Home
ಸುದ್ದಿಜಾಲ

ಟ್ರೂಕಾಲರ್‌ನಲ್ಲೂ ವಾಯ್ಸ್‌ ಕಾಲ್‌..! ಕಾಲ್‌ ವೇಟಿಂಗ್‌, ಐಡೆಂಟಿಟಿ ಫೀಚರ್‌..!

By Gizbot Bureau

ಜನಪ್ರಿಯ ಆಪ್‌ ಟ್ರೂಕಾಲರ್ ಅಪ್‌ಡೇಟ್‌ ಆಗಿದ್ದು, ಟ್ರೂಕಾಲರ್‌ ವಾಯ್ಸ್‌ನಲ್ಲಿ ವಾಯ್ಸ್ ಓವರ್ ಇಂಟರ್‌ನೆಟ್ ಪ್ರೊಟೊಕಾಲ್ (ವಿಒಐಪಿ) ಆಧಾರಿತ ವಾಯ್ಸ್‌ ಕಾಲ್‌ ಸೇವೆಯನ್ನು ಸಂಯೋಜಿತ ಕಾಲ್‌ ವೇಟಿಂಗ್‌ ಫೀಚರ್‌ನೊಂದಿಗೆ ನವೀಕರಿಸಲಾಗಿದೆ. ಹೊಸ ಅಪ್‌ಡೇಟ್‌ ಟ್ರೂಕಾಲರ್ ಬಳಕೆದಾರರಿಗೆ "ಅಡಚಣೆ-ಮುಕ್ತ" ವಾಯ್ಸ್‌ ಕಾಲ್‌ ಬೆಂಬಲವನ್ನು ನೀಡುತ್ತದೆ. ಹೊಸ ಅಪ್‌ಡೇಟ್‌ನ ಹೊರತಾಗಿ, ಟ್ರೂಕಾಲರ್ ವಾಯ್ಸ್‌ ಸೇವೆಯನ್ನು ಜಗತ್ತಿನಾದ್ಯಂತ ಐಒಎಸ್ ಬಳಕೆದಾರರಿಗೆ ಪರಿಚಯಿಸಲಾಗಿದ್ದು, ಈ ಹಿಂದೆ ಆಂಡ್ರಾಯ್ಡ್ ಬಳಕೆದಾರರಿಗೆ ಈ ಸೇವೆಯನ್ನು ನೀಡಲಾಗಿತ್ತು.

ವಾಟ್ಸ್‌ಆಪ್‌, ಸ್ಕೈಪ್‌ಗೆ ಪ್ರತಿಸ್ಪರ್ಧಿ

ವಾಟ್ಸ್‌ಆಪ್‌, ಸ್ಕೈಪ್‌ಗೆ ಪ್ರತಿಸ್ಪರ್ಧಿ

ಮೊಬೈಲ್ ಡೇಟಾ ಅಥವಾ ವೈ-ಫೈ ನೆಟ್‌ವರ್ಕ್ ಬಳಸಿ ಟ್ರೂಕಾಲರ್ ಆಪ್‌ನಲ್ಲಿ ವಾಯ್ಸ್‌ ಕಾಲ್‌ ಮಾಡಲು ಈ ಫೀಚರ್‌ನ್ನು ವಿನ್ಯಾಸಗೊಳಿಸಲಾಗಿದೆ. ಜನಪ್ರಿಯ ಆಪ್‌ಗಳಾದ ವಾಟ್ಸ್‌ಆಪ್ ಮತ್ತು ಸ್ಕೈಪ್ ಒದಗಿಸುವ ವಾಯ್ಸ್‌ ಕಾಲ್‌ ಫೀಚರ್‌ಗೆ ಟ್ರೂಕಾಲ್‌ ವಾಯ್ಸ್‌ ಪ್ರತಿಸ್ಪರ್ಧಿಯಾಗಿದ್ದು, ಜನಪ್ರಿಯವಾಗುತ್ತಿದೆ.

