Home
ಸುದ್ದಿಜಾಲ

ಮೊಬೈಲ್ ಡಿಸ್‌ಪ್ಲೇ ಮೇಲೆ ಕರೆ ಮಾಡುವವರ ಹೆಸರು: TRAI ಅನುಮೋದನೆ!

ಮೊಬೈಲ್ ಡಿಸ್‌ಪ್ಲೇ ಮೇಲೆ ಕರೆ ಮಾಡಿರುವವರ (Calling Name Presentation (CNAP) ಗುರುತು ತೋರಿಸುವ ದೂರಸಂಪರ್ಕ ಇಲಾಖೆಯ (DoT) ಪ್ರಸ್ತಾವನೆಯನ್ನು ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (TRAI) ಅನುಮೋದಿಸಿದೆ. ಕರೆ ಮಾಡುವವರ ಹೆಸರನ್ನು ಸ್ವೀಕರಿಸುವವರ ಫೋನ್‌ನಲ್ಲಿ ಡೀಫಾಲ್ಟ್ ಆಗಿ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸುವುದು ಈ ವೈಶಿಷ್ಟ್ಯದ ಉದ್ದೇಶವಾಗಿದ್ದು, ಈ ವೈಶಿಷ್ಟ್ಯವು ಸಿಮ್ ನೋಂದಣಿ ಪ್ರಕ್ರಿಯೆಯ ಸಮಯದಲ್ಲಿ ಪರಿಶೀಲಿದ ಗುರುತನ್ನು ಕರೆ ಸ್ವೀಕರಿಸುವವರಿಗೆ ತೋರಿಸಲಿದೆ. ಹಾಗಾದರೆ, ಏನಿದು ಹೊಸ ವೈಶಿಷ್ಟ್ಯ ಎಂಬುದನ್ನು ನೋಡೋಣ ಬನ್ನಿ.

ಏನಿದು CNAP (Calling Name Presentation)?
CNAP ಒಂದು ಹೊಸ ತಂತ್ರಜ್ಞಾನ ಸೇವೆಯಾಗಿದ್ದು, ಸಿಮ್ ಕಾರ್ಡ್ ಪಡೆಯುವ ವೇಳೆ ಸಲ್ಲಿಸಿದ ಅಧಿಕೃತ ಗುರುತಿನ ಆಧಾರದಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಅರ್ಥ ನಿಮ್ಮ ಸಿಮ್ ನೋಂದಣಿಯ ಸಮಯದಲ್ಲಿ ನೀಡಿದ ಹೆಸರು, ಮುಂದೆ ನೀವು ಯಾರಿಗಾದರೂ ಕರೆ ಮಾಡಿದಾಗ ಅವರ ಡಿಸ್‌ಪ್ಲೇ ಮೇಲೆ ತೋರಿಸಲ್ಪಡುತ್ತದೆ. ಇದಕ್ಕಾಗಿ Truecaller ಸೇರಿದಂತೆ ಇತರೆ ಯಾವುದೇ ಥರ್ಡ್-ಪಾರ್ಟಿ ಅಪ್ಲಿಕೇಶನ್‌ಗಳು ಅಗತ್ಯವಿಲ್ಲ. TRAI ಪ್ರಕಾರ, ಭಾರತದ ಎಲ್ಲಾ ಟೆಲಿಕಾಂ ಚಂದಾದಾರರಿಗೆ CNAP ಸೇವೆಯನ್ನು ಪೂರ್ವನಿಯೋಜಿತವಾಗಿ ಸಕ್ರಿಯಗೊಳಿಸಲಾಗುತ್ತದೆ.

