Home
ಸುದ್ದಿಜಾಲ

ಟ್ರಾಯ್‌ನಿಂದ ಡಿಟಿಎಚ್‌ಗೆ ಹೊಸ ರೂಲ್ಸ್‌..! ಬರುತ್ತೆ ವಾಟರ್‌ಮಾರ್ಕ್‌, ಫಿಂಗರ್‌ಪ್ರಿಂಟ್‌..!

By Gizbot Bureau

ಸಾಕಷ್ಟು ಚರ್ಚೆ ಮತ್ತು ಸಮಾಲೋಚನೆಯ ನಂತರ ಡಿಟಿಎಚ್ ಮತ್ತು ಪ್ರಸಾರ ಉದ್ಯಮದಲ್ಲಿನ ನಿಯಮಗಳನ್ನು ನೋಡಿಕೊಳ್ಳುತ್ತಿರುವ ಟೆಲಿಕಾಂ ನಿಯಂತ್ರಕವು ವಿತರಣಾ ಪ್ಲಾಟ್‌ಫಾರ್ಮ್ ಆಪರೇಟರ್‌ಗಳ (ಡಿಪಿಒ) ಲೆಕ್ಕಪರಿಶೋಧನೆಯ ನಿಯಮಗಳನ್ನು ಬದಲಾಯಿಸಿದೆ. ಈ ವಿಷಯದಲ್ಲಿ ಟ್ರಾಯ್‌ನ ಹೊಸ ನಿಯಮಗಳು ಪರಸ್ಪರ ಸಂಪರ್ಕ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಆಡಿಟ್ ಆಡಳಿತವನ್ನು ಬಿಗಿಗೊಳಿಸುತ್ತಿದ್ದು, ಡಿಟಿಎಚ್‌ ಉದ್ಯಮದಲ್ಲಿ ಹೊಸ ಹಾದಿಯನ್ನು ತುಳಿದಂತಾಗಿದೆ.

ವಾರ್ಷಿಕ ಲೆಕ್ಕಪರಿಶೋಧನೆ

ವಾರ್ಷಿಕ ಲೆಕ್ಕಪರಿಶೋಧನೆ

ಹೊಸ ನಿಬಂಧನೆಗಳ ಪ್ರಕಾರ, ಆಪರೇಟರ್ ವಾರ್ಷಿಕ ಲೆಕ್ಕಪರಿಶೋಧನೆಯನ್ನು ನಿಗದಿಪಡಿಸಬೇಕು, ಅಂದರೆ, ಈ ಎರಡು ಲೆಕ್ಕಪರಿಶೋಧನೆಗಳ ನಡುವೆ ಕನಿಷ್ಠ ಆರು ತಿಂಗಳ ಅಂತರ ಹಾಗೂ ಗರಿಷ್ಠ ಹದಿನೆಂಟು ತಿಂಗಳ ಅಂತರವಿರಬೇಕು. ಈ ಹಿಂದೆ ಶೇ.10 ಎಂದು ನಿಗದಿಪಡಿಸಲಾದ ಷರತ್ತುಬದ್ಧ ಪ್ರವೇಶ ವ್ಯವಸ್ಥೆ (ಸಿಎಎಸ್) ಮತ್ತು ಚಂದಾದಾರರ ನಿರ್ವಹಣಾ ವ್ಯವಸ್ಥೆ (ಎಸ್‌ಎಂಎಸ್) ಗೆ ಅಗತ್ಯವಾದ ಕನಿಷ್ಠ ವಹಿವಾಟು ಸಾಮರ್ಥ್ಯವನ್ನು ಈಗ ಶೇ.5 ಕ್ಕೆ ಇಳಿಸಲಾಗಿದೆ. ಇದಷ್ಟೇ ಅಲ್ಲದೇ, ಹೊಸ ಅಂತರ್ಸಂಪರ್ಕ ನಿಯಮಗಳು ಡಿಆರ್‌ಎಂ, ಲೆಕ್ಕಪರಿಶೋಧನೆಯ ವೇಳಾಪಟ್ಟಿ, ಫಿಂಗರ್‌ಪ್ರಿಂಟಿಂಗ್ ಮತ್ತು ಇನ್ನಿತರ ವಿಷಯಗಳನ್ನು ಟ್ರಾಯ್‌ ನಿಬಂಧನೆಯಲ್ಲಿ ಸೇರಿಸಿದೆ,'

