ಟ್ರಾಯ್ VS ಆಪಲ್!..ಕಾನೂನು ಸಮರಕ್ಕೆ ಇಳಿದ ಈ ಬಿಗ್‌ಫೈಟ್ ಪರಿಣಾಮ ಏನಾಗಬಹುದು?
'ಡೂ ನಾಟ್ ಡಿಸ್ಟರ್ಬ್' ಆಪ್ ಕುರಿತು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ರೂಪಿಸಿರುವ ನಿಯಾಮಾವಳಿಗಳ ವಿರುದ್ದ ಕಾನೂನು ಹೋರಾಟ ನಡೆಸಲು ಆಪಲ್ ಸಂಸ್ಥೆ ಮುಂದಾಗಿದೆ. ಹ್ಯಾಂಡ್‌ಸೆಟ್ ನಿಯಂತ್ರಿಸುವ ಅಧಿಕಾರವನ್ನು ಟೆಲಿಕಾಂ ಕಂಪೆನಿಗಳಿಗೆ ನೀಡುವ ಮೂಲಕ ಟ್ರಾಯ್ ತನ್ನ ಅಧಿಕಾರ ವ್ಯಾಪ್ತಿ ಮೀರಿದೆ ಎಂದು ಆಪಲ್ ಕಂಪೆನಿ ದೂರಿದೆ. .
ಜುಲೈ 19ರಂದು ಘೋಷಣೆಯಾಗಿರುವ ನಿಯಮಾವಳಿಗಳ ಪ್ರಕಾರ, ಆರು ತಿಂಗಳ ಒಳಗೆ ಎಲ್ಲಾ ಮೊಬೈಲ್ ತಯಾರಿಕ ಕಂಪನಿಗಳು ಬೇಡದ ಮತ್ತು ವಂಚಕ ಕರೆಗಳು ಮತ್ತು ಮೆಸೇಜ್ ಗಳ ಡೇಟಾವನ್ನು ಸಂಗ್ರಹಿಸುವ ಆಪ್ ಅನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲೇಬೇಕು. ಇದಕ್ಕೆ ಸಮ್ಮತಿಸದಿದ್ದಲ್ಲಿ ದೂರ ಸಂಪರ್ಕ ಸೇವೆಯನ್ನ ನಿಲ್ಲಿಸೋದಾಗಿ ಟ್ರಾಯ್ ಹೇಳಿಕೊಂಡಿದೆ.

ಆದರೆ, ಈ ನಿಯಾಮಾವಳಿಗಳನ್ನು ಒಪ್ಪದ ಆಪಲ್, ಹ್ಯಾಂಡ್‌ಸೆಟ್ ನಿಯಂತ್ರಿಸುವ ಅಧಿಕಾರವನ್ನು ಟೆಲಿಕಾಂ ಕಂಪೆನಿಗಳಿಗೆ ನೀಡುವ ಮೂಲಕ ಟ್ರಾಯ್ ತನ್ನ ಅಧಿಕಾರ ವ್ಯಾಪ್ತಿ ಮೀರಿದೆ ಎಂದು ಕಾನೂನು ಹೋರಾಟ ನಡೆಸಲು ಮುಂದಾಗಿದೆ. ಹಾಗಾದರೆ, ಏನಿದು ಟ್ರಾಯ್ ಮತ್ತು ಆಪಲ್ ನಡುವಿನ ಬಿಗ್‌ಫೈಟ್? ಇದರ ಪರಿಣಾಮಗಳೇನು ಎಂಬುದನ್ನು ಮುಂದೆ ತಿಳಿಯಿರಿ.

ಏನಿದು 'ಡೂ ನಾಟ್ ಡಿಸ್ಟರ್ಬ್'?
ಟೆಲಿಕಾಂ ಬಳಕೆದಾರರ ಸಹಾಯಕ್ಕಾಗಿ 'ಡೂ ನಾಟ್ ಡಿಸ್ಟರ್ಬ್'(DND) ಎಂಬ ಆಪ್ ಅನ್ನು ಟ್ರಾಯ್ ಲಾಂಚ್ ಮಾಡಿದೆ. ಇದು ಟೆಲಿ ಮಾರ್ಕೆಟಿಂಗ್ ಕರೆಗಳನ್ನುಮತ್ತು ಮೆಸೇಜ್‌ಗಳನ್ನು ತಡೆಹಿಡಿಯುವ ಆಪ್ ಆಗಿದೆ. ಈ ಆಪ್ ಭಾರತೀಯ ಮೊಬೈಲ್ ಬಳಕೆದಾರರ ಕರೆ ಮತ್ತು ಮೆಸೇಜ್‌ಗಳನ್ನು ಓದುವ ಮತ್ತು ಸಂಗ್ರಹಿಸುವ ಅಧಿಕಾರವನ್ನು ಹೊಂದಲಿದೆ.