ಸ್ಪ್ಯಾಮ್ ಕರೆಗಳ ವಿರುದ್ಧ ರಕ್ಷಣೆ
ದೇಶದ ಎಲ್ಲಾ ಮೊಬೈಲ್ ಬಳಕೆದಾರರು ಈ CNAP ಮೂಲಕ ಅಪರಿಚಿತ ಮತ್ತು ಸ್ಪ್ಯಾಮ್ ಕರೆಗಳಿಂದ ತಪ್ಪಿಸಿಕೊಳ್ಳಲು ಸಹಾಯವಾಗಲಿದೆ. ಇದೀಗ ಕರೆ ಬಂದಾಗ ಕೇವಲ ಸಂಖ್ಯೆ ಮಾತ್ರ ತೋರಿಸುವ ವ್ಯವಸ್ಥೆ ಇದ್ದರೂ, CNAP ಮೂಲಕ ಕರೆ ಮಾಡುವವರ ಹೆಸರು ಕಾಣುವುದರಿಂದ ಬಳಕೆದಾರರು ಕರೆ ಸ್ವೀಕರಿಸುವ ಮುನ್ನ ಯಾರು ಕರೆ ಮಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತಿಳಿದು ಸುರಕ್ಷಿತ ನಿರ್ಧಾರ ತೆಗೆದುಕೊಳ್ಳಬಹುದು. ಬಹುತೇಕ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳು ಕರೆ ಮಾಡುವವರ ಹೆಸರನ್ನು ತೋರಿಸುತ್ತಿವೆಯಾದರೂ, ಅವುಗಳ ಅಂಕಿಅಂಶಗಳು ನಿಖರವಾಗಿಲ್ಲ ಎಂಬುದನ್ನು ನಾವು ಗಮನಿಸಬಹುದು.

ಮೊಬೈಲ್ ಡಿಸ್‌ಪ್ಲೇ ಮೇಲೆ ಕರೆ ಮಾಡುವವರ ಹೆಸರು: TRAI ಅನುಮೋದನೆ!

ಟೆಲಿಕಾಂ ಕಂಪನಿಗಳು ತಾಂತ್ರಿಕ ಸಿದ್ಧತೆ ನಡೆಸುತ್ತಿವೆ.
TRAI ಪ್ರಕಾರ, ದೇಶದ ಪ್ರತಿಯೊಂದು ಟೆಲಿಕಾಂ ಕಂಪನಿಯೂ ತಮ್ಮ ಗ್ರಾಹಕರ ಹೆಸರು ಮತ್ತು ಸಂಖ್ಯೆಯನ್ನು ಹೊಂದಿರುವ 'Calling Name (CNAM)' ಡೇಟಾಬೇಸ್ ರಚಿಸಬೇಕಿದೆ. ಕರೆ ಬಂದಾಗ, ಆ ಕಂಪನಿ ಸ್ಥಳೀಯ ನಂಬರ್ ಪೋರ್ಟಬಿಲಿಟಿ ಡೇಟಾಬೇಸ್ (LNPD) ಮೂಲಕ ಕರೆ ಮಾಡುವವರ ವಿವರಗಳನ್ನು ಪರಿಶೀಲಿಸಿ ಡಿಸ್‌ಪ್ಲೇ ಮೇಲೆ ಪ್ರದರ್ಶಿಸುತ್ತದೆ. DoT ಈಗಾಗಲೇ ಕೆಲವು ಪ್ರಮುಖ ನಗರಗಳಲ್ಲಿ 4G ಮತ್ತು 5G ನೆಟ್‌ವರ್ಕ್‌ಗಳಲ್ಲಿ CNAP ಸೇವೆಯ ಪ್ರಾಯೋಗಿಕ ಪರೀಕ್ಷೆ ನಡೆಸಿದೆ. ಆದರೆ, ಕೆಲವು ಟೆಲಿಕಾಂ ಕಂಪನಿಗಳು ಸಾಫ್ಟ್‌ವೇರ್ ಅಪ್‌ಡೇಟ್‌ಗಳ ಕೊರತೆ ಮತ್ತು ತಾಂತ್ರಿಕ ಸವಾಲುಗಳು ಇದ್ದುದರಿಂದ, ಆರಂಭಿಕ ಹಂತದಲ್ಲಿ ಸೇವೆಯನ್ನು ಕೇವಲ ಪ್ಯಾಕೆಟ್-ಸ್ವಿಚ್ಡ್ ನೆಟ್‌ವರ್ಕ್‌ಗಳಲ್ಲಿ ಮಾತ್ರ ಪ್ರಯೋಗಾತ್ಮಕವಾಗಿ ಪ್ರಯೋಗಿಸಿವೆ.

