Home
ಸುದ್ದಿಜಾಲ

ಜಿಯೋಗಾಗಿ ಬದಲಾಗುತ್ತಿದೆಯೇ ಮತ್ತೊಂದು ಟೆಲಿಕಾಂ ನಿಯಮ!!..ಬದಲಾದರೆ ಗ್ರಾಹಕರಿಗೆ ಹಬ್ಬ!!

ಭಾರತೀಯ ಟೆಲಿಕಾಂ ಕ್ಷೆತ್ರದಲ್ಲಿ ಭಾರೀ ಬದಲಾವಣೆಗಳನ್ನು ತರಲು ಕಾರಣವಾಗುತ್ತಿರುವ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಇದೀಗ ಮತ್ತೊಂದು ಪ್ರಮುಖ ಬದಲಾವಣೆಗೆ ಸಿದ್ದವಾಗಿ ನಿಂತಿದೆ.!

By Bhaskar N J

ಭಾರತೀಯ ಟೆಲಿಕಾಂ ಕ್ಷೆತ್ರದಲ್ಲಿ ಭಾರೀ ಬದಲಾವಣೆಗಳನ್ನು ತರಲು ಕಾರಣವಾಗುತ್ತಿರುವ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಇದೀಗ ಮತ್ತೊಂದು ಪ್ರಮುಖ ಬದಲಾವಣೆಗೆ ಸಿದ್ದವಾಗಿ ನಿಂತಿದೆ.! ಮೊಬೈಲ್ ಚಂದಾದಾರರಿಗೆ ಹೆಚ್ಚು ಸಹಾಯವಾಗುವಂತೆ ಮೊಬೈಲ್ ನಂಬರ್ ಪೋರ್ಟೆಬಲಿಟಿ (MNP)ಯನ್ನು ಸರಳಗೊಳಿಸಲು ಟ್ರಾಯ್ ಚಿಂತಿಸಿದೆ.!!

ಇತ್ತೀಚಿಗಷ್ಟೆ ಮೊಬೈಲ್ ಪೋರ್ಟೆಬಲಿಟಿ ಸೇವೆಯ ಶೇ 80ರಷ್ಟು ದರವನ್ನು ಕಡಿತಗೊಳಿಸಿದ್ದ ಟ್ರಾಯ್ ಇದೀಗ ಮೊಬೈಲ್ ನಂಬರ್ ಪೋರ್ಟೆಬಲಿಟಿ ಸೇವೆಯನ್ನು ಸಂಪೂರ್ಣವಾಗಿ ಉಚಿತವಾಗಿಸಲು ಮುಂದಾಗಿದೆ ಎಂದು ಹೇಳಲಾಗಿದೆ. ಇದರಿಂದ ಜಿಯೋಗೆ ಭಾರೀ ಲಾಭವಾಗಲಿದೆ ಎಂದು ಟೆಲಿಕಾಂ ಕ್ಷೇತ್ರದಲ್ಲಿಯೇ ಹಸಿಬಿಸಿ ಸುದ್ದಿಯಾಗಿ ಹರಿದಾಡುತ್ತಿದೆ.!!

ಜಿಯೋಗಾಗಿ ಬದಲಾಗುತ್ತಿದೆಯೇ ಮತ್ತೊಂದು ಟೆಲಿಕಾಂ ನಿಯಮ!.ಬದಲಾದರೆ ಗ್ರಾಹಕರಿಗೆ ಹಬ್ಬ

ಮೊಬೈಲ್ ನಂಬರ್ ಪೋರ್ಟೆಬಲಿಟಿ ಪ್ರಕ್ರಿಯೆಯನ್ನು ಸರಳಗೊಳಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್ ) ಅಧ್ಯಕ್ಷ ಆರ್.ಎಸ್.ಶರ್ಮಾ ಸಹ ತಿಳಿಸಿದ್ದಾರೆ. ಹಾಗಾದರೆ, ಮೊಬೈಲ್ ನಂಬರ್ ಪೋರ್ಟೆಬಲಿಟಿ ಎಂದರೇನು? ಈ ಸೇವೆ ಉಚಿತವಾದರೆ ಜಿಯೋಗೆ ಏನು ಲಾಭ? ಎಂಬುದನ್ನು ಮುಂದೆ ತಿಳಿಯಿರಿ.!!

ಏನಿದು ಮೊಬೈಲ್ ನಂಬರ್ ಪೋರ್ಟೆಬಲಿಟಿ!!

ಏನಿದು ಮೊಬೈಲ್ ನಂಬರ್ ಪೋರ್ಟೆಬಲಿಟಿ!!

ಸಿಂಪಲ್ ಆಗಿ ಹೇಳಬೇಕೆಂದರೆ ಹಳೆಯ ಮೊಬೈಲ್ ನಂಬರ್ ಉಳಿಸಿಕೊಂಡು ಹೊಸ ಮೊಬೈಲ್ ಕಂಪನಿಯ ಸೇವೆಯನ್ನು ಪಡೆಯುವುದು. ಅಂದರೆ ಈಗಿನ ಕಂಪನಿ ನೀಡುತ್ತಿರುವ ಸೇವೆ ನಿಮಗೆ ಇಷ್ಟವಾಗದೇ ಇದ್ದರೆ ಅದೇ ನಂಬರ್ ನ ಬೇರೊಂದು ಕಂಪನಿಯ ಸಿಮ್ ಅನ್ನು ನೀವು ಖರೀದಿಸಬಹುದು.!!