ಆಪ್ ಪ್ರಿಲೋಡ್ ಮಾಡಬೇಕು
ಟೆಲಿಕಾಂ ಮಾರ್ಕೆಟಿಂಗ್ ಕರೆಗಳನ್ನು ಮತ್ತು ಮೆಸೇಜ್‌ಗಳನ್ನು ತಡೆಹಿಡಿಯುವ ಸಲುವಾಗಿ, ಕರೆ ಮತ್ತು ಮೆಸೇಜ್‌ಗಳನ್ನು ಓದುವ ಮತ್ತು ಸಂಗ್ರಹಿಸುವ 'ಡೂ ನಾಟ್ ಡಿಸ್ಟರ್ಬ್'(DND) ಆಪ್ ಅನ್ನು ಎಲ್ಲಾ ಸ್ಮಾರ್ಟ್‌ಫೋನ್ ಕಂಪನಿಗಳು ಪ್ರೀಲೋಡ್ ಆಗಿ ನೀಡಬೇಕು ಎಂಬ ನಿಯಮವನ್ನು ಟ್ರಾಯ್ಸ್ ಜಾರಿಗೆ ತಂದಿದೆ. ಇದು ಆಪಲ್‌ಗೆ ನುಂಗರಲಾರದ ತುತ್ತಾಗಿದೆ.

ಆರು ತಿಂಗಳ ಅವಕಾಶ
ಆಪಲ್ ಸೇರಿದಂತೆ ಎಲ್ಲಾ ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳು ಟ್ರಾಯ್ ಬಿಡುಗಡೆ ಮಾಡಿರುವ 'ಡೂ ನಾಟ್ ಡಿಸ್ಟರ್ಬ್'(DND) ಆಪ್ ಅನ್ನು ಸಪೋರ್ಟ್ ಮಾಡಲೇ ಬೇಕು. ಇದಕ್ಕಾಗಿ ಆರು ತಿಂಗಳ ಕಾಲಾವಶವನ್ನು ನೀಡಲಾಗಿದೆ. ಇದನ್ನು ಮೀರಿದರೆ, ಟ್ರಾಯ್ ಎಚ್ಚರಿಕೆಯಂತೆ ಟೆಲಿಕಾಂ ಕಂಪನಿಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸಲಿವೆ.

ಆದರೆ, ಆಪಲ್ ನೀತಿ ಏನು?
ಬಳಕೆದಾರರಿಗೆ ಸಾಕಷ್ಟು ಸುರಕ್ಷತೆಯನ್ನು ನೀಡುವ ಸಲುವಾಗಿ ಎಲ್ಲಾ ಆಪ್‌ಗಳನ್ನು ಫಿಲ್ಟರ್ ಮಾಡುವ ಆಪಲ್ ಟ್ರಾಯ್ನ 'ಡೂ ನಾಟ್ ಡಿಸ್ಟರ್ಬ್'(DND) ಆಪ್ ಅನ್ನು ತಡೆಹಿಡಿದಿದೆ. ಯಾವುದೇ ಆಪ್ ಬಳಕೆದಾರರ ಮಾಹಿತಿಯನ್ನು ಪಡೆಯುವುದನ್ನಿ ವಿರೋಧಿಸುತ್ತಿದೆ. ಬಳಕೆದಾರರ ಕರೆಯ ಮತ್ತು ಮೆಸೇಜ್‌ಗಳನ್ನು ಸಂಗ್ರಹಿಸುವ ಅಧಿಕಾರ ಆಪಲ್ ಆಪ್‌ಗಳಿಗೆ ಇಲ್ಲ.

