ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಟ್ರೂ ಕಾಲರ್‌ನಿಂದ ವಿಶೇಷ ಅಭಿಯಾನ!

|

ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ. ವಿಶ್ವದೆಲ್ಲೆಡೆ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರ ಹಕ್ಕುಗಳು, ಗೌರವ, ಸುರಕ್ಷತೆಯ ಬಗ್ಗೆ ಎಲ್ಲೆಡೆ ಚರ್ಚೆಯಾಗ್ತಿದೆ. ಇದೇ ಸಂದರ್ಭದಲ್ಲಿ ಜನಪ್ರಿಯ ಅಪ್ಲಿಕೇಶನ್‌ ಟ್ರೂ ಕಾಲರ್‌ ಮಹಿಳೆಯರಿಗಾಗಿ ಕ್ಯಾಲಿಟೌಟ್ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನದಲ್ಲಿ ಮಹಿಳೆಯರು ಕರೆಗಳು ಮತ್ತು SMS ಮೂಲಕ ತಾವು ಎದುರಿಸುತ್ತಿರುವ ಕಿರುಕುಳದ ಬಗ್ಗೆ ಮಾತನಾಡಲು ಅವಕಾಶ ನೀಡಲಿದೆ. ಈ ಹೊಸ #ಕ್ಯಾಲಿಟೌಟ್‌ ಅಭಿಯಾನವು ಈ ಹಿಂದೆ ಟ್ರೂ ಕಾಲರ್‌ ಪ್ರಾರಂಭಿಸಿದ #itsnotok ಅಭಿಯಾನದ ವಿಸ್ತರಣೆಯಾಗಿದೆ.

ಅಪ್ಲಿಕೇಶನ್‌

ಹೌದು, ಟ್ರೂ ಕಾಲರ್‌ ಅಪ್ಲಿಕೇಶನ್‌ ಮಹಿಳೆಯರ ದಿನಾಚರಣೆಯ ಪ್ರಯುಕ್ತ ಕ್ಯಾಲಿಟೌಟ್‌ ಅಭಿಯಾನವನ್ನು ಆರಂಬಿಸಿದೆ. ಈ ಅಭಿಯಾನದಲ್ಲಿ ಮಹಿಳೆಯರು ತಾವು ಎದುರಿಸುತ್ತಿರುವ ಕಿರುಕುಳದ ಬಗ್ಗೆ ಮುಕ್ತವಾಗಿ ಮಾತಾನಾಡಲು ಅವಕಾಶ ಸಿಗಲಿದೆ. ಇದನ್ನು ಎಸ್‌ಎಂಎಸ್‌ ಮೂಲಕವೂ ಕೂಡ ಹಂಚಿಕೊಳ್ಳಬಹುದಾಗಿದೆ. ಟ್ರೂಕಾಲರ್ ಮಹಿಳೆಯರ ಮೇಲೆ ಆಗುತ್ತಿರುವ ಕಿರುಕುಳದ ವಿರುದ್ದ ಜಾಗೃತಿ ಮೂಡಿಸಲು ಈ ಅಭಿಯಾನ ನಡೆಸುತ್ತಿದೆ. ಹಾಗಾದ್ರೆ ಟ್ರೂ ಕಾಲರ್‌ ನಡೆಸುತ್ತಿರುವ ಅಭಿಯಾನದ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಪ್ಲಿಕೇಶನ್‌

ಟ್ರೂ ಕಾಲರ್‌ ಅಪ್ಲಿಕೇಶನ್‌ ಮಹಿಳೆಯರ ಮೇಲಿನ ಕಿರುಕುಳ ಹಾಗೂ ಕಿರುಕುಳದ ವಿರುದ್ಧ ಕ್ರಮ ಕೈಗೊಳ್ಳಲು ಪ್ರೋತ್ಸಾಹಿಸಲು ಬಯಸುತ್ತದೆ. ಇದಕ್ಕಾಗಿ ಟ್ರೂ ಕಾಲರ್‌ ಮೊದಲ ಬಾರಿಗೆ 2017 ರಲ್ಲಿಯೇ ಅಭಿಯಾನ ಪ್ರಾರಂಬಿಸಿತ್ತು. ಅಂದಿನಿಂದ ಪ್ರತಿವರ್ಷ ಮಹಿಳೆಯರ ದಿನಾಚರಣೆಯಂದು ವಿಶೇಷ ಅಭಿಯಾನ ನಡೆಸುತ್ತಾ ಬಂದಿದೆ. 2020 ರಲ್ಲಿ ಟ್ರೂ ಕಾಲರ್‌ ಅಪ್ಲಿಕೇಶನ್‌ ನಡೆಸಿದ ಅಧ್ಯಯನಗಳ ಪ್ರಕಾರ, ಭಾರತದಲ್ಲಿ 10 ಮಹಿಳೆಯರಲ್ಲಿ 8 ಮಹಿಳೆಯರು ಕಿರುಕುಳ ಮತ್ತು ಅನುಚಿತ ಕರೆಗಳನ್ನು ಸ್ವೀಕರಿಸುತ್ತಾರೆ. ದೇಶದ ಪ್ರತಿ ಐದು ಮಹಿಳೆಯರಲ್ಲಿ ಒಬ್ಬರು ಅನುಚಿತ ಮತ್ತು ಲೈಂಗಿಕ ಕರೆಗಳು ಅಥವಾ SMS ಸ್ವೀಕರಿಸುತ್ತಾರೆ. ಅಲ್ಲದೆ ಈ ಕರೆಗಳು ಮತ್ತು ಸಂದೇಶಗಳಲ್ಲಿ 76% ಮಹಿಳೆಯರಿಗೆ ಪರಿಚಯವಿಲ್ಲದ ಜನರಿಂದ ಬಂದಿದ್ದರೆ, 4% ತಿಳಿದಿರುವ ಪರಿಚಿತರಿಂದ ಬಂದಿವೆ.

