ನೆಟ್ ನ್ಯೂಟ್ರಾಲಿಟಿ ಒಪ್ಪಂದಕ್ಕೆ ಸಹಿ ಹಾಕಿದ TRAI, BEREC

By Avinash

  ನೆಟ್ ನ್ಯೂಟ್ರಾಲಿಟಿ ನಿಯಮಗಳನ್ನು ಜಾರಿಗೆ ತರಲು ಟೆಲಿಕಾಂ ರೆಗುಲೇಟರ್ಸ್ ಆಥಾರಿಟಿ ಆಫ್ ಇಂಡಿಯಾ ಮತ್ತು ಯುರೋಪಿಯನ್ ಯುನಿಯನ್ ಅಂಗಸಂಸ್ಥೆ ಯುರೋಪಿಯನ್ ರೆಗುಲೇಟರ್ಸ್ ಫಾರ್ ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ ಮುಂದಾಗಿದ್ದು, ಗುರುವಾರ ಪೋಲ್ಯಾಂಡ್ ನ ಸೋಪಾಟಾದಲ್ಲಿ ಒಪ್ಪಂದವೊಂದಕ್ಕೆ ಸಹಿ ಹಾಕಿವೆ.

  ನೀವು ಹ್ಯಾಕರ್ಸ್ ಆಗ್ಬೇಕಾ... ಆಗಿದ್ರೇ ಈ ಚಿತ್ರಗಳನ್ನು ನೋಡಿ..!

  ಎಲೆಕ್ಟ್ರಾನಿಕ್ಸ್ ಸಂವಹನದಲ್ಲಿ ಪರಿಣಾಮಕಾರಿಯಾಗಿ ನಿಯಮಗಳನ್ನು ಜಾರಿಗೆ ತರಲು ಈ ಒಪ್ಪಂದ ಸಲಹೆ ನೀಡುತ್ತದೆ. ಎರಡು ಸಂಸ್ಥೆಗಳು ಒಪನ್ ಇಂಟರ್ ನೆಟ್ ಕುರಿತು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಎರಡು ಸಂಸ್ಥೆಗಳು ನೆಟ್ ನ್ಯೂಟ್ರಾಲಿಟಿ ನಿಯಮ ಜಾರಿ ತರುತ್ತೇವೆ ಎಂದಿವೆ.

  ನೆಟ್ ನ್ಯೂಟ್ರಾಲಿಟಿ ಒಪ್ಪಂದಕ್ಕೆ ಸಹಿ ಹಾಕಿದ TRAI, BEREC

  ಒಪ್ಪಂದವು ನೆಟ್ ನ್ಯೂಟ್ರಾಲಿಟಿಯ ನಿಯಮಗಳ ನಿಯಮಗಳ ಅನುಷ್ಠಾನ ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ ನಿಯಮಿತವಾದ ವಿನಿಮಯವನ್ನು ಅಭಿವೃದ್ಧಿಪಡಿಸಲು ಎರಡೂ ಸಂಸ್ಥೆಗಳ ಸಮ್ಮತಿಯಿದೆ ಎಂದು ಹೇಳಿದೆ. ಸ್ಪರ್ಧಾತ್ಮಕ ಮಾರುಕಟ್ಟೆಯನ್ನು, ತಂತ್ರಜ್ಞಾನದ ನಾವೀನ್ಯತೆ ಮತ್ತು ಗ್ರಾಹಕರ ಮೌಲ್ಯ ಉತ್ತೇಜಿಸಲು ಉದ್ದೇಶಿಸಲಾಗಿದೆ ಎಂದು ನಿಯಂತ್ರಕರು ಹೇಳಿದರು.

  ಟ್ರಾಯ್ ಮತ್ತು ಬೆರೆಕ್ ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ನೆಟ್ ನ್ಯೂಟ್ರಾಲಿಟಿ ನಿಯಮಗಳ ಅಡಿಪಾಯವನ್ನು ಪರಿಗಣಿಸಿರುವುದಾಗಿ ತಿಳಿಸಿವೆ. ಇದು ಭಾರತ ಮತ್ತು ಇಯು ಎರಡು ಕಡೆ ಸಾಮಾನ್ಯವಾಗಿದೆ. ಈ ಪಟ್ಟಿಯಲ್ಲಿ ಮಾಹಿತಿಯನ್ನು ಕಳುಹಿಸಲು ಅಥವಾ ಸ್ವೀಕರಿಸಲು ಬಳಕೆದಾರರ ಹಕ್ಕುಗಳನ್ನು ಜಾರಿಗೆ ತರಲಾಗುವುದು.

  ಸಮನಾದ ಡೇಟಾ ಟ್ರಾಫಿಕ್, ಪಾರದರ್ಶಕ ಮತ್ತು ವಿವೇಚನಾರಹಿತವಲ್ಲದಿದ್ದರೆ ಸಮಂಜಸ ಡೇಟಾ ಟ್ರಾಫಿಕ್ ನಿರ್ವಹಣೆಗೆ ಅವಕಾಶ, ಜಿರೋ ರೇಟಿಂಗ್ ಹೊಂದಿರುವ ವಾಣಿಜ್ಯ ಪದ್ಧತಿಗಳಿಗೆ ಪೂರಕವಾಗಿ ಸ್ಪರ್ಧೆಯನ್ನು ಉತ್ತೇಜಿಸುವುದು ಮತ್ತು ಒಪನ್ ಇಂಟರ್ ನೆಟ್ ಅನ್ನು ಪ್ರಚಾರ ಮಾಡುವುದು. ಕೊನೆಯದಾಗಿ ಇಂಟರ್ ನೆಟ್ ಪೂರೈಕೆದಾರರಿಂದ ಪ್ರಸ್ತುತ ಡೇಟಾ ಟ್ರಾಫಿಕ್, ಬೆಲೆ ಸೇರಿದಂತೆ ಇಂಟರ್ ನೆಟ್ ಗೆ ಸಂಬಂಧಿತ ಯಾವುದೇ ಮಾಹಿತಿಯನ್ನು ಪಡೆಯುವ ಹಕ್ಕು ಗ್ರಾಹಕರಿಗೆ ಇದೆ.

