ಹುಲ್ಲಿನಿಂದ ಮೊಬೈಲ್‌ ಚಾರ್ಜ್ ಮಾಡಿ

Posted By:

  ಹುಲ್ಲಿನಿಂದ ಮೊಬೈಲ್‌ ಚಾರ್ಜ್‌ ಮಾಡುವ ಚಾರ್ಜರ್‌ ನೋಡಿದ್ದೀರಾ? ಬ್ರೆಡ್‌ನ್ನು ಪ್ರಿಂಟ್‌ ಮಾಡುವ ಟೋಸ್ಟರ್‌ ನೋಡಿದ್ದಿರಾ ಇಲ್ಲ ತಾನೆ ? ವಿಶ್ವದಲ್ಲಿ ಏನೇನೋ ಹೊಸ ಹೊಸ ಯಂತ್ರಗಳು,ಸಲಕರಣೆಗಳು ಬರುತ್ತಲೇ ಇರುತ್ತವೆ. ಇವುಗಳಲ್ಲಿ ಸದ್ಯ ಭಾರೀ ಫೇಮಸ್ಸು ಆಗಿರುವಂತಹ ಸಲಕರಣೆಗಳ ಸುದ್ದಿಯನ್ನು ಗಿಜ್ಬಾಟ್‌ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  Eye See Cam

  ಕ್ಯಾಮೆರಾವನ್ನು ನೀವು ನೋಡಿರುತ್ತೀರಿ. ಆದ್ರೆ ಈ ಕ್ಯಾಮೆರಾ ಸ್ವಲ್ಪ ಭಿನ್ನ. ಇದನ್ನು ಧರಿಸಿದ್ರೆ ನೀವು ಏನು ನೋಡುತ್ತಿರೋ ಅದೆಲ್ಲವೂ ಇದರಲ್ಲಿ ಸೆರೆ ಆಗುತ್ತದೆ. ಡಾಕ್ಟರ್‌ಗಳಿಗಾಗಿಯೇ ವಿಶೇಷವಾಗಿ ತಯಾರು ಮಾಡಿದ ಕ್ಯಾಮೆರಾವಿದು.

  ಬಗ್‌ ರಾಕೆಟ್‌

  ನೋಡಲು ಟೆನ್ನಿಸ್‌ Racketನಂತಿರುವ ಈ Racketನ್ನು ಮನೆಯಲ್ಲಿ ಬೀಸಿದರೇ ಸೊಳ್ಳೆಗಳು ಅಲ್ಲೇ ಮಟಾಷ್‌ ಆಗುತ್ತವೆ. ಬ್ಯಾಟರಿ ಆಧಾರಿತ ಈ Racketನ್ನು ಚಾರ್ಜ್‌ ಮಾಡಬೇಕು. ಈಗಾಗ್ಲೇ ಇದು ಮಾರುಕಟ್ಟೆಯಲ್ಲಿ ಲಭ್ಯವಿದೆ.

  Pet’s Eye View Digital Camera

  ಪ್ರಾಣಿ ಪ್ರಿಯರಿಗಾಗಿ ಕಂಡುಹಿಡಿದ ಕ್ಯಾಮೆರಾವಿದು. ಮುದ್ದಿನ ಸಾಕು ಪ್ರಾಣಿಗಳ ಕೊರಳಿಗೆ ಈ ಕ್ಯಾಮೆರಾವನ್ನು ತೂಗು ಹಾಕಿದ್ರೆ ಪ್ರಾಣಿಗಳು ಎಲ್ಲಿಗೆ ಹೋಗುತ್ತವೆ ? ಏನು ಮಾಡುತ್ತವೆ ? ಎಲ್ಲವೂ ಈ ಪುಟ್ಟ ಕ್ಯಾಮೆರಾದಲ್ಲಿ ಸೆರೆ ಆಗುತ್ತದೆ.

  ಎಲ್‌ಇಡಿ ಛತ್ರಿ( ಕೊಡೆ)

  ರಾತ್ರಿ ವೇಳೆ ಮಳೆ ಬಂದಾಗ ಛತ್ರಿಯನ್ನು ಬಿಡಿಸಿ ಟಾರ್ಚ್ ಲೈಟ್‌ ಹಿಡಿದು ನಡೆಯುವುದು ಸ್ಪಲ್ಪ ಕಷ್ಟವೇ. ಆದರೆ ಇನ್ನು ಮುಂದೆ ಕಷ್ಟ ಪಡಬೇಕಾಗಿಲ್ಲ.ಹೊಸ ಎಲ್‌ಇಡಿ ಛತ್ರಿ ಬಂದಿದ್ದು ನೀವು ಇದನ್ನು ಬಿಡಿಸಿದರೆ ರಾತ್ರಿ ವೇಳೆ ಆರಾಮವಾಗಿ ಮಳೆಯಲ್ಲಿ ನಡೆದುಕೊಂಡು ಹೋಗಬಹುದು.

