ಪ್ರಸ್ತುತ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಲಭ್ಯವಿರುವ ಐದು ಅತ್ಯುತ್ತಮ ಆಪ್‌ಗಳು!
ಇತ್ತಿಚೀನ ದಿನಗಳಲ್ಲಿ ಟೆಕ್ನಾಲಜಿ ಸಾಕಷ್ಟು ಮುಂದುವರೆದಿದ್ದು, ಟೆಕ್ನಾಲಜಿ ಮುಂದುವರೆದಂತೆ ಯಾವುದು ಅಸಾಧ್ಯ ಇಲ್ಲ ಅನ್ನುವಷ್ಟರ ಮಟ್ಟಿಗೆ ಆಪ್ ಆಧಾರಿತ ಸೇವೆಗಳು ಇಂದು ಲಭ್ಯವಾಗುತ್ತಿವೆ. ಅದರಲ್ಲೂ ಅಂಗೈ ಅಗಲದ ಸ್ಮಾರ್ಟ್‌ಫೋನ್ ಇಡೀ ಜಗತ್ತನ್ನೇ ತನ ಒಡಲಲ್ಲಿ ತೋರಿಸುವಷ್ಟರ ಮಟ್ಟಿಗೆ ಇಂದು ಪ್ರಗತಿಯನ್ನ ಸಾದಿಸಲಾಗಿದೆ. ಪ್ರತಿಯೊಂದಕ್ಕೂ ವಿಷಯಕ್ಕೂ, ಕ್ಷೇತ್ರಕ್ಕೂ ಸಂಬಂಧಿಸಿದ ಆಪ್‌ಗಳನ್ನ ಅಭಿವೃದ್ದಿ ಪಡಿಸಲಾಗಿದ್ದು, ಎಲ್ಲವೂ ಆಪ್ ಆಧಾರಿತವಾಗುತ್ತಿದೆ.

ಹೌದು, ನೀವು ನಾವೆಲ್ಲಾ ನೋಡಿರುವಂತೆ ಇಂದು ಎಲ್ಲವೂ ಆಪ್ ಆಧಾರಿತ ಸೇವೆ ಲಬ್ಯವಾಗುತ್ತಿದೆ. ಶಿಕ್ಷಣ, ಆರೋಗ್ಯ, ಮನರಂಜನೆ, ಬ್ಯುಸಿನೆಸ್ ಎಲ್ಲಾ ವಲಯದಲ್ಲೂ ಕೂಡ ಇಂದು ಆಪ್ ಆಧಾರಿತ ಸೇವೆ ಲಭ್ಯವಾಗುತ್ತಿದೆ. ಯಾವುದೇ ಒಂದು ಕೆಲಸಕ್ಕೆ ಇತರರ ಸಲಹೆ ಪಡೆಯುತ್ತಿದ್ದ ಮನುಜ ಇಂದು ಆಪ್‌ಗಳ ಮೂಲಕ ಸಲಹೆ ಸೂಚನೆ ಪಡೆಯುವಷ್ಟರ ಮಟ್ಟಿಗೆ ಮುಂದುವರೆದಿದ್ದಾನೆ. ಆಧುನಿಕ ಯುಗದಲ್ಲಿ ಪರಸ್ಪರರ ನಡುವಿನ ಸಂವಹನ ಕಡಿಮೆ ಆಗುತ್ತಿದೆಯಾದರೂ ಆಪ್‌ಗಳಲ್ಲಿ ಮನುಜ ಪಡೆಯುತ್ತಿರುವ ಸಲಹೆ ಸೂಚನೆಗಳ ಸಂಖ್ಯೆ ಹೆಚ್ಚಾಗುತ್ತಲದೆ ಇದೆ. ಇಂತಹ ಸನ್ನಿವೇಶದಲ್ಲಿ ನಮಗೆ ನಿಮಗೆಲ್ಲಾ ಸಹಜವಾಗಿ ಒಂದು ಕುತೂಹಲ ಇದ್ದೇ ಇರುತ್ತದೆ. ಅದು ಏನೆಮದರೆ ಲಬ್ಯವಿರುವ ಆಪ್‌ಗಳಲ್ಲಿ ಅತ್ಯುತ್ತಮ ಆಪ್ಲಿಕೇಶನ್‌ಗಳು ಯಾವುವು ಅಂತಾ. ಸದ್ಯ ಈ ಲೇಖನದಲ್ಲಿ ಪ್ರಸ್ತುತ ಲಭ್ಯವಿರುವ ಅತ್ಯುತ್ತಮ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳ ಬಗ್ಗೆ ತಿಳಿಸಲಾಗಿದೆ.