  ರೆಗುಲೇಟರ್ಸ್ ಈ ಅಂಶಗಳ ಜತೆ ಶಾಸನಾತ್ಮಕವಾಗಿ ಹೆಚ್ಚುವರಿ ಅಂಶಗಳನ್ನು ಸೇರಿಸುವ ಅಧಿಕಾರ ಹೊಂದಿದ್ದಾರೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಟ್ರಾಯ್ ಚೇರಮನ್ ಡಾ.ರಾಮ್ ಸೇವಕ್ ಶರ್ಮಾ ಮತ್ತು ಬೆರೆಕ್ ಮುಖ್ಯಸ್ಥ ಜೋಹಾನ್ಸ್ ಗುಂಗ್ಲ್ ಜಂಟಿ ಹೇಳಿಕೆ ಬಿಡುಗಡೆ ಮಾಡುವಾಗ ಉಪಸ್ಥಿತರಿದ್ದರು.

  ನೆಟ್ ನ್ಯೂಟ್ರಾಲಿಟಿ ಒಪ್ಪಂದಕ್ಕೆ ಸಹಿ ಹಾಕಿದ TRAI, BEREC

  ಒಪ್ಪಂದದ ಕುರಿತು ಪ್ರತಿಕ್ರಿಯಿಸಿದ ಜೋಹಾನ್ಸ್ ಗುಂಗ್ಲ್ "ನೆಟ್ ನ್ಯೂಟ್ರಾಲಿಟಿಯು ಪ್ರಮುಖ ಅಸ್ತ್ರವಾಗಿದ್ದು, ಪ್ರಪಂಚದಾದ್ಯಂತ ಜನರಿಗೆ ಮುಕ್ತ ಇಂಟರ್ನೆಟ್ ಸೌಲಭ್ಯ ನೀಡಬಹುದಾಗಿದೆ. ಅಂತರ್ಜಾಲ ಸೇವೆಗಳಿಗಾಗಿ ನೆಟ್ ನ್ಯೂಟ್ರಾಲಿಟಿ ಜಾರಿಗೆ ತರಲು ಟ್ರಾಯ್ ಅನ್ನು ಪಾಲುದಾರರನ್ನಾಗಿ ಹೊಂದಿರುವುದು ಸಂತಸ ತಂದಿದೆ ಎಂದು ಹೇಳಿದರು.

  ಟ್ರಾಯ್ ಚೇರಮನ್ ಡಾ.ರಾಮ್ ಸೇವಕ್ ಶರ್ಮಾ ಪ್ರತಿಕ್ರಿಯಿಸಿ ಅಭಿವೃದ್ಧಿಯ ಮುಂದಿನ ಹಂತಕ್ಕೆ ತಂತ್ರಜ್ಞಾನ ಬಳಸಿಕೊಳ್ಳುವುದಕ್ಕೆ ಭಾರತದಂತಹ ದೇಶಗಳಲ್ಲಿ ಬೆಳವಣಿಗೆ ಮಗತ್ತು ನಾವೀನ್ಯತೆ ಹೊಂದಲು ಇಂಟರ್ ನೆಟ್ ದಾರಿಯಾಗಿದೆ ಎಂದು ಪರಿಗಣಿಸುತ್ತೇವೆ. ಆದ್ದರಿಂದ ಇಂಟರ್ ನೆಟ್ ಅನ್ನು ಮುಕ್ತ ಮತ್ತು ಪಕ್ಷಪಾತವಿಲ್ಲದ ವೇದಿಕೆಯಲ್ಲಿ ಇಡಲಾಗಿದೆ. ಒಪ್ಪಂದವು ಕೇವಲ ನೆಟ್ ನ್ಯೂಟ್ರಾಲಿಟಿ ತರಹದ ಕೆಲಸಗಳಲ್ಲಿ BEREC ಜೊತೆ ಭಾಗಿಯಾಗಲು ಅನುವು ಮಾಡಿಲ್ಲ. ಅದಲ್ಲದೇ, ಇಯು ಗ್ರಾಹಕರ ರಕ್ಷಣೆ, ಬ್ರಾಡ್ ಬ್ಯಾಂಡ್ ಅಭಿವೃದ್ಧಿ ಮತ್ತು NGA ರೋಲ್ ಔಟ್ ಪ್ರಚಾರ ಮಾಡಲು ಅಳವಡಿಸಿಕೊಂಡಿರುವ ಅಂಶಗಳಳ್ಲೂ ಟ್ರಾಯ್ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

  Read more about:
  English summary
  TRAI, BEREC Sign Memorandum on Preserving, Promoting Net Neutrality Rules. To know more this visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more