ಬಳಕೆದಾರರಿಗೆ ಬಿಗ್‌ ಶಾಕ್‌ ನೀಡಿದ ಟ್ರೂ ಕಾಲರ್‌ ಅಪ್ಲಿಕೇಶನ್‌!

|

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಸುವ ಹೆಚ್ಚಿನ ಜನರು ಟ್ರೂ ಕಾಲರ್‌ ಅಪ್ಲಿಕೇಶನ್‌ ಬಳಸುವುದು ಸಾಮಾನ್ಯವಾಗಿದೆ. ಟ್ರೂ ಕಾಲರ್‌ ಅಪ್ಲಿಕೇಶನ್‌ ಮೂಲಕ ಅಪರಿಚಿತ ಸಂಖ್ಯೆಯಿಂದ ಬರುವ ಕರೆ ಯಾರದ್ದು ಎಂದು ಕಂಡುಹಿಡಿಯುವುದು ಸುಲಭವಾಗಿದೆ. ಇದಲ್ಲದೆ ಟ್ರೂ ಕಾಲರ್‌ ಅಪ್ಲಿಕೇಶನ್‌ನಲ್ಲಿ ಕಾಲ್‌ ರೆಕಾರ್ಡಿಂಗ್‌ ಫೀಚರ್ಸ್‌ ಕೂಡ ಲಭ್ಯವಿದೆ. ಇದರಿಂದ ನಿಮಗೆ ಬರುವ ಕರೆಗಳನ್ನು ರೆಕಾರ್ಡಿಂಗ್‌ ಮಾಡುವುದಕ್ಕೆ ಸಾಧ್ಯವಿದೆ. ಆದರೆ ಇದೀಗ ಟ್ರೂ ಕಾಲರ್‌ ಅಪ್ಲಿಕೇಶನ್‌ ಕೂಡ ಮೇ 11ರಿಂದ ಕಾಲ್‌ ರೆಕಾರ್ಡಿಂಗ್‌ ಫೀಚರ್ಸ್‌ ಅನ್ನು ಸ್ಟಾಪ್‌ ಮಾಡುವುದಾಗಿ ಹೇಳಿದೆ.

ಟ್ರೂ ಕಾಲರ್‌ ಅಪ್ಲಿಕೇಶನ್‌

ಹೌದು, ಟ್ರೂ ಕಾಲರ್‌ ಅಪ್ಲಿಕೇಶನ್‌ ಗೂಗಲ್‌ ಪ್ಲೇ ಸ್ಟೋರ್‌ನ ಹೊಸ ನೀತಿ ಅನ್ವಯ ಮೇ 11 ರಿಂದ ತನ್ನ ಕರೆ ರೆಕಾರ್ಡಿಂಗ್ ಫೀಚರ್ಸ್‌ ನೀಡುವುದಿಲ್ಲ ಎಂದು ಘೋಷಿಸಿದೆ. ಗೂಗಲ್‌ ಪ್ಲೇ ಸ್ಟೋರ್‌ ತನ್ನ ಪ್ರವೇಶಿಸುವಿಕೆ API ಗೆ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳ ಪ್ರವೇಶವನ್ನು ನಿರ್ಬಂಧಿಸುವ ಹೊಸ ನೀತಿಯನ್ನು ಮೇ 11 ರಿಂದ ಜಾರಿಗೊಳಿಸಲಿದೆ. ಈ ಹೊಸ ನೀತಿಯ ಅನ್ವಯ ಕಾಲ್‌ ರೆಕಾರ್ಡಿಂಗ್‌ ಮಾಡುವುದರಿಂದ ಬಳಕೆದಾರರ ಪ್ರೈವೆಸಿಗೆ ದಕ್ಕೆ ಬರಲಿದೆ ಎಂದು ಗೂಗಲ್‌ ಹೇಳಿದೆ. ಇನ್ನುಳಿದಂತೆ ಟ್ರೂ ಕಾಲರ್‌ ಅಪ್ಲಿಕೇಶನ್‌ ಕಾಲ್‌ ರೆಕಾರ್ಡಿಂಗ್‌ ಫೀಚರ್ಸ್‌ ಸ್ಟಾಪ್‌ ಮಾಡುವುದರ ಬಗ್ಗೆ ಏನು ಹೇಳಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ರೂಕಾಲರ್‌

ಟ್ರೂಕಾಲರ್‌ ಅಪ್ಲಿಕೇಶನ್‌ನಲ್ಲಿ ಕಾಲ್‌ ರೆಕಾರ್ಡಿಂಗ್ ಎಲ್ಲರಿಗೂ ಫ್ರೀ ಆಗಿದೆ. ಅನುಮತಿ-ಆಧಾರಿತ ಮತ್ತು ಬಳಕೆದಾರರು ಗೂಗಲ್‌ ಆಕ್ಸೆಸಿಬಿಲಿಟಿ API ಬಳಸಿಕೊಂಡು ಫೀಚರ್ಸ್‌ ಅನ್ನು ಸಕ್ರಿಯಗೊಳಿಸಲು ಅಗತ್ಯವಿದೆ ಎಂದು ಟ್ರೂಕಾಲರ್ ತಿಳಿಸಿದೆ. ಟ್ರೂ ಕಾಲರ್‌ ಈಗಾಗಲೇ ಗ್ರಾಹಕರ ಬೇಡಿಕೆಯಂತೆ ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಕರೆ ರೆಕಾರ್ಡಿಂಗ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಆದರೆ ಇದೀಗ ಗೂಗಲ್‌ ಡೆವಲಪರ್ ಪ್ರೋಗ್ರಾಂ ನೀತಿಗಳ ಪ್ರಕಾರ,ಇನ್ಮುಂದೆ ಟ್ರೂ ಕಾಲರ್‌ ಕಾಲ್‌ ರೆಕಾರ್ಡಿಂಗ್ ಅನ್ನು ಸ್ಟಾಪ್‌ ಮಾಡಲಿದೆ.

