ಇಂಜಿನ್ ಇಲ್ಲದ ಮೊದಲ ದೇಶೀಯ ಟ್ರೈನ್ ಸಂಚಾರಕ್ಕೆ ಕ್ಷಣಗಣನೆ!

|

ದೇಶಿಯವಾಗಿ ನಿರ್ಮಾಣ ಮಾಡಲಾದ ಇಂಜಿನ್ ಇಲ್ಲದ ದೇಶದ ಮೊದಲ ಟ್ರೈನ್-18ರಪ್ರಯೋಗಾರ್ಥ ಸಂಚಾರಇಂದು( ನ.17 ಶನಿವಾರ)ಆರಂಭವಾಗುತ್ತಿದೆ. ನೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಇಂಧನ ಮಿತವ್ಯಯ ಸಾಧಿಸಬಲ್ಲ ಟ್ರೈನ್-18 ರೈಲನ್ನು ಬರೇಯ್ಲಿ-ಮೊರಾದಾಬಾದ್ ನಡುವಿನ ಹಳಿ ಮೇಲೆ ಮೊದಲು ಓಡಿಸಲಾಗುವುದು ಎಂದು ತಿಳಿದುಬಂದಿದೆ.

ಇಂಜಿನ್-ಲೆಸ್‌ ಟ್ರೈನ್-18 ರೈಲಿನ ಪ್ರದರ್ಶನದ ಅಧ್ಯಯನ ಮಾಡಲು ಉನ್ನತ ನಿಯೋಗಗಳು ಮೊರಾದಾಬಾದ್‌ಗೆ ಈಗಾಗಲೇ ಭೇಟಿಯಿತ್ತಿದ್ದು, ಮೊರಾದಾಬಾದ್‌ನಲ್ಲಿ ಮಧ್ಯಮ ವೇಗದಲ್ಲಿ ಪ್ರಯೋಗ ನಡೆಸಿದ ಬಳಿಕ ಕೋಟಾ-ಸವಾಯಿ ಮಾಧೋಪುರ ಮಾರ್ಗದಲ್ಲಿ ಹೈಸ್ಪೀಡ್‌ನಲ್ಲಿ ರೈಲನ್ನು ಪರೀಕ್ಷೆ ಮಾಡಲಾಗುವುದು ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇಂಜಿನ್ ಇಲ್ಲದ ಮೊದಲ ದೇಶೀಯ ಟ್ರೈನ್ ಸಂಚಾರಕ್ಕೆ ಕ್ಷಣಗಣನೆ!

ಚೆನ್ನೈನಿಂದ ದೆಹಲಿಗೆ ನವೆಂಬರ್‌ 13ರಂದೇ ಬಂದು ತಲುಪಿರುವ ಈ ಟ್ರೈನ್ 18 ಸದ್ಯ ಸಫ್ದರ್‌ಜಂಗ್ ನಿಲ್ದಾಣದಲ್ಲಿ ನಿಂತಿದೆ. ಗಂಟೆಗೆ 200ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿರುವ ಈ ಟ್ರೈನ್ ಮೊದಲ ಪ್ರಯಾಣಕ್ಕೆ ಕಾದುನಿಂತಿದೆ. ಹಾಗಾದರೆ, ದೇಶದ ಮೊದಲ ಇಂಜಿನ್‌ಲೆಸ್ ಟ್ರೈನ್-18ರ ವಿಶೇಷತೆಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ಹೇಗಿದೆ ಟ್ರೈನ್ 18 ರೈಲು?

ಹೇಗಿದೆ ಟ್ರೈನ್ 18 ರೈಲು?

ಮೇಕ್ ಇನ್ ಇಂಡಿಯಾ ಯೋಜನೆಯಡಿ ಸಿದ್ಧಗೊಂಡಿರುವ ಈ ರೈಲಿನ ವಿನ್ಯಾಸ ಬುಲೆಟ್ ಟ್ರೈನ್ ಮಾದರಿಯಲ್ಲಿದೆ. ಇಷ್ಟೇ ಅಲ್ಲದೇ ಅತ್ಯಾಧುನಿಕ ಒಳಾಂಗಣಗಳನ್ನು ರೈಲಿನಲ್ಲಿ ಒದಗಿಸಲಾಗುತ್ತಿದೆ. ಆರಾಮದಾಯಕ ಪ್ರಯಾಣ ಹಾಗೂ ಲಗೆಜ್ ಇಡಲು ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ. ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

160 ಕಿ.ಮೀ ವೇಗದ ಟ್ರೈನ್!

160 ಕಿ.ಮೀ ವೇಗದ ಟ್ರೈನ್!

