ ಫೋನ್‌ಗಳನ್ನು ಬಳಸುತ್ತಿರುವ ಹೋಸ್ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ. ಇನ್ನು ಈ ಪ್ಲಾನ್‌ಗಳು ಡಿಸ್ನಿ + ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು Zee5 ಸೇರಿದಂತೆ OTT ಪ್ಲಾಟ್‌ಫಾರ್ಮ್‌ಗಳಿಗೆ ಪೂರಕ ಚಂದಾದಾರಿಕೆಯನ್ನು ಒಳಗೊಂಡಿದೆ. ಇದಲ್ಲದೆ ಹೆಚ್ಚುವರಿಯಾಗಿ, ನೀವು 1000 ಕ್ಕೂ ಹೆಚ್ಚು ಚಲನಚಿತ್ರಗಳು, ಪ್ರದರ್ಶನಗಳು ಮತ್ತು ಸರಣಿಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ.

499ರೂ.ಬ್ರಾಡ್‌ಬ್ಯಾಂಡ್‌ ಪ್ಲಾನ್‌

499ರೂ.ಬ್ರಾಡ್‌ಬ್ಯಾಂಡ್‌ ಪ್ಲಾನ್‌

ಈ ಪ್ಲಾನ್‌ ತಿಂಗಳಿಗೆ 40Mbps ವೇಗವನ್ನು ನೀಡುವ ಅನಿಯಮಿತ ಡೇಟಾ ಪ್ರಯೋಜನ ಹೊಂದಿದೆ. ಇದಲ್ಲದೆ ಅನಿಯಮಿತ ಕರೆ ಪ್ರಯೋಜನ ಮತ್ತು Airtel Xstream ಅಪ್ಲಿಕೇಶನ್‌ಗೆ ಪೂರಕ ಪ್ರವೇಶವನ್ನು ಪಡೆಯಬಹುದಾಗಿದೆ. ಇನ್ನು ಹೆಚ್ಚುವರಿಯಾಗಿ, ನೀವು ವಿಂಕ್‌ ಮ್ಯೂಸಿಕ್‌ ಮತ್ತು ಶಾ ಅಕಾಡೆಮಿಗೆ ಚಂದಾದಾರಿಕೆಯನ್ನು ಪಡೆಯಬಹುದು.

799ರೂ.ಬ್ರಾಡ್‌ಬ್ಯಾಂಡ್‌ ಪ್ಲಾನ್‌
ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ 799ರೂ. ಪ್ಲಾನ್‌ ಅನಿಯಮಿತ ವಾಯ್ಸ್‌ ಕಾಲ್‌ ಪ್ರಯೋಜನ ನೀಡಲಿದೆ. ಜೊತೆಗೆ ತಿಂಗಳಿಗೆ 100Mbps ವೇಗದ ಅನಿಯಮಿತ ಡೇಟಾ ಪ್ರಯೋಜನವನ್ನು ನೀಡಲಿದೆ. ಇದು ಏರ್‌ಟೆಲ್ ಎಕ್ಸ್‌ಸ್ಟ್ರೀಮ್, ವಿಂಕ್ ಮ್ಯೂಸಿಕ್ ಮತ್ತು ಶಾ ಅಕಾಡೆಮಿಗೆ ಪ್ರವೇಶವನ್ನು ಸಹ ಒದಗಿಸುತ್ತದೆ.

999ರೂ.ಬ್ರಾಡ್‌ಬ್ಯಾಂಡ್‌ ಪ್ಲಾನ್‌

999ರೂ.ಬ್ರಾಡ್‌ಬ್ಯಾಂಡ್‌ ಪ್ಲಾನ್‌

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ 999ರೂ.ಬ್ರಾಡ್‌ಬ್ಯಾಂಡ್‌ ಪ್ಲಾನ್‌ 200Mbps ಇಂಟರ್‌ನೆಟ್ ವೇಗವನ್ನು ನೀಡಲಿದೆ. ಇದು ಅನಿಯಮಿತ ಡೇಟಾ ಮತ್ತು ಅನಿಮಿತ ಕರೆ ಪ್ರಯೋಜನವನ್ನು ಒಳಗೊಂಡಿದೆ. ಈ ಪ್ಲಾನ್‌ನಲ್ಲಿ ನೀವು ಡಿಸ್ನಿ+ ಹಾಟ್‌ಸ್ಟಾರ್ ವಿಐಪಿ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಮತ್ತು ವಿಂಕ್ ಮ್ಯೂಸಿಕ್‌ಗೆ ಪೂರಕ ಪ್ರವೇಶವನ್ನು ಪಡೆಯಬಹುದಾಗಿದೆ. ಹೆಚ್ಚುವರಿಯಾಗಿ, ನೀವು ಉಚಿತ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಬಾಕ್ಸ್ ಅನ್ನು ಸಹ ಪಡೆಯಬಹುದು. ಇದು ಅಮೆಜಾನ್‌ ಪ್ರೈಮ್‌ ವೀಡಿಯೊ ಮತ್ತು ZEE5 ಪ್ರೀಮಿಯಂಗೆ ಚಂದಾದಾರಿಕೆಯೊಂದಿಗೆ ಬರುತ್ತದೆ.