ಲಾಸ್ಟ್‌ಪಾಸ್
ಇತ್ತೀಚಿನ ದಿನಗಳಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ಹೊಂದಿರಬೇಕಾದ ಅಪ್ಲಿಕೇಶನ್‌ಗಳಲ್ಲಿ ಲಾಸ್ಟ್‌ಪಾಸ್ ಕೂಡ ಒಂದು. ಇದು ಪಾಸ್‌ವರ್ಡ್ ಮೇಸೆಂಜರ್ ಆಪ್ಲಿಕೇಶನ್ ಆಗಿದ್ದು, ನಿಮ್ಮ ಸ್ಮಾರ್ಟ್‌ಫೋನ್ ಲಾಗಿನ್ ಪಾಸ್‌ವರ್ಡ್‌ಗಳನ್ನ ಸುರಕ್ಷಿತ ರೀತಿಯಲ್ಲಿ ಉಳಿಸಲು ಅವಕಾಶ ಮಾಡಿಕೊಡುತ್ತದೆ. ಅಲ್ಲದೆ ನಿಮ್ಮ ಅನುಮತಿಯಿಲ್ಲದೆ ಇತರೆ ಯಾರು ಕೂಡ ನಿಮ್ಮ ಪಾಸ್‌ವರ್ಡ್‌ಗಳನ್ನ ಬಳಸಲು ಅನುಕೂಲವಾಗದಂತೆ ನೊಡಿಕೊಳ್ಳುತ್ತದೆ. ಜೊತೆಗೆ ನಿಮ್ಮ ಖಾತೆಗಳಲ್ಲಿ ಬಳಸಲು ಅಸಾಧ್ಯವಾದ ಪಾಸ್‌ವರ್ಡ್‌ಗಳನ್ನು ರಚಿಸಲು ಇದು ಸಹಾಯ ಮಾಡುತ್ತದೆ. ಇವೆಲ್ಲವನ್ನೂ ಈ ಆಪ್ಲಿಕೇಶನ್‌ನಲ್ಲಿರುವ ಮಾಸ್ಟರ್ ಪಾಸ್‌ವರ್ಡ್‌ನೊಂದಿಗೆ ಕಂಟ್ರೋಲ್ ಮಾಡಲಾಗುತ್ತದೆ. ನಿಯಂತ್ರಿಸಲಾಗುತ್ತದೆ. ಇದು ಕ್ರಾಸ್ ಪ್ಲಾಟ್‌ಫಾರ್ಮ್ ಬೆಂಬಲವನ್ನು ಹೊಂದಿದ್ದು, ನೀವು ಇದನ್ನು ಕಂಪ್ಯೂಟರ್, ಮೊಬೈಲ್ ಡಿವೈಸ್‌ಗಳು, ಟ್ಯಾಬ್ಲೆಟ್‌ಗಳು ಅಥವಾ ಇತರೆ ಯಾವುದಾದರೂ ಡಿವೈಸ್‌ಗಳಲ್ಲೂ ಸಹ ಬಳಸಬಹುದಾಗಿದೆ.

