ವಿಶ್ವದಲ್ಲಿಯೇ ಅತ್ಯಂತ ಸುರಕ್ಷಿತ ಸ್ಮಾರ್ಟ್‌ಫೋನ್‌ಗಳ ಬಗ್ಗೆ ನಿಮಗೆಷ್ಟು ತಿಳಿದಿದೆ.! ವಿವರಗಳು ಇಲ್ಲಿದೆ!
ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ತಮ್ಮ ಫೋನ್‌ಗಳಲ್ಲಿ ರಕ್ಷಣೆಯನ್ನು ಹೆಚ್ಚಿಸಲು ಹೆಚ್ಚುವರಿ ಭದ್ರತಾ ಲೇಯರ್‌ಗಳನ್ನು ಸತತವಾಗಿ ಸಂಯೋಜಿಸುತ್ತಾ ಬಂದಿವೆ. ಇವುಗಳಲ್ಲಿ ಆಪಲ್ ಸ್ಯಾಮ್‌ಸಂಗ್ ಮತ್ತು ಗೂಗಲ್ ಕಂಪೆನಿಗಳು ಮುಂಚೂಣಿಯಲ್ಲಿವೆ. ಆದರೆ ಈ ಬ್ರ್ಯಾಂಡ್‌ಗಳಿಗೂ ಮೀರಿ ಹೆಚ್ಚಿನ ಸುರಕ್ಷತೆ ನೀಡುವ ಸ್ಮಾರ್ಟ್ಫೋನ್ಗಳು ಕೂಡ ಟೆಕ್ ವಲಯದಲ್ಲಿವೆ.
ಹೌದು, ಸಂಪೂರ್ಣ ಭದ್ರತೆಯನ್ನು ನೀಡುವ ಸ್ಮಾರ್ಟ್ಫೋನ್ಗಳು ಕೂಡ ಟೆಕ್ ಲೋಕದಲ್ಲಿವೆ. ಈ ಸ್ಮಾರ್ಟ್‌ಫೋನ್‌ಗಳು ವಿಶಿಷ್ಟವಾದ ತಾಂತ್ರಿಕ ವಿಶೇಷತೆಗಳನ್ನು ಒಳಗೊಂಡಿವೆ. ಇವುಗಳು ಉತ್ಕೃಷ್ಟ ಮಟ್ಟದ ಟೆಕ್ನಾಲಜಿಯನ್ನು ಹೊಂದಿರುವುದರಿಂದ ಹ್ಯಾಕ್ ಮಾಡುವುದು ಸಾಧ್ಯವೇ ಇಲ್ಲ. ಹಾಗಾದ್ರೆ ವಿಶ್ವದಲ್ಲಿಯೇ ಅತ್ಯಂತ ಸುರಕ್ಷಿತವಾದ ಸ್ಮಾರ್ಟ್‌ಫೋನ್‌ಗಳೆಂದು ಖ್ಯಾತಿ ಪಡೆದಿರುವ ಫೋನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ಯೂರಿಸಂ ಲಿಬ್ರೆಮ್ 5
ಪ್ಯೂರಿಸಂನ ಲಿಬ್ರೆಮ್ 5 ಈ ಸ್ಮಾರ್ಟ್‌ಫೋನ್ ಭದ್ರತೆ ಮತ್ತು ಗೌಪ್ಯತೆ ವಿಚಾರದಲ್ಲಿ ವಿಶ್ವದಲ್ಲಿಯೇ ಅತ್ಯಂತ ಸುರಕ್ಷಿತ ಸ್ಮಾರ್ಟ್‌ಫೋನ್ ಆಗಿದೆ. ಇದು ಬಳಕೆದಾರರಿಗೆ ಎಲ್ಲಾ ರೀತಿಯ ಭದ್ರತಾ ನಿಯಂತ್ರಣಗಳನ್ನು