Just In
Don't Miss
- News
ಇಂದು ನೇತಾಜಿ ಜನ್ಮದಿನ: ಸುಭಾಷ್ ಚಂದ್ರ ಬೋಸ್ ಅವರ ನೆಚ್ಚಿನ ತಿನಿಸು ಯಾವುದು ಗೊತ್ತೇ?
- Sports
ಏಕದಿನ ಪಂದ್ಯ: ಮೆಹಿದಿ ಹಸನ್ ಸ್ಪಿನ್ ದಾಳಿಗೆ ನಲುಗಿದ ವೆಸ್ಟ್ ಇಂಡೀಸ್
- Movies
ತೆಲುಗಿನ ಬ್ಲಾಕ್ ಬಸ್ಟರ್ 'ಕ್ರ್ಯಾಕ್' ಸಿನಿಮಾ ಹಿಂದಿಗೆ ರೀಮೇಕ್?
- Education
RBI Recruitment 2021: 241 ಸೆಕ್ಯುರಿಟಿ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಹಳೆಯ 100 ರೂಪಾಯಿ ನೋಟುಗಳನ್ನು ಆರ್ಬಿಐ ಹಿಂಪಡೆಯುವ ಸಾಧ್ಯತೆ!
- Automobiles
ವಿವಿಧ ಕಾರು ಮಾದರಿಗಳ ಬೆಲೆ ಹೆಚ್ಚಳ ಮಾಡಿದ ಟಾಟಾ ಮೋಟಾರ್ಸ್
- Lifestyle
ನಿಮ್ಮ ಡಲ್ ಸ್ಕಿನ್ ಹೋಗಲಾಡಿಸಲು ಸುಲಭವಾದ ಮನೆಮದ್ದು ಇಲ್ಲಿದೆ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2019ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ 5 ವಿಡಿಯೋಗಳು!
ಇದು ಸೋಶಿಯಲ್ ಮೀಡಿಯಾ ಜಮಾನ ಇಲ್ಲಿ ಏನೇ ಮಾತಾಡಿದ್ರೂ, ಹಾಡಿದ್ರೂ, ಕುಣಿದ್ರೂ ಎಲ್ಲೆಡೆ ಕ್ಷಣಾರ್ಧದಲ್ಲಿ ವೈರಲ್ ಆಗಿ ಬಿಡುತ್ತೆ. ಹೇಳಿಕೇಳಿ ಸೋಶಿಯಲ್ ಮೀಡಿಯಾ ಆಪ್‌ಗಳಾದ ಟಿಕ್‌ಟಾಕ್, ಹಲೋ, ರೂಪೋಸೋ ದಲ್ಲಿ ಹೊಸ ಹೊಸ ವಿಡಿಯೋಗಳದ್ದೇ ಹಬ್ಬ. ಇಲ್ಲಿ ಹಾಡಿದ್ರೂ ವೈರಲ್ ಆಗುತ್ತೆ, ಮಾತಾಡಿದ್ರೂ ವೈರಲ್ ಆಗುತ್ತೆ. ಕೆಲವು ವೈರಲ್ ವಿಡಿಯೋಗಳು ಕೆಲವರಿಗೆ ಅಚಾನಕ್ ಆಗಿ ರಾತ್ರೋ ರಾತ್ರಿ ಸ್ಟಾರ್‌ಗಿರಿ ತಂದು ಕೊಟ್ರೆ. ಇನ್ನು ಕೆಲವು ಸನ್ನಿವೇಶಗಳು ಟ್ರೋಲ್‌ಗೆ ಗುರಿಯಾಗಿ ಬಿಡುತ್ತೆ.

ಹೌದು, ಕೆಲವೊಂದು ವಿಡಿಯೋಗಳು ಕೆಲವರಿಗೆ ಸ್ಟಾರ್ ಪಟ್ಟವನ್ನ ಕಟ್ಟಿದೆ. ಇನ್ನು ಕೆಲವ್ರು ಟ್ರೊಲಿಗರಿಂದ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಇಂತಹ ಸನ್ನಿವೇಶಗಳಿಗೆ 2019 ಕೂಡ ಹೊರತಾಗಿಲ್ಲ. ಸಿನಿಮಾ, ರಾಜಕೀಯ ಕ್ರೀಡೆ ಎಲ್ಲಾ ರಂಗಗಳಲ್ಲೂ ಕೂಡ ಸಾಕಷ್ಟು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಹಾಗಾದ್ರೆ 2019 ರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಹಾಗೂ ಟ್ರೋಲ್ ಆದ ಟಾಪ್ ಪೈವ್ ವಿಡಿಯೋಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೋಡ್ತೀವಿ ಓದಿ.

