Home
ಸುದ್ದಿಜಾಲ

Flipkart Smartphone Carnival‌: ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ರಿಯಾಯಿತಿ!

ಜನಪ್ರಿಯ ಇ-ಕಾಮರ್ಸ್‌ ಸೈಟ್‌ ಫ್ಲಿಪ್‌ಕಾರ್ಟ್‌ ಹಬ್ಬ ಹರಿದಿನಗಳಲ್ಲಿ ವಿಶೇಷ ರಿಯಾಯಿತಿ ಸೇಲ್‌ಗಳನ್ನು ಆಯೋಜಿಸುತ್ತಲೇ ಬಂದಿದೆ. ಸದ್ಯ ಇದೀಗ ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಫೋನ್‌ ಕಾರ್ನೀವಲ್ ಸೇಲ್‌ ಅನ್ನು ಆಯೋಜಿಸಿದೆ. ಈ ಸೇಲ್‌ನಲ್ಲಿ ಹಲವಾರು ಸ್ಮಾರ್ಟ್‌ಫೋನ್‌ಗಳು ವಿಶೇಷ ರಿಯಾಯಿತಿ ಪಡೆದುಕೊಂಡಿದ್ದು, ಆಕರ್ಷಕ ಡೀಲ್‌ಗಳನ್ನು ಹೊಂದಿದೆ.

ಫ್ಲಿಪ್‌ಕಾರ್ಟ್

ಹೌದು, ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಫೋನ್‌ ಕಾರ್ನೀವಲ್ ಸೇಲ್‌ ನಡೆಸುತ್ತಿದೆ. ಈ ಸೇಲ್‌ನಲ್ಲಿ ಐಫೋನ್ SE, ಐಫೋನ್ XR, ರಿಯಲ್‌ಮಿ C12, ಪೊಕೊ C3, ಮತ್ತು ರಿಯಲ್‌ಮಿ ನಾರ್ಜೊ 30A ನಂತಹ ಫೋನ್‌ಗಳ ಮೇಲೆ ಬೆಲೆ ಕಡಿತವನ್ನು ಘೋಷಿಸಿದೆ. ಇನ್ನು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್‌ನೊಂದಿಗೆ ಸಹಭಾಗಿತ್ವದಲ್ಲಿ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ನಲ್ಲಿ 1,250 ತ್ವರಿತ ರಿಯಾಯಿತಿಯನ್ನು ದೊರೆಯಲಿದೆ. ಇದಲ್ಲದೆ, ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಫೋನ್ ಕಾರ್ನೀವಲ್‌ನಲ್ಲಿ ನೋ ಕಾಸ್ಟ್‌ ಇಎಂಐ ಆಯ್ಕೆಗಳು ದೊರೆಯಲಿದೆ. ಇನ್ನುಳಿದಂತೆ ಈ ಸೇಲ್‌ನಲ್ಲಿ ಏನೆಲ್ಲಾ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ಫೋನ್

ಫ್ಲಿಪ್‌ಕಾರ್ಟ್ ಸ್ಮಾರ್ಟ್‌ಫೋನ್ ಕಾರ್ನೀವಲ್ ಈಗಾಗಲೇ ಪ್ರಾರಂಭವಾಗಿದೆ. ಇದು ಮಾರ್ಚ್ 12 ರವರೆಗೆ ಮುಂದುವರಿಯುತ್ತದೆ. ಈ ವಾರದಲ್ಲಿ, ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ ಐಫೋನ್ SE (2020) ಬೇಸ್ ಮಾಡೆಲ್‌ 64GB ಮಾದರಿಗೆ 29,999 ರೂ.ಗೆ ಖರೀದಿಸಬಹುದಾಗಿದೆ. 128GB ಆಯ್ಕೆಯ ಬೆಲೆ 34,999 ರೂ. ಆಗಿದೆ. ಐಫೋನ್ XR 45,984 ಬೆಲೆಯನ್ನು ಹೊಂದಿದ್ದು, 64 GB ಶೇಖರಣಾ ಆಯ್ಕೆಗೆ 38,999 ರೂ., 128GB ಮಾದರಿಯನ್ನು ರೂ. 43,999.ಬೆಲೆಗೆ ಲಭ್ಯವಾಗಲಿದೆ.

ಸ್ಯಾಮ್‌ಸಂಗ್

ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ S20FE ಸ್ಮಾರ್ಟ್‌ಫೋನ್‌ 5,000 ರೂ ಬೆಲೆ ಕಡಿತವನ್ನು ಪಡೆದುಕೊಂಡಿದೆ. ಇದರ ಬೆಲೆ ರೂ. 44,999 ಆಗಿದೆ. ಇದಲ್ಲದೆ, ಫ್ಲಿಪ್‌ಕಾರ್ಟ್ ಸಹ ಹೆಚ್ಚುವರಿ ಹಳೆಯ ಫೋನ್ ವಿನಿಮಯದಲ್ಲಿ 7,000 ರೂ. ಬೆಲೆಯನ್ನು ಹೊಂದಿದೆ. ಇದಲ್ಲದೆ ರೆಡ್ಮಿ ನೋಟ್ 9 ಪ್ರೊ ಮ್ಯಾಕ್ಸ್ ಸಹ ರೂ. 2,000, ಮತ್ತು ರೂ. ಫ್ಲಿಪ್‌ಕಾರ್ಟ್‌ನಲ್ಲಿ 14,999 ರೂ.ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಮೋಟೋ G5G 21,200 ರೂ ಬೆಲೆಯನ್ನು ಹೊಂದಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಹೆಚ್ಚುವರಿ ರೂ. ಹಳೆಯ ಫೋನ್ ವಿನಿಮಯಕ್ಕೆ 2,000 ರೂ. ಬೆಲೆಯಲ್ಲಿ ಲಭ್ಯವಾಗಲಿದೆ.

ಗ್ಯಾಲಕ್ಸಿ F41 ಸ್ಮಾರ್ಟ್‌ಫೋನ್

ಸದ್ಯ ಸ್ಯಾಮ್‌ಸಂಗ್‌ ಗ್ಯಾಲಕ್ಸಿ F41 ಸ್ಮಾರ್ಟ್‌ಫೋನ್‌ ಫ್ಲಿಪ್ಕಾರ್ಟ್ ಸ್ಮಾರ್ಟ್‌ಫೋನ್ ಕಾರ್ನೀವಲ್ ಸಮಯದಲ್ಲಿ 1,500 ರೂ.ಬೆಲೆ ಕಡಿತವನ್ನು ಹೊಂದಿದೆ. ಇದರ 64GB ಮಾದರಿಯ ಬೆಲೆ ರೂ. 15,999 ಮತ್ತು 128GB ಮಾದರಿಯು 16,499 ರೂ ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಬಜೆಟ್ ಸ್ನೇಹಿ ರಿಯಲ್‌ಮಿ C12 ಸ್ಮಾರ್ಟ್‌ಫೋನ್‌ 8,730 ರೂ ಬೆಲೆಯನ್ನು ಹೊಂದಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ರೂ. 500 ರಿಯಾಯಿತಿ ಸಿಗಲಿದೆ.

Best Mobiles in India

English summary
Flipkart Smartphone Carnival sale is now taking place on the e-commerce platform, and a host of smartphones are listed with deals and discounts.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+