ನೀಡಲಿದೆ. ಲಿನಕ್ಸ್ ಆಧಾರಿತ ಆಪರೇಟಿಂಗ್ ಸಿಸ್ಟಮ್ PureOS ನಲ್ಲಿ ರನ್ ಆಗುವ ಈ ಸ್ಮಾರ್ಟ್‌ಫೋನ್ ಯಾವುದೇ ರೀತಿಯ ಹ್ಯಾಕಿಂಗ್‌ಗೆ ಒಳಗಾಗುವುದಿಲ್ಲ. ಇದನ್ನು ಯಾರೂ ಕೂಡ ಟ್ರ್ಯಾಕ್ ಮಾಡಲು ಸಾಧ್ಯವಿಲ್ಲ. ಈ ಫೋನ್ ಬ್ಲೂಟೂತ್, ವೈ-ಫೈ ಮತ್ತು ಸೆಲ್ಯುಲಾರ್ ಸಿಗ್ನಲ್‌ನಂತಹ ವಾಯರ್‌ಲೆಸ್ ನೆಟ್‌ವರ್ಕ್‌ಗಳನ್ನು ಡಿಸೆಬಲ್ ಮಾಡುವ ಫಿಸಿಕಲ್ ಕಿಲ್ ಸ್ವಿಚ್‌ಗಳನ್ನು ಒಳಗೊಂಡಿದೆ. ಇದರ ಬೆಲೆ $999 (ಅಂದಾಜು 83,294ರೂ)ಆಗಿದೆ.
ಸಿರಿನ್ ಲ್ಯಾಬ್ಸ್ ಫಿನ್ನಿ U1
ಸಿರಿನ್ ಲ್ಯಾಬ್ಸ್ ಫಿನ್ನಿ U1 ಸ್ಮಾರ್ಟ್‌ಫೋನ್ ಕೂಡ ವಿಶ್ವದಲ್ಲಿಯೇ ಅತ್ಯುತ್ತಮ ಸುರಕ್ಷತೆಯನ್ನು ಹೊಂದಿರುವ ಫೋನ್‌ಗಳಲ್ಲಿ ಒಂದಾಗಿದೆ. ಇದು ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬೆಂಬಲಿಸಲಿದ್ದು, ವಿಶ್ವದ ಮೊದಲ ಸೈಬರ್-ರಕ್ಷಿತ ಬ್ಲಾಕ್‌ಚೈನ್-ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್ ಆಗಿದೆ. ಇನ್ನು ಸ್ಮಾರ್ಟ್‌ಫೋನ್ ರಿಯಲ್-ಟೈಂ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್‌ನೊಂದಿಗೆ ಕರೆಗಳು, ಸಂದೇಶಗಳು ಮತ್ತು ಇಮೇಲ್‌ಗಳನ್ನು ಬೆಂಬಲಿಸುತ್ತದೆ. ಇನ್ನು ಡಿವೈಸ್ ಫಿನ್ನಿ ಅಪ್ಲಿಕೇಶನ್ ಲಾಕ್‌ನೊಂದಿಗೆ ಬರುತ್ತದೆ. ಇದನ್ನು 2 ಇಂಚಿನ ಮಲ್ಟಿ-ಟಚ್ ಸುರಕ್ಷಿತ ಪರದೆಯ ಮೂಲಕ ಮಾತ್ರ ಪ್ರವೇಶಿಸಬಹುದು. ಇದರ ಬೆಲೆ $899 (ಅಂದಾಜು 74,957ರೂ)ಹೊಂದಿದೆ.

