ಉಪಯುಕ್ತ ಫೀಚರ್ಸ್‌ಗಳನ್ನು ಅನಾವರಣ ಮಾಡಿದ ಟ್ರೂ ಕಾಲರ್‌!

|

ಸ್ಮಾರ್ಟ್‌ಫೋನ್‌ ಪ್ರಿಯರು ಹೆಚ್ಚಾಗಿ ಬಳಸುವ ಅಪ್ಲಿಕೇಶನ್‌ಗಳಲ್ಲಿ ಟ್ರೂ ಕಾಲರ್‌ ಅಪ್ಲಿಕೇಶನ್‌ ಕೂಡ ಸೇರಿದೆ. ನಿಮ್ಮ ಫೋನ್‌ಗೆ ಬರುವ ಅಪರಿಚಿತ ಕರೆಗಳ ಹೆಸರನ್ನು ಪತ್ತೆ ಹಚ್ಚಲು ಟ್ರೂ ಕಾಲರ್‌ ಸಹಾಯಮಾಡಲಿದೆ. ಇದರಿಂದ ಟ್ರೂ ಕಾಲರ್‌ ಅಪ್ಲಿಕೇಶನ್‌ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇನ್ನು ಟ್ರೂ ಕಾಲರ್‌ ಅಪ್ಲಿಕೇಶನ್‌ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಟ್ರೂ ಕಾಲರ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಅಪ್ಡೇಟ್‌ ಅನ್ನು ಪರಿಚಯಿಸಿದೆ. ಈ ಅಪ್ಡೇಟ್‌ನಲ್ಲಿ ಅರ್ಜೆಂಟ್‌ ಮೆಸೇಜಸ್‌, ಸ್ಮಾರ್ಟ್ ಕಾರ್ಡ್ ಶೇರಿಂಗ್‌, ಪರಿಷ್ಕರಿಸಿದ ಸ್ಮಾರ್ಟ್ SMS, ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದೆ.

ಅಪ್ಲಿಕೇಶನ್‌

ಹೌದು, ಟ್ರೂ ಕಾಲರ್‌ ಅಪ್ಲಿಕೇಶನ್‌ ಹೊಸ ಫೀಚರ್ಸ್‌ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಅರ್ಜೆಂಟ್‌ ಮೆಸೇಜಸ್‌, ಸ್ಮಾರ್ಟ್ ಕಾರ್ಡ್ ಶೇರಿಂಗ್‌, ಪರಿಷ್ಕರಿಸಿದ ಸ್ಮಾರ್ಟ್ SMS, ಸೆಂಟ್‌ ಚಾಟ್ ಮೆಸೇಜ್‌ ಎಡಿಟ್‌ ಮಾಡುವ ಸಾಮರ್ಥ್ಯ ಮತ್ತು ಡೀಫಾಲ್ಟ್ ವ್ಯೂ ಸೆಟ್‌ ಮಾಡುವ ಸಾಮರ್ಥ್ಯದ ಫೀಚರ್ಸ್‌ಗಳು ಸೇರಿವೆ. ಈ ಫೀಚರ್ಸ್‌ಗಳು ಬಳಕೆದಾರರು ಸಂದೇಶ ಕಳುಹಿಸುವಾಗ ಎದುರಿಸುವ ಸಮಯದ ಅಭಾವವನ್ನು ಸರಿ ಪಡಿಸುವ ಗುರಿಯನ್ನು ಹೊಂದಿವೆ. ಹಾಗಾದ್ರೆ ಟ್ರೂ ಕಾಲರ್‌ ಪರಿಚಯಿಸಿರುವ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅರ್ಜೆಂಟ್‌ ಮೆಸೇಜಸ್‌

