ನೀವು ಬಳಸಬಹುದಾದ ಐದು ಡಾಕ್ಯುಮೆಂಟ್ ಸ್ಕ್ಯಾನಿಂಗ್ ಅಪ್ಲಿಕೇಶನ್‌ಗಳು!

|

ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಡಾಕ್ಯುಮೆಂಟ್‌ ಸ್ಕ್ಯಾನ್‌ ಮಾಡುವ ಅಪ್ಲಿಕೇಶನ್‌ಗಳು ಕೂಡ ಒಂದಾಗಿವೆ. ನಿಮ್ಮ ದಾಖಲೆಗಳನ್ನು ಡಿಜಿಟಲ್‌ ರೂಪದಲ್ಲಿ ಸ್ಟೋರೇಜ್‌ ಮಾಡಲು ಈ ಅಪ್ಲಿಕೇಶನ್‌ಗಳು ಸಾಕಷ್ಟು ಉಪಯುಕ್ತವಾಗಿದೆ. ಇನ್ನು ಡಾಕ್ಯುಮೆಂಟ್‌ ಸ್ಕ್ಯಾನ್‌ ಮಾಡಲು ಹೆಚ್ಚಿನ ಜನರು ಈ ಹಿಂದೆ ಕ್ಯಾಮ್‌ ಸ್ಕ್ಯಾನರ್‌ ಬಳಸುತಿದ್ದರು. ಚೀನಾ ಮೂಲದ ಈ ಅಪ್ಲಿಕೇಶನ್‌ ಬ್ಯಾನ್‌ ಆದ ನಂತರ ಇತರೆ ಅಪ್ಲಿಕೇಶನ್‌ಗಳತ್ತ ಭಾರತೀಯರು ಗಮನ ಹರಿಸಿದ್ದಾರೆ. ಈ ಮೂಲಕ ತಮ್ಮ ದಾಖಲಾತಿಗಳನ್ನು ಡಾಕ್ಯುಮೆಂಟ್‌ ರೂಪದಲ್ಲಿಡುತ್ತಿದ್ದಾರೆ.

ಡಾಕ್ಯುಮೆಂಟ್‌

ಹೌದು, ಫೈಲ್‌ ಅಥವಾ ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್‌ ಮಾಡಲು ಹಲವು ಅಪ್ಲಿಕೇಶನ್‌ಗಳಿವೆ. ಕ್ಯಾಮ್‌ ಸ್ಕ್ಯಾನರ್‌ ಬ್ಯಾನ್‌ ಆದ ನಂತರ ಭಾರತದಲ್ಲಿ ಪರ್ಯಾಯವಾಗಿ ಹಲವು ಅಪ್ಲಿಕೇಶನ್‌ ಲಭ್ಯವಿವೆ. ಸದ್ಯ ನಿಮ್ಮ ಫೋನ್‌ನಲ್ಲಿ ಕ್ಯಾಮ್‌ಸ್ಕಾನರ್ ಅಪ್ಲಿಕೇಶನ್ ಅನ್ನು ಬದಲಾಯಿಸಲು ನೀವು ಬಳಸಬಹುದಾದ ಐದು ಪರ್ಯಾಯ ಅಪ್ಲಿಕೇಶನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಡ್ರೈವ್