ಈಗಿರುವ ಸಾಮಾನ್ಯ ರೈಲುಗಳಲ್ಲಿ ಬೋಗಿಗಳನ್ನು ಇಂಜಿನ್ ಎಳೆದೊಯ್ಯುತ್ತದೆ. ಆದರೆ, ಟ್ರೈನ್ 18ನಲ್ಲಿ ಪ್ರತ್ಯೇಕ ಇಂಜಿನ್ ಇರುವುದಿಲ್ಲ. ಬದಲಾಗಿ ಮೆಟ್ರೋ ರೈಲು ಮಾದರಿಯಲ್ಲಿ ಬೋಗಿಯ ಕೆಳಗಡೆಯೇ ಇಂಜಿನ್ ಇರಲಿದೆ. ಈ ಟ್ರೈನಿನ ವೇಗ ಶತಾಬ್ದಿ ಟ್ರೈನ್ ವೇಗಕ್ಕಿಂತ ಹೆಚ್ಚಿರಲಿದ್ದು, ಗಂಟೆಗೆ 160 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ನಿರ್ವಹಣೆ ವೆಚ್ಚವೂ ಕಡಿಮೆ

ನಿರ್ವಹಣೆ ವೆಚ್ಚವೂ ಕಡಿಮೆ

ಪ್ರತ್ಯೇಕ ಇಂಜಿನ್ ಇಲ್ಲದಿರುವ ಕಾರಣ ಈ ಟ್ರೈನ್ ವೇಗ ಸಾಮರ್ಥ್ಯ ಹೆಚ್ಚಳವಾಗಿದೆ. ಹಾಗೆಯೇ ಈ ಟ್ರೈನ್ ನಿರ್ವಹಣೆ ವೆಚ್ಚವೂ ಕಡಿಮೆ ಎನ್ನಲಾಗಿದೆ.ರೈಲಿನ ನಿರ್ಮಾಣದ ಮೂಲಕ ವಿದೇಶದಿಂದ ಆಮದು ಮಾಡಿಕೊಳ್ಳಬೇಕಾದ ಹೊರೆ ತಗ್ಗಿದ್ದು, 170 ಕೋಟಿ ರೂ. ತಗಲಬೇಕಿದ್ದ ರೈಲು ವೆಚ್ಚವು 100ಕೋಟಿ ರೂ.ಗೆ ಇಳಿಕೆ ಕಂಡಿದೆ ಎನ್ನಲಾಗಿದೆ.

ಸ್ಟೇನ್​ಲೆಸ್ ಸ್ಟೀಲ್ ಬೋಗಿ

ಸ್ಟೇನ್​ಲೆಸ್ ಸ್ಟೀಲ್ ಬೋಗಿ

ಟ್ರೇನ್ 18ನ ಬೋಗಿಗಳನ್ನು ಸ್ಟೇನ್​ಲೆಸ್ ಸ್ಟೀಲ್​ನಿಂದ ನಿರ್ವಿುಸಲಾಗಿದೆ. ಇದರಲ್ಲಿ ಒಟ್ಟು 16 ಬೋಗಿಗಳಿರಲಿದ್ದು, ಎಲ್ಲವೂ ಹವಾನಿಯಂತ್ರಿತ ಆಗಿರಲಿವೆ. ಪ್ರತಿ ಬೋಗಿಯಲ್ಲಿ 56 ರಿಂದ 78 ಪ್ರಯಾಣಿಕರು ಪ್ರಯಾಣಿಸಬಹುದು. ಪ್ರತಿ ಬೊಗಿಯ ನಿರ್ಮಾಣಕ್ಕಾಗಿ 5 ರಿಂದ 6 ರೂಪಾಯಿಗಳನ್ನು ವೆಚ್ಚಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ಟ್ರೈನಿನ ವಿಶೇಷತೆಗಳು ಯಾವುವು?

ಟ್ರೈನಿನ ವಿಶೇಷತೆಗಳು ಯಾವುವು?

ಮೇಕ್ ಇನ್ ಇಂಡಿಯಾ ಯಶೋಗಾಥೆಯ ಈ ಟ್ರೈನ್ ಅತ್ಯುತ್ತಮ ವೇಗವರ್ಧಕ ಹಾಗು ಬ್ರೇಕಿಂಗ್ ವ್ಯವಸ್ಥೆ ಹೊಂದಿದೆ. ಈ ರೈಲಿನಲ್ಲಿ ಎಲ್‌ಇಡಿ ಬೆಳಕಿನ ವ್ಯವಸ್ಥೆ , ವೈಫೈ ಮತ್ತು ಜಿಪಿಎಸ್ ಆಧಾರಿತ ಪ್ರಯಾಣಿಕರ ವ್ಯವಸ್ಥೆ ಇರಲಿದೆ. ಬೋಗಿಗಳಲ್ಲಿ ಪ್ರತ್ಯೇಕ ಕಿಟಕಿಗಳನ್ನು ಅಳವಡಿಸುವ ಬದಲು ಪೂರ್ಣ ಬೋಗಿಗೆ ಕಿಟಕಿಯನ್ನು ನೀಡಿರುವುದು ಟ್ರೈನಿನ ವಿಶೇಷತೆಗಳಾಗಿವೆ.

Best Mobiles in India

English summary
Train 18 to be rolled out for testing in this week. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X