ಅರ್ಜೆಂಟ್‌ ಮೆಸೇಜಸ್‌

ಟ್ರೂ ಕಾಲರ್‌ ಪರಿಚಯಿಸಿರುವ ಅರ್ಜೆಂಟ್‌ ಮೆಸೇಜಸ್‌ ಫೀಚರ್ಸ್‌ ಬಳಕೆದಾರರಿಗೆ ತಮ್ಮ ನಿರ್ಣಾಯಕ ಮತ್ತು ಸಮಯ-ಸೂಕ್ಷ್ಮ ಸಂದೇಶಗಳನ್ನು ಕಳುಹಿಸುವುದಕ್ಕೆ ಅವಕಾಶ ನೀಡಲಿದೆ. ಅಂದರೆ ಅರ್ಜೆಂಟ್‌ ಸಂದೇಶಗಳನ್ನು ಕಳುಹಿಸಿದಾಗ ಕಸ್ಟಮ್ ನೋಟಿಫಿಕೇಶನ್‌ ಕಳುಹಿಸುವ ಮೂಲಕ ಹೆಚ್ಚು ಗೋಚರಿಸುವಂತೆ ಮಾಡುತ್ತದೆ. ಈ ಹೆಚ್ಚಿನ ಗೋಚರತೆಯ ಸಂದೇಶದ ಕಾರಣದಿಂದ ಸಂದೇಶ ಸ್ವೀಕರಿಸುವವರು ಬೇರೆ ಅಪ್ಲಿಕೇಶನ್‌ ತೆರೆದಿದ್ದರ ಕೂಡ ಸ್ಕ್ರೀನ್‌ ಮೇಲೆ ಸಂದೇಶ ಪಾಪ್ ಅಪ್ ಆಗುತ್ತದೆ. ಅಲ್ಲದೆ ಸಂದೇಶ ಸ್ವೀಕರಿಸುವವರು ಅದನ್ನು ಓದುವವರೆಗೆ ನೋಟಿಫಿಕೇಶನ್‌ ಕಣ್ಮರೆಯಾಗುವುದಿಲ್ಲ.

ಸ್ಮಾರ್ಟ್ ಕಾರ್ಡ್‌ ಶೇರಿಂಗ್‌

ಸ್ಮಾರ್ಟ್ ಕಾರ್ಡ್‌ ಶೇರಿಂಗ್‌

ಇನ್ನು ಟ್ರೂಕಾಲರ್‌ ಪ್ಲಾಟ್‌ಫಾರ್ಮ್‌ ಸೇರಿರುವ ಹೊಸ ಫೀಚರ್ಸ್‌ಗಳಲ್ಲಿ ಸ್ಮಾರ್ಟ್ ಕಾರ್ಡ್‌ಗಳು ಕೂಡ ಸೇರಿದೆ. ಈ ಹೊಸ ಫೀಚರ್ಸ್‌ ನಿಮ್ಮ ಸಂಕೀರ್ಣ ಡೇಟಾದಿಂದ ಪ್ರಮುಖ ಮಾಹಿತಿಯನ್ನು ಹೊರತೆಗೆಯುವುದಕ್ಕೆ ಸಹಾಯ ಮಾಡಲಿದೆ. ಇದರಿಂದ ನಿಮ್ಮ ಪ್ರಮುಖ ಮಾಹಿತಿಯನ್ನು ಸುಲಭವಾಗಿ ಓದಲು ಕಾರ್ಡ್‌ನಂತೆ ಪ್ರಸ್ತುತಪಡಿಸುತ್ತದೆ. ಇದು ವಹಿವಾಟು ಡೇಟಾ, ಟಿಕೆಟ್‌ಗಳು, OTP ಗಳಂತಹ ಪ್ರಮುಖ SMS ಗಳನ್ನು ನೀವು ಸ್ವೀಕರಿಸಿದಾಗ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್ ಕಾರ್ಡ್‌ಗಳನ್ನು SMS ನ ಸಂಪೂರ್ಣ ಪಠ್ಯವನ್ನು ಹಂಚಿಕೊಳ್ಳುವ ಬದಲು ಯಾವುದೇ ಪ್ಲಾಟ್‌ಫಾರ್ಮ್‌ನಾದ್ಯಂತ ಇಮೇಜ್‌ ಮಾದರಿಯಲ್ಲಿ ಶೇರ್‌ ಮಾಡುವುದಕ್ಕೆ ಅವಕಾಶ ನೀಡಲಿದೆ.

