ಇನ್ಮುಂದೆ ಸಿಮ್ ಪೋರ್ಟ್ ಮಾಡಿಸಲು ಎರಡು ದಿನ ಸಾಕು..!
ನೆಟ್‌ವರ್ಕ್ ಸರಿ ಇಲ್ಲ, ಜಾಸ್ತಿ ದುಡ್ಡು ಕಟ್ ಮಾಡ್ತಾರೆ, ಈ ಟೆಲಿಕಾ ಆಪರೇಟರ್‌ಗಳಿಗೆ ಹೇಳೋರು ಕೇಳೋರು ಯಾರು ಇಲ್ವಾ ಎಂದು ಶಾಪ ಹಾಕುತ್ತಿದ್ದಾಗ TRAI ಮಹತ್ವದ ನಿಯಮವನ್ನು ತಂದು MNP- Mobile Number Portabilityಗೆ ಅನುವು ಮಾಡಿಕೊಡ್ತು. MNPಯಿಂದ ಟೆಲಿಕಾಂ ಜಗತ್ತಿನಲ್ಲಿ ಗುಣಮಟ್ಟದ ಸ್ಪರ್ಧೆಯು ಬೆಳೆಯಿತು. ಆದರೆ, ಪೋರ್ಟ್ ಮಾಡಿಸಲು ಮೊದಲು ಬಹಳಷ್ಟು ನಿಯಮಗಳಿದ್ದವು, ಕಾಲ ಕ್ರಮೇಣ ನಿಯಮಗಳು ಸಡಿಲಗೊಂಡಿವೆ ಹಾಗೂ ಸಮಯವೂ ಸಹ ಕಡಿಮೆಯಾಗಿದೆ.

ಹೌದು, ಮೊದಲೆಲ್ಲಾ ಒಂದು ಆಪರೇಟರ್‌ನಿಂದ ಇನ್ನೊಂದು ಆಪರೇಟರ್‌ಗೆ ಬದಲಾಗಬೇಕೆಂದರೆ ವಾರಗಟ್ಟಲೇ ಕಾಯಬೇಕಾಗಿತ್ತು. ನಂತರ ಅದನ್ನು ಟ್ರಾಯ್ 4 ದಿನಕ್ಕೆ ಇಳಿಸಿತು. ಈಗ ಪೋರ್ಟ್ ಮಾಡುವ ಅವಧಿಯನ್ನು 2 ದಿನಕ್ಕೆ ಇಳಿಸಲು ಚಿಂತಿಸಿರುವ ಟ್ರಾಯ್ ಕರಡು ಮೊಬೈಲ್ ನಂಬರ್ ಪೋರ್ಟ್‌ಬಿಲಿಟಿ ನಿಯಮಗಳನ್ನು ರಚಿಸಿದೆ. ಈ ವರ್ಷದ ಆರಂಭದಲ್ಲಿ ಟ್ರಾಯ್ MNPಯ ಸಮಸ್ಯೆಗಳನ್ನು ತಿಳಿದುಕೊಳ್ಳಲು ಗ್ರಾಹಕರಿಂದ ಸಲಹೆಗಳನ್ನು ಆಹ್ವಾನಿಸಿತ್ತು. ಆಗ ಗ್ರಾಹಕರು MNP ಪ್ರಕ್ರಿಯೆಯ ಸಮಸ್ಯೆಯನ್ನು ಕಡಿಮೆ ಮಾಡಿ ಎಂದಿರುವುದು ಈ ಬದಲಾವಣೆಗೆ ಕಾರಣವಾಗಿದೆ.

