ಶೀಘ್ರದಲ್ಲೇ ಶುರುವಾಗಲಿದೆ ಇ-ಕಾಮರ್ಸ್ ತಾಣಗಳ ರಿಯಾಯಿತಿ ಮೇಳ!
ಹಬ್ಬ-ಹರಿದಿನಗಳು ಬಂದ್ರೆ ಸಾಕು ಇ-ಕಾಮರ್ಸ್ ತಾಣಗಳಲ್ಲಿ ಸಾಕಷ್ಟು ಆಪರ್‌ಗಳ ಸುರಿಮಳೆ ಆಗುತ್ತದೆ. ಅದರಲ್ಲೂ ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ತನ್ನ ಆನ್‌ಲೈನ್ ಗ್ರಾಹಕರನ್ನು ಸೆಳೆಯುವುದಕ್ಕಾಗಿಯೇ "ದಿ ಬಿಗ್ ಬಿಲಿಯನ್ ಡೇಸ್" ಆಯೋಜನೆ ಮಾಡಿದ್ರೆ, ಅಮೆಜಾನ್ ತನ್ನ ಗ್ರಾಹಕರಿಗಾಗಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಅನ್ನು ಆಯೋಜಿಸುತ್ತಾ ಬಂದಿದೆ. ಈ ಮೂಲಕ ಈ ಎರಡು ಇ-ಕಾಮರ್ಸ್ ತಾಣಗಳು ತಮ್ಮ ಆನ್‌ಲೈನ್ ಗ್ರಾಹಕರನ್ನು ಇನ್ನಷ್ಟು ಸೆಳೆಯುವ ಪ್ರಯತ್ನ ನಡೆಸುತ್ತಿವೆ. ಅಲ್ಲದೆ ತಮ್ಮ ವ್ಯಾಪ್ತಿ ವಿಸ್ತರಣೆಯನ್ನು ಮಾಡುತ್ತಲೇ ಇವೆ.

ಹೌದು, ಹಲವು ಆಫರ್ ಗಳ ಮೂಲಕ ಗ್ರಾಹಕರ ಮನಗೆದ್ದಿರುವ ಫ್ಲಿಪ್ ಕಾರ್ಟ್ "ದಿ ಬಿಗ್ ಬಿಲಿಯನ್ ಡೇಸ್" ಆಫರ್ ಮತ್ತು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಕೆಲವೇ ದಿನಗಳಲ್ಲಿ ಮತ್ತೆ ಶುರುವಾಗಲಿದೆ. ಈ ಮೂಲಕ ಈ ವರ್ಷವೂ ಸಹ ಆನ್‌ಲೈನ್ ಮಾರುಕಟ್ಟೆಯಲ್ಲಿ ಮೂಂಚೂಣಿಯಲ್ಲಿದ್ದಕೊಂಡು ಹೊಸ ಭಾಷ್ಯ ಬರೆಯಲು ಎರಡು ತಾಣಗಳು ಮುಂದಾಗಿವೆ. ಸದ್ಯ ಹಬ್ಬ, ಹರಿದಿನಗಳು ಶುರುವಾಗುವ ಮುಂಚೆಯೇ ಫ್ಲಿಪ್ಕಾರ್ಟ್ ಭಾರತದಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ ಶುರುವಾಗಲಿದೆ ಎಂದು ಪ್ರಕಟಿಸಿದೆ. ಇದಕ್ಕೆ ಪೈಪೋಟಿ ಎನ್ನುವಂತೆ ಇ-ಕಾಮರ್ಸ್ ತಾಣ ಅಮೆಜಾನ್ ತನ್ನ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಅನ್ನು ಶುರುಮಾಡುವುದಾಗಿ ಹೇಳಿಕೊಂಡಿದೆ. ಇನ್ನುಳಿದಂತೆ ಈ ಎರಡು ಪ್ರಮುಖ ಸೇಲ್‌ಗಳ ಬಗ್ಗೆ ತಿಳಿಸಿಕೊಡ್ತೀವಿ ಓದಿರಿ.