ಪೋರ್ಟ್ ದರ ತೆಗೆದುಹಾಕಲಾಗುವುದೇ?

ಪೋರ್ಟ್ ದರ ತೆಗೆದುಹಾಕಲಾಗುವುದೇ?

ಮೊಬೈಲ್ ನಂಬರ್ ಪೋರ್ಟೆಬಲಿಟಿ ಸೇವಾ ಶುಲ್ಕವನ್ನು ಕೆಲವೇ ದಿನಗಳ ಹಿಂದಷ್ಟೆ 19 ರೂಪಾಯಿಗಳಿಂದ 4 ರೂಪಾಯಿಗಳಿಗೆ ಕಡಿತಗೊಳಿಸಲಾಗಿತ್ತು. ಮೊಬೈಲ್ ನಂಬರ್ ಪೋರ್ಟೆಬಲಿಟಿ ಸೇವಾ ಶುಲ್ಕ ಗಣನೀಯವಾಗಿ ಕಡಿಮೆ ಇದ್ದಾಗ ಮೊಬೈಲ್ ನಂಬರ್ ಪೋರ್ಟೆಬಲಿಟಿ ಟ್ರಾಫಿಕ್ ಪ್ರಮಾಣ ಹೆಚ್ಚುತ್ತಿದೆ ಎಂದು ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೇಳಿದೆ.!!

ಟೆಲಿಕಾಂ ಕಂಪೆನಿಗಳು ಆಕ್ಷೇಪಣೆ !!

ಟೆಲಿಕಾಂ ಕಂಪೆನಿಗಳು ಆಕ್ಷೇಪಣೆ !!

MNP ಸೇವಾ ಶುಲ್ಕಗಳು ಕಡಿಮೆಯಾದಾಗಲೇ ಸಿಡಿಮಿಡಿಗೊಂಡಿದ್ದ ಕೆಲವು ಟೆಲಿಕಾಂ ಕಂಪೆನಿಗಳು ಮೊಬೈಲ್ ನಂಬರ್ ಪೋರ್ಟೆಬಲಿಟಿ ಸೇವಾ ಶುಲ್ಕ ತೆಗೆದುಹಾಕುವುದನ್ನು ತಡೆಯಲು ಭಾರಿ ಪ್ರಯತ್ನ ನಡೆಸುತ್ತವೆ.ಗ್ರಾಹಕರು ಒಮ್ಮೆಲೆ ಮತ್ತೊಂದು ಕಂಪೆನಿಗೆ ಜಾರಿ ಹೋಗುವ ಭಯ ಟೆಲಿಕಾಂ ಕಂಪೆನಿಗಳಿಗೆ ಕಾಡುತ್ತಿದೆ.!!

Jio Fi ಬಳಸಿ 2G ಮತ್ತು 3G ಗ್ರಾಹಕರು ಕಾಲ್ ಮಾಡುವುದು ಹೇಗೆ?
ಜಿಯೋಗೆ ಭಾರಿ ಲಾಭ?

ಜಿಯೋಗೆ ಭಾರಿ ಲಾಭ?

MNP ಸೇವಾ ಶುಲ್ಕವನ್ನು ಕಡಿಮೆಗೊಳಿಸುವ ಟ್ರಾಯ್ ನಿರ್ಧಾರದಿಂದ ಜಿಯೋಗೆ ಹೆಚ್ಚು ಲಾಭವಾಗಲಿದೆ ಎನ್ನಲಾಗಿದೆ. ಜಿಯೋ ಹೆಚ್ಚು ಗ್ರಾಹಕರನ್ನು ಸೆಳೆಯಲು ಈ ನಿರ್ಧಾರ ಸಹಕಾರಿಯಾಗುತ್ತದೆ. ಹಾಗೂ ಇತರೆ ಟೆಲಿಕಾಂ ಕಂಪೆನಿಗಳಿಗೆ ಪಾವತಿಸಬೇಕಾದ ಮೊತ್ತ ಪೂರ್ತಿಯಾಗಿ ನಿಂತುಹೋಗಲಿದೆ.!!

ಮತ್ತಷ್ಟು ಕಡಿಮೆ ಬೆಲೆಗೆ ಜಿಯೋ ಸೇವೆ!!

ಮತ್ತಷ್ಟು ಕಡಿಮೆ ಬೆಲೆಗೆ ಜಿಯೋ ಸೇವೆ!!

ಒಂದು ವೇಳೆ ಮೊಬೈಲ್ ನಂಬರ್ ಪೋರ್ಟೆಬಲಿಟಿ (MNP)ಯ ಶುಲ್ಕವನ್ನು ಸಂಪೂರ್ಣವಾಗಿ ತೆಗೆದುಹಾಕಿದರೆ ಜಿಯೋ ಮತ್ತಷ್ಟು ಕಡಿಮೆ ಬೆಲೆಗೆ ಆಫರ್‌ಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಒಂದು ವೇಳೆ MNP ಸೇವೆ ಉಚಿತವಾದರೆ ಪೋರ್ಟ್ ಆದ ಗ್ರಾಹಕರಿಗೆ ಭಾರೀ ಆಫರ್‌ಗಳನ್ನು ಜಿಯೋ ನೀಡಬಹುದಾಗಿದೆ.!!

Best Mobiles in India

English summary
The move to revamp the current mechanism for MNP comes on the heels of the regulator recently slashing the MNP charges by almost 79 per cent to a maximum of Rs 4. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+