Home
ಸುದ್ದಿಜಾಲ

Jio, Vi, Airtel, bsnl: ಕಡಿಮೆ ಬೆಲೆಯಲ್ಲಿ ಅನಿಯಮಿತ ಡೇಟಾ ನೀಡುವ ಪ್ಲ್ಯಾನ್‌ಗಳು!

ಪ್ರಸ್ತುತ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂಗಳ ಆರ್ಭಟ ಜೋರಾಗಿದೆ. ಕಡಿಮೆ ಬೆಲೆಯಲ್ಲಿ ಅಧಿಕ ಡೇಟಾ ಜೊತೆಗೆ ಅನಿಯಮಿತ ಕರೆ ಸೌಲಭ್ಯ ಪರಿಚಯಿಸಿ ಗ್ರಾಹಕರನ್ನು ಆಕರ್ಷಿಸುತ್ತಿವೆ. ಇನ್ನು ಇತ್ತೀಚಿಗೆ ಜಿಯೋ ಭಾರತದಲ್ಲಿ ತನ್ನ ಪ್ರಿಪೇಯ್ಡ್ ಬಳಕೆದಾರರಿಗಾಗಿ ಪ್ರೀಡಂ ಪ್ಲ್ಯಾನ್‌ಗಳ ಮೂಲಕ ಅನಿಯಮಿತ ದೈನಂದಿನ ಡೇಟಾವನ್ನು ನೀಡುತ್ತಿದೆ. ಅದೇ ರೀತಿ ವಿ, ಭಾರ್ತಿ ಏರ್‌ಟೆಲ್ ಮತ್ತು ಸರ್ಕಾರ ಸ್ವಾಮ್ಯದ ಬಿಎಸ್‌ಎನ್‌ಎಲ್ ಕೂಡ ಅನಿಯಮಿತ ಡೇಟಾ ಪ್ಲ್ಯಾನ್‌ಗಳನ್ನು ಪರಿಚಯಿಸಿವೆ.

ಡೇಟಾ

ಹೌದು, ಇತ್ತೀಚಿನ ದಿನಗಳಲ್ಲಿ ದಿನನಿತ್ಯ ಅನಿಯಮಿತ ಡೇಟಾ ನೀಡುವ ಪ್ಲ್ಯಾನ್‌ಗಳು ಹೆಚ್ಚು ಆಕರ್ಷಿತವಾಗಿವೆ. ಚಂದಾದಾರರನ್ನು ಸೆಳೆಯುವ ನಿಟ್ಟಿನಲ್ಲಿ ಎಲ್ಲಾ ಟೆಲಿಕಾಂ ಆಪರೇಟರ್‌ಗಳು ಅನಿಯಮಿತ ಡೇಟಾ ನೀಡುವ ಪ್ರಿಪೇಯ್ಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿವೆ. ಹಾಗಾದ್ರೆ ಜಿಯೋ, ವಿ, ಏರ್‌ಟೆಲ್ ಮತ್ತು ಬಿಎಸ್‌ಎನ್‌ಎಲ್ ಟೆಲಿಕಾಂಗಳು 500 ಕ್ಕಿಂತ ಕಡಿಮೆ ಬೆಲೆಯಲ್ಲಿ ಪರಿಚಯಿಸಿರುವ ಅನಿಯಮಿತ ದೈನಂದಿನ ಡೇಟಾ ಪ್ಲ್ಯಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಲಯನ್ಸ್ ಜಿಯೋ

ರಿಲಯನ್ಸ್ ಜಿಯೋ

ರಿಲಯನ್ಸ್ ಜಿಯೋ 127ರೂ. ಪ್ರಿಪೇಯ್ಡ್ ಡೇಟಾ ಪ್ಲ್ಯಾನ್‌
ಜಿಯೋ ಟೆಲಿಕಾಂನ 127ರೂ ಪ್ರಿಪೇಯ್ಡ್‌ ಪ್ಲ್ಯಾನ್‌ 15 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದು ದಿನಕ್ಕೆ 100 ಎಸ್‌ಎಂಎಸ್‌ನೊಂದಿಗೆ ಅನಿಯಮಿತ ಧ್ವನಿ ಕರೆಗಳು ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯೊಂದಿಗೆ 12GB ಡೇಟಾವನ್ನು ನೀಡುತ್ತದೆ.

ರಿಲಯನ್ಸ್ ಜಿಯೋ 247ರೂ ಪ್ರಿಪೇಯ್ಡ್ ಡೇಟಾ ಪ್ಲ್ಯಾನ್‌
ಇನ್ನು ರಿಲಯನ್ಸ್ ಜಿಯೋ ಪರಿಚಯಿಸಿರುವ 247ರೂ. ಪ್ರಿಪೇಯ್ಡ್‌ ಪ್ಲ್ಯಾನ್‌ 30 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದು ಅನಿಯಮಿತ ಧ್ವನಿ ಕರೆಗಳೊಂದಿಗೆ ದಿನಕ್ಕೆ 100 ಎಸ್‌ಎಂಎಸ್‌ನೊಂದಿಗೆ 25GB ಡೇಟಾವನ್ನು ನೀಡುತ್ತದೆ.