ಫ್ಲಿಪ್‌ಕಾರ್ಟ್ ದಿ ಬಿಗ್ ಬಿಲಿಯನ್ ಡೇಸ್ ಸೇಲ್
ಜನಪ್ರಿಯ ಇ-ಕಾಮರ್ಸ್ ತಾಣದಲ್ಲಿ ಒಂದಾಗಿರುವ ಫ್ಲಿಪ್‌ಕಾರ್ಟ್ ತನ್ನ ದಿ ಬಿಗ್ ಬಿಲಿಯನ್ ಡೇಸ್ ಸೇಲ್ ಅನ್ನು ಶುರುಮಾಡುವುದಾಗಿ ಪ್ರಕಟಣೆ ಹೊರಡಿಸಿದೆ. ಇದರಲ್ಲಿ ತನ್ನ ಪ್ಲಸ್ ಸದಸ್ಯರಿಗೆ ಪ್ರವೇಶವು ಉಳಿದವುಗಳಿಗಿಂತ ಮುಂಚೆಯೇ ಇರುತ್ತದೆ ಎಂದು ಹೇಳಿದೆ. ಇನ್ನು ಗ್ರಾಹಕರು ಖರೀದಿಸುವ ಪ್ರತಿ ಪ್ರಾಡ್ಕಟ್‌ಗಳ ಮೇಲೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೆ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿ ನೀಡಲು ಫ್ಲಿಪ್‌ಕಾರ್ಟ್ ಎಸ್‌ಬಿಐ ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಇದಲ್ಲದೆ ಮೊಬೈಲ್‌ಗಳಲ್ಲಿ ಹಲವಾರು ಡೀಲ್‌ಗಳು ಮತ್ತು ಬೆಲೆ ಕಡಿತಗಳು ನಡೆಯಲಿವೆ ಎಂದು ಫ್ಲಿಪ್‌ಕಾರ್ಟ್ ಹೇಳಿಕೊಂಡಿದೆ.

ಸದ್ಯ ಫ್ಲಿಪ್‌ಕಾರ್ಟ್ ದಿ ಬಿಗ್ ಬಿಲಿಯನ್ ಡೇಸ್ ಸೇಲ್ ಶುರುವಾಗುವ ನಿಖರವಾದ ದಿನಾಂಕವನ್ನು ಘೋಷಿಸಲಾಗಿಲ್ಲ. ಆದರೆ ಫ್ಲಿಪ್‌ಕಾರ್ಟ್ ಪುಟದಲ್ಲಿ ಫ್ಲಿಪ್‌ಕಾರ್ಟ್ ದಿ ಬಿಗ್ ಬಿಲಿಯನ್ ಡೇಸ್ ಸೇಲ್ ‘ಶೀಘ್ರದಲ್ಲೇ ಬರಲಿದೆ' ಎಂದು ಸೂಚನೆ ನೀಡಿದೆ. ಇನ್ನು ಈ ಭಾರಿಯ ಫ್ಲಿಪ್‌ಕಾರ್ಟ್ ದಿ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಎಸ್‌ಬಿಐ ಬ್ಯಾಂಕ್ ರಿಯಾಯಿತಿಯ ಹೊರತಾಗಿ, ಪ್ರಮುಖ ಬ್ಯಾಂಕುಗಳಾದ ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಹೆಚ್ಚಿನವುಗಳಲ್ಲಿ ಫ್ಲಿಪ್‌ಕಾರ್ಟ್ ನೋ ಕಾಸ್ಟ್ ಇಎಂಐ ಆಯ್ಕೆಗಳನ್ನು ನೀಡುತ್ತದೆ. ಬಜಾಜ್ ಫಿನ್‌ಸರ್ವ್ ಕಾರ್ಡ್ ಹೊಂದಿರುವವರಿಗೆ ನೋ ಕಾಸ್ಟ್ ಇಎಂಐ ಸೌಲಭ್ಯವೂ ಇರಲಿದೆ.

