Home
ಸುದ್ದಿಜಾಲ

Smartphones: 35,000ರೂ ಒಳಗಿನ ಬೆಲೆಯಲ್ಲಿ ದೊರೆಯುವ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು!

ಸ್ಮಾರ್ಟ್‌ಫೋನ್‌ ವಲಯದಲ್ಲಿ 35,000ರೂ ಒಳಗಿನ ಫೋನ್‌ಗಳು ಸಾಕಷ್ಟು ಸದ್ದು ಮಾಡುತ್ತಿವೆ. ಈ ಫೋನ್‌ಗಳು ಸಾಮಾನ್ಯವಾಗಿ ಉತ್ತಮ ಕ್ಯಾಮೆರಾ ಸೆಟ್‌ಅಪ್‌, ಬ್ಯಾಟರಿ ಸಾಮರ್ಥ್ಯದ ಜೊತೆಗೆ ಪವರ್‌ಫುಲ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಇವುಗಳು ಹಣಕ್ಕೆ ಉತ್ತಮ ಮೌಲ್ಯವನ್ನು ನೀಡುವುದರಿಂದ ಹೆಚ್ಚು ಬೇಡಿಕೆಯನ್ನು ಪಡೆದುಕೊಂಡಿವೆ.

ಹೌದು, ಭಾರತದಲ್ಲಿ 35,000ರೂ ಬೆಲೆಯ ಮೊಬೈಲ್‌ಗಳು ಕೂಡ ದೊರೆಯುತ್ತಿವೆ. ಪ್ರೀಮಿಯಂ ಪ್ಲ್ಯಾಗ್‌ಶಿಪ್‌ ಮೊಬೈಲ್‌ ಬಯಸುವವರಿಗೆ 35,000ರೂ ಸ್ಮಾರ್ಟ್‌ಫೋನ್‌ಗಳು ಕೂಡ ಉತ್ತಮ ಆಯ್ಕೆಯಾಗಿವೆ. ಅದರಂತೆ ಪ್ರತಿ ತಿಂಗಳು ಹಲವು ಬ್ರ್ಯಾಂಡ್‌ಗಳ ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡುತ್ತಲೇ ಬಂದಿವೆ, ಹಾಗಾದ್ರೆ ಡಿಸೆಂಬರ್‌ 2023 ರಲ್ಲಿ ನೀವು ಖರೀದಿಸಬಹುದಾದ 35,000ರೂ ಒಳಗಿನ ಅತ್ಯುತ್ತಮ ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Smartphones:35,000ರೂ ಒಳಗಿನ ಬೆಲೆಯಲ್ಲಿ ದೊರೆಯುವ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು

ಐಕ್ಯೂ ನಿಯೋ 7 ಪ್ರೊ 5G
35,000ರೂ ಬೆಲೆ ಒಳಗೆ ಲಭ್ಯವಾಗುವ ಅತ್ಯುತ್ತಮ ಫೋನ್‌ಗಳಲ್ಲಿ ಐಕ್ಯೂ ನಿಯೋ 7 ಪ್ರೊ 5G ಸ್ಮಾರ್ಟ್‌ಫೋನ್‌ ಕೂಡ ಒಂದಾಗಿದೆ. ಈ ಸ್ಮಾರ್ಟ್‌ಫೋನ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಪಡೆದಿದೆ. ಇದು ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 8+ ಜೆನ್‌ 1 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇನ್ನು ಈ ಫೋನ್‌ ತ್ರಿವಳಿ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಇದರೊಂದಿಗೆ 16 ಮೆಗಾ ಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಪಡೆದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಒನ್‌ಪ್ಲಸ್‌ ನಾರ್ಡ್‌ 3 5G
ಒನ್‌ಪ್ಲಸ್‌ ನಾರ್ಡ್‌ 3 5G ಸ್ಮಾರ್ಟ್‌ಫೋನ್‌ ಸಹ 35,000ರೂ ಬೆಲೆಯಲ್ಲಿ ಲಭ್ಯವಾಗುವ ಉತ್ತಮ ಆಯ್ಕೆ ಎನಿಸಿಕೊಂಡಿದೆ. ಇನ್ನು ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ AMOLED ಡಿಸ್‌ಪ್ಲೇಯನ್ನು ಪಡೆದಿದೆ. ಇದು ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 782G SoC ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಸಹ ಒಳಗೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯು 80W ವೇಗದ ಚಾರ್ಜಿಂಗ್ ಸಾಮರ್ಥ್ಯಗಳನ್ನು ಹೊಂದಿದೆ.

Smartphones:35,000ರೂ ಒಳಗಿನ ಬೆಲೆಯಲ್ಲಿ ದೊರೆಯುವ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು

ಮೊಟೊರೊಲಾ ಎಡ್ಜ್‌ 40 5G
ಮೊಟೊರೊಲಾ ಎಡ್ಜ್‌ 40 5G ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ 26,999 ರೂ.ಗೆ ಲಭ್ಯವಿದೆ. ಇನ್ನು ಸ್ಮಾರ್ಟ್‌ಫೋನ್‌ 6.5 ಇಂಚಿನ ಫುಲ್ ಹೆಚ್‌ಡಿ ಸಾಮರ್ಥ್ಯದ ಕರ್ವ್ಡ್ ಡಿಸ್‌ಪ್ಲೇ ಹೊಂದಿದೆ. ಈ ಮೊಬೈಲ್‌ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8020 5G SoC ಪ್ರೊಸೆಸರ್‌ನಿಂದ ಕೆಲಸ ನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಅನ್ನು ರನ್ ಮಾಡುತ್ತದೆ. ಇದರೊಂದಿಗೆ ಎರಡು ವರ್ಷಗಳ ಓಎಸ್ ನವೀಕರಣ ಮತ್ತು ಮೂರು ವರ್ಷಗಳ ಭದ್ರತಾ ನವೀಕರಣ ಸಹ ಲಭ್ಯ ಪಡೆದಿದೆ.

Smartphones:35,000ರೂ ಒಳಗಿನ ಬೆಲೆಯಲ್ಲಿ ದೊರೆಯುವ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು

ಪೊಕೊ F5 5G
ಪೊಕೊ F5 5G ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಸ್ನಾಪ್‌ಡ್ರಾಗನ್ 7+ Gen 2 SoC ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್‌ 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಒಳಗೊಂಡಿದೆ. ಜೊತೆಗೆ 5,000mAh ಬ್ಯಾಟರಿ, ವೇಗದ 67W ವೇಗವನ್ನು ಒಳಗೊಂಡಿದೆ.

Best Mobiles in India

English summary
Top Smartphones in India under Rs 35,000 in December 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+