ಭಾರತದಲ್ಲಿ 50,000ರೂ ಒಳಗೆ ಲಭ್ಯವಾಗುವ ಅತ್ಯುತ್ತಮ 55 ಇಂಚಿನ ಸ್ಮಾರ್ಟ್‌ಟಿವಿಗಳು!
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಟಿವಿಗಳು ಸಾಕಷ್ಟು ಸ್ಮಾರ್ಟ್ ಆಗಿದ್ದು, ಬೆಲೆಯು ಕೂಡ ಕಡಿಮೆ ಆಗಿದೆ. ವಿವಿಧ ಗಾತ್ರದ ಸ್ಮಾರ್ಟ್‌ಟಿವಿಗಳ ಆಯ್ಕೆ ಲಭ್ಯವಾದಂತೆ ಅವುಗಳ ಬೆಲೆಗಳು ಕೂಡ ಬದಲಾಗುತ್ತಿವೆ. ಇವುಗಳಲ್ಲಿ 55 ಇಂಚಿನ ಸ್ಮಾರ್ಟ್ ಟಿವಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಇವುಗಳ ಬೆಲೆ ಇತ್ತೀಚಿಗೆ 50,000 ರೂ.ಗಿಂತ ಕಡಿಮೆಯಿದೆ. ಈ ಸಾಲಿನಲ್ಲಿ ಸ್ಯಾಮ್‌ಸಂಗ್, ಶೀಯೋಮಿ, ಅಮೆಜಾನ್ ನಂತಹ ಬ್ರ್ಯಾಂಡ್‌ಗಳ ಟಿವಿಗಳು ಕೂಡ ಸೇರಿವೆ.
ಹೌದು, ಭರತದ ಮರುಕಟ್ಟೆಯಲ್ಲಿ ಜನಪ್ರಿಯ ಸ್ಮಾರ್ಟ್‌ಟಿವಿಗಳ ಬೆಲೆಯಲ್ಲಿ ಭಾರಿ ಬದಲಾವಣೆ ಆಗಿದೆ. ಇದಕ್ಕೆ ಇಂಬುಕೊಡುವಂತೆ ಹಲವು ಆಕರ್ಷಕ ಸ್ಮಾರ್ಟ್‌ಟಿವಿಗಳು 50,000ರೂ ಒಳಗಿನ ಬೆಲೆಯಲ್ಲಿ ಲಭ್ಯವಾಗುತ್ತಿವೆ. ಆದರಿಂದ ನಿಮ್ಮ ಮನೆಗೆ ಹೊಸ ಸ್ಮಾರ್ಟ್‌ಟಿವಿ ಖರೀದಿಸುವುದಕ್ಕೆ ಇದಕ್ಕಿಂತ ಅವಕಾಶ ಮತ್ತೊಮ್ಮೆ ಸಿಗೋದಿಲ್ಲ. ಹಾಗಾದ್ರೆ 50,000ರೂ ಒಳಗಿನ ಕಡಿಮೆ ಬೆಲೆಗೆ ಲಭ್ಯವಾಗುತ್ತಿರುವ ಅತ್ಯುತ್ತಮ ಸ್ಮಾರ್ಟ್‌ಟಿವಿಗಳ ವಿವರಗಳನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

TCL P635 ಬೆಜೆಲ್-ಲೆಸ್ 4K
TCL P635 ಬೆಜೆಲ್-ಲೆಸ್ 4K 55 ಇಂಚಿನ ಸ್ಮಾರ್ಟ್‌ಟಿವಿ ಪ್ರಸ್ತುತ ಕೇವಲ 33,990ರೂ ಬೆಲೆಯಲ್ಲಿ ಲಭ್ಯವಾಗಲಿದೆ. ಇದು ಗೂಗಲ್ ಟಿವಿ ಆಪರೇಟಿಂಗ್ ಸಿಸ್ಟಮ್‌ನಿಂದ ಕಾರ್ಯನಿರ್ವಹಿಸುವ 4K ಸ್ಮಾರ್ಟ್ ಟಿವಿಯಾಗಿದೆ. ಈ ಸ್ಮಾರ್ಟ್‌ಟಿವಿ ಡಾಲ್ಬಿ ಆಡಿಯೋ, HDR10+ ಮತ್ತು ಮೈಕ್ರೋ ಡಿಮ್ಮಿಂಗ್ ಅನ್ನು ಬೆಂಬಲಿಸುತ್ತದೆ. ಇದು 'ಡೈನಾಮಿಕ್ ಕಲರ್ ಎನ್‌ಹಾನ್ಸ್‌ಮೆಂಟ್' ಫೀಚರ್ಸ್‌ನೊಂದಿಗೆ ಬರಲಿದೆ. ಈ ಸ್ಮಾರ್ಟ್‌ಟಿವಿಯು 60Hz ರಿಫ್ರೆಶ್ ರೇಟ್ ಅನ್ನು ಹೊಂದಿದ್ದು, 24W ಬಿಲ್ಟ್-ಇನ್ ಸ್ಪೀಕರ್‌ಗಳೊಂದಿಗೆ ಬರುತ್ತದೆ.
