Just In
- 23 min ago
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
- 2 hrs ago
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- 2 hrs ago
ಅಗ್ಗದ ಬೆಲೆಗೆ ಹೊಸ ಪ್ಲ್ಯಾನ್ ಪರಿಚಯಿಸಿದ ವಿ ಟೆಲಿಕಾಂ; ಸಿಮ್ ಆಕ್ಟಿವ್ ಇಡಲು ಇದು ಬೆಸ್ಟ್!
- 4 hrs ago
ಏರ್ಟೆಲ್ ಜೊತೆಗೆ ಕೈ ಜೋಡಿಸಿದ ಮೆಟ್ರೋ, ಇನ್ಮುಂದೆ ಪ್ರಯಾಣಿಕರಿಗೆ ಈ ಸೇವೆ ಇನ್ನಷ್ಟು ಸರಳ!
Don't Miss
- News
ಸುಳ್ಳು ಭರವಸೆ ಕೊಟ್ಟು ಜನರನ್ನು ದಾರಿತಪ್ಪಿಸುವ ಕೆಲಸ; ಎಲ್ಲಾ ಸಮಯದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ: ಸಿಎಂ
- Movies
ಏಜೆಯನ್ನು ಮುದ್ದಾಗಿ ಕಾಡಿದ ಲೀಲಾಳನ್ನು ಕಂಡು ಹಲ್ಲು ಮಸೆಯುತ್ತಿರುವ ದುರ್ಗಾ!
- Automobiles
ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...
- Sports
ಮೂಲೆಗುಂಪಾದ ಶಿಖರ್ ಧವನ್ ಬಗ್ಗೆ ಅಶ್ವಿನ್ ಅಚ್ಚರಿಯ ಹೇಳಿಕೆ: ಇಶಾನ್, ಗಿಲ್ ಬಗ್ಗೆ ಹೇಳಿದ್ದೇನು?
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಒಂದೇ ಒಂದು ಸಂದೇಶಕ್ಕೆ ಬೆಚ್ಚಿಬಿದ್ದರು 'ಟ್ರೂ ಕಾಲರ್' ಬಳಕೆದಾರರು!
ಸದಾ ಒಂದಿಲ್ಲೊಂದು ವಿವಾದಕ್ಕೆ ತುತ್ತಾಗುತ್ತಲೇ ಇರುವ 'ಟ್ರೂ ಕಾಲರ್' ಆಪ್ ಬಳಕೆದಾರರು ಇದೀಗ ಮತ್ತೊಮ್ಮೆ ಬೆಚ್ಚಿಬಿದ್ದಿದ್ದಾರೆ. ಟ್ರೂ ಕಾಲರ್ ಬಳಕೆದಾರರ ಬಳಿ ಐಸಿಐಸಿಐ ಬ್ಯಾಂಕ್ ಖಾತೆ ಇಲ್ಲದಿದ್ದರೂ ಕೂಡ ಹಲವಾರು ಬಳಕೆದಾರರಿಗೆ ಯುಪಿಐ ನೋಂದಾವಣೆಯನ್ನು ಸ್ವಯಂಚಾಲಿತವಾಗಿ ಆರಂಭಿಸಿ ಟ್ರೂ ಕಾಲರ್ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಟ್ರೂ ಕಾಲರ್ ಇತ್ತೀಚೆಗೆ 10.41.6.ಅಪ್‌ಡೇಟ್ ಅನ್ನು ಬಿಡುಗಡೆ ಮಾಡಿತ್ತು. ಆ ಬಳಿಕ ಈ ಆಘಾತಕಾರಿ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗಿದೆ.

ಹೌದು, ಬೆಳಗ್ಗೆ ಎದ್ದು ಫೋನ್ ತೆರೆದಾಕ್ಷಣ ಅಚ್ಚರಿ ಕಾದಿತ್ತು. ಐಸಿಐಸಿಐ ಬ್ಯಾಂಕಿನಿಂದ ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ಸೇವೆಗೆ ನೋಂದಾಯಿಸಿದೆ ಎಂಬ ಸಂದೇಶ ಬಂದಿತ್ತು ಎಂದು ಹಲವು ಟ್ರೂ ಕಾಲರ್ ಬಳಕೆದಾರರು ದೂರಿದ್ದಾರೆ. ಧೀರಜ್ ಕುಮಾರ್ ಎಂಬುವವರು ಹೇಳುವಂತೆ, ಬೆಳ್ಳಂಬೆಳಗ್ಗೆ ಐಸಿಐಸಿಐ ಬ್ಯಾಂಕಿನಿಂದ, ನಿಮ್ಮ ಯುಪಿಐ ಖಾತೆ ತೆರೆಯಲಾಗಿದೆ ಎಂಬ ಸಂದೇಶ ಬಂದಾಗ ಧೀರಜ್ ಬೆಚ್ಚಿಬಿದ್ದರು. ವಿಚಿತ್ರವೆಂದರೆ, ಧೀರಜ್ ತಾವು ಐಸಿಐಸಿಐ ಬ್ಯಾಂಕಿನಲ್ಲಿ ಖಾತೆಯನ್ನೇ ಹೊಂದಿಲ್ಲ ಎಂದಿದ್ದಾರೆ.
