2020 ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಸೇಲ್‌ ಆದ ಸ್ಮಾರ್ಟ್‌ಫೋನ್‌ಗಳು?

|

ಪ್ರಸಕ್ತ ವರ್ಷ 2020 ಕೊರೊನಾ ವೈರಸ್‌ ಕಾರಣಕ್ಕೆ ಹೆಚ್ಚು ಸದ್ದು ಮಾಡಿದೆ. ಇನ್ನು ಕೆಲವೇ ದಿನಗಳಲ್ಲಿ 2020 ಕೊನೆಯಾಗುತ್ತಿದ್ದು, ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಈ ಸನ್ನಿವೇಶದಲ್ಲಿ ಈ ವರ್ಷ ಭಾರತದಲ್ಲಿ ಅತಿ ಹೆಚ್ಚು ಸೇಲ್‌ ಸ್ಮಾರ್ಟ್‌ಫೋನ್‌ ಗಳು ಯಾವುವು ಅನ್ನೊ ಕುತೂಹಲ ಇದ್ದೇ ಇರುತ್ತೇ. ಹಾಗಾದ್ರೆ ಕೊರೊನಾ ಸಂಕಷ್ಟದ ನಡುವೆಯೂ ಸ್ಮಾರ್ಟ್‌ಫೋನ್‌ ವಲಯ ಗಳಿಸಿದ್ದೆಷ್ಟು ಅನ್ನೊದನ್ನ ತಿಳಿದುಕೊಳ್ಳೋಣ ಬನ್ನಿರಿ.

ಸ್ಮಾರ್ಟ್‌ಫೋನ್

ಹೌದು, 2020 ವರ್ಷದಲ್ಲಿ ಪ್ರಮುಖ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ಸಹ ತಮ್ಮ ವಾರ್ಷಿಕ ಗುರಿಗಳನ್ನು ಪೂರೈಸುವಲ್ಲಿ ಹಲವು ಅಡೆತಡೆಗಳನ್ನು ಸಹ ಎದುರಿಸಿವೆ. ಇನ್ನು ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಒಂದೇ ತ್ರೈಮಾಸಿಕದಲ್ಲಿ ಅತಿ ಹೆಚ್ಚು ಸೇಲ್‌ ಆಗಿದೆ. 2020 ರಲ್ಲಿ ಮಾರುಕಟ್ಟೆಯು 9% ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದ್ದು, ಕಳೆದ ಕೆಲವು ತಿಂಗಳುಗಳಲ್ಲಿ 53 ದಶಲಕ್ಷಕ್ಕೂ ಹೆಚ್ಚಿನ ಸ್ಮಾರ್ಟ್‌ಫೋನ್ ಘಟಕಗಳನ್ನು ರವಾನಿಸಲಾಗಿದೆ. ಹಾಗಾದ್ರೆ 2020 ರಲ್ಲಿ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಹೆಚ್ಚು ಸೇಲ್‌ ಆದ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳ ಬಗ್ಗೆ ತಿಳಿಸಿಕೊಡ್ತಿವಿ ಓದಿರಿ.

ಸ್ಯಾಮ್‌ಸಂಗ್ 32% YOY

ಸ್ಯಾಮ್‌ಸಂಗ್ 32% YOY

ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಎರಡು ವರ್ಷಗಳ ನಂತರ ಸ್ಯಾಮ್‌ಸಂಗ್ ಶಿಯೋಮಿಯನ್ನು ಹಿಂದಿಕ್ಕಿದೆ. ದಕ್ಷಿಣ ಕೊರಿಯ ಮೂಲದ ಟೆಕ್‌ ದೈತ್ಯ ಸ್ಯಾಮ್‌ಸಂಗ್‌ 32% YOY ಬೆಳವಣಿಗೆಯೊಂದಿಗೆ ಭಾರತದ ಪ್ರಮುಖ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿ ಗುರುತಿಸಿಕೊಂಡಿದೆ. ಗ್ಯಾಲಕ್ಸಿ ಎಂ, ಗ್ಯಾಲಕ್ಸಿ ಎ, ಮತ್ತು ಹೊಸದಾಗಿ ಪರಿಚಯಿಸಲಾದ ಗ್ಯಾಲಕ್ಸಿ ಎಫ್-ಸೀರೀಸ್ ಫೀಚರ್ಸ್‌-ಪ್ಯಾಕ್ಡ್ ಬಜೆಟ್ ಮತ್ತು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಕಳೆದ ಕೆಲವು ತಿಂಗಳುಗಳಲ್ಲಿ ಭಾರಿ ಸಂಖ್ಯೆಯಲ್ಲಿ ಮಾರಾಟ ಮಾಡಿದೆ.