  ಮೈಂಡ್‌ಸೆಟ್ ಹೆಡ್‌ಫೋನ್‌

  ಈ ಹೆಡ್‌ಫೋನ್‌ನ್ನು ನೋಡಿದಾಗ ನಿಮಗೆ ಸರಳ ಹೆಡ್‌ಫೋನ್‌ ರೀತಿ ಕಾಣಿಸಬಹುದು. ಆದರೆ ಇದು ನೀವು ಆಲೋಚನೆ ಮಾಡಿದ ಹಾಗೇ ಸರಳವಾದ ಹೆಡ್‌ಫೋನ್‌ ಅಲ್ಲ. ವಿಶೇಷವಾಗಿ ಕಂಪ್ಯೂಟರ್ ಆಡಲು ತಯಾರಿಸಿದ ಹೆಡ್‌ಫೋನ್‌ ಇದು. ಕಂಪ್ಯೂಟರ್/ಲ್ಯಾಪ್‌ಟಾಪ್‌ಗೆ ಈ ಹೆಡ್‌ಫೋನ್‌ ಕನೆಕ್ಟ್‌ ಮಾಡಿದ್ರೆ ನೀವು ಮತ್ತೆ ಕೈಯಿಂದ ಆಪರೇಟ್‌ ಮಾಡಬೇಕಾದ ಅವಶ್ಯಕತೆ ಇಲ್ಲ. ನಿಮ್ಮ ಮೆದುಳು ಹೇಗೆ ಆಲೋಚನೆ ಮಾಡುತ್ತದೋ ಅದನ್ನು ಈ ಹೆಡ್‌ಫೋನ್‌ ಗೃಹಿಸಿ ಕೆಲಸ ಮಾಡುತ್ತದೆ.

  ಎಲ್‌ಸಿಡಿ ಸ್ಕ್ರೀನ್‌ ಬೆಲ್ಟ್‌ LCD Screen Belt

  ಗಾತ್ರದಲ್ಲಿ ಸಣ್ಣದಾದ್ರೂ ಇದರ ಕೆಲಸ ಮಾತ್ರ ದೊಡ್ಡದು. ಈ ಬೆಲ್ಟ್‌ನ್ನು ನೀವು ಧರಿಸಲು ಬಹುದು. ಬೇಜಾರಾದ್ರೆ ಫಿಲ್ಮ್‌ ನೋಡಬಹುದು. ಈ ಬೆಲ್ಟ್‌ನಲ್ಲಿ ಎಲ್‌ಸಿಡಿ ಸ್ಕ್ರೀನ್‌ ಇದ್ದು ವೀಡಿಯೋ ನೋಡಬಹುದು. ಈ ಬೆಲ್ಟ್‌ 2GB ಆಂತರಿಕ ಮೆಮೋರಿ ಹೊಂದಿದ್ದು ,ಎಸ್‌ಡಿ ಕಾರ್ಡ್ ಸ್ಲಾಟ್‌ ಸಹ ನೀಡಿದ್ದಾರೆ. ಈ ಮೂಲಕ ಇನ್ನಷ್ಟು ಫಿಲ್ಮ್‌ ವೀಕ್ಷಣೆ ಮಾಡಬಹುದು.

  Warming Gloves

  ವಿಪರೀತ ಚಳಿಯಾದಾಗ ನಮ್ಮ ಕೈ ನಡುಗುತ್ತದೆ. ಈ ರೀತಿ ಚಳಿಗೆ ನಡುಗದಂತೆ ಹೊಸ ಗ್ಲೌಸ್‌ ಬಂದಿದೆ. ಕೈಯನ್ನು ಗ್ಲೌಸ್‌ ಒಳಗಡೆ ಹಾಕಿ ಗ್ಲೌಸ್‌ ವಯರ್‌ನ್ನು ಲ್ಯಾಪ್‌ಟಾಪ್‌ಗೆ ಕನೆಕ್ಟ್ ಮಾಡಿದ್ರೆ ಕೈಯನ್ನು ಬೆಚ್ಚಗೆ ಇರಿಸುತ್ತದೆ.