ಬಳಕೆದಾರರಿಗೆ ಹೊಸ ಅನುಭವ ಮತ್ತು ಸುರಕ್ಷತೆ
ಟ್ರೂಕಾಲರ್ ಸೇರಿದಂತೆ ಹಲವು ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳು ಕರೆ ಮಾಡುವವರ ಹೆಸರನ್ನು ತೋರಿಸುತ್ತಿವೆಯಾದರೂ ಅವುಗಳ ಅಂಕಿಅಂಶಗಳು ನಿಖರವಾಗಿಲ್ಲ. ಏಕೆಂದರೆ, ಇಂತಹ ಅಪ್ಲಿಕೇಶನ್‌ಗಳು ಕೇವಲ ಬಳಕೆದಾರರ ಡೇಟಾ ಬೇಸ್ ಬಳಸಿಕೊಳ್ಳುತ್ತಿವೆ. ಆದರೆ, CNAP ಸೇವೆ ಪ್ರತ್ಯೇಕವಾಗಿ ಲಭ್ಯವಿರುವುದಿಲ್ಲ. ಇದು ಮೂಲ ಟೆಲಿಕಾಂ ಸೇವೆಯ ಭಾಗವಾಗಿ ನೀಡಲಾಗುತ್ತದೆ. ಇದರಿಂದ ಕರೆ ಸಂವಹನ ಹೆಚ್ಚು ಪಾರದರ್ಶಕ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಆಗಲಿದೆ. ಈ ವೈಶಿಷ್ಟ್ಯವು ಅಧಿಕೃತವಾಗಿ ನೋಂದಾಯಿಸಲಾದ ಕರೆ ಮಾಡುವವರ ಮಾಹಿತಿಯನ್ನು ಬಳಸಿಕೊಳ್ಳುತ್ತದೆ.

ಇನ್ನು ಟ್ರಾಯ್ ಹೇಳಿಕೆಯ ಪ್ರಕಾರ, ಈ ಸೇವೆ ಎಲ್ಲಾ ಟೆಲಿಕಾಂ ಗ್ರಾಹಕರಿಗೂ ಡೀಫಾಲ್ಟ್ ಆಗಿ ಸಕ್ರಿಯವಾಗಿರುತ್ತದೆ. ಆದರೆ, ಯಾರಿಗಾದರೂ ಈ ವೈಶಿಷ್ಟ್ಯ ಬೇಡವಾದರೆ, ಅವರು ತಮ್ಮ ಟೆಲಿಕಾಂ ಸೇವಾ ಪೂರೈಕೆದಾರರನ್ನು ಸಂಪರ್ಕಿಸಿ ಅದನ್ನು ನಿಷ್ಕ್ರಿಯಗೊಳಿಸಬಹುದು.ಒಟ್ಟಾರೆಯಾಗಿ, ಟ್ರಾಯ್‌ನ ಈ ಹೊಸ CNAP ಕ್ರಮವು ಭಾರತದಲ್ಲಿ ಮೊಬೈಲ್ ಬಳಕೆದಾರರ ಸುರಕ್ಷತೆ ಮತ್ತು ಅನುಭವವನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ಸ್ಪ್ಯಾಮ್ ಕರೆಗಳಿಂದ ಮುಕ್ತತೆಯ ಜೊತೆಗೆ, ಇದು ನಂಬಿಕೆಯಿಂದ ಕೂಡಿದ ಡಿಜಿಟಲ್ ಸಂವಹನದ ನವಯುಗಕ್ಕೆ ದಾರಿ ತೆರೆದುಕೊಡಲಿದೆ ಎನನ್ಬಹುದು. ಏನಂತಿರಾ?

Best Mobiles in India

English summary
CNAP is a technology service that utilizes the official identification provided during SIM card registration. As a result, the name used in the SIM registration will appear on the recipient's display when you make a call.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+