ಬಿಟ್ಟಿಯಮ್ ಟಫ್ ಮೊಬೈಲ್ 2
ಬಿಟ್ಟಿಯಮ್ ಟಫ್ ಮೊಬೈಲ್ 2 ಸ್ಮಾರ್ಟ್‌ಫೋನ್ ಅತ್ಯಂತ ಸುರಕ್ಷಿತ ಫೋನ್ ಎನಿಸಿಕೊಂಡಿದೆ. ಇದು "ಅಲ್ಟ್ರಾ-ಸುರಕ್ಷಿತ ಮೊಬೈಲ್ ಸಂವಹನಗಳಿಗಾಗಿ ಹೊಸ ಮಾನದಂಡ" ಎಂಬ ಟ್ಯಾಗ್‌ಲೈನ್‌ನೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್ ಅನ್ನು ಹೆಚ್ಚಿನ ಭದ್ರತಾ ಅವಶ್ಯಕತೆಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಸಹ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಹೊಂದಿದೆ. ಇದು ಹಾರ್ಡ್‌ವೇರ್ ಮ್ಯಾನಿಪ್ಯುಲೇಷನ್ ಮತ್ತು ಡೇಟಾ ಕಳ್ಳತನವನ್ನು ತಡೆಯುವ ಟ್ಯಾಂಪರ್-ಪ್ರೂಫ್ ತಂತ್ರಜ್ಞಾನವನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್‌ಫೋನ್ ಬಿಟ್ಟಿಯಮ್ ಸೆಕ್ಯೂರ್ ಕಾಲ್ ಟೆಕ್ನಾಲಜಿಯನ್ನು ಹೊಂದಿದ್ದು, ಆಡಿಯೋ ಮತ್ತು ವಿಡಿಯೋ ಕರೆಗಳನ್ನು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನೊಂದಿಗೆ ಸಕ್ರಿಯಗೊಳಿಸುತ್ತದೆ. ಇದರ ಬೆಲೆ $1729 (ಅಂದಾಜು 1,44,162ರೂ) ಹೊಂದಿದೆ.

ಕಟಿಮ್ R01
ಕಟಿಮ್ R01 ಸ್ಮಾರ್ಟ್‌ಫೋನ್ ರಗಡ್ ಲುಕ್ ಹೊಂದಿದ್ದು, ಅಲ್ಟ್ರಾ-ಸುರಕ್ಷಿತ ಫೋನ್ ಇದಾಗಿದೆ. ಇನ್ನು ಸ್ಮಾರ್ಟ್‌ಫೋನ್ ಸೆಕ್ಯುರ್ ಆಪರೇಟಿಂಗ್ ಸಿಸ್ಟಮ್‌ನಿಂದ ಚಾಲಿತವಾಗಿದೆ. ಜೊತೆಗೆ ಇದು MIL-STD 810G ಮಿಲಿಟರಿ ಪ್ರಮಾಣೀಕರಣದೊಂದಿಗೆ ಟ್ಯಾಂಪರ್-ಪ್ರೂಫ್ ಸ್ಮಾರ್ಟ್‌ಫೋನ್ ಇದಾಗಿದೆ. ಈ ಸ್ಮಾರ್ಟ್‌ಫೋನ್ ಪಾಸ್ಕೋಡ್ ಮತ್ತು ಫಿಂಗರ್‌ಪ್ರಿಂಟ್ ಅನ್ನು ಒಳಗೊಂಡಿರುವ ಎರಡು-ಅಂಶ ದೃಢೀಕರಣಕ್ಕೆ ಬೆಂಬಲದೊಂದಿಗೆ ಬರಲಿದೆ. ಇನ್ನು ಸ್ಮಾರ್ಟ್‌ಫೋನ್‌ನಲ್ಲಿರುವ ಯುಎಸ್‌ಬಿ ಇಂಟರ್‌ಫೇಸ್ ಸಹ ಮಾಲ್‌ವೇರ್ ಮತ್ತು ಡೇಟಾ ಕಳ್ಳತನದ ವಿರುದ್ಧ ಸುರಕ್ಷಿತವಾಗಿದೆ. ಜೊತೆಗೆ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಆಧಾರಿತ Katim OS ನಿಂದ ಚಾಲಿತವಾಗಿದೆ. ಇದರ ಬೆಲೆ $1,100 (ಅಂದಾಜು 91,717ರೂ) ಹೊಂದಿದೆ.


Click it and Unblock the Notifications








