ಧ್ಯಾನದ ಬಗ್ಗೆ ಮಾಹಿತಿ ನೀಡುವ ಐದು ಅತ್ಯುತ್ತಮ ಆಪ್‌ಗಳು!

|

ಇತ್ತಿಚಿನ ದಿನಗಳಲ್ಲಿ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಅದರಲ್ಲೂ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದ ಮೇಲಂತೂ ಪ್ರತಿಯೊಂದಕ್ಕೂ ಕೆಲಸಕ್ಕೂ ಉಪಯೋಗವಾಗಬಲ್ಲ ಆಪ್‌ಗಳು ಇಂದು ಲಭ್ಯವಿವೆ. ಎಲ್ಲವೂ ಆಪ್‌ ಆಧಾರಿತವಾಗಿದ್ದು, ನೀವು ಕೆಲಸ ಮಾಡುವುದರಿಂದ ಹಿಡಿದು, ನೀವು ತಿನ್ನುವ ಆಹಾರವನ್ನು ಆರ್ಡರ್‌ ಮಾಡುವವರೆಗೂ ಕೂಡ ಅಪ್‌ಗಳಿವೆ. ಸದ್ಯ ಈ ಯಾಂತ್ರಿಕೃತ ಬದುಕಿನಲ್ಲಿ ಒತ್ತಡ ಅನ್ನೊದು ಎಲ್ಲರಿಗೂ ಸಹಜವಾಗಿದೆ. ಈ ಒತ್ತಡವನ್ನ ನಿವಾರಿಸಿಕೊಳ್ಳಬೇಕು ಅಂದ್ರೆ ಯೋಗ, ವ್ಯಾಯಾಮ, ಧ್ಯಾನಕ್ಕಿಂತ ಮತ್ತೊಂದು ಮದ್ದಿಲ್ಲ, ಆದ್ರೆ ನಮಗೆ ಯೋಗ, ಧ್ಯಾನ ಬರೋದಿಲ್ಲ ಅಂತಾ ಕೂರಬೇಡಿ. ಯಾಕಂದ್ರೆ ನಿಮಗೆ ಧ್ಯಾನವನ್ನು ಹೇಳಿಕೊಡುವ ಆಪ್‌ಗಳು ಇಂದು ಪ್ಲೇ ಸ್ಟೋರ್‌ನಲ್ಲಿ ಲಬ್ಯವಿವೆ.

ಹೌದು

ಹೌದು, ಇಂದಿನ ಯಾಂತ್ರಿಕೃತ ಬದುಕಿನಲ್ಲಿ ಎಲ್ಲರಿಗೂ ಒಂದೊಂದು ಒತ್ತಡ, ಸನ್ನಿವೇಶಗಳು ಇರುತ್ತವೆ. ಒತ್ತಡದ ಸನ್ನಿವೇಶಗಳಲ್ಲೂ ನಾವು ದೃಡವಾಗಿ ನಿಲ್ಲಬೇಕಾದರೆ ನಮ್ಮಲ್ಲಿ ಏಕಾಗ್ರತೆ ಅನ್ನೊದು ಮುಖ್ಯವಾಗಿದೆ. ಆದರೆ ಅದು ಸುಲಭವಾಗಿ ಬರುವುದಿಲ್ಲ. ಇದಕ್ಕಾಗಿ ಧ್ಯಾನ , ಯೋಗ, ಗೊತ್ತಿದ್ದರೆ ನಮ್ಮನ್ನು ನಾವು ನಿಂಯತ್ರಿಸಿಕೊಳ್ಳುವ ಮಟ್ಟಿಗೆ ಇರುತ್ತೆವೆ. ಇದಕ್ಕಾಗಿಯೇ ಎಲ್ಲರೂ ಧ್ಯಾನದ ಕಡೆ ಮೊರೆ ಹೋಗುತ್ತಾರೆ. ಹಾಗಂತ ನಮಗೆ ದ್ಯಾನ ಮಾಡೋದು ಹೇಗೆ ಅಂತಾ ಗೊತ್ತಿಲ್ಲ ಎನ್ನಬೇಡಿ. ದ್ಯಾನದ ಮಹತ್ವ ತಿಳಿಸುವ ಹಾಗೂ ಧ್ಯಾನವನ್ನು ಹೇಗೆ ಯಾವಾಗ ಮಾಡಬೇಕು ಎಂದು ಅರ್ಥೈಸುವ ಟಾಪ್‌ ಆಪ್‌ಗಳ ಬಗ್ಗೆ ತಿಳಿಸಿಕೊಡ್ತೀವಿ ಈ ಲೇಖನವನ್ನ ಓದಿ.

