Home
ಸುದ್ದಿಜಾಲ

ಹಗಲು ದರೋಡೆಗೆ ಬ್ರೇಕ್! ಫೋನ್‌ ಕರೆಗಳಿಗೆ ಬೇರೆ ರೀಚಾರ್ಜ್ ಪ್ಲಾನ್ ಮಾಡಿ: ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ಖಡಕ್​ ಸೂಚನೆ

ಟೆಲಿಕಾಂ ಕಂಪನಿಗಳ ಹಗಲು ದರೋಡೆಗೆ ಬ್ರೇಕ್ ಹಾಕಿದೆ ಟ್ರಾಯ್! ಡಾಟಾ ಇಲ್ಲದ ಸಾಮಾನ್ಯ ಫೋನ್‌ ಕರೆಗಳಿಗೆ ಬೇರೆ ರೀಚಾರ್ಜ್ ಪ್ಲ್ಯಾನ್ ಮಾಡಿ ಎಂದು ಖಡಕ್​ ಆದೇಶ ಹೊರಡಿಸಿದೆ. ಹೌದು, ಟೆಲಿಕಾಂ ನಿಯಂತ್ರಕ ಟ್ರಾಯ್‌ (TRAI) ಕರೆ ದರಗಳು ಮತ್ತು ಕರೆ-ಡೇಟಾ ನಿಯಮಗಳನ್ನು ಬದಲಾಯಿಸಿದೆ. ಡೇಟಾ ಇಲ್ಲದೆ ಕೇವಲ ಕರೆ - ಎಸ್‌ಎಂಎಸ್‌ ಬಳಸುವವರಿಗೆ ಪ್ರತ್ಯೇಕ ಪ್ಲ್ಯಾನ್ ಬಿಡುಗಡೆ ಮಾಡಬೇಕು. ಮತ್ತು 90 ದಿನಗಳ ವ್ಯಾಲಿಡಿಟಿಯನ್ನು ತೆಗೆದು 365 ದಿನಗಳವರೆಗೆ ವ್ಯಾಲಿಡಿಟಿ ನೀಡುವಂತೆ ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ.

ಹೌದು, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಹೊಸ ಗ್ರಾಹಕ ರಕ್ಷಣೆ ನಿಯಮಗಳನ್ನು ಪರಿಚಯಿಸಿದೆ. ಇದರಿಂದ ಗ್ರಾಹಕರಿಗೆ ಹೆಚ್ಚು ಅನುಕೂಲ ಆಗಲಿದೆ. ಇದು ಟೆಲಿಕಾಂ ನೀತಿಗಳಲ್ಲಿ ಹಲವಾರು ಹೊಸ ಗ್ರಾಹಕ ಸ್ನೇಹಿ ಬದಲಾವಣೆಗಳಿಗೆ ಮುನ್ನುಡಿ ಆಗುತ್ತದೆ. ಕೇವಲ ವಾಯ್ಸ್ ಕಾಲ್​ ಮತ್ತು ಎಸ್​ಎಮ್​ಎಸ್ ಪ್ರಯೋಜನಗಳೊಂದಿಗೆ ಟಾರಿಫ್ ಪ್ಲ್ಯಾನ್​ ಬಿಡುಗಡೆ ಮಾಡಲು ಅವಕಾಶ ನೀಡುತ್ತದೆ. ಈ ಮೂಲಕ ಟೆಲಿಕಾಂ ಕಂಪನಿಗಳ ಹಗಲು ದರೋಡೆಗೆ ಟ್ರಾಯ್ ಕಡಿವಾಣ ಹಾಕಿದಂತಾಗಿದೆ.

TRAI: ಫೋನ್‌ ಕರೆಗಳಿಗೆ ಬೇರೆ ರೀಚಾರ್ಜ್ ಪ್ಲಾನ್ ಮಾಡಿ: ಟ್ರಾಯ್ ಖಡಕ್ ಆದೇಶ

90 ದಿನಗಳ ಮಿತಿಯನ್ನು 365 ದಿನಗಳಿಗೆ ಹೆಚ್ಚಿಸಿ

ಗ್ರಾಹಕರಿಗೆ ಅನುಕೂಲವಾಗುವಂತೆ ಎಸ್‌ಟಿವಿ (ವಿಶೇಷ ಟಾರಿಫ್​ ವೋಚರ್) ಮಿತಿಯನ್ನು 90 ದಿನಗಳಿಂದ 365 ದಿನಗಳವರೆಗೆ ಹೆಚ್ಚಿಸುವಂತೆ ಟ್ರಾಯ್ ಆದೇಶಿಸಿದೆ. ವಿಶೇಷವಾಗಿ ಟೆಲಿಕಾಂ ಕಂಪನಿಗಳಿಂದ ಎಸ್‌ಟಿವಿ ಪ್ಲ್ಯಾನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಮತ್ತು ಸಾಮಾನ್ಯ ಪ್ಲ್ಯಾನ್‌ಗಳಿಗಿಂತ ಅಗ್ಗವಾಗಿದೆ.ಇವು ಗ್ರಾಹಕರಿಗೆ ವಿವಿಧ ಪ್ರಯೋಜನಗಳನ್ನು ನೀಡುತ್ತವೆ. ಇದಲ್ಲದೆ, ಆಪರೇಟರ್‌ಗಳಿಗೆ ವಿವಿಧ ಮುಖಬೆಲೆಯ ಟಾಪ್ ಅಪ್ ವೋಚರ್‌ಗಳನ್ನು ಹೊಂದಲು ಟೆಲಿಕಾಂ ನಿಯಂತ್ರಣ ಸಂಸ್ಥೆ ಸೂಚಿಸಿದೆ. ಇದು ಕನಿಷ್ಠ 10 ರೂ. ನಿಂದ ಪ್ರಾರಂಭವಾಗಬೇಕು ಎಂದು ಟ್ರಾಯ್​ ತಿಳಿಸಿದೆ.