ನೋವಾ ಲಾಂಚರ್
ಇದು ನಿಮ್ಮ ಸ್ಮಾರ್ಟ್‌ಫೋನ್‌ನ ಹೋಮ್ ಸ್ಕ್ರೀನ್ ಸೆಟ್‌ಅಪ್‌ಗಳನ್ನು ಬ್ಯಾಕಪ್ ಮಾಡುವ ಮತ್ತು ಪುನಃ ಸ್ಥಾಪಿಸುವ ಸಾಮರ್ಥ್ಯ,ವನ್ನು ಹೊಂದಿದೆ. ಅಲ್ಲದೆ ನಿಮ್ಮ ಎಲ್ಲಾ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಿಗೆ ಐಕಾನ್ ಥೆಮಿಂಗ್, ಹೋಮ್ ಸ್ಕ್ರೀನ್ ಮತ್ತು ಅಪ್ಲಿಕೇಶನ್ ಡ್ರಾಯರ್‌ಗಾಗಿ ಟನ್ ಕಸ್ಟಮೈಸ್ ಮಾಡುವ ಫೀಚರ್ಸ್‌ಗಳನ್ನ ಈ ಆಪ್ಲಿಕೇಶನ್ ಹೊಂದಿದೆ. ಅಲ್ಲದೆ ಇದರ ಮೂಲಕ ನೀವು ಗೆಸ್ಚರ್ ಕಂಟ್ರೋಲ್, ಅಪ್ಲಿಕೇಶನ್‌ಗಳಳು, ಬ್ಯಾಡ್ಜ್‌ಗಳು ಮತ್ತು ಐಕಾನ್ ಸ್ವೈಪ್ ಕ್ರಿಯೆಗಳನ್ನು ಸಹ ಇದರ ಮೂಲಕ ನಿಭಾಯಿಸಬಹುದಾಗಿದೆ.

ಪಾಡ್ಕ್ಯಾಸ್ಟ್ ಅಡಿಕ್ಟ್
ಪಾಡ್ಕ್ಯಾಸ್ಟ್ ಅಡಿಕ್ಟ್ ಪಾಡ್ಕ್ಯಾಸ್ಟ್ ಅಭಿಮಾನಿಗಳಿಗೆ ಅತ್ಯುತ್ತಮ ಪಾಡ್ಕ್ಯಾಸ್ಟ್ ಅಪ್ಲಿಕೇಶನ್ ಆಗಿದೆ. ಇದು ನೀವು ಯೋಚಿಸುವ ಪ್ರತಿಯೊಂದು ಪಾಡ್‌ಕ್ಯಾಸ್ಟ್ ಅನ್ನು ಒಳಗೊಂಡಿದೆ. ಇದಲ್ಲದೆ, ಇದು ಸರಳ ಮತ್ತು ಪರಿಣಾಮಕಾರಿ ಯುಐ, ಫೀಚರ್ಸ್‌ಗಳು, ಪ್ಲೇಬ್ಯಾಕ್ ಮತ್ತು ಡೌನ್‌ಲೋಡ್ ಫೀಚರ್ಸ್‌ಗಳನ್ನ ಒಳಗೊಂಡಿದ್ದು, ಏಕ-ವೆಚ್ಚದ ಪ್ರೀಮಿಯಂ ಆವೃತ್ತಿಯನ್ನು ಹೊಂದಿದೆ. ಇದರಲ್ಲಿ ಪಾಡ್‌ಕಾಸ್ಟ್‌ಗಳನ್ನು ಬ್ರೌಸ್ ಮಾಡಬಹುದು. ನೀವು ಡೌನ್‌ಲೋಡ್ ನಿಯಮಗಳನ್ನು ಸಹ ಹೊಂದಿಸಬಹುದಾಗಿದೆ. ಇದರಲ್ಲಿ ಪ್ಲೇ ಲಿಸ್ಟ್‌ಗಳನ್ನು ಸುಲಭವಾಗಿ ರಚಿಸಬಹುದಾಗಿದೆ. ಆಂಡ್ರಾಯ್ಡ್ ಆಟೋ ಮತ್ತು ವೇರ್ ಓಎಸ್ ಜೊತೆಗೆ Chromecast ಮತ್ತು SONOS ಎರಡನ್ನೂ ಬೆಂಬಲಿಸುತ್ತದೆ ಎನ್ನಲಾಗ್ತಿದೆ.

