ಟ್ರೂಕಾಲರ್ ಮಾದರಿಯ ಹೊಸ ಕಾಲರ್ ಐಡಿ ಫೀಚರ್ಸ್‌ ಪರಿಚಯಿಸಲು ಟ್ರಾಯ್‌ ಸಿದ್ಧತೆ!

|

ಟ್ರೂ ಕಾಲರ್‌ ಅಪ್ಲಿಕೇಶನ್ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುವ ಹೊಸ ಕಾಲರ್‌ ಐಡಿ ಫೀಚರ್ಸ್‌ ಪರಿಚಯಿಸಲು ಟ್ರಾಯ್‌ ಸಿದ್ಧತೆ ನಡೆಸಿದೆ. ಸದ್ಯ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಶೀಘ್ರದಲ್ಲೇ ಈ ಫೀಚರ್ಸ್‌ ಅನ್ನು ಪರಿಚಯಿಸಲಿದೆ ಎನ್ನಲಾಗಿದೆ. ಇನ್ನು ಈ ಫೀಚರ್ಸ್‌ ಮೂಲಕ ನಿಮ್ಮ ಫೋನ್‌ನಲ್ಲಿ ಯಾವುದೇ ಅಪರಿಚಿತ ಕರೆ ಬಂದರು ಸ್ಕ್ರೀನ್‌ ಮೇಲೆ ಫ್ಲ್ಯಾಷ್ ಮಾಡಲು ಸಿಸ್ಟಂ KYC-ಆಧಾರಿತ ಕಾಲರ್ ಹೆಸರನ್ನು ಆಕ್ಟಿವ್‌ ಮಾಡಲಿದೆ.

ಟ್ರೂ ಕಾಲರ್‌

ಹೌದು, ಟ್ರೂ ಕಾಲರ್‌ ಮಾದರಿಯ ಕಾಲರ್‌ ಐಡಿಯನ್ನು ಪರಿಚಯಿಸಲು ಟ್ರಾಯ್‌ ಮುಂದಾಗಿದೆ. ಇದಕ್ಕಾಗಿ ತನ್ನ ಇತ್ತೀಚಿನ ಕಾಲರ್ ಐಡಿ ಪ್ಲಾನ್‌ ಮೂಲಕ ಇದೇ ರೀತಿಯ ಸೇವೆಗಳನ್ನು ನೀಡುವ ದೇಶದಲ್ಲಿ ಟ್ರೂಕಾಲರ್ ಅನ್ನು ಬದಲಿಸುವ ಗುರಿಯನ್ನು ಹೊಂದಿದೆ. ಟ್ರೂ ಕಾಲರ್‌ನಲ್ಲಿ ಅಪರಿಚಿತ ವ್ಯಕ್ತಿಯ ಕರೆ ಬಂದಾಗ ಅವರ ಹೆಸರನ್ನು ತಿಳಿಯುವ ಪ್ರಯತ್ನ ಮಾಡಬಹುದು. ಇದಕ್ಕಾಘಿ ಟ್ರೂ ಕಿಆಲರ್‌ ಯಾವುದೇ ಕೆವೈಸಿ ಮಾದರಿಯನ್ನು ಆಧರಿಸಿಲ್ಲ. ಆದರೆ ಸರ್ಕಾರ ಪರಿಚಯಿಸುವ ಕಾಲರ್‌ ಐಡಿ ಸಾಕಷ್ಟು ವಿಶೇಷವಾಗಿರಲಿದೆ. ಹಾಗಾದ್ರೆ ಸರ್ಕಾರದ ಹೊಸ ಕಾಲರ್‌ ಐಡಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ರೂ ಕಾಲರ್‌