ಕಾಲರ್‌

ಇನ್ನು ಭಾರತದಲ್ಲಿ, ಮೆಟ್ರೋ ನಗರಗಳಲ್ಲಿನ ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಿರುಕುಳ ನೀಡುವ ಕರೆಗಳನ್ನು ಸ್ವೀಕರಿಸುತ್ತಿದ್ದಾರೆ ಎಂದು ಟ್ರೂ ಕಾಲರ್‌ ಹೇಳಿದೆ. ಇದರಲ್ಲಿ ಚೆನ್ನೈನಲ್ಲಿ ಹೆಚ್ಚಿನ ಮಹಿಳೆಯರು ಈ ರೀತಿಯ ಕರೆಗಳಿಗೆ ಒಳಗಾಗಿದ್ದಾರೆ. ನಂತರದ ಸ್ಥಾನಗಳಲ್ಲಿ ನವದೆಹಲಿ, ಪುಣೆ ಮತ್ತು ಕೋಲ್ಕತ್ತಾ ನಗರಗಳು ಸೇರಿವೆ. ಇದೇ ಸಮಯದಲ್ಲಿ, ಭಾರತದ ಮಹಿಳೆಯರು ಈ ಕರೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದರಲ್ಲಿ ಹತ್ತರಲ್ಲಿ ಏಳು ಮಹಿಳೆಯರು ಮುಂದಾಗುತ್ತಾರೆ ಎನ್ನುವುದನ್ನು ಬಹಿರಂಗಪಡಿಸಿದೆ. ಆದರೆ ಈ ಕ್ರಮಗಳು ಅಪರೂಪವಾಗಿ ಅಧಿಕಾರಿಗಳಿಗೆ ವರದಿ ನೀಡುತ್ತವೆ. ಏಕೆಂದರೆ ದೇಶದ ಹೆಚ್ಚಿನ ಮಹಿಳೆಯರು ಕರೆ ಮಾಡುವವರನ್ನು ಬ್ಲಾಕ್‌ ಮಾಡುವುದಕ್ಕೆ ಮುಂದಾಗುತ್ತಾರೆ ಎನ್ನಲಾಗಿದೆ.

ಕಾಲರ್‌

ಸದ್ಯ ಟ್ರೂ ಕಾಲರ್‌ ತನ್ನ ಕ್ಯಾಲಿಟೌಟ್‌ ಅಭಿಯಾನದಲ್ಲಿ ಮಹಿಳೆಯರಿಗೆ ಜಾಗೃತಿ ಮೂಡಿಸುವುದಕ್ಕಾಗಿ ಸೈಬರ್ ಪೀಸ್ ಫೌಂಡೇಶನ್‌ನೊಂದಿಗೆ ಕೈ ಜೋಡಿಸಿದೆ. ಪೀಸ್‌ ಫೌಂಡೇಶನ್‌ ಸಹಭಾಗಿತ್ವದಲ್ಲಿ ಸೈಬರ್-ಸುರಕ್ಷತಾ ಕಾರ್ಯಕ್ರಮವನ್ನು ಪ್ರಾರಂಭಿಸಲು 15 ಲಕ್ಷ ಮಹಿಳೆಯರಿಗೆ ಆನ್‌ಲೈನ್‌ನಲ್ಲಿ ಸುರಕ್ಷಿತ ತರಬೇತಿ ನೀಡುವ ಗುರಿಯನ್ನು ಹೊಂದಿದೆ. ಈ ಮೂಲಕ ಮಹಿಳೆಯರ ಗೌರವ ಹಾಗೂ ಸುರಕ್ಷತೆಗಾಗಿ ಟ್ರೂ ಕಾಲರ್‌ ದಿಟ್ಟ ಹೆಜ್ಜೆ ಇಟ್ಟಿದೆ.

ಅಪ್ಲಿಕೇಶನ್‌

ಇದಲ್ಲದೆ ಟ್ರೂ ಕಾಲರ್‌ ಅಪ್ಲಿಕೇಶನ್‌ ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ ಜಾಗತಿಕವಾಗಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ತಯಾರಕರೊಂದಿಗೆ ಹೊಸ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಬಳಕೆದಾರರ ಸಂಖ್ಯೆ ಹೆಚ್ಚಳವಾಗಲಿದೆ. ಪ್ರಸ್ತುತ ಟ್ರೂ ಕಾಲರ್‌ ಭಾರತದಲ್ಲಿ 220 ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ. ಮುಂಬರುವ ಮೂರು ವರ್ಷಗಳಲ್ಲಿ ಈ ಸಂಖ್ಯೆಯು ಇನ್ನು ಹೆಚ್ಚಾಗುವ ಗುರುಯನ್ನು ಟ್ರೂ ಕಾಲರ್‌ ಹೊಂದಿದೆ. ಇನ್ನಷ್ಟು ವೇಗವಾಗಿ ಬೆಳೆಯುವುದಕ್ಕಗಿ ಈ ರೀತಿಯ ಪಾಲುದಾರಿಕೆಗಳೊಂದಿಗೆ ನಾವು ಉತ್ತಮ ಸಾಮರ್ಥ್ಯವನ್ನು ನೀಡುತ್ತೇವೆ ಎಂದು ಟ್ರೂ ಕಾಲರ್‌ ಅಪ್ಲಿಕೇಶನ್‌ ಹೇಳಿಕೊಂಡಿದೆ.

Best Mobiles in India

English summary
truecaller encourages women to callout harassment with its latest campaign

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X