Home
ಸುದ್ದಿಜಾಲ

ಭಾರತದಲ್ಲಿ ತೋಷಿಬಾ ಸಂಸ್ಥೆಯಿಂದ ಅಲ್ಟಿಮೇಟ್ 4K ಟಿವಿ ಸರಣಿ ಬಿಡುಗಡೆ!

ಸ್ಮಾರ್ಟ್‌ಟಿವಿ ವಲಯದಲ್ಲಿ ಹಲವು ವೈವಿಧ್ಯಮಯ ಸ್ಮಾರ್ಟ್‌ಟಿವಿಗಳು ಲಭ್ಯವಿವೆ. ವಿವಿಧ ಮಾದರಿಯ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯದ ಸ್ಮಾರ್ಟ್‌ಟಿವಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈಗಾಗಲೇ ಹಲವು ಕಂಪೆನಿಗಳು ತಮ್ಮ ಭಿನ್ನ ಮಾದರಿಯ ಸ್ಮಾರ್ಟ್‌ಟಿವಿಗಳನ್ನ ಪರಿಚಯಿಸಿವೆ. ಸದ್ಯ ಇದೀಗ ತೋಷಿಬಾ ಕಂಪೆನಿ 4K ಟಿವಿಗಳ ಹೊಸ ಸರಣಿಯನ್ನು ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಟಿವಿ ಸರಣಿಯನ್ನು ಅಲ್ಟಿಮೇಟ್ 4K ಎಂದು ಹೆಸರಿಸಲಾಗಿದೆ. ಅಲ್ಲದೆ ಈ ಹೊಸ ಸರಣಿಯು 7 4K ಟಿವಿಗಳನ್ನು ಒಳಗೊಂಡಿದ್ದು, ಇದರ ಬೆಲೆ 12,990 ರೂ ರಿಂದ ಪ್ರಾರಂಭವಾಗಲಿದ್ದು 66,990 ರೂ,ಗಳವರೆಗೂ ಇದೆ.

ತೋಷಿಬಾ ಕಂಪೆನಿ

ಹೌದು, ತೋಷಿಬಾ ಕಂಪೆನಿ 4K ಸರಣಿಯಲ್ಲಿ 7 ಹೊಸ ಸ್ಮಾರ್ಟ್‌ಟಿವಿಗಳು ಪರಿಚಯಿಸಿದೆ. ಇನ್ನು ಈ ಸರಣಿಯನ್ನು ಅಲ್ಟಿಮೇಟ್‌ 4K ಸರಣಿ ಎಂದು ಹೆಸರಿಸಲಾಗಿದೆ. ಸದ್ಯ ತೋಷಿಬಾ ಸಂಸ್ಥೆ ಹೊಸದಾಗಿ ಪ್ರಾರಂಭಿಸಿರುವ 4K ಸ್ಮಾರ್ಟ್‌ಟಿವಿಗಳು ಇದೇ ಸೆಪ್ಟೆಂಬರ್ 18 ಮತ್ತು ಸೆಪ್ಟೆಂಬರ್ 21 ರ ನಡುವೆ ಅಮೆಜಾನ್, ಫ್ಲಿಪ್ಕಾರ್ಟ್, ರಿಲಯನ್ಸ್ ಡಿಜಿಟಲ್ ಮತ್ತು ಟಾಟಾ ಕ್ಲಿಕ್‌ನಲ್ಲಿ ನಾಲ್ಕು ವರ್ಷಗಳ ಪ್ಯಾನಲ್ ಖಾತರಿಯೊಂದಿಗೆ ಲಭ್ಯವಾಗಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ತೋಷಿಬಾ

ಸದ್ಯ ತೋಷಿಬಾದ ಪರಿಚಯಿಸಿರುವ ಅಲ್ಟಿಮೇಟ್ 4K TV ಶ್ರೇಣಿಯು ಎರಡು ಸರಣಿಗಳನ್ನು ಒಳಗೊಂಡಿದೆ. ಇದರಲ್ಲಿ U79 ಸರಣಿ ಮತ್ತು UHD U50 ಸರಣಿಗಳು, ಸೇರಿದಂತೆ ಒಟ್ಟು ಏಳು ಮಾದರಿಗಳನ್ನು ಹೊಂದಿದೆ. ಇದರಲ್ಲಿ 32 ಇಂಚಿನ ಡಿಸ್‌ಪ್ಲೇ ಹೊಂದಿರುವ 32L5050 ಮಾದರಿಯ ಸ್ಮಾರ್ಟ್‌ಟಿವಿ ಕೂಡ ಒಂದಾಗಿದ್ದು, ಹೊಸ ಮಾದರಿಯ ವಿನ್ಯಾಸ ಉತ್ತಮ ಸೌಂಡ್‌ ಸಿಸ್ಟಂ ಅನ್ನು ಒಳಗೊಂಡಿದೆ. ಇದರ ಬೆಲೆ, 12,990 ರೂ ಆಗಿದೆ. ಇನ್ನು 43 ಇಂಚಿನ ಡಿಸ್‌ಪ್ಲೇ ಹೊಂದಿರುವ 43L5050 ಮಾದರಿಯ ಸ್ಮಾರ್ಟ್‌ಟಿವಿ ಕೂಡ ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ಇದರ ಬೆಲೆ 22,490 ರೂ ಆಗಿದೆ. ಈ ಎರಡೂ ಮಾದರಿಗಳು ADS ಪ್ಯಾನಲ್, VDAA OS, CEVO ಎಂಜಿನ್ ಪ್ರೀಮಿಯಂ ಅನ್ನು ಒಳಗೊಂಡಿದೆ.