ರಿಲಯನ್ಸ್ ಜಿಯೋ 447ರೂ, ಪ್ರಿಪೇಯ್ಡ್ ಡೇಟಾ ಪ್ಲ್ಯಾನ್‌
ಹಾಗೆಯೇ ಜಿಯೋ ಟೆಲಿಕಾಂ ನ 447ರೂ ಪ್ರಿಪೇಯ್ಡ್‌ ಡೇಟಾ ಪ್ಲ್ಯಾನ್‌ 60 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಇದು 50GB ಡೇಟಾ ಜೊತೆಗೆ ದಿನಕ್ಕೆ 100 ಎಸ್‌ಎಂಎಸ್, ಅನಿಯಮಿತ ಧ್ವನಿ ಕರೆಗಳು ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ನೀಡುತ್ತದೆ.

ಬಿಎಸ್ಎನ್ಎಲ್ 447ರೂ, ಪ್ರಿಪೇಯ್ಡ್ ಡೇಟಾ ಪ್ಲ್ಯಾನ್‌

ಬಿಎಸ್ಎನ್ಎಲ್ 447ರೂ, ಪ್ರಿಪೇಯ್ಡ್ ಡೇಟಾ ಪ್ಲ್ಯಾನ್‌

ಬಿಎಸ್‌ಎನ್‌ಎಲ್‌ನ 447ರೂ ಪ್ಲ್ಯಾನ್‌ 60 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದು 100GB ಡೇಟಾ, ದಿನಕ್ಕೆ 100 ಎಸ್‌ಎಂಎಸ್, ಅನಿಯಮಿತ ಧ್ವನಿ ಕರೆಗಳು ಮತ್ತು ಇರೋಸ್ ನೌ ಚಂದಾದಾರಿಕೆಯನ್ನು ನೀಡುತ್ತದೆ.

ಏರ್‌ಟೆಲ್‌

ಏರ್‌ಟೆಲ್‌

ಏರ್‌ಟೆಲ್‌ 397ರೂ, ಪ್ರಿಪೇಯ್ಡ್ ಡೇಟಾ ಪ್ಲ್ಯಾನ್‌
ಈ ಯೋಜನೆಯು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ ಮತ್ತು ಇದು 6GB ಡೇಟಾ, ಅನಿಯಮಿತ ಧ್ವನಿ ಕರೆಗಳು, 900 ಎಸ್‌ಎಂಎಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯ ಒಂದು ತಿಂಗಳ ಪ್ರಯೋಗವನ್ನು ನೀಡುತ್ತದೆ.

ಏರ್‌ಟೆಲ್ 149ರೂ, ಪ್ರಿಪೇಯ್ಡ್ ಡೇಟಾ ಪ್ಲ್ಯಾನ್‌
ಈ ಯೋಜನೆಯು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ ಮತ್ತು ಇದು 2GB ಡೇಟಾ, ಅನಿಯಮಿತ ಧ್ವನಿ ಕರೆಗಳು, 300 ಎಸ್‌ಎಂಎಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯ ಒಂದು ತಿಂಗಳ ಪ್ರಯೋಗವನ್ನು ನೀಡುತ್ತದೆ.

ಏರ್‌ಟೆಲ್‌ 456ರೂ. ಪ್ರಿಪೇಯ್ಡ್ ಡೇಟಾ ಪ್ಲ್ಯಾನ್‌
ಈ ಯೋಜನೆಯು 60 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ ಮತ್ತು ಇದು 50GB ಡೇಟಾ, ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 ಎಸ್‌ಎಂಎಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯ ಒಂದು ತಿಂಗಳ ಪ್ರಯೋಗವನ್ನು ನೀಡುತ್ತದೆ.

ವೊಡಾಫೋನ್ ಐಡಿಯಾ

ವೊಡಾಫೋನ್ ಐಡಿಯಾ

Vi 149ರೂ, ಪ್ರಿಪೇಯ್ಡ್ ಡೇಟಾ ಪ್ಲ್ಯಾನ್‌
ಈ ಯೋಜನೆಯು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ ಮತ್ತು ಇದು 2GB ಡೇಟಾವನ್ನು ಅನಿಯಮಿತ ಧ್ವನಿ ಕರೆಗಳು ಮತ್ತು 300 ಎಸ್‌ಎಂಎಸ್‌ಗಳನ್ನು ನೀಡುತ್ತದೆ.

Vi 269ರೂ, ಪ್ರಿಪೇಯ್ಡ್ ಡೇಟಾ ಪ್ಲ್ಯಾನ್‌
ಈ ಯೋಜನೆಯು 56 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ ಮತ್ತು ಇದು 4GB ಡೇಟಾವನ್ನು ಅನಿಯಮಿತ ಧ್ವನಿ ಕರೆಗಳು ಮತ್ತು 600 ಎಸ್‌ಎಂಎಸ್‌ಗಳನ್ನು ನೀಡುತ್ತದೆ.

Vi 379ರೂ, ಪ್ರಿಪೇಯ್ಡ್ ಡೇಟಾ ಪ್ಲ್ಯಾನ್‌
ಈ ಯೋಜನೆಯು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ ಮತ್ತು ಇದು 6GB ಡೇಟಾವನ್ನು ಅನಿಯಮಿತ ಧ್ವನಿ ಕರೆಗಳು ಮತ್ತು 1,000 ಎಸ್‌ಎಂಎಸ್‌ಗಳನ್ನು ನೀಡುತ್ತದೆ.

Best Mobiles in India

English summary
Here is a list of the top data plans under ₹500 by Jio, Vi, Airtel and BSNL that offer unlimited daily data.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+