4 ದಿನದಿಂದ 2 ದಿನಕ್ಕೆ
ಟ್ರಾಯ್ ಜಾರಿಗೆ ತರಲು ಮುಂದಾಗಿರುವ ಹೊಸ ಕರಡಿನಂತೆ ಒಂದು ಆಪರೇಟರ್‌ನಿಂದ ಮತ್ತೊಂದು ಆಪರೇಟರ್‌ಗೆ ಬದಲಾಗಲು ಸದ್ಯ ಇರುವ ಆಪರೇಟರ್ ಕ್ಲಿಯರೆನ್ಸ್ ನೀಡಬೇಕಾಗಿದೆ. ಈ ಪ್ರಕ್ರಿಯೆಗೆ ಸದ್ಯ ಇರುವ ಕಾಲಾವಧಿ 4 ದಿನ ಇದನ್ನು 2 ದಿನಕ್ಕೆ ಇಳಿಸಲು ಟ್ರಾಯ್ ಮುಂದಾಗಿದ್ದು, ಹೊಸ ಕರಡು ಜಾರಿಗೆ ಬಂದರೆ ವೇಗವಾಗಿ ಪೋರ್ಟ್ ಆಗಬಹುದು.

ದಂಡವೂ ಇದೆ..!
ಪೋರ್ಟ್‌ಗೆ ಅರ್ಜಿ ಹಾಕಿದಾಗ ನಿಮ್ಮ ಸದ್ಯದ ಆಪರೇಟರ್ ನಿಮ್ಮ ಅರ್ಜಿಯನ್ನು ಯಾವುದೇ ಕಾರಣವಿಲ್ಲದೇ ಅಥವಾ ತಪ್ಪಾಗಿ ವಜಾಗೊಳಿಸಿದರೆ ಆಪರೇಟರ್‌ಗರ ದಂಡ ವಿಧಿಸುವ ಆಯ್ಕೆಯನ್ನು ಟ್ರಾಯ್ ಹೊಸ ಕರಡಿನಲ್ಲಿ ಮುಂದಿಟ್ಟಿದೆ. ಈ ದಂಡವೂ ಒಂದು ಅರ್ಜಿಯನ್ನು ತಪ್ಪಾಗಿ ವಜಾ ಮಾಡಿದರೆ 10 ಸಾವಿರ ರೂ.ಗಿಂತ ಹೆಚ್ಚಿರುವುದಿಲ್ಲ ಎಂದು ಟ್ರಾಯ್ ಸ್ಪಷ್ಟವಾಗಿ ಹೇಳಿದೆ.

24 ಗಂಟೆಯಲ್ಲಿ ವಿವರ ನೀಡಬೇಕು
ಪೋರ್ಟ್ ಮಾಡಲು ಮನವಿ ಬಂದ 24 ಗಂಟೆಗಳಲ್ಲಿ ಗ್ರಾಹಕರ ವಿವರಗಳನ್ನು MNP ಸೇವಾದಾತರಿಗೆ ನೀಡಬೇಕು. ಯಾವಾಗ ಗ್ರಾಹಕ MNPಗಾಗಿ ಮನವಿ ಮಾಡುತ್ತಾನೋ ಆಗ ಟೆಲಿಕಾಂ ಆಪರೇಟರ್ MNP ಸೇವಾದಾತರಿಗೆ ಗ್ರಾಹಕನ ವಿವರ, ಪೋರ್ಟ್‌ಬಲಿಟಿಗೆ ಅರ್ಹತೆ ಮುಂತಾದ ಅಂಶಗಳನ್ನು ಫಾರ್‌ವರ್ಡ್ ಮಾಡಬೇಕಾಗುತ್ತದೆ. ಈ ಟೈಮ್‌ಲೈನನ್ನು ಉಲ್ಲಂಘಿಸಿದರೆ 5000 ರೂ. ದಂಡವನ್ನು ಟೆಲಿಕಾಂ ಆಪರೇಟರ್‌ಗಳು ಪಾವತಿಸಬೇಕಾಗುತ್ತದೆ ಎಂದು ಹೊದ ಕರಡು ಹೇಳುತ್ತದೆ.

