4ಜಿ ಸೇವೆಗಳನ್ನು ವಿಶಿಷ್ಟಗೊಳಿಸಲಿರುವ ಟಿಆರ್‌ಎಐ

By Shwetha
|

ವಿಶೇಷವಾಗಿ 4ಜಿ ಸೇವೆಗಳಿಗಾಗಿ ಟೆಲಿಕಾಮ್ ರೆಗ್ಯುಲೇಟರ್ TRAI ಯು ಇಂದು ಆಧುನಿಕ ನೆಟ್‌ವರ್ಕ್‌ಗಳಿಗೆ ಸಂಬಂಧಪಡುವ ನಿಯಮಗಳನ್ನು ಕೂಡಲೇ ಸ್ಥಾಪಿಸುತ್ತಿದ್ದು, ಮತ್ತು ಅವುಗಳ ಸಂಪರ್ಕವನ್ನು ಪ್ರಸ್ತುತ ನಿಯೋಜಿತ ಜಾಲಗಳೊಂದಿಗೆ ಸಂಪರ್ಕಪಡಿಸಲಿದೆ.

ಅಧಿಕೃತ ಹೇಳಿಕೆಯ ಪ್ರಕಾರ, ಸಾಂಪ್ರದಾಯಿಕ ದೂರಸಂಪರ್ಕ ವ್ಯವಸ್ಥೆಯು ಹೆಚ್ಚು ಪ್ರಬಲವಾಗಿರುವ ಮತ್ತು ಕಾರ್ಯಸಾಧ್ಯವಾಗುವ ಇಂಟರ್ನೆಟ್ ಪ್ರೊಟೋಕಾಲ್ ಆಧಾರಿತ ದೂರಸಂಪರ್ಕ ವ್ಯವಸ್ಥೆಗಳ ಕಡೆಗೆ ಮುಖ ಮಾಡಿದ್ದು ನೆಟ್‌ವರ್ಕ್ ಆಧರಿತ ಜೊತೆಗೆ ಐಪಿ ಇರುವಂತಹ ಪೂರ್ವಾರ್ಜಿತ ನೆಟ್‌ವರ್ಕ್ ಸಹಬಾಳ್ವೆಗೆ ಈ ವಲಸೆ ಕಾರಣವಾಗುತ್ತದೆ, ಈ ದೃಷ್ಟಿಯಲ್ಲಿ TRAI ಯು ಐಪಿ ಆಧಾರಿತ ನೆಟ್‌ವರ್ಕ್ ವರ್ಗಾವಣೆ ಮೇಲೆ ಸಮಾಲೋಚನೆ ಕಾಗದವನ್ನು ಕೂಡ ಹೊರತಂದಿದೆ.

ಟಿಆರ್‌ಎಐನಿಂದ ವರ್ಧಿತ ಸೇವೆ

ಹೊಸ ಐಪಿ ಆಧಾರಿತ ನೆಟ್‌ವರ್ಕ್ ಅಂತೆಯೇ ಈ ಹಿಂದೆ ಇದ್ದ ಸಾಂಪ್ರದಾಯಿಕ ನೆಟ್‌ವರ್ಕ್‌ನೊಂದಿಗಿನ ಒಗ್ಗೂಡುವಿಕೆಯು ಹೆಚ್ಚುವರಿ ಆಯ್ಕೆಯನ್ನು ಒದಗಿಸಲಿದ್ದು, ಸಂಪರ್ಕ ಇಲ್ಲದಿರುವಿಕೆ, ಸೇವೆಯಲ್ಲಿನ ದೋಷಗಳು ಮೊದಲಾದ ಸಮಸ್ಯೆಗಳನ್ನು ನಿವಾರಿಸಲಿದೆ ಎಂದು ವರದಿ ತಿಳಿಸಿದೆ.

ಎಲ್ಲಾ ಟೆಲಿಕಾಮ್ ಕಂಪೆನಿಗಳ ನೆಟ್‌ವರ್ಕ್ ಅನ್ನು ಅಂತರ್‌ಸಂಪರ್ಕಗೊಳಿಸಿದ್ದು ಮೊಬೈಲ್ ಅಥವಾ ಲ್ಯಾಂಡ್‌ಲೈನ್ ಫೋನ್‌ಗಳ ಮೂಲಕ ಕರೆಗಳ ಅಥವಾ ಸಂದೇಶಗಳ ಹಂಚಿಕೊಳ್ಳುವಿಕೆಯನ್ನು ಮುಕ್ತಾಯಗೊಳಿಸುವುದು ಮುಖ್ಯವಾಗಿದೆ.

ಪ್ರಸ್ತುತ, ಕೆಲವೊಂದು ಸ್ಪರ್ಧಿಗಳು ತಮ್ಮ ಪ್ರತಿಸ್ಪರ್ಧಿಗಳಿಂದ ನೆಟ್‌ವರ್ಕ್‌ನ ಅವಗಣನೆ ಮತ್ತು ತಿರಸ್ಕಾರಕ್ಕೆ ಒಳಗಾಗುತ್ತಿದ್ದಾರೆ. ಅದಾಗ್ಯೂ, ಟೆಲಿಕಾಮ್ ನೆಟ್‌ವರ್ಕ್‌ಗಳು ಹೆಚ್ಚು ಹಳೆಯ ತಂತ್ರಜ್ಞಾನವನ್ನು ಆಧರಿಸಿದೆ. ವರ್ಧಿತ ಗುಣಮಟ್ಟದಂತೆ ನೆಟ್‌ವರ್ಕ್ ಆಧಾರಿತ ಇಂಟರ್ನೆಟ್ ಪ್ರೊಟೋಕಾಲ್ ಹೊಸ ವಿಧಾನದಂತೆ ಆರಂಭಗೊಳ್ಳಲಿದೆ.

ಈ ಪೇಪರ್ ಕುರಿತ ನಿಮ್ಮ ಟೀಕೆಗಳನ್ನು ಪ್ರಸ್ತುತಪಡಿಸಲು ಕೊನೆಯ ದಿನಾಂಕ ಜುಲೈ 21 ಆಗಿದ್ದು ಕೌಂಟರ್ ಕಮೆಂಟ್ಸ್‌ಗಳನ್ನು ಜುಲೈ 28 ರ ಒಳಗೆ ಮಂಡಿಸಬೇಕಾಗಿದೆ.

ಪಿಟಿಐ

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X