ಇನ್ನು ಮೊಬೈಲ್ ಮತ್ತು ಟ್ಯಾಬ್ಲೆಟ್‌ಗಳು ಹಳೆಯ ಫೋನ್‌ಗಳಲ್ಲಿ ಹೆಚ್ಚುವರಿ ವಿನಿಮಯ ರಿಯಾಯಿತಿಯೊಂದಿಗೆ ಬೆಲೆ ಕಡಿತವನ್ನು ಮಾಡಲಾಗುವುದು ಎನ್ನಲಾಗಿದೆ. ಅಲ್ಲದೆ ಫ್ಲಿಪ್‌ಕಾರ್ಟ್ ನಲ್ಲಿ ಮೊಬೈಲ್ ಪ್ರೊಟೆಕ್ಷನ್ ರೂ. 1 ಮತ್ತು ಪ್ರಮುಖ ಬ್ಯಾಂಕುಗಳಿಂದ ನೋ ಕಾಸ್ಟ್ ಇಎಂಐ ಆಯ್ಕೆಗಳನ್ನ ನೀಡಲಿದೆ. ಜೊತೆಗೆ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಟಿವಿಗಳು ಮತ್ತು ದೊಡ್ಡ ಉಪಕರಣಗಳಲ್ಲಿ 80 ಪ್ರತಿಶತದಷ್ಟು ರಿಯಾಯಿತಿ ನೀಡುತ್ತದೆ. ಇತರ ಕೊಡುಗೆಗಳು ಸಂಪೂರ್ಣ ಉಪಕರಣಗಳ ರಕ್ಷಣೆ, ವಿನಿಮಯ ಕೊಡುಗೆಗಳು ಮತ್ತು ನೋ ಕಾಸ್ಟ್ ಇಎಂಐ ಸೌಲಭ್ಯವನ್ನು ಒಳಗೊಂಡಿವೆ.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್
ಈ ಭಾರಿ ಹಬ್ಬದ ಸೀಸನ್ ಶುರುವಾಗುವ ಮುಂಚೆಯೇ, ಅಮೆಜಾನ್ ತನ್ನ ಸೈಟ್‌ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಅನ್ನು ಶುರುಮಾಡುವುದರ ಬಗ್ಗೆ ಹೇಳಿದೆ. ಇದು ಯಾವಾಗ ಪ್ರಾರಂಭವಾಗಲಿದೆ ಎನ್ನುವುದರ ಬಗ್ಗೆ ಇನ್ನು ತಿಳಿದುಬಂದಿಲ್ಲ. ಆದರೆ ಈ ಭಾರಿಯ ಸೇಲ್ ಫೆಸ್ಟಿವಲ್‌ನಲ್ಲಿ ಇ-ಕಾಮರ್ಸ್ ಸೈಟ್ ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಇಎಂಐ ವಹಿವಾಟು ಸೇರಿದಂತೆ ಎಲ್ಲಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಖರೀದಿಗೆ 10 ಪ್ರತಿಶತದಷ್ಟು ತ್ವರಿತ ರಿಯಾಯಿತಿ ನೀಡುತ್ತದೆ. ಅಲ್ಲದೆ ಅಮೆಜಾನ್ ಪ್ರೈಮ್ ಸದಸ್ಯರಿಗೆ ಸೇಲ್‌ಗೆ ಮೊದಲೇ ಅವಕಾಶ ಸಿಗಲಿದೆ ಎನ್ನಲಾಗಿದೆ. ಇನ್ನು ಪ್ರಐಮ್ ಚಂದಾದಾರಿಕೆ ರೂ. 999 ಮತ್ತು ಒಂದು ವರ್ಷಕ್ಕೆ ರೂ. ಒಂದು ತಿಂಗಳು 129 ರೂ. ಆಗಿದೆ.

ಗ್ರೇಟ್ ಇಂಡಿಯನ್ ಫೆಸ್ಟಿವಲ್ ನಲ್ಲಿ ಈ ಬಾರಿ ಮೊಬೈಲ್ ಲ್ಯಾಪ್‌ಟಾಪ್, ಸ್ಮಾರ್ಟ್‌ಟಿವಿಳು ಸೇರಿದಂತೆ ಇತರೆ ಎಲೆಕ್ಟ್ರಾನಿಕ್ಸ್ ಪರಿಕರಗಳ ಮೇಲೆ ನೋಕಾಸ್ಟ್ ಇಎಂಐಗಳು, ವಿನಿಮಯ ರಿಯಾಯಿತಿ ಮತ್ತು ಒಟ್ಟು ಡ್ಯಾಮೇಜ್ ಪ್ರೊಟೆಕ್ಷನ್ ಅನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಅದರಲ್ಲೂ ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳ ವಿಭಾಗದಲ್ಲಿ 70 ಪ್ರತಿಶತದಷ್ಟು ರಿಯಾಯಿತಿ ದೊರೆಯಲಿದೆ ಎನ್ನಲಾಗಿದೆ. ಇದಲ್ಲದೆ ಅಮೆಜಾನ್‌ನ ಎಕೋ ಸ್ಮಾರ್ಟ್ ಸ್ಪೀಕರ್ ಶ್ರೇಣಿ, ಫೈರ್ ಟಿವಿ ಸ್ಟಿಕ್ ಮತ್ತು ಕಿಂಡಲ್ ಶ್ರೇಣಿಯಲ್ಲೂ ಬೆಲೆ ಕಡಿತ ಇರುತ್ತದೆ. ಅಮೆಜಾನ್ ತನ್ನ ಉತ್ಪನ್ನಗಳಿಗೆ ಕಾಂಬೊ ಕೊಡುಗೆಗಳನ್ನು ಪರಿಚಯಿಸುತ್ತದೆ. ಇವೆಲ್ಲದರ ಹೊರತಾಗಿ, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಮನೆ ಮತ್ತು ಕಿಚನ್ ಉತ್ಪನ್ನಗಳಿಗೆ 60 ಪ್ರತಿಶತದಷ್ಟು ರಿಯಾಯಿತಿ, ಬಟ್ಟೆ ಮತ್ತು ಪರಿಕರಗಳ ಮೇಲೆ 70 ಪ್ರತಿಶತದಷ್ಟು ರಿಯಾಯಿತಿ, ಆಹಾರ ಮತ್ತು ಗೌರ್ಮೆಟ್ ವಿಭಾಗದಲ್ಲಿ 50 ಪ್ರತಿಶತದಷ್ಟು ರಿಯಾಯಿತಿ ದೊರೆಯಲಿದೆ.


Click it and Unblock the Notifications