ಗೂಗಲ್‌ ಡ್ರೈವ್

ಹೆಚ್ಚಿನ ಜನರಿಗೆ ಗೂಗಲ್‌ ಡ್ರೈವ್‌ನಲ್ಲಿ ಸ್ಕ್ಯಾನರ್‌ ಮಾಡುವುದು ತಿಳಿದೆ ಇಲ್ಲ. ಆದರೆ ನಿಮ್ಮ ಆಂಡ್ರಾಯ್ಡ್‌ ಡಿವೈಸ್‌ನೊಂದಿಗೆ ಮೊದಲೇ ಇನ್‌ಸ್ಟಾಲ್‌ ಮಾಡಲಾದ ಗೂಗಲ್‌ ಡ್ರೈವ್ ಅಪ್ಲಿಕೇಶನ್ ಇಂಟರ್‌ಬಿಲ್ಟ್‌‌ ಡಾಕ್ಯುಮೆಂಟ್ ಸ್ಕ್ಯಾನರ್‌ ಅನ್ನು ಹೊಂದಿದೆ. ಇದು ಫೈಲ್‌ಗಳು ಮತ್ತು ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್ ಮಾಡಲು ಮತ್ತು ನಂತರ ನೀವು ಬಯಸಿದರೆ ಅವುಗಳನ್ನು ಗೂಗಲ್‌ ಡ್ರೈವ್‌ಗೆ ಅಪ್‌ಲೋಡ್ ಮಾಡಲು ಅವಕಾಶವನ್ನು ನೀಡಿದೆ. ಇಮೇಜ್ ವರ್ಧನೆ, ಕಸ್ಟಮೈಸ್ ಮಾಡಬಹುದಾದ ಕಾಗದದ ಗಾತ್ರ, ನಿಮ್ಮ ಡಾಕ್ಯುಮೆಂಟ್ ಸ್ಕ್ಯಾನ್‌ಗಳ ದೃಷ್ಟಿಕೋನವನ್ನು ಆರಿಸುವುದು, ಮತ್ತು ನಿಮ್ಮ ಫೈಲ್‌ಗಳನ್ನು ಸ್ಕ್ಯಾನ್ ಮಾಡಿದ ನಂತರ ಅವುಗಳನ್ನು ಸೇವ್‌ ಮಾಡಲು ನಿಮ್ಮ ಇಮೇಜ್ ಫಾರ್ಮ್ಯಾಟ್ ಮತ್ತು ಗುಣಮಟ್ಟವನ್ನು ಆಯ್ಕೆಮಾಡಲು ಇದು ಉಪಯುಕ್ತವಾಗಿದೆ.

ಮೈಕ್ರೋಸಾಫ್ಟ್ ಲೆನ್ಸ್

ಮೈಕ್ರೋಸಾಫ್ಟ್ ಲೆನ್ಸ್

ಮೈಕ್ರೋಸಾಫ್ಟ್ ಮೂಲತಃ ತನ್ನ ಡಾಕ್ಯುಮೆಂಟ್ ಸ್ಕ್ಯಾನಿಂಗ್ ಆಫೀಸ್ ಲೆನ್ಸ್ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಇದು ಇಮೇಜ್‌ಗಳನ್ನು ಪಿಡಿಎಫ್, ವರ್ಡ್, ಪವರ್‌ಪಾಯಿಂಟ್ ಮತ್ತು ಎಕ್ಸೆಲ್ ಫೈಲ್‌ಗಳಿಗೆ ಕನ್ವರ್ಟ್‌ ಮಾಡಬಹುದಾಗಿದೆ. ಮುದ್ರಿತ ಅಥವಾ ಕೈಬರಹದ ಪಠ್ಯವನ್ನು ಡಿಜಿಟಲೀಕರಣಗೊಳಿಸಲು ಅವಕಾಶ ಮಾಡಿಕೊಡಲಿದೆ. ಇದಲ್ಲದೆ ಈ ಅಪ್ಲಿಕೇಶನ್‌ನಲ್ಲಿ ನಿಮಗೆ ಒನ್‌ನೋಟ್ ಅಥವಾ ಒನ್‌ಡ್ರೈವ್ ಕ್ಲೌಡ್ ಕ್ರಿಯಾತ್ಮಕತೆಯ ಅಗತ್ಯವಿಲ್ಲದಿದ್ದರೆ ನೀವು ಯಾವುದೇ ಚಿತ್ರವನ್ನು ಸ್ಕ್ಯಾನ್ ಮಾಡಬಹುದು ಮತ್ತು ಪರಿವರ್ತಿಸಬಹುದು.