ಇಂತಹ ಸಂದೇಶವನ್ನು ನೋಡಿದ ಬಹುತೇಕ ಟ್ರೂ ಕಾಲರ್ ಬಳಕೆದಾರರು ತಮ್ಮ ಬ್ಯಾಂಕ್ ಖಾತೆಯ ಗೌಪ್ಯತೆ ಬಯಲಾಗಿರಬಹುದು ಎಂದು ಹೆದರಿದ್ದಾರೆ. ನನ್ನ ಖಾತೆ ಹ್ಯಾಕ್ ಆಗಿರಬಹುದು, ಇದರಿಂದ ನನ್ನ ಬ್ಯಾಂಕ್ ಖಾತೆಯಿಂದ ಹಣ ಕಳೆದುಹೋಗಬಹುದು ಎಂಬ ಆತಂಕದಲ್ಲಿ ಹಲವು ಬಳಕೆದಾರರು ತಮ್ಮ ಬ್ಯಾಂಕ್ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಿ ಘಟನೆ ಬಗ್ಗೆ ವಿವರಿಸಿದ್ದಾರೆ. ಇನ್ನು ಕೆಲ ಬಳಕೆದಾರರು ಭಾರತೀಯ ರಾಷ್ಟ್ರೀಯ ಪಾವತಿ ನಿಗಮಕ್ಕೆ (ಎನ್‌ಪಿಸಿಐ) ಈ ಬಗ್ಗೆ ದೂರು ಸಲ್ಲಿಸಿದ್ದಾರೆ.

ಈ ಸುದ್ದಿ ಜಾಲತಾಣಗಳಲ್ಲಿ ವೈರಲ್ ಆದ ನಂತರ ಟ್ರೂಕಾಲರ್ ಪ್ರತಿಕ್ರಿಯೆ ನೀಡಿದೆ. ಇದೊಂದು ತಾಂತ್ರಿಕ ದೋಷ (ಬಗ್) ಎಂದು ಹೇಳಿರುವ ಸಂಸ್ಥೆ, ಆಪ್‌ಗೆ ಮಾಡಲಾಗಿರುವ ಹೊಸ ಅಪ್‌ಡೇಟ್‌ನಲ್ಲಿ ಈ ಬಗ್ ಸೇರಿಕೊಂಡಿದೆ ಎಂದು ಹೇಳಿದೆ. ಈ ದೋಷವನ್ನು ಕೂಡಲೇ ಸರಿಪಡಿಸುವುದಾಗಿ ಭರವಸೆ ನೀಡುವ ಮೂಲಕ ತನ್ನ ಬಳಕೆದಾರ ಅನುಮಾನಕ್ಕೆ ಫುಲ್‌ಸ್ಟಾಪ್ ಇಡಲು ಮುಂದಾಗಿದೆ. ಆದರೆ, ಟ್ರೂ ಕಾಲರ್ ಮಾತನ್ನ ನಂಬದ ಹಲವರು ಇದನ್ನು ಯುಪಿಐ ಸ್ಕ್ಯಾಮ್ ಎಂದು ಕರೆದಿದ್ದಾರೆ.
ಈ ಬಗ್ಗೆ ಸಾಕಷ್ಟು ಮಂದಿ ಟ್ವಿಟರ್, ಫೇಸ್‌ಬುಕ್‌ನಲ್ಲಿ ಆಕ್ರೋಶ ಹೊರಗೆಡವಿದ್ದು, ಇದನ್ನು ಒಂದು ಎಡವಟ್ಟು ಎನ್ನಲು ಸಾಧ್ಯವಿಲ್ಲ. ಇದು ಬೇಕೆಂದೆ ಆಗಿರಬೇಕು. ಟ್ರೂ ಕಾಲರ್ ಐಸಿಐಸಿಐ ಬ್ಯಾಂಕ್ ಪಾಲುದಾರಿಕೆಯೊಂದಿಗೆ ಯುಪಿಐ ಐಡಿ ರಚಿಸಿ, ಯಾವುದೇ ಯುಪಿಐ ಐಡಿ ಅಥವಾ ಭೀಮ್ ಆಪ್ ಮೂಲಕ ನೋಂದಾಯಿಸಲಾದ ಮೊಬೈಲ್ ನಂಬರ್‌ಗೆ ಹಣ ಕಳುಹಿಸಲು ತನ್ನ ಬಳಕೆದಾರರಿಗೆ ಅನುವು ಮಾಡಿಕೊಟ್ಟಿದೆ. ಇದರ ಜನಪ್ರಿಯತೆಗಾಗಿ ಇಂತಹ ಗೇಮ್ ಆಡಿದೆ ಎಂದು ಸಹ ದೂರಲಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470