ಕಾಲ್‌ ವೇಟಿಂಗ್‌ ಫೀಚರ್‌

ಕಾಲ್‌ ವೇಟಿಂಗ್‌ ಫೀಚರ್‌

ಕಾಲ್‌ ವೇಟಿಂಗ್‌ ಫೀಚರ್‌ನೊಂದಿಗೆ, ಟ್ರೂಕಾಲರ್‌ ವಾಯ್ಸ್‌ ಬಳಕೆದಾರರರಿಗೆ ಎರಡನೇ ಕರೆ ಬಂದಾಗ ತಿಳಿಸುತ್ತದೆ. ಪ್ರಸ್ತುತ ಕರೆಯನ್ನು ಸ್ವಯಂ ವಿರಾಮವಿಲ್ಲದೇ ನೊಟಿಫಿಕೇಷನ್‌ ಬರುತ್ತದೆ. ಅಲ್ಲದೆ, ಈ ಆಪ್‌ ಎರಡನೇ ಕರೆ ಮಾಡುವವರಿಗೆ ಕಾಲ್‌ ವೇಟಿಂಗ್‌ ಸ್ಟೇಟಸ್‌ ಬಗ್ಗೆ ತಿಳಿಸುತ್ತದೆ. ಇದು VoIP ಕರೆಯೊಂದಿಗೆ ಮುಂದುವರಿಯಲು ಅಥವಾ ಅವರ ಆಯ್ಕೆಯ ಆಧಾರದ ಮೇಲೆ ಎರಡನೇ ಕರೆಗೆ ಬದಲಾಯಿಸಲು ಬಳಕೆದಾರರಿಗೆ ಸ್ವಾತಂತ್ರ್ಯ ಒದಗಿಸುತ್ತದೆ. ಫೋನ್ ಮತ್ತು VoIP ಕರೆಗಳೆರಡರಲ್ಲೂ ಕಾರ್ಯನಿರ್ವಹಿಸಲು ಈ ಫೀಚರ್‌ನ್ನು ನಿರ್ಮಿಸಲಾಗಿದೆ.

ಐಕಾನಿಕ್‌ ಕಾಲರ್‌ ಐಡಿ

ಐಕಾನಿಕ್‌ ಕಾಲರ್‌ ಐಡಿ

ಕಾಲ್‌ ವೇಟಿಂಗ್‌ ಫೀಚರ್‌ ಜೊತೆಗೆ ಅಪ್‌ಡೇಟ್‌ ಹೊಂದಿದ ಟ್ರೂಕಾಲರ್ ವಾಯ್ಸ್‌ ಟ್ರೂಕಾಲರ್ ಪ್ಲಾಟ್‌ಫಾರ್ಮ್‌ನ ಐಕಾನಿಕ್ ಕಾಲರ್ ಐಡಿ ಫೀಚರ್‌ನ್ನು ಹೊಂದಿದೆ. ಅಜ್ಞಾತ ಸಂಖ್ಯೆ ಮತ್ತು ವಾಯ್ಸ್‌ ಸ್ಪ್ಯಾಮ್ VoIP ಕರೆಗಳನ್ನು ಕಂಡುಹಿಡಿಯಲು ಬಳಕೆದಾರರಿಗೆ ಇದು ಸಹಾಯ ಮಾಡುತ್ತದೆ. ಕಾಲರ್‌ ಐಡಿ ಫೀಚರ್‌ನಿಂದ ಎರಡನೇ ಕರೆಗೆ ಬದಲಾಗಬೇಕೋ ಅಥವಾ ಪ್ರಸ್ತುತ ಕರೆಯೊಂದಿಗೆ ಮುಂದುವರಿಯಬೇಕೆ ಎಂದು ನಿರ್ಧರಿಸಲು ಸಹಾಯ ಮಾಡುತ್ತದೆ.

ಐಒಎಸ್‌ ಬಳಕೆದಾರರಿಗೆ ಲಭ್ಯ

ಐಒಎಸ್‌ ಬಳಕೆದಾರರಿಗೆ ಲಭ್ಯ

ಜಾಗತಿಕವಾಗಿ ಎಲ್ಲಾ ಐಒಎಸ್ ಬಳಕೆದಾರರಿಗಾಗಿ ಟ್ರೂಕಾಲರ್ ವಾಯ್ಸ್‌ನ್ನು ಬಿಡುಗಡೆ ಮಾಡುವ ಮೂಲಕ ಟ್ರೂಕಾಲರ್ ತನ್ನ ವಿಒಐಪಿ ಸೇವೆಯನ್ನು ವಿಸ್ತರಿಸಿದೆ. ಆಂಡ್ರಾಯ್ಡ್ ಬಳಕೆದಾರರಿಗಾಗಿ ಈ ಸೇವಯನ್ನು ಜೂನ್‌ನಲ್ಲಿ ಪ್ರಾರಂಭಿಸಲಾಗಿತ್ತು. ಹೊಸ ಬದಲಾವಣೆಗಳು ಟ್ರೂಕಾಲರ್‌ನ ಹೊಸ ಬಳಕೆದಾರರನ್ನು ಆಕರ್ಷಿಸಲು ಮತ್ತು ಅದರ ವಾಯ್ಸ್‌ ಸೇವೆಯಲ್ಲಿ ತೊಡಗುವಿಕೆಯನ್ನು ಹೆಚ್ಚಿಸಲು ಸಹಾಕಾರಿಯಾಗಿದೆ. ಸೆಪ್ಟೆಂಬರ್ ವೇಳೆಗೆ, ಟ್ರೂಕಾಲರ್ ಆಪ್‌ನ್ನು 500 ಮಿಲಿಯನ್ ಬಳಕೆದಾರರು ಡೌನ್‌ಲೋಡ್‌ ಮಾಡಿಕೊಂಡಿದ್ದು, ಜಾಗತಿಕವಾಗಿ 150 ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರನ್ನು ಟ್ರೂಕಾಲರ್‌ ಹೊಂದಿದೆ.

Best Mobiles in India

English summary
True Caller Integrated Call Waiting Feature Rolled Out For iOS Users Globally
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+