150 ಮಿಲಿಯನ್ 2G ಬಳಕೆದಾರರಿಗೆ ಸಹಾಯ

ಟ್ರಾಯ್‌ನ ಹೊಸ ಗ್ರಾಹಕ ರಕ್ಷಣೆ ನಿಯಮಗಳಿಂದ ಸುಮಾರು 150 ಮಿಲಿಯನ್ 2G ಬಳಕೆದಾರರಿಗೆ ಮತ್ತು ಎರಡು ಸಿಮ್ ಕಾರ್ಡ್‌ ಹೊಂದಿರುವವರಿಗೆ ಸಹಾಯವಾಗುವ ನಿರೀಕ್ಷೆಯಿದೆ. ಇವುಗಳಲ್ಲಿ ಒಂದನ್ನು ವಾಯ್ಸ್‌ ಕಾಲ್‌ಗಳು ಮತ್ತು ಎಸ್​ಎಮ್​ಎಸ್​ಗಾಗಿ ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಗ್ರಾಹಕರು ತಾವು ಬಳಸುವ ಸೇವೆಗಳಿಗೆ ಮಾತ್ರ ಹಣ ಪಾವತಿಸಬೇಕಾಗಿದೆ.

ಟ್ರಾಯ್‌, ವೃದ್ಧರು ಹಾಗೂ ಮನೆಗಳಲ್ಲಿ ಬ್ರಾಡ್‌ಬ್ಯಾಂಡ್‌ ಹೊಂದಿರುವವರಿಗೆ ಇಂಟರ್‌ನೆಟ್‌ಗೆ ರೀಚಾರ್ಜ್‌ ಮಾಡಿಸುವ ಅವಶ್ಯಕತೆ ಇರದಿರುವುದನ್ನು ಗಮನಿಸಿದೆ. ಕೇವಲ ಕರೆ ಹಾಗೂ ಸಂದೇಶ ರವಾನೆಗೆಂದು ಪ್ರತ್ಯೇಕ ದರಪಟ್ಟಿ ತಯಾರಿಸಲು ಸೂಚಿಸಿದೆ. ಈ ಮೂಲಕ ಬಳಕೆದಾರರು ತಾವು ಬಳಸುವ ಸೇವೆಗಳಿಗಷ್ಟೇ ಹಣ ಪಾವತಿಸುವಂತಾಗುತ್ತದೆ. ವೌಚರ್‌ಗಳಿಗೆ ಯಾವುದೇ ಬೆಲೆಯನ್ನು ನಿಗದಿಪಡಿಸಲು ಅನುಮತಿಸಿರುವ ಟ್ರಾಯ್‌, 10 ರೂ. ರೀಚಾರ್ಜ್‌ ಕೂಪನ್‌ ಕೂಡ ಒದಗಿಸಬೇಕು ಎಂದು ಹೇಳಿದೆ.

ಗ್ರಾಹಕರು ಕೊಟ್ಟ ಹಣಕ್ಕೆ ಹೆಚ್ಚಿನ ಸೇವೆ

ಒಟ್ಟಾರೆ, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಕರೆ ದರಗಳು ಹಾಗೂ ಕರೆ ಡೇಟಾ ನಿಯಮಗಳನ್ನು ಬದಲಿಸಿದೆ. ಈ ಪ್ರಕಾರ ಡೇಟಾ ಬೇಡ ಕೇವಲ ಕರೆ - ಎಸ್‌ಎಂಎಸ್ ಪ್ಲ್ಯಾನ್‌ ಸಾಕು ಎಂದು ಬಯಸುವವರಿಗೆ ಪ್ರತ್ಯೇಕ ಯೋಜನೆ ಬಿಡುಗಡೆ ಮಾಡಲು ಸೂಚಿಸಿದೆ. ಟೆಲಿಕಾಂ ಪ್ರಾಧಿಕಾರವು ಗ್ರಾಹಕರ ಸಮೀಕ್ಷೆಗಳನ್ನು ಪರಿಗಣಿಸಿ ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ. ಇದಲ್ಲದೆ, ಗ್ರಾಹಕರು ತಾವು ನೀಡಿದ ಹಣಕ್ಕೆ ಹೆಚ್ಚಿನ ಸೇವೆಯನ್ನು ಪಡೆಯಲು ಸಹಾಯ ಮಾಡಲು ಈ ನಿಯಮಗಳನ್ನು ಮಾಡಿದೆ.

ಪ್ರಸ್ತುತ 2G ಗ್ರಾಹಕರರು ದುಬಾರಿ ಪ್ಲ್ಯಾನ್‌ಗಳನ್ನು ಪಡೆಯಬೇಕಿದೆ. ಇದು ಅವರಿಗೆ ಯಾವುದೇ ಪ್ರಯೋಜನವಿಲ್ಲದ ಡೇಟಾ ಪ್ಲ್ಯಾನ್ ಆಗಿದೆ. 2G ನೆಟ್‌ವರ್ಕ್‌ಗಳನ್ನು ನೀಡುವ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಎರಡರ ಮೇಲೂ ಪರಿಣಾಮ ಬೀರಲಿದೆ. ಆದರೆ, ಜಿಯೋ 4G ಅಥವಾ 5G ನೆಟ್‌ವರ್ಕ್‌ಗಳನ್ನು ಮಾತ್ರ ನೀಡುತ್ತದೆ.

Best Mobiles in India

English summary
TRAI new rule directs telecom operators to offer call and SMS only tariff plans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+