Home
ಸುದ್ದಿಜಾಲ

ಗೂಗಲ್, ಯೂಟ್ಯೂಬ್‌ನಲ್ಲಿ 'ಕೆಜಿಎಫ್' ಹವಾ!..ಟ್ರೈಲರ್‌ಗೆ ವಿಶ್ವವೇ ಫಿದಾ!!

ಕನ್ನಡಿಗರೇ ಊಹಿಸದ ರೀತಿಯಲ್ಲಿ ಕನ್ನಡ ಸಿನಿಮಾದ ಒಂದು ಟ್ರೈಲರ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಸೃಷ್ಟಿಸಿದೆ. ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಕೆಜಿಎಫ್' ಚಿತ್ರದ ಟ್ರೈಲರ್ ಬಿಡುಗಡೆಯಾದ ಕೇವಲ 24 ಗಂಟೆಗಳ ಒಳಗಾಗಿ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದ್ದು, ಯೂಟ್ಯೂಬ್ ಮೂಲಕ ವಿಶ್ವ ಸಿನಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ.

ಹೌದು, ಕನ್ನಡ, ಹಿಂದಿ, ತೆಲುಗು, ಮಲಯಾಳಂ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತಯಾರಾಗಿರುವ 'ಕೆಜಿಎಫ್' ಸಿನಿಮಾ ಫೇಸ್‌ಬುಕ್ ಮತ್ತು ಯೂಟ್ಯೂಬ್‌ಗಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ. ಯೂಟ್ಯೂಬ್‌ನ ಟ್ರೆಂಡ್ ವಿಡಿಯೋಗಳಲ್ಲಿ ತೆಲುಗು ಅವತರಣಿಕೆಯ ಸಿನಿಮಾ ಕೆಜಿಎಫ್ ಮೊದಲ ಸ್ಥಾನದಲ್ಲಿದ್ದರೆ, ಹಿಂದಿ ಭಾಷೆಯಲ್ಲಿ 5 ಮಿಲಿಯನ್ ವೀಕ್ಷಣೆ ಪಡೆಯುವತ್ತ ಮುನ್ನುಗುತ್ತಿದೆ.

ಗೂಗಲ್, ಯೂಟ್ಯೂಬ್‌ನಲ್ಲಿ 'ಕೆಜಿಎಫ್' ಹವಾ!..ಟ್ರೈಲರ್‌ಗೆ ವಿಶ್ವವೇ ಫಿದಾ!!

ಕನ್ನಡ ಚಿತ್ರರಂಗದಲ್ಲೇ ಅತೀ ದೊಡ್ಡ ಬಜೆಟ್ ಸಿನಿಮಾ ಎಂದು ಹೇಳಲಾಗುತ್ತಿರುವ "ಕೆಜಿಎಫ್' ಮೇಕಿಂಗ್‌ಗೆ ವಿಶ್ವ ಸಿನಿ ರಸಿಕರು ಫಿದಾ ಆಗಿದ್ದು, ಕೇವಲ 24 ಗಂಟೆಗಳಲ್ಲೇ ದಾಖಲೆ ಸೃಷ್ಟಿಸಿದೆ ಹಾಗಾದರೆ, ಯೂಟ್ಯೂಬ್‌ನಲ್ಲಿ ಕೆಜಿಎಫ್ ಸಿನಿಮಾ ಹೇಗೆ ಟ್ರೆಂಡ್ ಹೇಗಿದೆ? ಗೂಗಲ್‌ನಲ್ಲಿ ಕೆಜಿಎಫ್ ಸಿನಿಮಾ ಟ್ರೈಲರ್‌ ಟ್ರೆಂಡ್ ವೇಗ ಎಷ್ಟಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ನೋಡಿ.

ಗೂಗಲ್‌ನಲ್ಲಿ ಟ್ರೆಂಡ್!

ಗೂಗಲ್‌ನಲ್ಲಿ ಟ್ರೆಂಡ್!

'ಕೆಜಿಎಫ್' ಚಿತ್ರದ ಟ್ರೈಲರ್ ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲೇ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಗೂಗಲ್‌ನ ಸರ್ಚ್ ಟ್ರೆಂಡಿಂಗ್ ಮ್ಯಾಪ್ ಮೂಲಕ ಕೆಜಿಎಫ್ ಟ್ರೆಂಡ್ ಅನ್ನು ನಾವು ನೋಡಬಹುದಾಗಿದ್ದು, ರಾಜ್ಯದಲ್ಲಿ ಕೆಜಿಎಫ್ ಬಗ್ಗೆ ಹೆಚ್ಚು ಸರ್ಚ್ ಆಗುತ್ತಿದ್ದರೆ, ದೇಶದೆಲ್ಲೆಡೇ ಕೆಜಿಎಫ್ ಸಿನಿಮಾದ ಸರ್ಚ್ ವೇಗ +850 ಹೆಚ್ಚಾಗುತ್ತಿದೆ. ವಿಶ್ವದ ಹಲವೆಡೆ ಕೂಡ ಕೆಜಿಎಫ್ ಟ್ರೆಂಡ್ ಆಗುತ್ತಿರುವ ಬಗ್ಗೆ ಗೂಗಲ್‌ ಟ್ರೆಂಡ್ಸ್ ಮೂಲಕ ತಿಳಿಯಬಹುದಾಗಿದೆ.