ಸ್ಮಾರ್ಟ್‌ಟಿವಿ

ಇದಲ್ಲದೆ 43 ಇಂಚಿನ 43U5050 ಮಾದರಿಯ ಸ್ಮಾರ್ಟ್‌ಟಿವಿ ಉತ್ತಮ ಸೌಂಡ್‌ ಸಿಸ್ಟಂ, ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಒಳಗೊಂಡಿದೆ. ಇನ್ನು ಇದರ ಬೆಲೆ 27,990 ರೂ, ಆಗಿದೆ. ಇನ್ನು 50ಇಂಚಿನ ಸ್ಮಾರ್ಟ್‌ಟಿವಿ ವಿಭಾಗದಲ್ಲಿ 50U5050 ಮಾದರಿಯ ಸ್ಮಾರ್ಟ್‌ಟಿವಿ ಲಭ್ಯವಿದ್ದು, ಇದರ ಬೆಲೆ 32,990 ರೂ ಆಗಿದೆ. 36 ಇಂಚಿನ ವಿಭಾಗದಲ್ಲಿ 55U5050 ಮಾದರಿಯ ಸ್ಮಾರ್ಟ್‌ಟಿವಿಯನ್ನು ಪರಿಚಯಿಸಲಾಗಿದ್ದು, ಬೆಲೆ 36,990.ರೂ ಆಗಿದೆ. ಈ ಎಲ್ಲಾ ಮಾದರಿಗಳು 4K ಟಿವಿ, ಡಾಲ್ಬಿ ವಿಷನ್, ಡಾಲ್ಬಿ ಅಟ್ಮೋಸ್, ವಿಡಿಎಎ ಓಎಸ್ ಮತ್ತು ಅಲೆಕ್ಸಾ ಇಂಟರ್‌ಬಿಲ್ಟ್‌ ಅನ್ನು ಹೊಂದಿದೆ.

ಸ್ಮಾರ್ಟ್‌ಟಿವಿ

ಇನ್ನು 55 ಇಂಚಿನ 55U7980 ಮಾದರಿಯ ಸ್ಮಾರ್ಟ್‌ಟಿವಿಯನ್ನು ಸಹ ತೋಷಿಬಾ ಬಿಡುಗಡೆ ಮಾಡಿದ್ದು, ಇದರ ಬೆಲೆ 46,990,ರೂ ಆಗಿದೆ. ಅಲ್ಲದೆ 65 ಇಂಚಿನ 65U7980 ಮಾದರಿಯ ಬೆಲೆ 66,990.ರೂ ಆಗಿದೆ. ಈ ಎಲ್ಲಾ ಮಾದರಿಗಳು 4K ಡಿಸ್‌ಪ್ಲೇ, ಫುಲ್-ಅರೇ ಲೋಕಲ್ ಡಿಮ್ಮಿಂಗ್, ಡಾಲ್ಬಿ ವಿಷನ್, ಡಾಲ್ಬಿ ಅಟ್ಮೋಸ್, ವಿಡಿಎಎ ಓಎಸ್, ಅಲೆಕ್ಸಾ ಅಂತರ್ನಿರ್ಮಿತ, ವೈಡ್ ಕಲರ್ ಗ್ಯಾಮಟ್, MEMC ಮತ್ತು ಅಲ್ಟ್ರಾ-ಸ್ಲಿಮ್ ಅಂಚಿನ-ಕಡಿಮೆ ವಿನ್ಯಾಸವನ್ನು ಹೊಂದಿದೆ.

Best Mobiles in India

English summary
Toshiba's new series called the Ultimate 4k TV series consists of seven 4K TVs with the price starting at ₹12,990 and going all the way up to ₹66,990.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+