ವಿಯು GloLED 4K
ವಿಯು GloLED 4K ಟಿವಿಯು 55 ಇಂಚಿನ ಸ್ಮಾರ್ಟ್ ಟಿವಿ ಬ್ರ್ಯಾಂಡ್ 'ಗ್ಲೋಪನೆಲ್' ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 400 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು 60Hz ರಿಫ್ರೆಶ್ ರೇಟ್ ಅನ್ನು ನೀಡಲಿದೆ. ಇದು HDR10+ ಮತ್ತು ಡಲ್ಬಿ ವಿಷನ್ ಅನ್ನು ಸಹ ಬೆಂಬಲಿಸುತ್ತದೆ. ಇನ್ನು ಈ ಮಾದರಿಯು ಟಿವಿಯಲ್ಲಿಯೇ ನಿರ್ಮಿಸಲಾದ 104W ಸಬ್ ವೂಫರ್ ಸಿಸ್ಟಂ ಅನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್‌ಟಿವಿಯಲ್ಲಿ ಜನಪ್ರಿಯ ಸಂಗೀತ ಅಪ್ಲಿಕೇಶನ್‌ಗಳಿಂದ ಹಾಡುಗಳನ್ನು ಪ್ಲೇ ಮಾಡಿದಾಗ ಸ್ಕ್ರೀನ್ ಅನ್ನು ಆಫ್ ಮಾಡಿ ಆಡಿಯೋ ಒನ್ಲಿ ಮೋಡ್ ಸೆಟ್ ಮಾಡುವುದಕ್ಕೆ ಕೂಡ ಅವಕಾಶ ಹೊಂದಿದೆ. ಈ ಸ್ಮಾರ್ಟ್‌ಟಿವಿಯು ನಿಮಗೆ ಪ್ರಸ್ತುತ ಕೇವಲ 39,990 ರೂ ಬೆಲೆಯಲ್ಲಿ ಲಭ್ಯವಾಗಲಿದೆ.

ಏಸರ್ ವಿ QLED 4K
ಏಸರ್ ವಿ QLED 4K ಸ್ಮಾರ್ಟ್‌ಟಿವಿ 55 ಇಂಚಿನ ಡಿಸ್‌ಪ್ಲೇ ಮಾದರಿಯು ಇತರ ಸ್ಮಾರ್ಟ್ ಟಿವಿಗಳಿಗಿಂತ ಭಿನ್ನವಾಗಿದೆ. ಈ ಸ್ಮಾರ್ಟ್‌ಟಿವಿಯ 55-ಇಂಚಿನ ಮಾದರಿಯು 60Hz ರಿಫ್ರೆಶ್ ರೇಟ್, ಟು-ವೇ ಬ್ಲೂಟೂತ್, ಡ್ಯುಯಲ್ ಬ್ಯಾಂಡ್ ವೈ-ಫೈ ಅನ್ನು ಬೆಂಬಲಿಸಲಿದೆ. ಇದು ಬಾಕ್ಸ್ ಹೊರಗೆ Google TV ಅಲ್ಲಿ ರನ್ ಆಗಲಿದೆ. ಇನ್ನು ಸ್ಮಾರ್ಟ್‌ಟಿವಿ ಇನ್‌ಬಿಲ್ಟ್ 30W ಸ್ಪೀಕರ್‌ಗಳೊಂದಿಗೆ ಬರುತ್ತದೆ. ಇದು ಡಾಲ್ಬಿ ಅಟ್ಮಾಸ್ ಮತ್ತು 5 ಸೌಂಡ್ ಮೋಡ್‌ಗಳನ್ನು ಬೆಂಬಲಿಸಲಿದೆ. ಇದಲ್ಲದೆ ಸ್ಮಾರ್ಟ್‌ಟಿವಿ ಸ್ಟ್ಯಾಂಡರ್ಡ್, ಸ್ಟೇಡಿಯಂ, ಮೂವಿ, ಮ್ಯೂಸಿಕ್ ಮತ್ತು ಸ್ಪೀಚ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದನ್ನು ನೀವು 39,999 ರೂ.ಬೆಲೆಯಲ್ಲಿ ಖರೀದಿಸಬಹುದಾಗಿದೆ.