ಸಾಲಿಡ್ ಎಕ್ಸ್‌ಪ್ಲೋರರ್
ಸಾಲಿಡ್ ಎಕ್ಸ್‌ಪ್ಲೋರರ್ ಫೈಲ್ ಎಕ್ಸ್‌ಪ್ಲೋರರ್ ಅಪ್ಲಿಕೇಶನ್‌ಗಳ ಕ್ಷೇತ್ರದಲ್ಲಿ ಸಿಗುತ್ತದೆ. ಇದು ಮೆಟೀರಿಯಲ್ ಡಿಸೈನ್, ಆರ್ಕೈವಿಂಗ್ ಬೆಂಬಲಿಸಲಿದೆ. ಹೆಚ್ಚು ಜನಪ್ರಿಯ ಕ್ಲೌಡ್ ಸೇವೆಗಳಿಗೆ ಬೆಂಬಲ ನೀಡಲಿದೆ. ಎಫ್‌ಟಿಪಿ, ಎಸ್‌ಎಫ್‌ಪಿಟಿ, ವೆಬ್‌ಡ್ಯಾವ್ ಮತ್ತು ಕೆಲವು ಪವರ್ ಯೂಸರ್ ಸ್ಟಫ್‌ಗಳನ್ನು ಸಹ ಒಳಗೊಂಡಿದೆ. ಇದಲ್ಲದೆ ಈ ಅಪ್ಲಿಕೇಶನ್‌ಗಳಲ್ಲಿ 14 ದಿನಗಳ ಉಚಿತ ಪ್ರಯೋಗವನ್ನು ನೀಡಲಾಗಿದೆ. ಅಲ್ಲದೆ ಇದು ಹೆಚ್ಚಿನ ಜನರಿಗೆ ಆಂಡ್ರಾಯ್ಡ್‌ನಲ್ಲಿ ಲಭ್ಯವಾಗಲಿರುವ ಅತ್ಯುತ್ತಮ ಫೈಲ್ ಮ್ಯಾನೇಜರ್ ಆಗಿದೆ.

ಜೆಡ್ಜ್(Zedge)
ಇದು ವಾಲ್‌ಪೇಪರ್‌ಗಳು, ರಿಂಗ್‌ಟೋನ್‌ಗಳು, ಅಧಿಸೂಚನೆ ಆಲರ್ಟ್‌ಮ್ಯೂಸಿಕ್ ಮತ್ತು ಅಲಾರಂ ಟ್ಯೂನ್ ಅಪ್ಲಿಕೇಶನ್ ಆಗಿದೆ. ಇದು ನಿಮ್ಮ ಡಿವೈಸ್‌ನ ಬೇಸಿಕ್ ಪಾರ್ಟ್‌ಗಳನ್ನ ಕಸ್ಟಮೈಸ್ ಮಾಡಲು ಕೆಲವು ಆಯ್ಕೆಗಳನ್ನು ನೀಡುತ್ತದೆ. ಅಲ್ಲದೆ ನಿಮಗೆ ನೆನಪಿನಲ್ಲಿಡಬೇಕಾದ ದಿನಗಳನ್ನ ನೀವು ಒಮ್ಮೆ ನೋಡ್ ಮಾಡಿದರೆ ಆ ದಿನದ ಥೀಮ್ ಅನ್ನು ಮಾಡುತ್ತದೆ. ಅಲ್ಲದೆ ನಿಮಗೆ ಬೇಕಾದ ವಾಲ್‌ಪೇಪರ್‌ಗಳನ್ನ ಇದರಲ್ಲಿ ಆಯ್ಕೆ ಮಾಡಬಹುದಾಗಿದೆ. ಈ ಆಪ್ ಉಚಿತವಾಗಿ ಲಭ್ಯವಾಗಲಿದೆ.


Click it and Unblock the Notifications