ಯೂಟ್ಯೂಬ್‌ನಲ್ಲಿ ನಂ 1!

ಯೂಟ್ಯೂಬ್‌ನಲ್ಲಿ ನಂ 1!

ತೆಲುಗು ಅವತರಣಿಕೆಯಲ್ಲಿ ಬಿಡುಗಡೆಯಾಗಿರುವ ಕೆಜಿಎಫ್ ಸಿನಿಮಾದ ಟ್ರೈಲರ್ ಭಾರತದ ಯೂಟ್ಯೂಬ್‌ನಲ್ಲಿ ಹವಾ ಎಚ್ಚಿಸಿದೆ. ಯೂಟ್ಯೂಬ್ ಟ್ರೆಂಡ್ ಲೀಸ್ಟ್‌ನಲ್ಲಿ ತೆಲುಗು ಅವತರಣಿಕೆಯ ಕೆಜಿಎಫ್ ಸಿನಿಮಾ ಟ್ರೈಲರ್ ಮೊದಲ ಸ್ಥಾನದಲ್ಲಿದ್ದರೆ, ಗೂಗಲ್‌ ಟ್ರೆಂಡ್ಸ್‌ನಲ್ಲಿ 850% ವೇಗದಲ್ಲಿ ಸರ್ಚ್ ಆಗುತ್ತಿದೆ. ಮೊದಲ 21 ಗಂಟೆಗಳಲ್ಲೇ 2.4 ಮಿಲಿಯನ್ ವೀಕ್ಷಣೆ ಪಡೆದಿರುವ ಟ್ರೈಲರ್ ಇನ್ನೆರಡು ದಿನಗಳ ಕಾಲ ನಂ.1 ಸ್ಥಾನದಲ್ಲೇ ಇರುವುದನ್ನು ಅಂದಾಜಿಸಲಾಗಿದೆ.

ಕೆಜಿಎಫ್‌ಗೆ ಕನ್ನಡಿಗರು ಫಿದಾ!

ಕೆಜಿಎಫ್‌ಗೆ ಕನ್ನಡಿಗರು ಫಿದಾ!

ತೆಲುಗು ಅವತರಣಿಕೆಯಲ್ಲಿ ಬಿಡುಗಡೆಯಾಗಿರುವ ಕೆಜಿಎಫ್ ಸಿನಿಮಾದ ಟ್ರೈಲರ್ ಭಾರತದ ಯೂಟ್ಯೂಬ್‌ನಲ್ಲಿ ನಂ ಒನ್ ಟ್ರೆಂಡ್ ಆಗಿದ್ದರೆ, ಕನ್ನಡದ ಸಿನಿಮಾ ಕೆಜಿಎಫ್ ಟ್ರೈಲರ್ ಕೇವಲ 21 ಗಂಟೆಗಳಲ್ಲೇ 5 ಮಿಲಿಯನ್ ವೀಕ್ಷಣೆಗಳನ್ನು ಪಡೆದು ಗೂಗಲ್‌ ಟ್ರೆಂಡ್‌ನಲ್ಲಿ ಹೆಚ್ಚು ಸರ್ಚ್ ಆಗಿರುವ ಕೀವರ್ಡ್ಸ್ ಆಗಿದೆ. ಕನ್ನಡ ಚಿತ್ರರಂಗದಲ್ಲೇ ಇದು ಮೊದಲು ಎಂದು ಹೇಳಬಹುದಾಗಿದ್ದು, ಯೂಟ್ಯೂಬ್‌ನಲ್ಲಿಯೂ ಸಹ ಟ್ರೆಂಡ್ ಸೃಷ್ಟಿಸುವತ್ತ ಮುನ್ನುಗುತ್ತಿದೆ.

ಬೆದರಿದ ಬಾಲಿವುಡ್!

ಬೆದರಿದ ಬಾಲಿವುಡ್!