ಮಿ X ಪ್ರೊ 4K ಸ್ಮಾರ್ಟ್‌ಟಿವಿ
ಮಿ X ಪ್ರೊ 4K ಸ್ಮಾರ್ಟ್‌ಟಿವಿ 55 ಇಂಚಿನ ಮದರಿಯ ಬೆಲೆ 41,999ರೂ. ಗಳಿಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಟಿವಿಯು 60Hz ರಿಫ್ರೆಶ್ ರೇಟ್ ಅನ್ನು ಹೊಂದಿದ್ದು, 178 ಡಿಗ್ರಿಗಳವರೆಗೆ ನೋಡುವ ಕೋನಗಳನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್‌ಟಿವಿಯು ಗೂಗಲ್ TV ಯಿಂದ ರನ್ ಆಗಲಿದೆ. ಹಾಗೆಯೇ 2GB RAM ಮತ್ತು 16GB ಇಂಟರ್ ಸ್ಟೋರೇಜ್ ಸಾಮರ್ಥ್ಯದಲ್ಲಿ ಬರಲಿದೆ. ಇನ್ನು ಇನ್‌ಬಿಲ್ಟ್ 40W ಸ್ಪೀಕರ್‌ಗಳೊಂದಿಗೆ ಡಾಲ್ಬಿ ಅಟ್ಮೋಸ್ ಮತ್ತು DTS-X ಎರಡನ್ನೂ ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 3 HDMI ಪೋರ್ಟ್‌ಗಳು, 2USB ಪೋರ್ಟ್‌ಗಳು, 3.5mm ಹೆಡ್‌ಫೋನ್ ಜ್ಯಾಕ್ ಮತ್ತು ಆಪ್ಟಿಕಲ್ ಪೋರ್ಟ್ ಅನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಕ್ರಿಸ್ಟಲ್ 4K ನಿಯೋ
ಸ್ಯಾಮ್‌ಸಂಗ್ ಕ್ರಿಸ್ಟಲ್ 4K ನಿಯೋ 55 ಇಂಚಿನ ಮಾದರಿಯು 46,990 ರೂ ಬೆಲೆಗೆ ಲಭ್ಯವಾಗುತ್ತಿದೆ. ಇನ್ನು ಸ್ಮಾರ್ಟ್‌ಟಿವಿಯು 2840×2160 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಬರಲಿದೆ. ಈ ಮಾದರಿಯು HDR10+ ಮತ್ತು ಅಲ್ಟ್ರಾ HD ಡಿಮ್ಮಿಂಗ್ ಅನ್ನು ಬೆಂಬಲಿಸುತ್ತದೆ. ಜೊತೆಗೆ ಆಟೋ ಗೇಮ್ ಮೋಡ್ ಅನ್ನು ಒಳಗೊಂಡಿದ್ದು, ಡಾಲ್ಬಿ ಡಿಜಿಟಲ್ ಪ್ಲಸ್ ಮತ್ತು ಅಡಾಪ್ಟಿವ್ ಸೌಂಡ್‌ನೊಂದಿಗೆ 20W ಸ್ಪೀಕರ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್‌ಟಿವಿಯ ಹಿಂಭಾಗದಲ್ಲಿ 3 HDMI ಪೋರ್ಟ್‌ಗಳು ಮತ್ತು 1 USB ಪೋರ್ಟ್ ಅನ್ನು ಬೆಂಬಲಿಸಲಿದೆ.


Click it and Unblock the Notifications