ಟ್ರೂ ಕಾಲರ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕೆವೈಸಿಯನ್ನು ಆಧರಿಸಿಲ್ಲ. ಬದಲಿಗೆ ಬಳಕೆದಾರರು ಸೆಟ್‌ ಮಾಡಿರುವ ಆಧಾರದ ಮೇಲೆ ಅಪರಿಚಿತ ವ್ಯಕ್ತಿಗಳ ಹೆಸರನ್ನು ತಿಳಿಸಲಿದೆ. ಆದರೆ ಸರ್ಕಾರ ಪರಿಚಯಿಸಲು ಮುಂದಾಗಿರುವ ಹೊಸ ಕಾಲರ್‌ ಐಡಿ KYCಯನ್ನು ಆಧರಿಸಲಿದೆ. ಸದ್ಯ ಟೆಲಿಕಾಂ ಇಲಾಖೆ (DoT) ಕಾಲರ್ ಐಡಿ ಫೀಚರ್ಸ್‌ ಕೆಲಸವನ್ನು ಪ್ರಾರಂಭಿಸಲು TRAI ಗೆ ಒಪ್ಪಿಗೆ ನೀಡಿದೆ. ಈ ಫೀಚರ್ಸ್‌ ಮುಂದಿನ ಒಂದೆರಡು ತಿಂಗಳಲ್ಲಿ ಅದರ ಕೆಲಸವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

ಕಾಲರ್‌ಐಡಿ

ಇನ್ನು ಹೊಸ ಕಾಲರ್‌ಐಡಿ ಫೀಚರ್ಸ್‌ ಮುಂದಿನ ದಿನಗಳಲ್ಲಿ ಯಾರಾದರೂ ಕರೆ ಮಾಡಿದಾಗ KYC ಯ ಪ್ರಕಾರದ ಹೆಸರನ್ನು ಪ್ರದರ್ಶಿಸಲಿದೆ. ಟೆಲಿಕಾಂ ಕಂಪನಿಗಳು ಮಾಡಿದ KYC ಗೆ ಅನುಗುಣವಾಗಿ ಫೋನ್ ಪರದೆಯಲ್ಲಿ ಹೆಸರು ಕಾಣಿಸಿಕೊಳ್ಳುವ ಯಾಂತ್ರಿಕ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ. ಅಲ್ಲದೆ ಕಾಲರ್ ಐಡಿ ಫೀಚರ್ಸ್‌ ಅನ್ನು ಬಳಕೆದಾರರು ಬಳಸಲೇಬೇಕೆಂಬ ಒತ್ತಡವನ್ನು ಹೇರಲಾಗುವುದಿಲ್ಲ ಎಂದು ಟ್ರಾಯ್‌ ಹೇಳಿದೆ. ಅಲ್ಲದೆ ಚಂದಾದಾರರು ತಮ್ಮ ಹೆಸರನ್ನು ಪ್ರದರ್ಶಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿರುತ್ತಾರೆ. ಇದು ಸ್ಪ್ಯಾಮ್ ಕರೆಗಳನ್ನು ಕಂಟ್ರೋಲ್‌ ಮಾಡಲು ಸಾಧ್ಯವಾಗಲಿದೆ.

ಸ್ಪ್ಯಾಮ್

ಸ್ಪ್ಯಾಮ್ ಮತ್ತು ಸ್ಕ್ಯಾಮ್ ಕರೆಗಳ ಬೆದರಿಕೆಯನ್ನು ಕೊನೆಗೊಳಿಸಲು ಹೊಸ ಕಾಲರ್‌ ಐಡಿ ಅವಶ್ಯಕವಾಗಿದೆ. ಏಕೆಂದರೆ ಟ್ರೂಕಾಲರ್‌ನ ಕೆವೈಸಿ ಆಧಾರವಿಲ್ಲದ ಮಾಹಿತಿ ಪ್ರಶ್ನಾರ್ಹವಾಗಿರುವುದರಿಂದ ಹೆಚ್ಚಿನ ಸತ್ಯಾಂಶದ ನಿರೀಕ್ಷೆಯಿಲ್ಲ. ಆದರಿಂದ ಕೆವೈಸಿ ಆಧಾರಿತ ಮಾಹಿತಿ ನೀಡುವ ಕಾಲರ್‌ ಐಡಿಯನ್ನು ತರಲು ಟ್ರಾಯ್‌ ಮುಂದಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಬಳಕೆದಾರರಿಗೆ ಬರುವ ಸ್ಪ್ಯಾಮ್‌ ಮತ್ತು ಬೆದರಿಕೆಯ ಕರೆಗಳನ್ನು ತಡೆಯುವುದಕ್ಕೆ ಸಹಾಯವಾಗಲಿದೆ.

Best Mobiles in India

Read more about:
English summary
TRAI may soon introduce a Truecaller-like caller ID feature.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X