Home
ಸುದ್ದಿಜಾಲ

ಅಮೆಜಾನ್‌ ಸೇಲ್‌ ಕೊನೆಯ ದಿನ ಗೇಮಿಂಗ್‌ ಲ್ಯಾಪ್‌ಟಾಪ್‌ಗಳಿಗೆ ಬಿಗ್ ಡಿಸ್ಕೌಂಟ್‌!

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಆಯೋಜಿಸಿದ್ದ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ ಇಂದು ಮಧ್ಯರಾತ್ರಿ ಕೊನೆಗೊಳ್ಳಲಿದೆ. ಈ ವಿಶೇಷ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಸ್ಮಾರ್ಟ್‌ವಾಚ್‌, ಸ್ಮಾರ್ಟ್‌ಟಿವಿ ಸೇರಿದಂತೆ ಹಲವು ಗ್ಯಾಜೆಟ್‌ಗಳ ಮೇಲೆ ಭರ್ಜರಿ ರಿಯಾಯಿತಿ ದೊರೆಯಲಿದೆ. ಸದ್ಯ ಅಮೆಜಾನ್‌ನ ವಿಶೇಷ ಸೇಲ್‌ ಇಂದು ಎಂಡ್‌ ಆಗಲಿದ್ದು, ಕೊನೆಯ ದಿನವೂ ಕೂಡ ಗ್ರಾಹಕರಿಗೆ ಆಯ್ದ ಉತ್ಪನ್ನಗಳ ಮೇಲೆ ಬಿಗ್‌ ಡಿಸ್ಕೌಂಟ್‌ ನೀಡಲಾಗುತ್ತಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ ಇಂದು ಕೊನೆಯಾಗಲಿದೆ. ಐದು ದಿನಗಳ ಕಾಲ ನಡೆದ ಸೇಲ್‌ ಇಂದು ಮಧ್ಯ ರಾತ್ರಿ ಮುಕ್ತಾಯವಾಗಲಿದೆ. ಸದ್ಯ ಈ ಸೇಲ್‌ನಲ್ಲಿ ಗೇಮಿಂಗ್‌ ಲ್ಯಾಪ್‌ಟಾಪ್‌ಗಳಿಗೆ ಭರ್ಜರಿ ರಿಯಾಯಿತಿ ಘೋಷಿಸಲಾಗಿದೆ. ಇನ್ನು ಈ ಸೇಲ್‌ನಲ್ಲಿ ಲ್ಯಾಪ್‌ಟಾಪ್‌ಗಳಿಗೆ ಏನೆಲ್ಲಾ ಡಿಸ್ಕೌಂಟ್‌ ಸಿಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏಸರ್ ನೈಟ್ರೋ 5 ಸರಣಿ

ಏಸರ್ ನೈಟ್ರೋ 5 ಸರಣಿ

ಏಸರ್ ನೈಟ್ರೊ 5 ಸರಣಿಯ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಅಮೆಜಾನ್‌ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಲ್ಯಾಪ್‌ಟಾಪ್‌ ಹರಿತವಾದ ವಿನ್ಯಾಸ, ಆರ್‌ಜಿಬಿ ಕೀಗಳು ಮತ್ತು ಹೆಚ್ಚಿನ ರಿಫ್ರೆಶ್-ದರದ ಪರದೆಯೊಂದಿಗೆ, ಏಸರ್ ನೈಟ್ರೋ 5 ಸರಣಿಯು ಹಲವಾರು RAM ಮತ್ತು ಸ್ಟೋರೇಜ್ ರೂಪಾಂತರಗಳಲ್ಲಿ ಅಪ್‌ಗ್ರೇಡ್‌ಗಳನ್ನು ಹೊಂದಿದೆ. ಇದು ಇಂಟೆಲ್ 10 ನೇ ಜೆನ್ ಮತ್ತು ರೈಜನ್ 5000 ಸರಣಿ ಪ್ರೊಸೆಸರ್‌ಗಳನ್ನು ಬೆಂಬಲಿಸುತ್ತದೆ. ಸದ್ಯ ಈ ಸರಣಿಯು ಪ್ರಸ್ತುತ 67,990ರೂ,ಗಳಿಂದ ಆರಂಭವಾಗುತ್ತದೆ.

