Home
ಸುದ್ದಿಜಾಲ

ಪರೀಕ್ಷಾರ್ಥ ಸಂಚಾರದಲ್ಲಿ ದಾಖಲೆ ನಿರ್ಮಿಸಿತು ಸಂಪೂರ್ಣ ಸ್ವದೇಶಿ 'ಟ್ರೈನ್-18'!!

ದೇಶದಲ್ಲಿ ತಯಾರಾದ ಮೊದಲ ಸ್ವದೇಶಿ ಎಂಜಿನ್ ರಹಿತ ರೈಲು ಎಂಬ ಹೆಗ್ಗಳಿಕೆಯನ್ನು ಪಡೆದಿದ್ದ 'ಟ್ರೈನ್-18' ಮತ್ತೊಂದು ದಾಖಲೆಯನ್ನು ಬರೆದಿದೆ. ಮೊನ್ನೆ ಮೊನ್ನೆಯಷ್ಟೇ ನಡೆದ ರೈಲು ಪರೀಕ್ಷಾರ್ಥ ಸಂಚಾರದಲ್ಲಿ ಟ್ರೈನ್-18 ದಾಖಲೆ ನಿರ್ಮಿಸಿದ್ದು, ಸಂಪೂರ್ಣ ಸ್ವದೇಶದಲ್ಲಿ ತಯಾರಾದ ರೈಲೊಂದು ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸಿ ಎಲ್ಲರನ್ನು ಮಂತ್ರಮುಗ್ದರನ್ನಾಗಿಸಿದೆ.

ಹೌದು, ಕೋಟಾ- ಸವಾಯಿ ಮಾಧೋಪುರ ನಡುವೆ ನಡೆದ ಮೊದಲ ಪರೀಕ್ಷಾರ್ಥ ಸಂಚಾರದಲ್ಲಿ ಗಂಟೆಗೆ 180 ಕಿ.ಮೀ ವೇಗದಲ್ಲಿ ಟ್ರೈನ್-18 ರೈಲು ಸಂಚರಿಸಿದೆ. ಸಂಪೂರ್ಣ ಸ್ವದೇಶದಲ್ಲಿ ತಯಾರಾದ ರೈಲೊಂದು ಈ ವೇಗದಲ್ಲಿ ಸಂಚರಿಸಿರುವುದು ಇದೇ ಮೊದಲು ಎಂದು ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಜನರಲ್ ಮ್ಯಾನೇಜರ್ ಎಸ್ ಮಣಿ ಅವರು ತಿಳಿಸಿದ್ದಾರೆ.

ಪರೀಕ್ಷಾರ್ಥ ಸಂಚಾರದಲ್ಲಿ ದಾಖಲೆ ನಿರ್ಮಿಸಿತು ಸಂಪೂರ್ಣ ಸ್ವದೇಶಿ 'ಟ್ರೈನ್-18'!!

'ಟ್ರೈನ್-18' ರೈಲಿನ ಪ್ರಮುಖ ಪರೀಕ್ಷೆಗಳು ಈಗಾಗಲೇ ಮುಕ್ತಾಯಗೊಂಡಿದ್ದು, ಸಣ್ಣ ಹೊಂದಾಣಿಕೆ ಕೆಲಸವಷ್ಟೇ ಬಾಕಿಯಿದೆ. ಈಗ ಕೊನೆ ಹಂತದ ಸುಧಾರಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಯಾವುದೇ ತಾಂತ್ರಿಕ ಸಮಸ್ಯೆ ಕಾಣಿಸಿಲ್ಲ ಎಂದು ಅವರು ಹೇಳಿದ್ದಾರೆ. ಹಾಗಾದರೆ, ಸಂಪೂರ್ಣ ಸ್ವದೇಶಿ ಟ್ರೈನ್ -18 ಟ್ರೈನಿನ ವಿಶೇಷತೆಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹೇಗಿದೆ ಟ್ರೇನ್ 18 ರೈಲು?

ಹೇಗಿದೆ ಟ್ರೇನ್ 18 ರೈಲು?