ಹಿಂದಿ ಅವತರಣಿಕೆಯಲ್ಲಿ ಬಿಡುಗಡೆಯಾಗಿರುವ ಕೆಜಿಎಫ್ ಸಿನಿಮಾದ ಟ್ರೈಲರ್ ಬಾಲಿವುಡ್ ಬಾದ್‌ಶಾಗಳಿಗೂ ಸೆಡ್ಡು ಹೊಡೆಯುವ ಸೂಚನೆಯನ್ನು ನೀಡಿದೆ. ಯೂಟ್ಯೂಬ್‌ಗೆ ಟ್ರೈಲರ್ ಬಿಡುಗಡೆಯಾದ ಮೊದಲ 21 ಗಂಟೆಗಳಲ್ಲೇ 5.5 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಇನ್ನು ಕೆಲವೇ ಗಂಟೆಗಳಲ್ಲಿ ವೀಕ್ಷಣೆ 5 ಮಿಲಿಯನ್ ದಾಟುವ ಸೂಚನೆಯನ್ನು ಟ್ರೈಲರ್ ನೀಡಿದೆ. ಹಿಂದಿ ಅವತರಣಿಕೆಯ ಟ್ರೈಲರ್ ಸರ್ಚ್ ವೇಗ ಶೇ.750% ಹೆಚ್ಚಿದೆ ಎಂದು ಗೂಗಲ್‌ ಮೂಲಕ ತಿಳಿದುಬಂದಿದೆ.

ತಮಿಳಿನಲ್ಲಿಯೂ ಹವಾ!

ತಮಿಳಿನಲ್ಲಿಯೂ ಹವಾ!

ದೇಶದೆಲ್ಲೆಡೇ ಟ್ರೆಂಡ್ ಸೃಷ್ಟಿಸುತ್ತಿರುವ ಕೆಜಿಎಫ್ ಸಿನಿಮಾ ನೋಡಲು ತಮಿಳು ಸಿನಿರಸಿಕರು ಸಹ ಮುಂದಾಗುತ್ತಿದ್ದಾರೆ. ಕನ್ನಡ, ತೆಲುಗು, ಹಿಂದಿಯಯಷ್ಟು ವೇಗವಾಗಿ ತಮಿಳು ಸಿನಿಮಾ ಟ್ರೈಲರ್ ವೀಕ್ಷಣೆಗಳನ್ನು ಪಡೆದುಕೊಳ್ಳದೇ ಇದ್ದರೂ, ಮೊದಲ 21 ಗಂಟೆಗಳಲ್ಲಿ 610K (6.1 ಲಕ್ಷ) ವೀಕ್ಷಣೆಗಳನ್ನು ಪಡೆದುಕೊಂಡಿದೆ. ತಮಿಳಿನಲ್ಲಿ ಕಿಜಿಎಫ್ ಸಿನಿಮಾ ಟ್ರೈಲರ್ ಸರ್ಚ್ ವೇಗ 200% ಹೆಚ್ಚಿದ್ದು, ಕನ್ನಡ ಸಿನಿಮಾಗೆ ಅಲ್ಲಿ ಸಿಕ್ಕಿರುವ ಮೊದಲ ಭರ್ಜರಿ ರೆಸ್ಪಾನ್ಸ್ ಇದಾಗಿದೆ.

ಮಲೆಯಾಳಂನಲ್ಲೂ ಮಿಂಚು!

ಮಲೆಯಾಳಂನಲ್ಲೂ ಮಿಂಚು!

ದೇಶದೆಲ್ಲೆಡೇ ಮಿಂಚು ಹರಿಸುತ್ತಿರುವ ಕೆಜಿಎಫ್ ಮಲೆಯಾಳಂ ಅವತರಣಿಕೆ ಕೂಡ ಭಾರೀ ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿದೆ. ಮಲೆಯಾಳಂ ಅವತರಣಿಕೆಯ ಕೆಜಿಎಫ್ ಸಿನಿಮಾ ಟ್ರೈಲರ್ 460k (4.6 ಲಕ್ಷ) ವೀಕ್ಷಣೆಗಳನ್ನು ಕಂಡಿದೆ. ಕನ್ನಡ, ತೆಲುಗು, ಹಿಂದಿ ಭಾಷೆಗಳಿಗೆ ಹೋಲಿಸಿದರೆ ವೀಕ್ಷಣೆ ಪ್ರಮಾಣ ಕಡಿಮೆ ಇದ್ದರೂ, ವೀಕ್ಷಕರ ಪ್ರಮಾಣ ಹೆಚ್ಚಾಗಿದೆ ಎಂದು ತಿಳಿಯಬಹುದಾಗಿದ್ದು, ಕೇರಳದಲ್ಲಿ ಕೆಜಿಎಫ್ ಸರ್ಚ್ ವೇಗ ಶೇ.400 ರಷ್ಟಿರುವುದನ್ನು ಗೂಗಲ್‌ ಟ್ರೆಂಡ್ಸ್‌ನಲ್ಲಿ ನೋಡಬಹುದು.

Best Mobiles in India

English summary
Trending: New trailer Of kGf Introduces Us To The 'Bloody Mines Of Kolar. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+