HP ಪೆವಿಲಿಯನ್ ಗೇಮಿಂಗ್ ಸರಣಿ

HP ಪೆವಿಲಿಯನ್ ಗೇಮಿಂಗ್ ಸರಣಿ

HP ಪೆವಿಲಿಯನ್ ಗೇಮಿಂಗ್ ಸರಣಿಯು 15.6-ಇಂಚಿನ ಫುಲ್‌ಹೆಚ್‌ಡಿ ಡಿಸ್‌ಪ್ಲೇಯೊಂದಿಗೆ ಬರಲಿದೆ. ಬಜೆಟ್ ಗೇಮಿಂಗ್ ಲ್ಯಾಪ್‌ಟಾಪ್ ರೈಜನ್ 4000 ಸರಣಿ ಪ್ರೊಸೆಸರ್‌ಗಳು ಮತ್ತು ಎಚ್‌ಡಿಡಿ ಮತ್ತು ಎಸ್‌ಎಸ್‌ಡಿ ಸ್ಟೋರೇಜ್ ರೂಪಾಂತರಗಳೊಂದಿಗೆ ಬರುತ್ತದೆ. ಇನ್ನು ಈ ಸರಣಿಯು 56,990ರೂ,ಗಳಿಂದ ಆರಂಭವಾಗುತ್ತದೆ.

ಎಲ್‌ಜಿ ಅಲ್ಟ್ರಾಜಿಯರ್ 24 ಇಂಚಿನ ಗೇಮಿಂಗ್ ಮಾನಿಟರ್

ಎಲ್‌ಜಿ ಅಲ್ಟ್ರಾಜಿಯರ್ 24 ಇಂಚಿನ ಗೇಮಿಂಗ್ ಮಾನಿಟರ್

ಎಲ್‌ಜಿ ಅಲ್ಟ್ರಾಜಿಯರ್ 24-ಇಂಚಿನ ಗೇಮಿಂಗ್ ಮಾನಿಟರ್ ವೇಗದ ರಿಫ್ರೆಶ್ ರೇಟ್‌ ಮತ್ತು ತ್ವರಿತ 1 ಎಂಎಸ್ ಪ್ರತಿಕ್ರಿಯೆ ಸಮಯಕ್ಕಾಗಿ ಟಿಎನ್ ಪ್ಯಾನಲ್‌ನೊಂದಿಗೆ ಬರುತ್ತದೆ. 1920 × 1080 ಫಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಹೊಂದಿದೆ. ಇನ್ನು ಈ ಸೇಲ್‌ 144Hz ರಿಫ್ರೆಶ್ ರೇಟ್‌ ಅನ್ನು ಹೊಂದಿದ್ದು, AMD Radeon Freesync ಬೆಂಬಲದೊಂದಿಗೆ ಬರುತ್ತದೆ. ಮಾನಿಟರ್ ಡಿಸ್‌ಪ್ಲೇ ಪೋರ್ಟ್ ಮತ್ತು ಎಚ್‌ಡಿಎಂಐ ಪೋರ್ಟ್ ಜೊತೆಗೆ ಎತ್ತರ ಹೊಂದಾಣಿಕೆ ಸ್ಟ್ಯಾಂಡ್‌ನೊಂದಿಗೆ ಬರುತ್ತದೆ. ಇನ್ನು ಈ ಮಾನಿಟರ್ ಬೆಲೆ ಪ್ರಸ್ತುತ 13,499 ರೂ. ಆಗಿದೆ.