ಅಮೂಲಾಗ್ರ ಬದಲಾವಣೆ
ಟ್ರಾಯ್ ಜಾರಿಗೆ ತರಲು ಯೋಚಿಸುತ್ತಿರುವ MNPಯ ಹೊಸ ಕರಡು MNP ಸೇವೆಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರುತ್ತದೆ. ಗ್ರಾಹಕರ ಸಲಹೆಗಳನ್ನು ಆಧರಿಸಿ ರಚಿಸಿರುವ ನೀತಿಯಿಂದ ವೇಗದ ಹಾಗೂ ಪಾರದರ್ಶಕ ಸೇವೆ ಗ್ರಾಹಕರಿಗೆ ದೊರೆಯುತ್ತದೆ. ಟೆಲಿಕಾಂ ಆಪರೇಟರ್‌ಗಳಿಗೆ ಬಿಗಿ ಕುಣಿಕೆ ಬಿದ್ದಿದ್ದು, ಬೇಕಾ ಬಿಟ್ಟಿ ಗ್ರಾಹಕರ MNP ಅರ್ಜಿಗಳನ್ನು ನಿರ್ಲಕ್ಷಿಸುವುದು ತಪ್ಪುತ್ತದೆ.

UPC ಕೋಡ್‌ಗೂ ಅನ್ವಯ
ಹೊಸ ನೀತಿಯಂತೆ UPC ಕೋಡ್ ವ್ಯಾಲಿಡಿಟಿಗೂ ಹೊಸ ನಿಯಮಗಳನ್ನು ತಂದಿದೆ. UPC ಕೋಡ್‌ನ್ನು ಜನರೇಟ್ ಆಗಿ 4 ದಿನಗಳ ನಂತರ ಅದರ ವ್ಯಾಲಿಡಿಟಿ ಮುಗಿಯುತ್ತಿತ್ತು. ಈಗ ಅದನ್ನು ಎರಡು ದಿನಕ್ಕೆ ಇಳಿಸಲಾಗಿದೆ. ಆದರೆ, ಜಮ್ಮುಕಾಶ್ಮೀರ, ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಲ್ಲಿ UPC ಕೋಡ್ ವ್ಯಾಲಿಡಿಟಿ 15 ದಿನಗಳೇ ಇದ್ದು, ಅಲ್ಲಿ ಯಾವುದೇ ಬದಲಾವಣೆಯನ್ನು ತಂದಿಲ್ಲ.

ಹೆಚ್ಚು ನಿರಾಕರಣೆಯಿಂದ ಹೊಸ ನೀತಿ
ಟ್ರಾಯ್ ಈ ಹೊಸ ನೀತಿಯನ್ನು ತರಲು ಮುಖ್ಯ ಕಾರಣ ಹೆಚ್ಚಿನ ನಿರಾಕರಣೆ. ಗ್ರಾಹಕರು ಪೋರ್ಟ್‌ಗೆ ಅರ್ಜಿ ಸಲ್ಲಿಸಿದ ನಂತರ ಬಹಳಷ್ಟು ಅರ್ಜಿಗಳು ನಿರಾಕರಣೆಯಾಗುತ್ತಿದ್ದವು. ಏಪ್ರೀಲ್ 2016ರಿಂದ ಮಾರ್ಚ್ 2017ರವರೆಗಿನ ವರದಿಗಳನ್ನು ವಿಶ್ಲೇಷಣೆ ಮಾಡಿದರೆ, ಶೇ.11.16ರಷ್ಟು ಅರ್ಜಿಗಳನ್ನು ಟೆಲಿಕಾಂ ಆಪರೇಟರ್‌ಗಳು ವಜಾಗೊಳಿಸಿದ್ದಾರೆ. ಈ ಪ್ರಮಾಣ ತಿಂಗಳಿಗೆ ಸುಮಾರು 5.87 ಲಕ್ಷ ಎಂದರೆ ನಂಬಲೇಬೇಕು. ಆದ್ದರಿಂದ ಗ್ರಾಹಕರಿಗೆ ಮೋಸ ಆಗುವುದನ್ನು ತಪ್ಪಿಸಲು ಟ್ರಾಯ್ ಹೊಸ ನೀತಿಯನ್ನು ತರಲು ಮುಂದಾಗಿದೆ.


Click it and Unblock the Notifications








