TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಫೇಸ್ ಲಾಕ್, ಫಿಂಗರ್‌ಪ್ರಿಂಟ್ ಸೇಫ್ ಅಲ್ಲ..! ಪಾಸ್‌ವರ್ಡ್ ಬೆಸ್ಟ್..!
ಇಂದಿನ ದಿನದಲ್ಲಿ ಸ್ಮಾರ್ಟ್ ಫೋನ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಫೇಸ್ ಲಾಕ್ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಗಳು ಹೆಚ್ಚಿನ ಪ್ರಮಾಣದಲ್ಲಿ ಸೆಕ್ಯೂರ್ ಅಂದುಕೊಂಡಿರುವ ಸಂದರ್ಭದಲ್ಲಿ ಆಚ್ಚರಿಯ ಮಾಹಿತಿಯೂ ಲಭ್ಯವಾಗಿದ್ದು, ಫೇಸ್ ಲಾಕ್ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸೆಕ್ಯೂರ್ ಅಲ್ಲ ಎಂದು ತಿಳಿಸಲಾಗಿದ್ದು, ಅವುಗಳನ್ನು ಟೆಪರವರಿಯಾಗಿ ಡಿಸೆಬಲ್ ಮಾಡಬಹುದಾಗಿದೆ. ಇದರಿಂದಾಗಿ ಇವುಗಳನ್ನು ಸೇಫ್ ಅಲ್ಲ ಎನ್ನಲಾಗಿದೆ.
ಫೇಸ್ ಲಾಕ್ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇತ್ತೀಚಿನ ದಿನದಲ್ಲಿ ಸಾಕಷ್ಟು ಸ್ಮಾರ್ಟ್ ಫೋನ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಅವುಗಳ ಬಳಕೆಯ ಕುರಿತು ಸಂಶೋಧನೆಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಫೇಸ್ ಲಾಕ್ ಅನ್ನು ಬೇರೆ ಯವರು ಒಪನ್ ಮಾಡುವುದು ಸುಲಭವಾಗಿದೆ. ಇದೇ ಮಾದರಿಯಲ್ಲಿ ಫಿಂಗರ್ ಪ್ರಿಂಟ್ ಅನ್ನು ಬೇರೆಯವರು ತೆಗೆಯಬಹುದಾಗಿದೆ.
ಈ ಕುರಿತು ಮಾಹಿತಿಯನ್ನು ಬಿಡುಗಡೆ ಮಾಡಿರುವ ಅಮೆರಿಕಾ, ಫೇಸ್ ಲಾಕ್ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಹೆಚ್ಚು ಸೇಫ್ ಅಲ್ಲ ಎಂದಿದೆ. ಇದರೊಂದಿಗೆ ಅಮೆರಿಕಾ ಕೋರ್ಟ್ ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ಫೇಸ್ ಲಾಕ್ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಗಳಿಗಿಂತ ಪಿನ್ ಹೆಚ್ಚು ಸೆಕ್ಯೂರ್ ಆಗಿದೆ ಮತ್ತು ಇದು ಲೀಗಲ್ ಪ್ರೋಟೆಕ್ಷನ್ ಅನ್ನು ಹೊಂದಿದೆ ಎಂಬ ಮಾಹಿತಿಯನ್ನು ತಿಳಿಸಿದೆ.
ಫೇಸ್ ಲಾಕ್ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಗಳನ್ನು ಸುಲಭವಾಗಿ ಹ್ಯಾಕ್ ಮಾಡಬಹುದಾಗಿದೆ. ಆದರೆ ಪಿನ್ ಕೋಡ್ ಅನ್ನು ಹ್ಯಾಕ್ ಮಾಡುವುದು ಕಷ್ಟ ಸಾಧ್ಯ, ಹಿನ್ನಲೆಯಲ್ಲಿ ನೀವು ಮುಂದಿನ ಸಂದರ್ಭದಲ್ಲಿ ಫೇಸ್ ಲಾಕ್ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಬಳಕೆ ಮಾಡಿಕೊಳ್ಳುವ ಮುನ್ನ ಎಚ್ಚರಿಕೆ ವಹಿಸುವುದು ಅಗತ್ಯ. ಇದರಿಂದಾಗಿ ನೀವು ಬಯೋಮೆಟ್ರಿಕ್ ಬಳಕೆ ಮಾಡಿಕೊಳ್ಳುವುದು ಉತ್ತಮವಲ್ಲ.
ನಿಮ್ಮ ಮಾಹಿತಿಯನ್ನು ಸೆಕ್ಯೂರ್ ಮಾಡಲು ಫಿಂಗರ್ ಪ್ರಿಂಟ್ ಇಲ್ಲವೇ ಫೇಸ್ ಲಾಕ್ ಬಳಕೆ ಮಾಡಿಕೊಳ್ಳುವ ಬದಲು ಪಿನ್ ಕೋಡ್ ಅನ್ನು ಬಳಕೆ ಮಾಡಿಕೊಳ್ಳಿ. ಇದರಿಂದಾಗಿ ನಿಮ್ಮ ಮಾಹಿತಿಯೂ ಸೇಫ್ ಆಗಲಿದೆ. ಅಲ್ಲದೇ ಬೇರೆ ಯವರು ನಿಮ್ಮ ಮಾಹಿತಿಯನ್ನು ಕದಿಯುವುದಕ್ಕೆ ಆಸ್ಪದ ಇರುವುದಿಲ್ಲ. ಎಚ್ಚರಿಗೆ ಅಗತ್ಯ.