ಮೇಕ್ ಇನ್ ಇಂಡಿಯಾ ಯೋಜನೆಯಡಿ ಸಿದ್ಧಗೊಂಡಿರುವ ಈ ರೈಲಿನ ವಿನ್ಯಾಸ ಬುಲೆಟ್ ಟ್ರೇನ್ ಮಾದರಿಯಲ್ಲಿದೆ. ಇಷ್ಟೇ ಅಲ್ಲದೇ ಅತ್ಯಾಧುನಿಕ ಒಳಾಂಗಣಗಳನ್ನು ರೈಲಿನಲ್ಲಿ ಒದಗಿಸಲಾಗುತ್ತಿದೆ. ಆರಾಮದಾಯಕ ಪ್ರಯಾಣ ಹಾಗೂ ಲಗೆಜ್ ಇಡಲು ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ. ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ರೈಲಿನ ವಿಶೇಷತೆ ಏನು?

ರೈಲಿನ ವಿಶೇಷತೆ ಏನು?

ಚೆನ್ನೈ ಮೂಲದ ಐಸಿಎಫ್ ಟಿ-18 ರೈಲನ್ನು ಅಭಿವೃದ್ಧಿ ಪಡಿಸಿದೆ. ವಿದೇಶಿ ರೈಲುಗಳಲ್ಲಿ ಇರುವಂತೆ ಇದು ಸಂಪೂರ್ಣ ಹವಾ ನಿಯಂತ್ರಣ ಹಾಗೂ ಸಿಸಿಟಿವಿ ವ್ಯವಸ್ಥೆ ಹೊಂದಿದೆ. ರೈಲಿನಲ್ಲಿ 78 ಆಸನಗಳ ಸಾಮಾನ್ಯ ಬೋಗಿಗಳಿದ್ದರೆ, ಮಧ್ಯದಲ್ಲಿ ತಲಾ 52 ಆಸನಗಳ ಎರಡು ಎಕ್ಸಿಕ್ಯುಟಿವ್ ಬೋಗಿಯನ್ನು ನೀಡಲಾಗಿದೆ. ಒಟ್ಟಿನಲ್ಲಿ ಇದು ದೇಶದಲ್ಲೇ ತಯಾರಾದ ಹೈಫೈ ಟ್ರೈನ್ ಆಗಿದೆ.

200 ಕಿ.ಮೀ ವೇಗದ ಟ್ರೈನ್!

200 ಕಿ.ಮೀ ವೇಗದ ಟ್ರೈನ್!

ಟ್ರೇನ್ 18ನಲ್ಲಿ ಪ್ರತ್ಯೇಕ ಇಂಜಿನ್ ಇರುವುದಿಲ್ಲ. ಬದಲಾಗಿ ಮೆಟ್ರೋ ರೈಲು ಮಾದರಿಯಲ್ಲಿ ಬೋಗಿಯ ಕೆಳಗಡೆಯೇ ಇಂಜಿನ್ ಇರಲಿದೆ. ಈ ಟ್ರೈನಿನ ವೇಗ ಶತಾಬ್ದಿ ಟ್ರೈನ್ ವೇಗಕ್ಕಿಂತ ಹೆಚ್ಚಿರಲಿದ್ದು, ಗಂಟೆಗೆ 200 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಈ ಟ್ರೈನ್ ಹೊಂದಿದೆ. ಪರೀಕ್ಷೆಯಲ್ಲಿ 180 ಕಿ.ಮೀ ವೇಗವನ್ನು ಮುಟ್ಟಿ ದಾಖಲೆಯನ್ನು ಬರೆದಿದೆ.

ನಿರ್ವಹಣೆ ವೆಚ್ಚವೂ ಕಡಿಮೆ

ನಿರ್ವಹಣೆ ವೆಚ್ಚವೂ ಕಡಿಮೆ

ಪ್ರತ್ಯೇಕ ಇಂಜಿನ್ ಇಲ್ಲದಿರುವ ಕಾರಣ ಈ ಟ್ರೈನ್ ವೇಗ ಸಾಮರ್ಥ್ಯ ಹೆಚ್ಚಳವಾಗಿದೆ. ಹಾಗೆಯೇ ಈ ಟ್ರೈನ್ ನಿರ್ವಹಣೆ ವೆಚ್ಚವೂ ಕಡಿಮೆ ಎನ್ನಲಾಗಿದೆ.ರೈಲಿನ ನಿರ್ಮಾಣದ ಮೂಲಕ ವಿದೇಶದಿಂದ ಆಮದು ಮಾಡಿಕೊಳ್ಳಬೇಕಾದ ಹೊರೆ ತಗ್ಗಿದ್ದು, 170 ಕೋಟಿ ರೂ. ತಗಲಬೇಕಿದ್ದ ರೈಲು ವೆಚ್ಚವು 100 ಕೋಟಿ ರೂ.ಗೆ ಇಳಿಕೆ ಕಂಡಿದೆ ಎನ್ನಲಾಗಿದೆ.

