ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಟೆಕ್ ದಿಗ್ಗಜರು

By Shwetha
|

ಟೆಕ್ ಕ್ಷೇತ್ರದಲ್ಲಿ ಹೆಚ್ಚು ಸಾಧನೆಯನ್ನು ಮಾಡಲು ಬುದ್ಧಿವಂತಿಕೆಯ ಜೊತೆಗೆ ಸಾಮರ್ಥ್ಯ ಕೂಡ ಅತ್ಯಗತ್ಯವಾದುದು. ಟೆಕ್ ಉದ್ಯಮ ಇಂದಿನ ಕಾಲದಲ್ಲಿ ಹೆಚ್ಚು ಕ್ಷಿಪ್ರವಾಗಿ ಬೆಳೆಯುತ್ತಿದ್ದು ಇದಕ್ಕೆ ಕೊಡುಗೆ ನೀಡಿದವರು ಅಸಂಖ್ಯರು. ಇಂದಿನ ಲೇಖನದಲ್ಲಿ ಭಾರತದ ಟೆಕ್ ದೈತ್ಯರ ಕುರಿತ ಸಮಗ್ರ ಮಾಹಿತಿಯನ್ನು ನೀಡುತ್ತಿದ್ದೇವೆ. [ಓದಿರಿ: ಆಧುನಿಕ ಭವಿಷ್ಯದ ನೋಟ ಈ ಟಾಪ್ ಮ್ಯೂಸಿಯಮ್‌ಗಳಲ್ಲಿ]

ಕೆಳಗಿನ ಸ್ಲೈಡರ್‌ಗಳಲ್ಲಿ ಈ ಟೆಕ್ ವ್ಯಕ್ತಿಗಳ ಪರಿಚಯವನ್ನು ನಾವು ನಿಮಗೆ ಮಾಡಿಸುತ್ತಿದ್ದು ಅವರ ಬಗ್ಗೆ ಅರಿತುಕೊಳ್ಳಿ.

ಸಚಿನ್ ಬನ್ಸಾಲ್

ಸಚಿನ್ ಬನ್ಸಾಲ್

ಭಾರತದ ಅತಿ ದೊಡ್ಡ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಸಹಸ್ಥಾಪಕರಾಗಿದ್ದಾರೆ. ಇವರು ಚಂಡೀಗಡದವರಾಗಿದ್ದಾರೆ.

ನಾರಾಯಣ್ ಮೂರ್ತಿ

ನಾರಾಯಣ್ ಮೂರ್ತಿ

ಭಾರತೀಯ ಐಟಿ ಉದ್ಯಮಿ ಅಂತೆಯೇ ಇನ್ಫೋಸಿಸ್ ಸಹಸ್ಥಾಪಕರಾಗಿದ್ದಾರೆ. ವ್ಯಾಪಾರ ಸಲಹೆ, ತಂತ್ರಜ್ಞಾನ ಕುರಿತಾದ ಮಾಹಿತಿ,ಮೊದಲಾದ ಸೇವೆಗಳನ್ನು ಸಂಸ್ಥೆ ನಿರ್ವಹಿಸುತ್ತಿದೆ. ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಅಂತೆಯೇ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್‌ಪುರ್‌ನಲ್ಲಿ ಎಮ್‌ಟೆಕ್ ಅಧ್ಯಯನವನ್ನು ಕೈಗೊಂಡಿದ್ದಾರೆ.

ಅಜಿಮ್ ಪ್ರೇಮ್‍ಜಿ

ಅಜಿಮ್ ಪ್ರೇಮ್‍ಜಿ

ಭಾರತದ ವಾಣಿಜ್ಯೋದ್ಯಮಿಯಾಗಿರುವ ಅಜಿಮ್ ಪ್ರೇಮ್‌ಜಿ ಪ್ರತಿಷ್ಟಿತ ಸಂಸ್ಥೆ ವಿಪ್ರೊದ ಅಧ್ಯಕ್ಷರಾಗಿದ್ದಾರೆ.

ಸತ್ಯ ನಡೇಲ್ಲಾ

ಸತ್ಯ ನಡೇಲ್ಲಾ

ಭಾರತೀಯ ಮೂಲದ ಅಮೇರಿಕನ್ ನಿವಾಸಿ ಸತ್ಯ ನಡೇಲ್ಲಾ ತೆಲುಗು ಮೂಲದವರಾಗಿದ್ದಾರೆ.

ಅಮಿತ್ ಬೋನಿ

ಅಮಿತ್ ಬೋನಿ

ಮೋಟೋರೋಲಾ ಕಂಪೆನಿಯ ಜನರಲ್ ಮ್ಯಾನೇಜರ್ ಆಗಿರುವ ಅಮಿತ್ ಬೋನಿ ದೇಶದಲ್ಲಿ ಸಂಸ್ಥೆಯ ಉತ್ಪನ್ನವನ್ನು ಇನ್ನಷ್ಟು ಮೇಲಕ್ಕೇರಿಸುವ ಇರಾದೆಯನ್ನು ಹೊಂದಿದ್ದಾರೆ.

ಅಸೀಮ್ ವಾರ್ಸಿ

ಅಸೀಮ್ ವಾರ್ಸಿ

ಸ್ಯಾಮ್‌ಸಂಗ್ ಸಂಸ್ಥೆಯ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷರಾಗಿದ್ದಾರೆ ಅಸೀಮ್ ವಾರ್ಸಿ.

ಹೂಗೊ ಬಾರ್ರಾ ಮತ್ತು ಮನು ಕುಮಾರ್ ಜೈನ್

ಹೂಗೊ ಬಾರ್ರಾ ಮತ್ತು ಮನು ಕುಮಾರ್ ಜೈನ್

ಶ್ಯೋಮಿ ಸಂಸ್ಥೆಯ ಜಾಗತಿಕ ಉಪಾಧ್ಯಕ್ಷರಾಗಿರುವ ಹೂಗೋ ಬಾರ್ರಾ ಅಂತೆಯೇ ಭಾರತದಲ್ಲಿ ಶ್ಯೋಮಿ ಇಂಡಿಯಾದ ಮುಖ್ಯಸ್ಥರಾಗಿದ್ದಾರೆ ಮನು ಜೈನ್.

Best Mobiles in India

English summary
In this article we can see the top 10 tech personalities who are working behind these companies to gain good reputation..Most famous companies are handled by tech giants.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X