DNDಗೆ ಅನುಮತಿ ನೀಡಲೇಬೇಕು?
ಆರು ತಿಂಗಳ ಒಳಗೆ ಎಲ್ಲಾ ಮೊಬೈಲ್ ತಯಾರಿಕ ಕಂಪನಿಗಳು ಬೇಡದ ಮತ್ತು ವಂಚಕ ಕರೆಗಳು ಮತ್ತು ಮೆಸೇಜ್ ಗಳ ಡೇಟಾವನ್ನು ಸಂಗ್ರಹಿಸುವ 'ಡೂ ನಾಟ್ ಡಿಸ್ಟರ್ಬ್'(DND) ಆಪ್ ಡೌನ್‌ಲೋಡ್ ಮಾಡಲೇಬೇಕಿದೆ. ಭಾರತದಲ್ಲಿ ಟೆಲಿಕಾಂ ಮಾರುಕಟ್ಟೆಯ ಎಲ್ಲಾ ನಿಯಂತ್ರಣವನ್ನು ಟ್ರಾಯ್ ಹೊಂದಿರುವುದರಿಂದ ಈಗ ಮೊಬೈಲ್ ಕಂಪೆನಿಗಳಿಗೆ ಬೇರೆ ದಾರಿಯಿಲ್ಲ.

ಆಪಲ್ ಕಾನೂನು ಹೋರಾಟ!
ಸುರಕ್ಷತೆಗಾಗಿಯೇ ಹೆಸರಾಗಿರುವ ಆಪಲ್ ಸಂಸ್ಥೆ ತನ್ನ ಐಫೋನ್‌ಗಳಿಗೆ 'ಡೂ ನಾಟ್ ಡಿಸ್ಟರ್ಬ್'(DND) ಆಪ್ ಅನ್ನು ಸಪೋರ್ಟ್ ಆಗುವುದನ್ನು ಒಪ್ಪುತ್ತಿಲ್ಲ. ಜಾಗತೀಕವಾಗಿ ತನ್ನ ಬಳಕೆದಾರರ ಸುರಕ್ಷತೆಯನ್ನು ಎತ್ತಿಹಿಡಿದಿರುವ ಆಪಲ್, ಭಾರತದಲ್ಲಿ ತನ್ನ ನಿಯಾಮಾವಳಿಗಳನ್ನು ಬದಲಾಯಿಸಿಕೊಳ್ಳಲು ಒಪ್ಪುತ್ತಿಲ್ಲ ಎನ್ನಲಾಗಿದೆ.ಹಾಗಾಗಿ, ಈ ಕಾನೂನು ಹೋರಾಟ.!

ಹೋರಾಟದಲ್ಲಿ ಯಾರು ಗೆಲ್ಲಬಹುದು?
ಮೊಬೈಲ್ ಬಳಕೆದಾರರ ದೃಷ್ಟಿಯಲ್ಲಿ ಈ ಹೊಸ ನಿಯಮವನ್ನು ಟ್ರಾಯ್ ಜಾರಿಗೆ ತಂದಿದೆ. ಹಾಗೆಯೇ, ಆಪಲ್ ಕೂಡ ತನ್ನ ಬಳಕೆದಾರರ ಸುರಕ್ಷತೆ ವಿಷಯವನ್ನೇ ಮುಂದಿಟ್ಟಿದೆ. ಆದರೆ, ಹ್ಯಾಂಡ್‌ಸೆಟ್ ನಿಯಂತ್ರಿಸುವ ಅಧಿಕಾರವನ್ನು ಟೆಲಿಕಾಂ ಕಂಪೆನಿಗಳಿಗೆ ಟ್ರಾಯ್ ನೀಡುವುದು ಎಷ್ಟು ಸರಿ ಎಂಬ ಪ್ರಶ್ನೆ ಎದುರಾಗಿದ್ದರೆ, ಸರ್ಕಾರದ ಆದೇಶ ಜನರಿಗೆ ಉತ್ತಮವಾದುದು ಎಂಬುದನ್ನು ಸಹ ಒಪ್ಪಲೇಬೇಕಿದೆ. ಹಾಗಾಗಿ, ಕಾನೂನು ಏನು ಹೇಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.!


Click it and Unblock the Notifications