ರೇಜರ್ ಡೆತ್ ಆಡ್ಡರ್ ಎಸೆನ್ಷಿಯಲ್ ಗೇಮಿಂಗ್ ಮೌಸ್

ರೇಜರ್ ಡೆತ್ ಆಡ್ಡರ್ ಎಸೆನ್ಷಿಯಲ್ ಗೇಮಿಂಗ್ ಮೌಸ್

6,400 ಡಿಪಿಐ ಆಪ್ಟಿಕಲ್ ಸೆನ್ಸರ್ ಹೊಂದಿರುವ ರೇಜರ್ ಡೆತ್ ಆಡ್ಡರ್ ಎಸೆನ್ಷಿಯಲ್ ಗೇಮಿಂಗ್ ಮೌಸ್ ನಯವಾದ ವಿನ್ಯಾಸ, ಹೆಚ್ಚಿನ ಬಾಳಿಕೆ ಮತ್ತು ಎರಡು ಹೆಚ್ಚುವರಿ ಪ್ರೊಗ್ರಾಮೆಬಲ್ ಬಟನ್‌ಗಳೊಂದಿಗೆ ಬರುತ್ತದೆ. ಇನ್ನು ಅಮೆಜಾನ್ ಸೇಲ್‌ ಸಮಯದಲ್ಲಿ ಈ ಗೇಮಿಂಗ್ ಮೌಸ್ 1,453ರೂ,ಗಳಿಗೆ ಲಭ್ಯವಿದೆ.

ಕಾಸ್ಮಿಕ್ ಬೈಟ್ ಇಂಟರ್ಸ್ಟೆಲ್ಲರ್

ಕಾಸ್ಮಿಕ್ ಬೈಟ್ ಇಂಟರ್ಸ್ಟೆಲ್ಲರ್

ಕಾಸ್ಮಿಕ್ ಬೈಟ್ ಇಂಟರ್ ಸ್ಟೆಲ್ಲಾರ್ ವೈರ್ಡ್ ಗೇಮಿಂಗ್ ಕಂಟ್ರೋಲರ್ ಮತ್ತು ಕಾಸ್ಮಿಕ್ ಬೈಟ್ ನೆಬ್ಯುಲಾ ವೈರ್ ಲೆಸ್ ಕಂಟ್ರೋಲರ್ ಖರೀದಿಸಲು ಇದು ಉತ್ತಮ ಸಮಯವಾಗಿದೆ. ಇದು ಬ್ಯಾಕ್‌ಲಿಟ್ ಕೀಗಳೊಂದಿಗೆ ಬರುತ್ತವೆ. ಅಲ್ಲದೆ ಪಿಸಿ ಮತ್ತು ಪಿಎಸ್ 3 ಮತ್ತು ಆಂಡ್ರಾಯ್ಡ್ ಸಾಧನಗಳೊಂದಿಗೆ ಬೆಂಬಲವನ್ನು ಬಳಸುತ್ತವೆ. ಈ ಕಂಟ್ರೋಲರ್‌‌ಗಳು ಹೆಚ್ಚಿನ ಹೊಸ ವಿಂಡೋಸ್ ಸಿಸ್ಟಮ್‌ಗಳಲ್ಲಿ ರಬ್ಬರೀಕೃತ ವಿನ್ಯಾಸ ಮತ್ತು ನೇರ ಪ್ಲಗ್-ಅಂಡ್-ಪ್ಲೇ ಬೆಂಬಲದೊಂದಿಗೆ ಬರುತ್ತವೆ. ಇನ್ನು ಈ ಇಂಟರ್ ಸ್ಟೆಲ್ಲಾರ್ (ವೈರ್ಡ್‌)ಬೆಲೆ 950 ರೂ.ಆಗಿದೆ. ಮತ್ತು (ವೈರ್ ಲೆಸ್) ಬೆಲೆ 1,459 ರೂ.ಆಗಿದೆ.

Best Mobiles in India

English summary
Amazon Great Freedom Festival: Gaming on your mind? Check out these great deals during the Amazon sale that you shouldn't miss.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+