ಸೆಟ್-ಟಾಪ್ ಬಾಕ್ಸ್‌ಗಳ ಫಿಂಗರ್‌ಪ್ರಿಂಟಿಂಗ್

ಸೆಟ್-ಟಾಪ್ ಬಾಕ್ಸ್‌ಗಳ ಫಿಂಗರ್‌ಪ್ರಿಂಟಿಂಗ್

ಫಿಂಗರ್‌ಪ್ರಿಂಟ್‌ ಮತ್ತು ಚಾನೆಲ್‌ಗಳಲ್ಲಿನ ನೆಟ್‌ವರ್ಕ್ ಲಾಂಛನದ ವಾಟರ್‌ಮಾರ್ಕ್‌ ಬಗ್ಗೆ ಪ್ರಮುಖ ಚರ್ಚೆಯಾಗಿದ್ದು, ಹೊಸ ತಿದ್ದುಪಡಿ ನಿಯಮಗಳಂತೆ ಇನ್ಮುಂದೆ ಮಾರಾಟ ಮಾಡುವ ಸೆಟ್-ಟಾಪ್ ಬಾಕ್ಸ್‌ಗಳು ರಹಸ್ಯ ಬೆರಳಚ್ಚನ್ನು ಬೆಂಬಲಿಸಬೇಕು. ಉದ್ಯಮದ ಮಾಹಿತಿಯ ಪ್ರಕಾರ, ನಿಯೋಜಿಸಲಾದ ಎಲ್ಲಾ ಎಸ್‌ಟಿಬಿಗಳು ಎರಡೂ ರೀತಿಯ ಫಿಂಗರ್‌ಪ್ರಿಂಟಿಂಗ್‌ನೊಂದಿಗೆ ಬರುವುದಿಲ್ಲ ಎಂದು ಖಚಿತಪಡಿಸಲಾಗಿದೆ. ಕೆಲವು ಡಿಪಿಒಗಳು 2017ರ ಮೊದಲು ನಿಯೋಜಿಸಲಾದ ಎಸ್‌ಟಿಬಿಗಳು ಪರಿವರ್ತಿಸುವ ಫಿಂಗರ್‌ಪ್ರಿಂಟಿಂಗ್‌ನೊಂದಿಗೆ ಬರುವುದಿಲ್ಲ ಎನ್ನಲಾಗಿದ್ದು, ಬಿಐಎಸ್ ಮಾನದಂಡಗಳು ಸಹ ಬಹಿರಂಗ ಮತ್ತು ರಹಸ್ಯ ಬೆರಳಚ್ಚು ಎರಡನ್ನೂ ಕಡ್ಡಾಯಗೊಳಿಸಿಲ್ಲ,

ಪೇ ಚಾನೆಲ್‌ಗಳ ವಾಟರ್‌ಮಾರ್ಕಿಂಗ್

ಪೇ ಚಾನೆಲ್‌ಗಳ ವಾಟರ್‌ಮಾರ್ಕಿಂಗ್

ಇಂಟರ್‌ಕನೆಕ್ಟ್ ನಿಯಮಗಳ ಹೊಸ ಅನುಷ್ಠಾನದ ನಂತರ ಅಂತಿಮಗೊಳಿಸಲಾದ ಮತ್ತೊಂದು ವಿಷಯವೆಂದರೆ ಪೇ-ಟಿವಿ ಚಾನೆಲ್‌ಗಳಲ್ಲಿ ನೆಟ್‌ವರ್ಕ್ ವಾಟರ್‌ಮಾರ್ಕ್ ಹಾಕುವುದು. ಹೊಸ ನಿಯಮಗಳು ಜಾರಿಗೆ ಬಂದ ನಂತರ ನಿಯೋಜಿಸಲಾದ ಎನ್‌ಕೋಡರ್‌ಗಳು ಪೇ ಚಾನೆಲ್‌ಗಳಲ್ಲಿ ನೆಟ್‌ವರ್ಕ್ ಲೋಗೋದ ವಾಟರ್‌ಮಾರ್ಕಿಂಗ್ ಅನ್ನು ಎನ್‌ಕೋಡರ್‌ಗಳ ಕೊನೆಯಲ್ಲಿ ಬೆಂಬಲಿಸಬೇಕು ಎಂದು ಪ್ರಾಧಿಕಾರ ಹೇಳಿದೆ. ಇದಕ್ಕಾಗಿ, ಡಿಪಿಒಗಳಿಗೆ ಎರಡು ಆಯ್ಕೆಗಳನ್ನು ನೀಡಲಾಗಿದೆ.

ಸಿಎಎಸ್‌, ಎಸ್‌ಎಂಎಸ್‌ ನಿರ್ವಹಣೆಗೆ ಶೇ.5

ಸಿಎಎಸ್‌, ಎಸ್‌ಎಂಎಸ್‌ ನಿರ್ವಹಣೆಗೆ ಶೇ.5

ವಿತರಣಾ ಪ್ಲಾಟ್‌ಫಾರ್ಮ್ ಆಪರೇಟರ್‌ಗಳ (ಡಿಪಿಒ) ಮೂಲಕ ಚಂದಾದಾರರ ಸೇವೆಗಳನ್ನು ಸಕ್ರಿಯಗೊಳಿಸಲು ಮತ್ತು ನಿಷ್ಕ್ರಿಯಗೊಳಿಸಲು ಬಳಸಲಾಗುವ ಸಿಎಎಸ್ ಮತ್ತು ಎಸ್‌ಎಂಎಸ್‌ನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಸ್ಥಾಪಿಸಿದ ಹೊಸ ನಿಯಮಗಳಿಂದ ನಿಯಂತ್ರಿಸಲಾಗುತ್ತದೆ. ಹೊಸ ಅಂತರ್ಸಂಪರ್ಕ ನಿಯಮಗಳ ಪ್ರಕಾರ, ಡಿಪಿಒಗಳು 24 ಗಂಟೆಗಳೊಳಗೆ ವಿತರಕರ ಕನಿಷ್ಠ ಶೇ.5ರಷ್ಟು ಚಂದಾದಾರರ ಸೇವೆಗಳನ್ನು ಅಥವಾ ಎಸ್‌ಟಿಬಿಗಳನ್ನು ಸಕ್ರಿಯಗೊಳಿಸಲು ಅಥವಾ ನಿಷ್ಕ್ರಿಯಗೊಳಿಸಲು ಸಾಧ್ಯವಾಗುತ್ತದೆ. ಈ ಹಿಂದೆ, ಇದರ ಪ್ರಮಾಣ ಶೇ.10ರಷ್ಟಿತ್ತು.

Best Mobiles in India

English summary
Trai Introduces New Interconnect Regulations For DPOs; Watermarking, Fingerprinting, More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+