ಸ್ಟೇನ್​ಲೆಸ್ ಸ್ಟೀಲ್ ಬೋಗಿ

ಸ್ಟೇನ್​ಲೆಸ್ ಸ್ಟೀಲ್ ಬೋಗಿ

ಟ್ರೇನ್ 18ನ ಬೋಗಿಗಳನ್ನು ಸ್ಟೇನ್​ಲೆಸ್ ಸ್ಟೀಲ್​ನಿಂದ ನಿರ್ವಿುಸಲಾಗಿದೆ. ಇದರಲ್ಲಿ ಒಟ್ಟು 16 ಬೋಗಿಗಳಿರಲಿದ್ದು, ಎಲ್ಲವೂ ಹವಾನಿಯಂತ್ರಿತ ಆಗಿರಲಿವೆ. ಪ್ರತಿ ಬೋಗಿಯಲ್ಲಿ 56 ರಿಂದ 78 ಪ್ರಯಾಣಿಕರು ಪ್ರಯಾಣಿಸಬಹುದು. ಪ್ರತಿ ಬೊಗಿಯ ನಿರ್ಮಾಣಕ್ಕಾಗಿ 5 ರಿಂದ 6 ರೂಪಾಯಿಗಳನ್ನು ವೆಚ್ಚಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ಟ್ರೈನಿನ ಇತರೆ ವಿಶೇಷತೆಗಳು?

ಟ್ರೈನಿನ ಇತರೆ ವಿಶೇಷತೆಗಳು?

ಮೇಕ್ ಇನ್ ಇಂಡಿಯಾ ಯಶೋಗಾಥೆಯ ಈ ಟ್ರೈನ್ ಅತ್ಯುತ್ತಮ ವೇಗವರ್ಧಕ ಹಾಗು ಬ್ರೇಕಿಂಗ್ ವ್ಯವಸ್ಥೆ ಹೊಂದಿದೆ. ಈ ರೈಲಿನಲ್ಲಿ ಎಲ್‌ಇಡಿ ಬೆಳಕಿನ ವ್ಯವಸ್ಥೆ , ವೈಫೈ ಮತ್ತು ಜಿಪಿಎಸ್ ಆಧಾರಿತ ಪ್ರಯಾಣಿಕರ ವ್ಯವಸ್ಥೆ ಇರಲಿದೆ. ಬೋಗಿಗಳಲ್ಲಿ ಪ್ರತ್ಯೇಕ ಕಿಟಕಿಗಳನ್ನು ಅಳವಡಿಸುವ ಬದಲು ಪೂರ್ಣ ಬೋಗಿಗೆ ಕಿಟಕಿಯನ್ನು ನೀಡಿರುವುದು ಟ್ರೈನಿನ ವಿಶೇಷತೆಗಳಾಗಿವೆ.

ವಾಣಿಜ್ಯ ಸಂಚಾರ ಯಾವಾಗ?

ವಾಣಿಜ್ಯ ಸಂಚಾರ ಯಾವಾಗ?

2019ರ ಜನೆವರಿ 18ರಿಂದ ಟ್ರೇನ್​-18 ತನ್ನ ವಾಣಿಜ್ಯ ಸಂಚಾರ ಆರಂಭಿಸುವ ನಿರೀಕ್ಷೆ ಇದೆ. ಮೂರು ತಿಂಗಳು ನಡೆಯುವ ಪರೀಕ್ಷಾರ್ಥ ಓಡಾಟವನ್ನು ತ್ವರಿತಗತಿಯಲ್ಲಿ ಮುಗಿಸಲಾಗುತ್ತಿದೆ. ಈಗನ ಅತಿ ವೇಗದ ಶತಾಬ್ದಿ ರೈಲಿಗೆ ಬದಲಾಗಿ ಟ್ರೇನ್​-18 ಅನ್ನು ಸೇರ್ಪಡೆ ಮಾಡಲಾಗುವುದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Best Mobiles in India

English summary
India's first locomotive-less train, known as Train 18, breached the 180 kmph speed limit during a test run on Sunday, a senior railway official said here. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+