ಹೆಡ್‌ಸ್ಪೇಸ್ ಆಪ್‌

ಹೆಡ್‌ಸ್ಪೇಸ್ ಆಪ್‌

ಈ ಆಪ್‌ ಧ್ಯಾನ ಮತ್ತು ನಿದ್ರೆ ಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿಸುತ್ತದೆ. ನಿಮ್ಮ ಗೊಂಧಲದ ಮನಸ್ಸನ್ನು ಏಕಾಗ್ರತೆಗೆ ತರಲು, ಹಾಗೂ ನಿಮ್ಮಲ್ಲಿರುವ ಆತಂಕ ಮತ್ತು ಒತ್ತಡವನ್ನು ನಿರ್ವಹಿಸಲು ಹೆಡ್‌ಸ್ಪೇಸ್ ಅಪ್ಲಿಕೇಶನ್ ನಿಮಗೆ ಸಹಾಯ ಮಾಡುತ್ತದೆ. ಅಲ್ಲದೆ ಈ ಅಪ್ಲಿಕೇಶನ್‌ ನಿಮ್ಮಲ್ಲಿ ಪ್ರತಿನಿತ್ಯ ಆಗುತ್ತಿರುವ ಬದಲಾವಣೆಯ ಬಗ್ಗೆ ಮಾಹಿತಿಯನ್ನ ನೀಡುತ್ತಿರುತ್ತದೆ.
ಅಲ್ಲದೆ ಈ ಅಪ್ಲಿಕೇಶನ್ ನಿದ್ರೆ, ಒತ್ತಡ, ಆತಂಕ, ಕೆಲಸ, ಟ್ರಾವೆಲ್‌,ಸ್ಪೋರ್ಟ್ಸ್‌, ಕಮ್ಯೂನಿಕೇಶನ್‌ ವಿಚಾರಗಳನ್ನ ಅರಿಯುವ ಧ್ಯಾನದ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತದೆ.

ಸೆರೆನಿಟಿ ಆಪ್‌

ಸೆರೆನಿಟಿ ಆಪ್‌

ಇದು ಮನಸ್ಸಿನಲ್ಲಿ ಪ್ರಶಾಂತತೆಯನ್ನು ತಂದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಗೈಡ್‌ ಮಾಡುವ ಅತ್ಯುತ್ತಮ ಧ್ಯಾನದ ಆಪ್‌ ಆಗಿದೆ. ಈ ಅಪ್ಲಿಕೇಶನ್‌ನ ನಲ್ಲಿ ನಿಮಗೆ ಉಚಿತವಾಗಿ ಧ್ಯಾನದ ಬಗ್ಗೆ ಮಾಹಿತಿಯನ್ನ ನೀಡಲಾಗುತ್ತೆ. ಅಲ್ಲದೆ ಪ್ರತಿನಿತ್ಯವೂ ಒಂದೊಂದು ಸೂತ್ರವನ್ನು ಹೇಳಿಕೊಡಲಾಗುತ್ತೆ. ಜೊತೆಗೆ ಅಪ್ಲಿಕೇಶನ್ ಟ್ರ್ಯಾಕ್ ಮಾಡಲು ದೈನಂದಿನ ಸೂಚನೆಗಳನ್ನ ನೀಡಲಿದೆ. ಇದರಿಂದ ನಿಮ್ಮ ಮನಸ್ಸಿನಲ್ಲಿ ಕಾಡುವ ಕೆಲ ಆತಂಕಗಳಿಗೆ ಪರಿಹಾರ ಸಿಗಲಿದೆ.

