ಉಮಾಂಗ್ ಆಪ್‌ನಲ್ಲಿ ಇನ್ಮುಂದೆ ಟ್ರಾಯ್ ಸೇವೆಗಳು ಲಭ್ಯ..!
ಡಿಜಿಟಲ್ ಇಂಡಿಯಾದ ಭಾಗವಾಗಿ ಜನರನ್ನು ಡಿಜಿಟಲಿಕರಣಗೊಳಿಸುತ್ತಿರುವ ಭಾರತ ಸರ್ಕಾರ ಮತ್ತು ಟ್ರಾಯ್ ಮತ್ತೊಂದು ಹೆಜ್ಜೆ ಮುಂದಿಟ್ಟಿವೆ. ಮಂಗಳವಾರ ಟ್ರಾಯ್ ತನ್ನ ಆಪ್‌ಗಳಾದ ಡಿಎನ್‌ಡಿ 2.0 ಮತ್ತು ಮೈ ಕಾಲ್ ಆಪ್‌ಗಳನ್ನು ಸರ್ಕಾರದ ಡಿಜಿಟಲ್ ಫ್ಲಾಟ್‌ಮಾರ್ಮ್ ಆದ ಉಮಾಂಗ್ ಆಪ್‌ನಲ್ಲಿ ಸೇರಿಸುವ ಘೋಷಣೆಯನ್ನು ಮಾಡಿದೆ.

(UMANG- Unified Mobile Application for New Age Governance) ಈ ಆಪ್‌ನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯದ ರಾಷ್ಟ್ರೀಯ ಇ-ಆಡಳಿತ ವಿಭಾಗ ಅಭಿವೃದ್ಧಿಪಡಿಸಿದ್ದು, ಇದರಿಂದ ಸಾರ್ವಜನಿಕರು ಅನೇಕ ಸರ್ಕಾರಿ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಪಡೆಯಲು ಸಹಾಯಕವಾಗುತ್ತದೆ.

ಎಲ್ಲಾ ಡಿಜಿಟಲ್ ಸೇವೆಗಳು ಲಭ್ಯ
ರತೀಯ ನಾಗರೀಕರು ಭಾರತದಾದ್ಯಂತ ಇರುವ ಯಾವುದೇ ಇ ಆಡಳಿತ ಸೇವೆಯನ್ನು ಉಮಾಂಗ್‌ನಲ್ಲಿ ಪಡೆಯಬಹುದಾಗಿದೆ. ಕೇಂದ್ರದಿಂದ ಸ್ಥಳೀಯ ಸಂಸ್ಥೆಗಳವರೆಗೆ ದೊರೆಯುವ ನಾಗರಿಕ ಕೇಂದ್ರಿತ ಸೇವೆಗಳನ್ನು ಪಡೆಯಬಹುದು ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಮಂಗಳವಾರ ಹೇಳಿದೆ.

50 ಲಕ್ಷ ಉಮಾಂಗ್ ಡೌನಲೋಡ್
ಉಮಾಂಗ್ ಆಪ್ ಇನ್‌ಸ್ಟಾಲ್ ಮಾಡಿಕೊಂಡು ಟ್ರಾಯ್ ಸೇವೆಗಳನ್ನು ಪಡೆಯಬಹುದು ಎಂದು ಟ್ರಾಯ್ ಹೇಳಿದ್ದು, ಇದುವರೆಗೂ ಉಮಾಂಗ್ ಆಪ್ 50 ಲಕ್ಷ ಡೌನ್‌ಲೋಡ್ ಆಗಿದ್ದು, ಪ್ರತ್ಯೇಕವಾಗಿ ಟ್ರಾಯ್ ಆಪ್‌ಗಳನ್ನು 4 ಲಕ್ಷ ಜನ ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಹೇಳಿದೆ.

ಮೈ ಕಾಲ್ ಆಪ್
ಟ್ರಾಯ್‌ನ ಮೈ ಕಾಲ್ ಆಪ್ ರಿಯಲ್ ಟೈಮ್‌ನಲ್ಲಿ ವಾಯ್ಸ್ ಗುಣಮಟ್ಟದ ಅನುಭವವನ್ನು ಮಾಪನ ಮಾಡಲು ಸಹಾಯವಾಗುತ್ತದೆ. ಇದರಿಂದ ಟ್ರಾಯ್ ಗ್ರಾಹಕರ ಅನುಭವದ ಮಾಹಿತಿಯನ್ನು ಟೆಲಿಕಾಂ ಆಪರೇಟರ್‌ಗಳಿಗೆ ಅನಾಮಧೇಯವಾಗಿ ಕಳುಹಿಸಿ ಕರೆ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ.

ಡಿಎನ್‌ಡಿ 2.0
ಡಿಎನ್‌ಡಿ ಆಪ್ ಸ್ಮಾರ್ಟ್‌ಫೋನ್ ಗ್ರಾಹಕರು ಅನ್‌ವಾಂಟೆಡ್ ಕರೆಗಳು ಹಾಗೂ ಎಸ್‌ಎಂಎಸ್‌ಗಳು ಬರದಂತೆ ತಡೆಯುತ್ತದೆ. ಇದರಿಂದ ಗ್ರಾಹಕರಿಗೆ ಅನುಕೂಲವಾಗಲಿದ್ದು, ಬೇಡದ ಕರೆಗಳನ್ನು ಗ್ರಾಹಕರು ತಡೆಯುವ ಅಧಿಕಾರವನ್ನು ಹೊಂದಲಿದ್ದಾರೆ. ಈ ಕಾರಣಕ್ಕಾಗಿಯೇ ಆಪಲ್ ಮತ್ತು ಟ್ರಾಯ್ ಮಧ್ಯೆ ಮುಸುಕಿನ ಗುದ್ದಾಟವು ಸಹ ನಡೆಯುತ್ತಿದೆ.


Click it and Unblock the Notifications