  ಬ್ರೆಡ್‌ ಟೋಸ್ಟರ್‌ ಪ್ರಿಂಟರ್‌

  ಬಿಸಿಬಿಸಿಯಾದ ಬ್ರೆಡ್‌ ಯಾರಿಗೆ ಇಷ್ಟ ಇಲ್ಲ ಹೇಳಿ ? ಹಾಗಾಗಿ ಇನ್ನು ಮುಂದೆ ಮೈಕ್ರೋವೇವ್‌ನಲ್ಲಿಟ್ಟು ಬ್ರೆಡ್‌ ಬಿಸಿ ಮಾಡಬೇಕಾದ ಅಗತ್ಯವಿಲ್ಲ. ಬ್ರೆಡ್‌ ಬಿಸಿ ಮಾಡಲು ಮಿನಿ ಪ್ರಿಂಟರ್‌ ಬಂದಿದೆ. ಎಲೆಕ್ಟಾನಿಕ್‌ ಪ್ರಿಂಟರ್‌ನಲ್ಲಿ ಬ್ರೆಡ್‌ ಹಾಕಿದ್ರೆ ಬಿಸಿಬಿಸಿಯಾಗಿ ಬ್ರೆಡ್‌ ಪ್ರಿಂಟ್‌ ಆಗಿ ಹೊರಕ್ಕೆ ಬರುತ್ತದೆ.

  ರೊಬೋಟ್‌ ಹುಲ್ಲುಕತ್ತರಿಸುವ ಯಂತ್ರ(Robot Lawnmower)

  ನೀವು ಹುಲ್ಲುಕತ್ತರಿಸುವ ಯಂತ್ರವನ್ನು ನೋಡಿರಬಹುದು. ಆದರೆ ಈ ಯಂತ್ರವನ್ನು ನೀವು ಕುಳಿತ ಸ್ಥಳದಿಂದಲೇ ನಿಯಂತ್ರಿಸಿ ಹುಲ್ಲುಕತ್ತರಿಸಬಹುದು. ಮೊದಲು ಈ ಯಂತ್ರದ ಮೇಲುಗಡೆ ನಿಮಗೆ ಬೇಕಾದಂತೆ ಎಷ್ಟು ಪ್ರಮಾಣದ ಹುಲ್ಲು ಕತ್ತರಿಸಬೇಕು ಎಂಬುದನ್ನು ಸೆಟ್‌ ಮಾಡಬೇಕು. ಸೆಟ್ ಮಾಡಿದ ನಂತರ ರಿಮೋಟ್‌ ಕಂಟ್ರೋಲ್‌ ಮೂಲಕ ಇದನ್ನು ನಿಯಂತ್ರಿಸಿ ನೆಲದಲ್ಲಿ ಬೆಳೆದ ಹುಲ್ಲನ್ನು ಆರಾಮವಾಗಿ ಕತ್ತರಿಸಬಹುದು.

  ಹುಲ್ಲು ಚಾರ್ಜಿಂಗ್‌ ಸ್ಟೇಷನ್‌ Grass Charging Station

  ಹುಲ್ಲಿನಲ್ಲೂ ಇನ್ನು ಮುಂದೆ ಮೊಬೈಲ್‌ ಚಾರ್ಜ್ ಮಾಡಬಹುದು. ನೋಡಲು ಹುಲ್ಲಿನಂತಿರುವ ಇದು ನಿಜವಾಗಿ ಮಣ್ಣಿನಲ್ಲಿ ಬೆಳೆದ ಹುಲ್ಲಲ್ಲ. ಮೊಬೈಲ್‌ ಚಾರ್ಜಿಂಗ್‌ಗಾಗಿ ಕೃತಕವಾಗಿ ತಯಾರಿಸಲಾದ ಹುಲ್ಲು. ಈ ಹುಲ್ಲು ಚಾರ್ಜರ್‌ನಲ್ಲಿ ಮೊಬೈಲ್‌ ಚಾರ್ಜಿಂಗ್‌ ವರ್ಕ್ ಸ್ಟೇಷನ್‌ ಇದೆ. ಈ ಚಾರ್ಜಿಂಗ್ ಸ್ಟೇಷನ್ ಮೂಲಕ ಮೊಬೈಲ್‌ ಚಾರ್ಜ್ ಮಾಡಬಹುದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more