1,499ರೂ.ಬ್ರಾಡ್‌ಬ್ಯಾಂಡ್‌ ಪ್ಲಾನ್‌

1,499ರೂ.ಬ್ರಾಡ್‌ಬ್ಯಾಂಡ್‌ ಪ್ಲಾನ್‌

ಏರ್‌ಟೆಲ್‌ ಎಕ್ಸಸ್ಟ್ರೀಮ್‌ ಫೈಬರ್‌ 1,499ರೂ ಬ್ರಾಡ್‌ಬ್ಯಾಂಡ್‌ ಪ್ಲಾನ್‌ ಅನಿಯಮಿತ ಡೇಟಾ ಪ್ರಯೋಜನವನ್ನು ನೀಡಲಿದೆ. ಈ ಪ್ಲಾನ್‌ 300Mbps ಇಂಟರ್‌ನೆಟ್‌ ವೇಗವನ್ನು ನೀಡಲಿದ್ದು, ಅನಿಯಮಿತ ಧ್ವನಿ ಕರೆ ಪ್ರಯೋಜನಗಳೊಂದಿಗೆ ಬರುತ್ತದೆ. ಇದು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌, ಏರ್‌ಟೆಲ್‌ ಎಕ್ಸಸ್ಟ್ರೀಮ್‌,ವಿಂಕ್‌ ಮ್ಯೂಸಿಕ್‌, Zee5 ಪ್ರೀಮಿಯಂ ಮತ್ತು ಅಮೆಜಾನ್‌ ಪ್ರೈಮ್‌ಗೆ ಪ್ರವೇಶವನ್ನು ನೀಡುತ್ತದೆ.

3,999ರೂ.ಬ್ರಾಡ್‌ಬ್ಯಾಂಡ್‌ ಪ್ಲಾನ್‌

3,999ರೂ.ಬ್ರಾಡ್‌ಬ್ಯಾಂಡ್‌ ಪ್ಲಾನ್‌

ಇದು ಏರ್‌ಟೆಲ್‌ ಎಕ್ಸಸ್ಟ್ರೀಮ್‌ ಫೈಬರ್‌ ವಿಐಪಿ ಪ್ಲಾನ್ ಆಗಿದ್ದು, ತಿಂಗಳಿಗೆ 3,999 ರೂ.ಬೆಲೆ ಹೊಂದಿದೆ. ಇನ್ನು ಈ ಪ್ಲಾನ್‌ ಅನಿಯಮಿತ ಕರೆ ಪ್ರಯೋಜನಗಳೊಂದಿಗೆ, ಡಿಸ್ನಿ+ ಹಾಟ್‌ಸ್ಟಾರ್‌, ಏರ್‌ಟೆಲ್‌ ಎಕ್ಸಸ್ಟ್ರೀಮ್‌, ವಿಂಕ್‌ ಮ್ಯೂಸಿಕ್‌, Zee5 ಪ್ರೀಮಿಯಂ ಮತ್ತು ಅಮೆಜಾನ್‌ ಪ್ರೈಮ್‌ಗೆ ಪೂರಕ ಚಂದಾದಾರಿಕೆಯನ್ನು ಪಡೆದಿದೆ. ಈ ಪ್ಲಾನ್‌ನಲ್ಲಿ ಉಚಿತ ಎಕ್ಸ್‌ಸ್ಟ್ರೀಮ್ ಸ್ಟ್ರೀಮಿಂಗ್ ಬಾಕ್ಸ್ ಅನ್ನು ಸಹ ನೀಡಲಿದೆ.

ನೀವು ಕೂಡ ಹೊಸ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಕನೆಕ್ಟಿವಿಟಿಯನ್ನು ಪಡೆಯುವುದು ಹೇಗೆ?

ನೀವು ಕೂಡ ಹೊಸ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಕನೆಕ್ಟಿವಿಟಿಯನ್ನು ಪಡೆಯುವುದು ಹೇಗೆ?

ಹಂತ:1 ಹೊಸ ಏರ್‌ಟೆಲ್ ಎಕ್ಸಸ್ಟ್ರೀಮ್‌ ಫೈಬರ್‌ ಸೇವೆ ಪಡೆಯಲು ಏರ್‌ಟೆಲ್‌ ಬ್ರಾಡ್‌ಬ್ಯಾಂಡ್ ವೆಬ್‌ಪೇಜ್‌ಗೆ ಭೇಟಿ ನೀಡಿ
ಹಂತ:2 ನಿಮ್ಮ ಆಯ್ಕೆಯ ಅತ್ಯುತ್ತಮ ಇಂಟರ್‌ನೆಟ್ ಯೋಜನೆಯನ್ನು ಆಯ್ಕೆಮಾಡಿ
ಹಂತ:3 ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಸಬ್ಮಿಟ್‌ ಮಾಡಿ
ಹಂತ:4 ನಿಮ್ಮ ಆದ್ಯತೆಯ ವಿಳಾಸದಲ್ಲಿ ನೀವು ಹೊಸ ಬ್ರಾಡ್‌ಬ್ಯಾಂಡ್ ಕನೆಕ್ಸನ್‌ ಅನ್ನು ಈಗ ಇನ್‌ಸ್ಟಾಲ್‌ ಮಾಡಿ.
ಹಂತ:5 ನಂತರ ಮುಂದಿನ 48 ಗಂಟೆಗಳ ಒಳಗೆ ನಿಮ್ಮ ಹೊಸ ಪ್ಲಾನ್‌ ಅನ್ನು ಸಕ್ರಿಯಗೊಳಿಸಲಾಗುತ್ತದೆ.

Best Mobiles in India

English summary
Top advantages of Airtel Xstream fiber broadband plans with OTT subscriptions and data benefits.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X