ಟಾಪ್ 5. ಚಾರ್ಟ್ ಬಸ್ಟರ್ ಬೇಬಿ
ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆದ ವಿಡಿಯೋಗಳಲ್ಲಿ ಈ ವಿಡಿಯೋ ರಾಷ್ಟ್ರಮಟ್ಟದಲ್ಲೂ ಸೌಂಡ್ ಮಾಡಿತ್ತು. ಅದು ಕೂಡ ನಮ್ಮ ಕರ್ನಾಟಕದ ಚಿತ್ರದುರ್ಗದ ಯುವರೈತ ಈ ವಿಡಿಯೋ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡಿದ್ದ. 3 ನಿಮಿಷ 10 ಸೆಕೆಂಡ್‌ನ ಈ ವಿಡಿಯೋದಲ್ಲಿ ಹಿರಿಯೂರು ತಾಲೂಕಿನ ಹಿಂಡಸಕಟ್ಟೆ ಗ್ರಾಮದ ಪ್ರದೀಪ್ ಎಂಬ ಯುವರೈತ ಪ್ರಖ್ಯಾತ ಪಾಪ್ ಗಾಯಕ ಜಸ್ಟಿನ್ ಬೈಬರ್ ಹಾಡಿರುವ ಬೇಬಿ ಸಾಂಗ್ ಅನ್ನು ಸೊಗಸಾಗಿ ಹಾಡಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದ. ಅಷ್ಟೇ ಅಲ್ಲ ಈ ಹಾಡನ್ನ ಪಾಪ್ ಗಾಯಕರ ಶೈಲಿಯಲ್ಲೇ ಹಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಟಾಪ್ 4. ನಿಖಿಲ್ ಎಲ್ಲಿದ್ದಿಯಪ್ಪಾ
2019ರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ರೀತಿಯಲ್ಲಿ ಟ್ರೋಲ್ ಆದ ವೀಡಿಯೋ ಇದಾಗಿದೆ. ಹೇಳಿಕೇಳಿ ರಾಜಕೀಯ ನಾಯಕರುಗಳ ಹೇಳಿಕೆ ಒಂದಿಲ್ಲೊಂದು ರೀತಿಯಲ್ಲಿ ಸಂಚಲನ ಸೃಷ್ಟಿಸಿಬಿಡುತ್ತೆ. ಅದೇ ಮಾದರಿಯಲ್ಲಿ ಕಳೆದ ಲೋಕಸಭಾ ಚುನಾವಣೆ ವೇಳೆ ನಿಖಿಲ್ ಕುಮಾರಸ್ವಾಮಿ ಅವ್ರನ್ನ ಅತಿ ಹೆಚ್ಚು ಕಾಡಿದ್ದು ಇದೇ ವೀಡಿಯೋ ಅನ್ನಬಹುದು. ಈ ಹಿಂದೆ ಚಿತ್ರವೊಂದರ ಹಾಡು ಬಿಡುಗಡೆ ಸಂದರ್ಭದಲ್ಲಿ ನಿಖಿಲ್ ತಂದೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದ ನಿಖಿಲ್ ಎಲ್ಲಿದ್ದೀಯಪ್ಪಾ ಅನ್ನೊ ಹೇಳಿಕೆ ಸಾಕಷ್ಟು ಟ್ರೋಲ್ ಗೆ ಗುರಿಯಾಗಿತ್ತಲದ್ದೆ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಟಾಪ್ 3. ರಾನು ಮಂಡಲ್
ಪಶ್ಚಿಮ ಬಂಗಾಳದ ಕೋಲ್ಕತಾದ ರಾಣಾ ಘಾಟ್ ಪಟ್ಟಣದ ರೈಲ್ವೆೆ ನಿಲ್ದಾಾಣದಲ್ಲಿ ಭಿಕ್ಷೆ ಬೇಡುತ್ತಿಿದ್ದ ಭಿಕ್ಷುಕಿ. ತನ್ನ ಹೊಟ್ಟೆೆ ಪಾಡಿಗಾಗಿ ಹಾಡು ಹಾಡಿ, ಭಿಕ್ಷೆ ಬೇಡಿ ಬಂದ ದುಡ್ಡಿನಲ್ಲಿ ಹೊಟ್ಟೆೆ ತುಂಬಿಸಿಕೊಳ್ಳುತ್ತಿದ್ದಳು. ಆಕೆಯ ಹೆಸರು ರಾನುಮಂಡಲ್. ಭಿಕ್ಷುಕಿಯಾದರೂ ಸುಮಧುರ ಕಂಠ ಹೊಂದಿದ್ದ ರಾನುಮಂಡಲ್ 1772ರಲ್ಲಿ ತೆರೆ ಕಂಡ ‘ಶೋರ್'ಚಿತ್ರದಲ್ಲಿ ಗಾಯಕಿ ಲತಾ ಮಂಗೇಶ್ಕರ್ ಹಾಡಿದ್ದ ಇಕ್ ಪ್ಯಾರ್ ಕಾ ನಗ್ಮಾ ಹೈ ಹಾಡನ್ನ ರೈಲ್ವೆೆ ನಿಲ್ದಾಾಣದಲ್ಲಿ ರಾನುಮಂಡಲ್ ಹಾಡುತ್ತಿದ್ದಾಗ ಇಂಜಿನಿಯರ್ ಆಗಿದ್ದ ಅಪರಿಚಿತ ಯುವಕನೊಬ್ಬ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ. ಈ ಒಂದು ವಿಡಿಯೋ ದಿನಬೆಳಗಾಗುವುದರೊಳಗೆ ರಾನುಮಂಡಲ್ ಅವ್ರನ್ನ ದೇಶವ್ಯಾಾಪಿ ಸೆಲೆಬ್ರಿಟಿಯಾನ್ನಾಗಿಸಿಬಿಟ್ಟಿತ್ತು.