ಸ್ಮಾರ್ಟ್‌ ಎಸ್‌ಎಂಎಸ್‌

ಸ್ಮಾರ್ಟ್‌ ಎಸ್‌ಎಂಎಸ್‌

ಸ್ಮಾರ್ಟ್ ಎಸ್‌ಎಂಎಸ್‌ ಫೀಚರ್ಸ್‌ ಬಳಕೆದಾರರಿಗೆ ಸಾವಿರಾರು ಟೆಕ್ಸ್ಟ್‌ ಮೆಸೇಜ್‌ಗಳನ್ನು ಆಯೋಜಿಸಲು ಸಹಾಯ ಮಾಡಲಿದೆ. ಅಂದರೆ ಈ ಫೀಚರ್ಸ್‌ ವಹಿವಾಟುಗಳು, ವಿತರಣೆಗಳು, ಪ್ರಯಾಣ, ಬಿಲ್‌ಗಳು ಇತ್ಯಾದಿಗಳಿಗೆ ಸ್ಮಾರ್ಟ್ ಫಿಲ್ಟರ್‌ಗಳನ್ನು ನೀಡಲಿದೆ. ಬಳಕೆದಾರರ ಪ್ರತಿಕ್ರಿಯೆಯನ್ನು ಆಧರಿಸಿ ಇವುಗಳನ್ನು ಪರಿಷ್ಕರಿಸಲಾಗುತ್ತದೆ. ಅಪ್ಲಿಕೇಶನ್ ಎಲ್ಲಾ ಪ್ರಮುಖ ಸಂದೇಶಗಳನ್ನು ಕಾಲಾನುಕ್ರಮದಲ್ಲಿ ಪ್ರಸ್ತುತಪಡಿಸುವುದಕ್ಕೆ ಇದು ಅನುಕೂಲಕರವಾಗಿದೆ.

ಮೆಸೇಜ್‌ ಎಡಿಟ್‌

ಮೆಸೇಜ್‌ ಎಡಿಟ್‌

ಇನ್ನು ನೀವು ಈಗಾಗಲೇ ಕಳುಹಿಸಿರುವ ಸಂದೇಶ ತಪ್ಪಾಗಿದ್ದು, ಬೇರೆಯವರು ಚಾಟ್‌ ಸಂದೇಶಗಳನ್ನು ವೀಕ್ಷಿಸಿದ ನಂತರವೂ ಸಂದೇಶಗಳನ್ನು ಎಡಿಟ್ ಮಾಡುವುದಕ್ಕೆ ಅವಕಾಶ ನೀಡಲಿದೆ. ಅಲ್ಲದೆ ನೀವು ಸೆಂಟ್‌ ಮಾಡಿರುವ ಸಂದೇಶದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಬಹುದಾಗಿದೆ.

ಡೀಫಾಲ್ಟ್‌ ವ್ಯೂ

ಡೀಫಾಲ್ಟ್‌ ವ್ಯೂ

ಟ್ರೂಕಾಲರ್ ಸೇರಿರುವ ಮತ್ತೊಂದು ಪ್ರಮುಖೀ ಫೀಚರ್ಸ್‌ ಅಂದರೆ ಅದು ಡೀಫಾಲ್ಟ್ ವ್ಯೂ ಆಗಿದೆ. ಇದರಿಂದ ನೀವು ಕರೆಗಳು ಅಥವಾ ಸಂದೇಶಗಳ ಟ್ಯಾಬ್‌ನಲ್ಲಿ ದೀರ್ಘಕಾಲ ಒತ್ತಿದರೆ, ಅದನ್ನು ಡೀಫಾಲ್ಟ್ ಟ್ಯಾಬ್‌ನಂತೆ ಸೆಟ್‌ ಮಾಡುವುದಕ್ಕೆ ಅವಕಾಶ ಸಿಗಲಿದೆ. ನೀವು ಮುಂದಿನ ಬಾರಿ ಟ್ರೂ ಕಾಲರ್‌ ಅಪ್ಲಿಕೇಶನ್ ತೆರೆದಾಗ, ಅದು ಆಟೋ ಮ್ಯಾಟಿಕ್‌ ಡೀಪಾಲ್ಟ್‌ ಟ್ಯಾಬ್‌ ತೆರೆಯವಂತೆ ಮಾಡಲಿದೆ.

Best Mobiles in India

Read more about:
English summary
Truecaller has introduced an update for its app with new messaging features

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X