ಟ್ರೂ ಕಾಲರ್‌

ಇನ್ನು ಟ್ರೂ ಕಾಲರ್‌ ಮೊದಲ ಪಕ್ಷದ ಡಯಲರ್ ಅಪ್ಲಿಕೇಶನ್‌ಗಳು ಮತ್ತು ಫೋನ್‌ಗಳಲ್ಲಿ ಮೊದಲೇ ಇನ್‌ಸ್ಟಾಲ್‌ ಮಾಡಲಾದ ಗೂಗಲ್‌ ಡಯಲರ್ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಫೋನ್ ಕರೆಗಳನ್ನು ರೆಕಾರ್ಡ್ ಮಾಡಲು ಬಳಕೆದಾರರಿಗೆ ಅನುಮತಿಸುತ್ತದೆ. ಆದರೆ ಆಂಡ್ರಾಯ್ಡ್ ಬಳಕೆದಾರರಿಗೆ ಹೆಚ್ಚಿನ ಗೌಪ್ಯತೆಯನ್ನು ಒದಗಿಸಲು ಮತ್ತು ಜಾಗತಿಕವಾಗಿ ಕರೆ ರೆಕಾರ್ಡಿಂಗ್ ಕಾನೂನುಗಳನ್ನು ಅನುಸರಿಸಲು ಗೂಗಲ್‌ ಈ ಹೊಸ ಬದಲಾವಣೆ ನೀತಿಯನ್ನು ಜಾರಿಗೆ ತರಲು ಮುಂದಾಗಿದೆ.

ಗೂಗಲ್‌

ಆದರೆ ಗೂಗಲ್‌ ಆಕ್ಸೆಸಿಬಿಲಿಟಿ API ವಿನ್ಯಾಸಗೊಳಿಸಲಾಗಿಲ್ಲ ಮತ್ತು ರಿಮೋಟ್ ಕಾಲ್‌ ಆಡಿಯೊ ರೆಕಾರ್ಡಿಂಗ್‌ ಮಾಡಲು ಸಾದ್ಯವಿಲ್ಲ ಎಂದು ಗೂಗಲ್ ಹೇಳಿದೆ. ಆಂಡ್ರಾಯ್ಡ್ 10 ಅಥವಾ ಗೂಗಲ್‌ನ ಆಪರೇಟಿಂಗ್ ಸಿಸ್ಟಂನ ಹೊಸ ಆವೃತ್ತಿಗಳಲ್ಲಿ ಈ ಹೊಸ ನಿಯಮ ಜಾರಿಗೆ ಬರಲಿದೆ. ಆಂಡ್ರಾಯ್ಡ್‌ ಪ್ರವೇಶಿಸುವಿಕೆ ಸಮಸ್ಯೆಗಳಿರುವ ಬಳಕೆದಾರರಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಅಪ್ಲಿಕೇಶನ್‌ಗಳಿಂದ ಪ್ರವೇಶಿಸುವಿಕೆ API ಅನ್ನು ಸಹ ಬಳಸಿಕೊಳ್ಳಲಾಗುತ್ತದೆ.

ಅಂತರ್ನಿರ್ಮಿತ

ಈ ಬದಲಾವಣೆಯಿಂದ ಅಂತರ್ನಿರ್ಮಿತ ಅಪ್ಲಿಕೇಶನ್‌ಗಳು ಪರಿಣಾಮ ಬೀರುವುದಿಲ್ಲ. ಅಂದರೆ ಸ್ಯಾಮ್‌ಸಂಗ್‌, ಒನ್‌ಪ್ಲಸ್‌, ಶಿಯೋಮಿ ಮತ್ತು ಒಪ್ಪೋ ಕಂಪನಿಗಳು ನೀಡುವ ಇನ್-ಬಿಲ್ಟ್ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್‌ಗಳ ಮೇಲೆ ಯಾವುದೇ ಬದಲಾವಣೆ ಆಗುವುದಿಲ್ಲ. ಸದ್ಯ ಈ ಬದಲಾವಣೆಗೆ ಸಂಬಂಧಿಸಿದಂತೆ, ಈ ನೀತಿಯನ್ನು ಗೂಗಲ್‌ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದು ಕೇವಲ ಫೋನ್‌ನಲ್ಲಿ ಮಾತ್ರ ಕಾಲ್‌ ರೆಕಾರ್ಡಿಂಗ್‌ ಅನ್ನು ನಿರ್ಬಂಧಿಸುತ್ತದೆಯೇ ಅಥವಾ ತಮ್ಮ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲು ಅಪ್ಲಿಕೇಶನ್ ಡೆವಲಪರ್‌ಗಳಿಗೆ ಹೇಳುತ್ತದೆಯೆ ಎನ್ನುವುದನ್ನು ಗೂಗಲ್‌ ಇನ್ನು ದೃಢೀಕರಿಸಿಲ್ಲ. ಸದ್ಯ ಈ ಹೊಸ ನಿಯಮ ಇದೇ ಮೇ 11ರಿಂದ ಜಾರಿಗೆ ಬರಲಿದ್ದು, ಗೂಗಲ್‌ ಈ ನಿಯಮವನ್ನು ಹೇಗೆ ಜಾರಿಗೊಳಿಸಲಿದೆ ಎನ್ನುವುದು ತಿಳಿಯಲಿದೆ.

Best Mobiles in India

English summary
Truecaller has announced that it will not offer its call recording feature from May 11

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X