ಡೀಪ್‌ ಮೇಡಿಟೇಶನ್‌ ಆಪ್‌

ಡೀಪ್‌ ಮೇಡಿಟೇಶನ್‌ ಆಪ್‌

ಈ ಆಪ್‌ ಹೆಸರೇ ಸೂಚಿಸುವಂತೆ ದೀರ್ಘವಾದ ದ್ಯಾನ, ವಿಶ್ರಾಂತಿ ಮತ್ತು ನಿದ್ರೆಯ ಬಗ್ಗೆ ಕುರಿತು ಮಾಹಿತಿ ನೀಡುವ ಆಪ್‌ ಆಗಿದೆ. ಈ ಅಪ್ಲಿಕೇಶನ್ ನಲ್ಲಿ ಧ್ಯಾನಕ್ಕೆ ಸಂಬಂಧಿಸಿದ 15 ರೀತಿಯ ಧ್ಯಾನಗಳು ಮತ್ತು ಉಸಿರಾಟ, ವಿಶ್ರಾಂತಿ ಮತ್ತು ಕ್ಲಾಸಿಕ್ ಸೆಷನ್‌ಗಳ ಕುರಿತ ಮಾಹಿತಿ ಸಿಗಲಿದೆ. ಈ ಧ್ಯಾನಗಳಿಂದ ನಿಮಗೆ ಆತಂಕವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಪ್ಯಾನಿಕ್ ಅಟ್ಯಾಕ್‌ಗಳನ್ನು ಮಿವಾರಿಸುವಲ್ಲಿ ಮತ್ತು ಒತ್ತಡವನ್ನು ನಿಯಂತ್ರಣದಲ್ಲಿಡಲು ಇದು ಸಹಾಯ ಮಾಡುತ್ತದೆ.

ಮೇಡಿಟೇಶನ್ ಪ್ಲಸ್

ಮೇಡಿಟೇಶನ್ ಪ್ಲಸ್

ಇದು ಧ್ಯಾನಕ್ಕೆ ಸಂಬಂಧಿಸಿದಂತೆ ಉತ್ತಮವಾದ ಸಂಗೀತದ ಆಲಾಪನೆಯನ್ನು ನೀಡುತ್ತದೆ. ಅಲ್ಲದೆ ಧ್ಯಾನದ ಬಗ್ಗೆ ಹಂತ-ಹಂತದ ಸೂಚನೆಗಳನ್ನು ನೀಡಲಿದೆ. ಜೊತೆಗೆ ಈ ಅಪ್ಲಿಕೇಶನ್‌ನಲ್ಲಿ ವಿಶೇಷವಾಗಿ ಧ್ಯಾನಕ್ಕಾಗಿಯೇ ಆಯ್ಕೆ ಮಾಡಿದ ಸಂಗೀತವನ್ನು ಕೇಳಬಹುದಾಗಿದೆ. ಇದಲ್ಲದೆ ಯಾವ ಹಂತದಲ್ಲಿ ಯಾವ ಮಾದರಿಯ ಧ್ಯಾನ ಪ್ರಕ್ರಿಯೆಯಲ್ಲಿ ನಾವು ತೊಡಗಿಸಿಕೊಳ್ಳಬೇಕು ಅನ್ನುವ ಮಾಹಿತಿಯನ್ನ ನಾವಿಲ್ಲಿ ತಿಳಿಯಬಹುದಾಗಿದೆ.

ಮೇಡಿಟೇಶನ್ ಮ್ಯೂಸಿಕ್‌

ಮೇಡಿಟೇಶನ್ ಮ್ಯೂಸಿಕ್‌

ಈ ಅಪ್ಲಿಕೇಶನ್‌ನಲ್ಲಿ ಧ್ಯಾನಕ್ಕಾಗಿ ಉತ್ತಮ ಗುಣಮಟ್ಟದ ಸಂಗೀತವನ್ನ ಕೇಳಬಹುದು. ಅಲ್ಲದೆ ಧ್ಯಾಣದ ಸಂಧರ್ಭದಲ್ಲಿ ಮ್ಯೂಸಿಕ್‌ ಅನ್ನು ನಿಯಂತ್ರಿಸಬಲ್ಲ ನಿಗಙಧಿತ ಟೈಮರ್‌ ಅನ್ನು ಸಹ ನೀಡಲಾಗಿದೆ. ಇದರಲ್ಲಿ ಕೇವಲ ಟ್ಯಾಪ್‌ ಮಾಡುವ ಮೂಲಕವೇ ಸಂಗೀತಕ್ಕೆ ಸಂಬಂಧಿಸಿದ ಮ್ಯೂಸಿಕ್‌ ಹಾಗೂ ಮಾಹಿತಿಯನ್ನು ಕೇಳಬಹುದಾಗಿದೆ. ಇದು ಡಾರ್ಕ್ ಮೋಡ್‌ನಲ್ಲಿ ಬರುವ ಫ್ರೀ ಅಪ್ಲಿಕೇಶನ್ ಆಗಿದೆ.

Best Mobiles in India

English summary
If you are not able to make it to meditation classes, don’t worry, there are several apps that can guide you. Take a peek at our selection.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X