ಟಾಪ್ 2. ಹೌದು ಹುಲಿಯಾ
ಇತ್ತೀಚಿಗಷ್ಟೇ ನಡದ ರಾಜ್ಯ ವಿಧಾನಸಭಾಯೆ ಹದಿನೈದು ಕ್ಷೇತ್ರಗಳ ಉಪಚುನಾವಣೆ ಸಮಯದಲ್ಲಿ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾಗವಾಡದಲ್ಲಿ ಕ್ಷೇತ್ರದ ಉಪ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಕುಡುಕನೊಬ್ಬ ಹೊಡೆದಿದ್ದ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ಹಲ್‌ಚಲ್ ಎಬ್ಬಿಸಿತ್ತು. ಸಿದ್ದರಾಮಯ್ಯ ಅವರು, ‘ಇಂದಿರಾಗಾಂಧಿ ದೇಶಕ್ಕೋಸ್ಕರ ಪ್ರಾಣ ತೆತ್ತರು' ಎನ್ನುತ್ತಿದ್ದಂತೆಯೇ, ಜನರ ಸಾಲಿನಲ್ಲಿದ್ದ ವ್ಯಕ್ತಿಯೊಬ್ಬ ‘ಹೌದು ಹುಲಿಯ' ಎಂದಿದ್ದರು. ಇದೂ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿತ್ತು. ಈ ಸನ್ನಿವೇಶದ ಡೈಲಾಗ್‌ಗಳನ್ನು ಆಧರಿಸಿ ಕೆಲವರು ಮರುಸೃಷ್ಟಿ ಮಾಡಿರುವ ವಿಡಿಯೊಗಳು ಈಗಲೂ ಟ್ರೆಂಡ್ ಆಗುತ್ತಿವೆ.

ಟಾಪ್ 1. ಹ್ಯಾಡ್ಸ್ ಆಪ್ ಸಾಂಗ್ ವೈರಲ್
ಇನ್ನು 'ಹ್ಯಾಂಡ್ಸಪ್ ಹಾಡಿನ ಕ್ರೇಜ್ ಇಂದಿಗೂ ಕೂಡ ಇದೆ. ಚಿತ್ರನಟ ರಕ್ಷಿತ್ ಶೆಟ್ಟಿ ನಟನೆಯ ಅವನೇ ಶ್ರೀಮನ್ನಾರಾಯಣ ಚಿತ್ರದ ಹಾಡಾದ ಹ್ಯಾಂಡ್ಸ್ ಆಪ್ ಹಾಡಿನ ನೃತ್ಯದ ಭಂಗಿಗಳು ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದೆ. ಈ ಹಾಡಿನ ನೃತ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವಿದೇಶಿಗರೂ ಸಹ ಸ್ಟೆಪ್ ಹಾಕಿರೋದು ವೈರಲ್ ಆಗಿದೆ. ಅಷ್ಟೇ ಅಲ್ಲ ಟಿಕ್‌ಟಾಕ್, ಹಲೋ ಆಪ್‌ಗಳಲ್ಲೂ ಇಂದಿಗೂ ಈ ಹಾಡಿನ ಕ್ರೇಜ್ ಸಾಕಷ್ಟು ಟ್ರೆಂಡಿಗ್ ಸೃಷ್ಟಿಸಿದೆ.

ಈ ಎಲ್ಲಾ ವಿಡೀಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಾಕಷ್ಟು ಟ್ರೆಂಡ್ ಸೃಷ್ಟಿಸಿವೆ. ಕೆಲವರನ್ನ ಹೀರೋ ಮ,ಆಡಿದ್ರೆ ಇನ್ನು ಕೆಲವರನ್ನ ಜಿರೋ ಮಾಡಿದೆ. ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾದಿಂದ ದಿನಬೆಳಗಾಗೊದರೊಳಗೆ ಏನು ಬೇಕಾದರೂ ಆಗಬಹುದು ಅನ್ನೊದಕ್ಕೆ ಈ ವಿಡಿಯೋಗಳ ಹಿನ್ನೆಲೆಯೆ ಸಾಕ್ಷಿ ಎನ್ನಬಹುದಾಗಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190