ಬ್ರೇಕಿಂಗ್!..ಇನ್ಮುಂದೆ 11 ಅಂಕೆಗಳಲ್ಲಿ ಬರಲಿದೆ ಮೊಬೈಲ್ ಫೋನ್ ನಂಬರ್!

|

ಮೊಬೈಲ್ ಫೋನ್ ಸಂಖ್ಯೆಯಲ್ಲಿನ ಅಂಕೆಗಳನ್ನು 10 ರಿಂದ 11 ಕ್ಕೆ ಹೆಚ್ಚಿಸುವ ಬಗ್ಗೆ ಟ್ರಾಯ್ ಸಾರ್ವಜನಿಕರ ಅಭಿಪ್ರಾಯವನ್ನು ಕೋರಿದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಟೆಲಿಕಾಂ ಸಂಪರ್ಕಗಳ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಹರಿಸುವ ಆಯ್ಕೆಯಾಗಿ ಈಗಿರುವ 10 ಅಂಕಿಗಳ ಬದಲಾಗಿ 11 ಅಂಕಿಗಳ ನಂಬರ್ ತರಲು ಟ್ರಾಯ್ ಚಿಂತಿಸಿದ್ದು, 2050ರ ವೇಳೆಗೆ ದೇಶದ ಅಗತ್ಯವನ್ನು ಪೂರೈಸಲು ಸುಮಾರು 2.6 ಬಿಲಿಯನ್ ಹೆಚ್ಚಿನ ಮೊಬೈಲ್ ಸಂಖ್ಯೆಗಳು ಬೇಕಾಗುತ್ತವೆ ಎಂದು ಅಂದಾಜಿಸಿದೆ.

2.6 ಬಿಲಿಯನ್ ಹೆಚ್ಚಿನ ಸಂಖ್ಯೆಗಳು

ಹೌದು, ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಮೆಷಿನ್ ಟು ಮೆಷಿನ್ ಸಂವಹನಕ್ಕಾಗಿ ಸರ್ಕಾರ ಈಗಾಗಲೇ 13-ಅಂಕಿಯ ಸಂಖ್ಯೆಯ ಸರಣಿಯನ್ನು ಪ್ರಾರಂಭಿಸಿದೆ. ಆದಾಗ್ಯೂ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರೈ) ಯ ಮೌಲ್ಯಮಾಪನದ ಪ್ರಕಾರ, 2050 ರ ವೇಳೆಗೆ ದೇಶದ ಅಗತ್ಯವನ್ನು ಪೂರೈಸಲು ಸುಮಾರು 2.6 ಬಿಲಿಯನ್ ಹೆಚ್ಚಿನ ಸಂಖ್ಯೆಗಳು ಬೇಕಾಗುತ್ತವೆ. ಹಾಗಾಗಿ, ಟೆಲಿಕಾಂ ಸಂಪರ್ಕಗಳ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಹರಿಸುವ ಆಯ್ಕೆಗಳಲ್ಲಿ ಇದು ಕೂಡ ಒಂದಾಗಿದೆ.

ಹೆಚ್ಚುವರಿ 260 ಕೋಟಿ ಮೊಬೈಲ್ ಸಂಖ್ಯೆ

9,8 ಮತ್ತು 7ರಿಂದ ಆರಂಭವಾಗುವ 10 ಅಂಕಿಗಳ ಸಂಖ್ಯೆಯನ್ನು ಬಳಸಿ, 210 ಕೋಟಿ ಮೊಬೈಲ್ ಸಂಖ್ಯೆ ವಿತರಿಸಲು ಸಾಧ್ಯವಿದೆ. ಈಗಿರುವ ನಂಬರ್ ಹೊರತುಪಡಿಸಿ, 2050ರ ವೇಳೆಗೆ ಹೆಚ್ಚುವರಿ 260 ಕೋಟಿ ಮೊಬೈಲ್ ಸಂಖ್ಯೆಗಳ ಅವಶ್ಯಕತೆ ಬೀಳಲಿದೆ. ಪ್ರಸ್ತುತ ಅತಿವೇಗದಲ್ಲಿ ಬೆಳೆಯುತ್ತಿರುವ ಮೊಬೈಲ್ ಮಾರುಕಟ್ಟೆಯ ಬೇಡಿಕೆ ಪೂರೈಸಲು ಹೊಸ ನಂಬರ್ ಚಲಾವಣೆಗೆ ತರುವುದು ಟ್ರಾಯ್‌ಗೆ ಅನಿವಾರ್ಯವಾಗಿದ್ದು, ಈ ಬಗ್ಗೆ ಟ್ರಾಯ್ ಸಾರ್ವಜನಿಕರ ಅಭಿಪ್ರಾಯವನ್ನು ಕೋರಿವ ಮೂಲಕ ಕ್ರಮಕ್ಕೆ ಮುಂದಾಗಿದೆ.

