ಮೊಬೈಲ್ ಬಳಕೆದಾರರೇ ಇನ್ಮುಂದೆ ನೀವು ಚಿಂತಿಸಬೇಕಿಲ್ಲ! ಸ್ಪ್ಯಾಮ್ ಕರೆಗಳಿಗೆ ಬಿತ್ತು ಕಡಿವಾಣ!
ದೇಶದಲ್ಲಿ ಹೆಚ್ಚಾಗುತ್ತಿರುವ ಸ್ಪ್ಯಾಮ್ ಕರೆಗಳ ಹಾವಳಿಯನ್ನು ತಪ್ಪಿಸುವುದಕ್ಕಾಗಿ ಸರ್ಕಾರ ಈಗಾಗಲೇ ಹೊಸ ನಿಯಮವನ್ನು ಜಾರಿಗೊಳಿಸಿದೆ. ಈ ನಿಯಮವೂ ಮೇ ಒಂದರಿಂದ ಜಾರಿಗೆ ಬಂದಿದೆ. ಅದರಂತೆ ದೇಶದ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಈ ನಿಯಮಗಳನ್ನು ಜಾರಿಗೆ ತಂದಿದೆ. ಇದರಿಂದಾಗಿ ಸ್ಪ್ಯಾಮ್ ಕರೆಗಳ ಕಿರಿಕಿರಿ ತಪ್ಪಲಿದೆ.
ಹೌದು, ದೇಶದಲ್ಲಿ 64% ಭಾರತೀಯರು ಪ್ರತಿದಿನ 3 ಕ್ಕೂ ಹೆಚ್ಚು 'ಸ್ಪ್ಯಾಮ್' ಕರೆಗಳನ್ನು ಸ್ವಿಕರಿಸುತ್ತಾರೆ ಎಂದು ವರದಿಯಾಗಿತ್ತು. ಅಂದರೆ ಪ್ರತಿಯೊಬ್ಬನು ಸರಾಸರಿ ತಿಂಗಳಿಗೆ ಸುಮಾರು 17 ಸ್ಪ್ಯಾಮ್ ಕರೆಗಳನ್ನು ಸ್ವೀಕರಿಸುತ್ತಾರೆ ಎಂದು ವರದಿ ಹೇಳಿತ್ತು. ಇದೆಲ್ಲವನ್ನು ಗಂಬೀರವಾಗಿ ಪರಿಗಣಿಸಿದ್ದ ಟ್ರಾಯ್ ಈಗಾಗಲೇ ಮೇ 1 ರಿಂದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಹಾಗಾದ್ರೆ ಟ್ರಾಯ್ ಸ್ಪ್ಯಾಮ್ ಕರೆಗಳನ್ನು ತಡೆಗಟ್ಟುವುದಕ್ಕೆ ಜಾರಿಗೊಳಿಸಿರುವ ಹೊಸ ನಿಯಮಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೊಬೈಲ್ ಬಳಸುವ ಪ್ರತಿಯೊಬ್ಬರು ಕೂಡ ಸ್ಪ್ಯಾಮ್ ಕರೆಗಳ ಕಿರಿಕಿರಿಯನ್ನು ಅನುಭವಿಸುತ್ತಾರೆ. ಅಪರಿಚಿತ ಸಂಖ್ಯೆಗಳಿಂದ ಬರುವ ಈ ಕರೆಗಳು ಗ್ರಾಹಕರಿಗೆ ಸಾಕಷ್ಟು ಕಿರಿಕಿರಿ ಎನಿಸುವುದು ಸಹಜ. ಅಷ್ಟೇ ಅಲ್ಲ ಸ್ಪ್ಯಾಮ್ ಕರೆಗಳು ನಿಮ್ಮ ಮಾಹಿತಿಯನ್ನು ಕದಿಯುವ ಸಾದ್ಯತೆ ಕೂಡ ಇದೆ. ಇದೇ ಕಾರಣಕ್ಕೆ ಸ್ಪ್ಯಾಮ್ ಕರೆಗಳನ್ನು ತಡೆಗಟ್ಟುವುದು ಕೂಡ ಒಂದು ಸವಾಲಿನ ಕೆಲಸವೇ ಸರಿ. ಇದರಿಂದ ಟ್ರಾಯ್ ತನ್ನ ಹೊಸ ನಿಯಮಗಳ ಮೂಲಕ ಸ್ಪ್ಯಾಮ್ ಕರೆಗಳಿಗೆ ಫುಲ್‌ಸ್ಟಾಪ್ ಇಡಲು ಮುಂದಾಗಿದೆ.
