ಟ್ರಾಯ್ ನಿಯಮವನ್ನು ಮೀರಿ 'ಟೆಲಿಕಾಂ ಕಂಪೆನಿ'ಗಳಿಂದ ಗ್ರಾಹಕರಿಗೆ ಮೋಸ!

|

'ಡು ನಾಟ್ ಡಿಸ್ಟರ್ಬ್' (ಡಿಎನ್‌ಡಿ) ನೋಂದಣಿ ಮಾಡಿಕೊಂಡಿದ್ದರೂ ಸಹ ಟೆಲಿಕಾಂ ಕಂಪೆನಿಗಳ ಎಸ್‌ಎಂಎಸ್‌ಗಳ ಕಿರಿಕಿರಿಗೆ ಬ್ರೇಕ್ ಬಿದ್ದಿಲ್ಲ ಎಂದು ಇತ್ತೀಚಿನ ಅಧ್ಯಯನ ಒಂದು ತಿಳಿಸಿದೆ. ಭಾರತದಲ್ಲಿ 'ಡಿಎನ್‌ಡಿ'ಗೆ ನೋಂದಣಿ ಮಾಡಿಕೊಂಡಿರುವ ಬಳಕೆದಾರರು ಈಗಲೂ ಸಹ ಅನಗತ್ಯ ಎಸ್‌ಎಂಎಸ್‌ಗಳ ಕಿರಿಕಿರಿ ಎದುರಿಸುತ್ತಲೇ ಇದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಹೌದು, 'ಡು ನಾಟ್ ಡಿಸ್ಟರ್ಬ್ (ಡಿಎನ್‌ಡಿ)' ನೋಂದಣಿ ಮಾಡಿಕೊಂಡಿದ್ದರೂ ಕೂಡ ಟೆಲಿಕಾಂ ಕಂಪೆನಿಗಳು ಗ್ರಾಹಕರಿಗೆ ವಾಣಿಜ್ಯ ಸಂದೇಶಗಳನ್ನು ಕಳುಹಿಸುತ್ತಲೇ ಇವೆ. ಈಗಲೂ ಇಂತಹ ಸ್ಪಾಮ್ ಎಸ್ಎಂಎಸ್‌ಗಳ ಕಿರಿಕಿರಿ ಎದುರಿಸುತ್ತಿರುವವರ ಪ್ರಮಾಣ ಶೇ 70ರಷ್ಟು ಇದೆ ಎಂದು 'ಲೋಕಲ್ ಸರ್ಕಲ್ಸ್' ಎಂಬ ಸಂಸ್ಥೆಯು ಪ್ರಕಟಿಸಿರುವ ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.

ಟ್ರಾಯ್ ನಿಯಮವನ್ನು ಮೀರಿ 'ಟೆಲಿಕಾಂ ಕಂಪೆನಿ'ಗಳಿಂದ ಗ್ರಾಹಕರಿಗೆ ಮೋಸ!

ಯಾವುದೇ ಟೆಲಿಕಾಂ ಕಂಪೆನಿಗಳು ಚಂದಾದಾರರ ಒಪ್ಪಿಗೆ ಇಲ್ಲದೆ ಇಂತಹ ಎಸ್ಎಂಎಸ್‌ಗಳನ್ನು ಕಳುಹಿಸಬಾರದು ಎಂದು ಟ್ರಾಯ್ ವಿಧಿಸಿರುವ ನಿರ್ಬಂಧವನ್ನು ಬಹುತೇಕ ಟೆಲಿಕಾಂ ಸಂಸ್ಥೆಗಳು ಉಲ್ಲಂಘಿಸುತ್ತಿವೆ. ರಿಯಲ್‌ ಎಸ್ಟೇಟ್, ವಿಮೆ, ಬ್ಯಾಂಕಿಂಗ್ ಮತ್ತು ಚುನಾವಣೆ ಸೇರಿದಂತೆ ಬಹುತೇಕ ಸೇವಾ ಸಂಸ್ಥೆಗಳಿಂದಲೇ ಹೆಚ್ಚಿನ ಸ್ಪಾಮ್‌ ಎಸ್‌ಎಂಎಸ್‌ಗಳು ಬರುತ್ತಿವೆ.

ಭಾರತದಲ್ಲಿ ಪ್ರತಿ ತಿಂಗಳು ಕಡಿಮೆ ಎಂದರೂ 1 ಸಾವಿರ ಕೋಟಿಗೂ ಹೆಚ್ಚು ಸ್ಪಾಮ್ ಎಸ್ಎಂಎಸ್‌ಗಳನ್ನು ರವಾನೆ ಮಾಡಲಾಗುತ್ತದೆ ಎಂದು ಅಂದಾಜಿಸಲಾಗಿದ್ದು, 'ಡು ನಾಟ್ ಡಿಸ್ಟರ್ಬ್' (ಡಿಎನ್‌ಡಿ) ನೋಂದಣಿ ಮಾಡಿಕೊಂಡಿದ್ದರೂ ಸಹ ಟೆಲಿಕಾಂ ಕಂಪೆನಿಗಳ ಎಸ್‌ಎಂಎಸ್‌ಗಳು ತಲುಪುತ್ತಿವೆ. ಸ್ಪಾಮ್‌ಗಳ ಹಾವಳಿ ಮತ್ತಷ್ಟು ಹೆಚ್ಚಲಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಟ್ರಾಯ್ ನಿಯಮವನ್ನು ಮೀರಿ 'ಟೆಲಿಕಾಂ ಕಂಪೆನಿ'ಗಳಿಂದ ಗ್ರಾಹಕರಿಗೆ ಮೋಸ!

ಎಸ್‌ಎಂಎಸ್‌ಗಳ ಮೂಲಕ ಪ್ರಚಾರ ಪಡೆಯುವುದು ಅತ್ಯಂತ ಕಡಿಮೆ ವೆಚ್ಚದ ಮತ್ತು ಪರಿಣಾಮಕಾರಿ ಪ್ರಚಾರ ವಿಧಾನಗಳಲ್ಲಿ ಒಂದು. ಆದರೆ, ಹೀಗೆ ಕಳುಹಿಸಲಾಗುವ ಎಸ್ಎಂಎಸ್‌ಗಳಲ್ಲಿ ಲಕ್ಷಗಟ್ಟಲೆ ಎಸ್‌ಎಂಎಸ್‌ಗಳು ಸಂಬಂಧವೇ ಇಲ್ಲದವರಿಗೂ ರವಾನೆಯಾಗುತ್ತವೆ. ಇದು ಈಗಿನ ರಾಜಕೀಯ ದಾಳಕ್ಕೂ ಬಳಕೆಯಾಗುತ್ತಿವೆ ಎಂಬುದನ್ನು 'ಲೋಕಲ್ ಸರ್ಕಲ್ಸ್' ಸ್ಪಷ್ಟಪಡಿಸಿದೆ.

Best Mobiles in India

English summary
Trai's new regulation DND useless in India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X