ಶೇಕಡಾ 70 ರಷ್ಟು ಬಳಕೆ

ಯುಎನ್ ವರದಿಯ ಪ್ರಕಾರ, ಭಾರತವು 2027 ರ ವೇಳೆಗೆ ಚೀನಾವನ್ನು ಮೀರಿಸುವ ಮೂಲಕ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲಿದೆ. ಸಂಖ್ಯೆಯ ಸಂಪನ್ಮೂಲಗಳ ಶೇಕಡಾ 70 ರಷ್ಟು ಬಳಕೆಯಾಗಿದ್ದರೂ, 2050 ರಲ್ಲಿ ಈ ದೇಶದಲ್ಲಿ ಕೆಲಸ ಮಾಡುವ ಮೊಬೈಲ್ ದೂರವಾಣಿಗಳನ್ನು ಪೂರೈಸಲು 4.68 ಬಿಲಿಯನ್ ಸಂಖ್ಯೆಗಳು ಸಾಕು ಎಂದು ಟ್ರಾಯ್ ಹೇಳಿದೆ. ಹಾಗಾಗಿ, ಮೊಬೈಲ್‌ಗಾಗಿ 11 ಅಂಕೆಗಳ ಸಂಖ್ಯೆಯ ಯೋಜನೆಗೆ ಹೋಗುವುದರ ಬಗ್ಗೆ ಟ್ರಾಯ್ ಅಭಿಪ್ರಾಯಪಟ್ಟಿದೆ.

ಒಂದಕ್ಕಿಂತ ಹೆಚ್ಚಿನ ಸಂಖ್ಯೆ

ಮೊಬೈಲ್ ಗ್ರಾಹಕರ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜತೆಗೆ ಹಲವರು ಒಂದಕ್ಕಿಂತ ಹೆಚ್ಚಿನ ಸಂಖ್ಯೆಗಳನ್ನು ಹೊಂದುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಹೀಗಾಗಿ ಹೆಚ್ಚಿನ ಮೊಬೈಲ್ ಸಂಖ್ಯೆಗಳ ಅಗತ್ಯ ಎದುರಾಗಿದೆ. ಈ ಕುರಿತಾದ ಸಾಧ್ಯತೆ ಮತ್ತು ಆಯ್ಕೆಗಳನ್ನು ಪ್ರಸ್ತುತ ಟ್ರಾಯ್ ಪರಿಶೀಲಿಸುತ್ತಿದೆ. ಈ ಮೊದಲು 1993 ಮತ್ತು 2003ರಲ್ಲಿ ಟ್ರಾಯ್ ದೇಶದಲ್ಲಿ ನಂಬರ್ ಕ್ರಮವನ್ನು ಪರಿಷ್ಕರಿಸಿತ್ತು. 2003ರಲ್ಲಿ ಕೈಗೊಂಡ ನಂಬರ್ ಪರಿಷ್ಕರಣೆ ಕ್ರಮದಿಂದ 75 ಕೋಟಿ ಫೋನ್ ನಂಬರ್ ಸೃಷ್ಟಿಯಾಗಿದ್ದವು.

Most Read Articles
Best Mobiles in India

English summary
Telecom regulator Trai has sought public views on increasing the digits in a mobile phone number to 11 from 10 at present as one of the options to address rising demand for telecom connections in line with growing population. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more