AI ಸ್ಪ್ಯಾಮ್ ಫಿಲ್ಟರ್
ಟ್ರಾಯ್‌ನ ಹೊಸ ನಿಯಮದ ಪ್ರಕಾರ ಟೆಲಿಕಾಂ ಆಪರೇರ್‌ಗಳು ತಮ್ಮ ಕರೆ ಮತ್ತು ಸಂದೇಶ ಸೇವೆಗಳಲ್ಲಿ AI ಸ್ಪ್ಯಾಮ್ ಫಿಲ್ಟರ್‌ಗಳನ್ನು ಇನ್‌ಸ್ಟಾಲ್ ಮಾಡುವುದು ಕಡ್ಡಾಯವಾಗಿದೆ. ಇದರಿಂದ ಬಳಕೆದಾರರಿಗೆ ಸ್ಪ್ಯಾಮ್ ಕರೆಗಳು ತಲುಪದಂತೆ ತಡೆಯಬಹುದಾಗಿದೆ ಎಂದು ಹೇಳಲಾಗಿದೆ. ಈ AI ಸ್ಪ್ಯಾಮ್ ಫಿಲ್ಟರ್‌ಗಳು ಸ್ಪ್ಯಾಮ್ ಕರೆಗಳ ಜಾಲವನ್ನು ಪತ್ತೆ ಹಚ್ಚುವ ಕೆಲಸ ಮಾಡಲಿದೆ. ವಿವಿಧ ಮೂಲಗಳಿಂದ ಬರುವ ನಕಲಿ ಕರೆಗಳನ್ನು ಪತ್ತೆಹಚ್ಚುವ ಮೂಲಕ ಅವುಗಳ ಹಾವಳಿಯನ್ನು ತಡೆಯಲಿದೆ.
ಗ್ರಾಹಕರ ಗೌಪ್ಯತೆ ಕಾಳಜಿ ವಹಿಸುತ್ತಿರುವ ಟೆಲಿಕಾಂ ಆಪರೇಟರ್‌ಗಳು
ಇನ್ನು AI ಸ್ಪ್ಯಾಮ್ ಫಿಲ್ಟರ್‌ಗಳನ್ನು ಅಳವಡಿಸುವ ಬಗ್ಗೆ ಟೆಲಿಕಾಂಗಳು ವಿರೋದ ವ್ಯಕ್ತಪಡಿಸಿದ್ದವು ಎನ್ನಲಾಗಿದೆ. ಗ್ರಾಹಕರ ಗೌಪ್ಯತೆಯ ದೃಷ್ಟಿಯಿಂದ ಎಐ ಫಿಲ್ಟರ್ ಅನ್ನು ವಿರೋದ ವ್ಯಕ್ತಪಡಿಸಿದ್ದವು, ಆದರೆ ಇದೀಗ ಈ ಎಲ್ಲಾ ಸಮಸ್ಯೆ ಬಗೆ ಹರಿದಿದ್ದು ಶೀಘ್ರದಲ್ಲೇ ಎಐ ಸ್ಪ್ಯಾಮ್ ಫಿಲ್ಟರ್ ಅನ್ನು ಅಳವಡಿಸಲಿವೆ.

ಏರ್‌ಟೆಲ್, ಜಿಯೋ ಟೆಲಿಕಾಂಗಳು ಎಐ ಸ್ಪ್ಯಾಮ್ ಫಿಲ್ಟರ್ ಬಗ್ಗೆ ಏನು ಹೇಳಿವೆ?
ದೇಶದ ಟೆಲಿಕಾಂ ದೈತ್ಯ ಎನಿಸಿಕೊಂಡಿರುವ ಜಿಯೋ ಹೊಸ ಎಐ ಸ್ಪ್ಯಾಮ್ ಫಿಲ್ಟರ್ ಇನ್‌ಸ್ಟಾಲ್ ಮಾಡುವುದಕ್ಕೆ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ ಈ ಹೊಸ ಸೇವೆಯನ್ನು ಶೀಘ್ರದಲ್ಲೇ ಜಾರಿಗೊಳಿಸುವ ನಿರೀಕ್ಷೆಯಿದೆ. ಇನ್ನು ಏರ್‌ಟೆಲ್ ಕೂಡ ತನ್ನ ಸೇವೆಗಳಲ್ಲಿ ಸ್ಪ್ಯಾಮ್ ಕಾಲ್ ಫಿಲ್ಟರ್‌ಗಳನ್ನು ನಿಯೋಜಿಸುವುದಾಗಿ ಘೋಷಿಸಿದೆ. ಆದರೆ ಇದೇ ಸಮಯದಲ್ಲಿ ವಿ ಟೆಲಿಕಾಂ ಮತ್ತು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ನಿಂದ ಇನ್ನು ಕೂಡ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಹತ್ತು ಅಂಕೆಗಳ ಸ್ಪ್ಯಾಮ್ ಕರೆಗಳಿಗೆ ಕಡಿವಾಣ
ಇನ್ನು ಹತ್ತು ಅಂಕಿಗಳ ಸಂಖ್ಯೆ ಬಳಸಿಕೊಂಡು ಸ್ಪ್ಯಾಮರ್‌ಗಳು ಪ್ರಮೋಷನ್ ಕಾಲ್‌ಗಳನ್ನು ಮಾಡುವುದಕ್ಕೆ ಕಡಿವಾಣ ಬಿದ್ದಿದೆ. ಹತ್ತು ಅಂಕೆಗಳಿಂದ ಯಾವುದೇ ರೀತಿಯ ಪ್ರಮೋಷನ್ ಕಾಲ್‌ಗಳನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಟೆಲಿಕಾಂಗಳಿಗೆ ಟ್ರಾಯ್ ಆದೇಶ ನೀಡಿದೆ. ಈ ಮೂಲಕ ದೇಶದಲ್ಲಿ ಹೆಚ್ಚುತ್ತಿರುವ ಸ್ಪ್ಯಾಮ್ ಕರೆಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಟ್ರಾಯ್ ದೃಡ ನಿರ್ಧಾರವನ್ನು ತೆಗೆದುಕೊಂಡಿದೆ.


Click it and Unblock the Notifications