ಅಡೋಬ್ ಸ್ಕ್ಯಾನ್

ಅಡೋಬ್ ಸ್ಕ್ಯಾನ್

ಅಡೋಬ್‌ ಅಪ್ಲಿಕೇಶನ್‌ ಕೂಡ ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್ ಮಾಡುವುದಕ್ಕೆ ಅವಕಾಶವನ್ನು ನೀಡಲಿದೆ. ಡಾಕ್ಯುಮೆಂಟ್‌ಗಳು, ಫೋಟೋಗಳು, ವ್ಯಾಪಾರ ಕಾರ್ಡ್‌ಗಳು, ವೈಟ್‌ಬೋರ್ಡ್‌ಗಳನ್ನು ಸ್ಕ್ಯಾನ್ ಮಾಡಲು ಇದು ನಿಮಗೆ ಅನುಮತಿಸುತ್ತದೆ. ನಿಮ್ಮ ಸ್ಕ್ಯಾನ್‌ಗಳನ್ನು ಟಚ್-ಅಪ್‌ಗಳು ಮತ್ತು ಇಮೇಜ್ ಮ್ಯಾನಿಪ್ಯುಲೇಷನ್ ಭಾಗದೊಂದಿಗೆ ತೆಗೆದುಕೊಂಡ ನಂತರ ನೀವು ಇವುಗಳನ್ನು ಎಡಿಟ್‌ ಮಾಡಬಹುದಾಗಿದೆ. ನಿಮ್ಮ ಡಾಕ್ಯುಮೆಂಟ್‌ಗಳನ್ನು ಮೂಲದ ಡಿಜಿಟೈಸ್ಡ್ ಪಿಡಿಎಫ್ ಆವೃತ್ತಿಗಳಾಗಿ ಪರಿವರ್ತಿಸಲು ನೀವು ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ ಅನ್ನು ಸಹ ಬಳಸಬಹುದು.

ಕಾಗಾಜ್ ಸ್ಕ್ಯಾನರ್

ಕಾಗಾಜ್ ಸ್ಕ್ಯಾನರ್

ಇದು ಜಾಹೀರಾತು ಮುಕ್ತ ಇಂಟರ್ಫೇಸ್ ಅನ್ನು ಹೊಂದಿದೆ. ನಿಮ್ಮ ಸ್ಕ್ಯಾನ್‌ಗಳಲ್ಲಿ ಕಸ್ಟಮ್ ವಾಟರ್‌ಮಾರ್ಕ್ ಅನ್ನು ಹೊಂದಿಸಲು ಸಹ ಈ ಅಪ್ಲಿಕೇಶನ್‌ ನಿಮಗೆ ಅನುಮತಿಸುತ್ತದೆ. ಬಳಕೆದಾರರು ತಮ್ಮ ಕ್ಲೌಡ್ ಸೇವೆಗಳಿಗೆ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಬಹುದು ಮತ್ತು ಅಪ್ಲಿಕೇಶನ್ ಅನ್ನು ಲಾಕ್ ಮಾಡಬಹುದು.

ಟೈನಿ ಸ್ಕ್ಯಾನರ್

ಟೈನಿ ಸ್ಕ್ಯಾನರ್

ಈ ಅಪ್ಲಿಕೇಶನ್‌ ನಿಮ್ಮ ಕಂಪ್ಯೂಟರ್‌ಗೆ ವೈ-ಫೈ ವರ್ಗಾವಣೆ, ಕ್ಲೌಡ್ ಮೂಲಕ ಅಥವಾ ಇಮೇಲ್ ಮೂಲಕ, ಎಐ ಚಾಲಿತ ಒಸಿಆರ್, ಸ್ವಯಂಚಾಲಿತ ಪುಟ ಪತ್ತೆ, ಪಾಸ್‌ಕೋಡ್ ಡಾಕ್ಯುಮೆಂಟ್ ಪ್ರೊಟೆಕ್ಷನ್, ಡಾಕ್ಯುಮೆಂಟ್ ಸೈನಿಂಗ್ ಮತ್ತು ಹೆಚ್ಚಿನ ಫೀಚರ್ಸ್‌ಗಳನ್ನು ಹೊಂದಿದೆ. ಇದರಲ್ಲಿ ತಮ್ಮ ಡಾಕ್ಯುಮೆಂಟ್‌ಗಳನ್ನು ಶೇರ್‌ ಮಾಡಿಕೊಳ್ಳುವ ಮೊದಲು ಫೋಲ್ಡರ್‌ಗಳಲ್ಲಿ ಸಹ ಆಯೋಜಿಸಬಹುದು.

Best Mobiles in India

English summary
Here are five alternative apps you can use to replace the CamScanner app on your phone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X