ಶಿಯೋಮಿ 4% YOY ಕುಸಿತ

ಶಿಯೋಮಿ 4% YOY ಕುಸಿತ

ಇನ್ನು ಶಿಯೋಮಿ 2020 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಕುಸಿತವನ್ನು ಕಂಡಿದೆ. ಬಜೆಟ್, ಮಧ್ಯ ಶ್ರೇಣಿಯ ಮತ್ತು ಪ್ರಮುಖ ಹ್ಯಾಂಡ್‌ಸೆಟ್‌ಗಳೊಂದಿಗೆ ಸೌಂಡ್‌ ಮಾಡಿದರೂ ಕೂಡ 2018 ರ ನಂತರ ಮೊದಲ ಬಾರಿಗೆ ಎರಡನೇ ಸ್ಥಾನಕ್ಕೆ ಕುಸಿದಿದೆ. ಕೊರೊನಾ ವೈರಸ್‌ನ ಹಾವಳಿಯಿಂದಾಗಿ ಚೀನಾ ಮೂಲದ ಶಿಯೋಮಿ ಸ್ಮಾರ್ಟ್‌ಫೋನ್‌ ಸೇಲ್‌ ಭಾರತದಲ್ಲಿ ಕುಸಿತಕಂಡಿದೆ ಎಂದು ಹೇಳಲಾಗಿದೆ.

ವಿವೋ- 4% YOY

ವಿವೋ- 4% YOY

ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಶಿಯೋಮಿ 4% YOY ಕುಸಿತವನ್ನು ದಾಖಲಿಸಿದರೆ, ವಿವೊ 4% YOY ಬೆಳವಣಿಗೆಯೊಂದಿಗೆ (ಕ್ಯೂ 3 2020) ಮೂರನೇ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕ್ರೆಡಿಟ್ ಬ್ರ್ಯಾಂಡ್‌ಗಳ ವೈ-ಸೀರೀಸ್ ಪೋರ್ಟ್‌ಪೋಲಿಯೋ ಮೂಲಕ ಜನಪ್ರಿಯತೆ ಪಡೆದುಕೊಂಡಿದೆ. ದೊಡ್ಡ ಗಾತ್ರದ ಡಿಸ್‌ಪ್ಲೇ ಮತ್ತು ಬಿಗ್‌ ಬ್ಯಾಟರಿ ಪ್ಯಾಕಪ್‌ನ ಸ್ಮಾರ್ಟ್‌ಫೋನ್‌ಗಳು ವಿವೋ ಸೇಲ್‌ ಅನ್ನು ಹೆಚ್ಚಿಸುವಲ್ಲಿ ಗಮನಾರ್ಹ ಪಾತ್ರವನ್ನು ವಹಿಸಿವೆ.

ರಿಯಲ್‌ಮಿ -4% YOY

ರಿಯಲ್‌ಮಿ -4% YOY

ರಿಯಲ್‌ಮಿ ಸ್ಮಾರ್ಟ್‌ಫೋನ್‌ ಕಂಪೆನಿ 2020 ರ ಕೊನೆಯಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ತೋರಿಸಿದೆ. 2020 ರ ಮೂರನೇ ತ್ರೈಮಾಸಿಕದಲ್ಲಿ ಬ್ರ್ಯಾಂಡ್ 4% YOY ಬೆಳೆದಿದೆ. ಇದರ ಆಕ್ರಮಣಕಾರಿ ಮಾರ್ಕೆಟಿಂಗ್ ಮತ್ತು ಸ್ಮಾರ್ಟ್‌ಫೋನ್‌ ಮತ್ತು ವೆರಿಯೆಬಲ್‌ ಪ್ರಾಡಕ್ಟ್‌ಗಳ ಮೂಲಕವೂ ರಿಯಲ್‌ಮಿ ಈ ವರ್ಷ ಹೆಚ್ಚು ಸೌಂಡ್‌ ಮಾಡಿದೆ.

OPPO-30% YOY

OPPO-30% YOY

ಇನ್ನು ಒಪ್ಪೋ ಕಂಪೆನಿ 2020 ರ ಅಂತ್ಯದ ವೇಳೆಗೆ ಐದನೇ ಸ್ಥಾನಕ್ಕೆ ಕುಸಿದಿದೆ. ಒಪ್ಪೊ ತನ್ನ ಮಾರುಕಟ್ಟೆ ಪಾಲನ್ನು ಶಿಯೋಮಿ, ವಿವೊ ಮತ್ತು ಅದರ ಉಪ-ಬ್ರಾಂಡ್ ರಿಯಲ್ಮ್‌ ನಡುವೆ ಕಳೆದುಕೊಂಡಿದೆ. ಸದ್ಯ ಸೆಲ್ಫಿ ಕ್ಯಾಮೆರಾಗಳು ಮತ್ತು ವಿನ್ಯಾಸದ ಮೇಲೆ ಕೇಂದ್ರೀಕರಿಸುವ ಬಲವಾದ ಆಫ್‌ಲೈನ್ ಉಪಸ್ಥಿತಿ ಮತ್ತು ಬಜೆಟ್ ಕೊಡುಗೆಗಳಿಂದಾಗಿ ಒಪ್ಪೊ ಬ್ರಾಂಡ್ ಭಾರತದಲ್ಲಿ ಹೆಚ್ಚಾಗಿ ಉಳಿದುಕೊಂಡಿದೆ. ಆದರೂ ಐಡಿಸಿ ಪ್ರಕಾರ, ಒಪ್ಪೊ ಸ್ಮಾರ್ಟ್‌ಫೋನ್‌ ಮಾರಾಟ 2020 ರ ಮೂರನೇ ತ್ರೈಮಾಸಿಕದಲ್ಲಿ 30% YOY ಹೆಚ್ಚಾಗಿದೆ.

Best Mobiles in India

English summary
smartphone brands that ruled the Indian smartphone market in 2020.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X