Home
ಸುದ್ದಿಜಾಲ

ಇನ್ಮುಂದೆ ಅಪರಿಚಿತ ಕರೆ ಮಾಡುವವರ ಗುರುತು ಪತ್ತೆ ಹಚ್ಚೋದು ಸುಲಭ!

ಅಪರಿಚಿತ ಸಂಖ್ಯೆಯಿಂದ ಕರೆ ಬಂದಾಗ ಮೊದಲಿಗೆ ನೆನಪಾಗೋದೇ ಟ್ರೂಕಾಲರ್‌ ಅಪ್ಲಿಕೇಶನ್‌. ಅಷ್ಟರ ಮಟ್ಟಿಗೆ ಟ್ರೂ ಕಾಲರ್‌ ಜನಪ್ರಿಯ ಕಾಲರ್‌ ಐಡಿ ಆಗಿ ಗುರುತಿಸಿಕೊಂಡಿದೆ. ಇನ್ನು ಟ್ರೂ ಕಾಲರ್‌ ಕೂಡ ಬಳಕೆದಾರರ ಅನುಕೂಲಕ್ಕಾಗಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದೀಗ ಹೊಸದಾಗಿ ಭಾರತದಲ್ಲಿ ಲೈವ್‌ ಕಾಲರ್‌ ಐಡಿ ಫೀಚರ್ಸ್‌ ಪರಿಚಯಿಸಿದೆ.

ಹೌದು, ಟ್ರೂಕಾಲರ್‌ ಭಾರತದಲ್ಲಿ ಐಫೋನ್‌ ಬಳಕೆದಾರರಿಗೆ ಲೈವ್‌ ಕಾಲರ್‌ ಐಡಿ ಎನ್ನುವ ಹೊಸ ಸೇವೆಯನ್ನು ಪರಿಚಯಿಸಿದೆ. ಇದು ಹೆಸರೇ ಸೂಚಿಸುವಂತೆ ಕರೆ ಬಂದ ಕೂಡಲೇ ಸ್ಕ್ರೀನ್‌ ಮೇಲೆ ಕರೆ ಮಾಡುವವರ ಗುರುತನ್ನು ಬಹಿರಂಗಪಡಿಸಲಿದೆ. ಹಾಗಾದ್ರೆ ಈ ಹೊಸ ಸೇವೆಯ ವಿಶೇಷತೆ ಏನು? ಇದರ ಉದ್ದೇಶ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್ಮುಂದೆ ಅಪರಿಚಿತ ಕರೆ ಮಾಡುವವರ ಗುರುತು ಪತ್ತೆ ಹಚ್ಚೋದು ಸುಲಭ!

ಇಂದಿನ ದಿನಗಳಲ್ಲಿ ಕಾಲರ್‌ ಐಡಿ ಸೇವೆ ನೀಡುವ ಟ್ರೂ ಕಾಲರ್‌ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಅಪರಿಚಿತ ಸಂಖ್ಯೆಯ ಮೂಲ ಗುರುತಿಸುವ ಟ್ರೂ ಕಾಲರ್‌ನಿಂದಾಗಿ ಸ್ಪ್ಯಾಮ್‌ ಯಾವುದು, ರೊಬೋ ಕಾಲರ್‌ ಯಾವುದು ಎಂಬೆಲ್ಲಾ ಮಾಹಿತಿ ಸುಲಭವಾಗಿ ಸಿಗುತ್ತಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನೀಡುವುದಕ್ಕೆ ಲೈವ್‌ ಕಾಲರ್‌ ಐಡಿ ಸೇವೆ ಪರಿಚಯಿಸಿದೆ. ಇದು ಐಫೋನ್‌ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಕರೆ ಬಂದಾಗ ಸ್ಕ್ರೀನ್‌ ಮೇಲೆ ಕರೆ ಮಾಡುವವರ ಐಡಿಯನ್ನು ಡಿಸ್‌ಪ್ಲೇ ಮಾಡಲಿದೆ.

ಇನ್ಮುಂದೆ ಅಪರಿಚಿತ ಕರೆ ಮಾಡುವವರ ಗುರುತು ಪತ್ತೆ ಹಚ್ಚೋದು ಸುಲಭ!

ಇದರಿಂದ ಬಳಕೆದಾರರು ಯಾವುದಾದರೂ ಅಪರಿಚಿತ ಕರೆಯನ್ನು ಸ್ವೀಕರಿಸಿದರೆ, ಟ್ರೂಕಾಲರ್ ಕರೆ ಮಾಡಿದವರ ಐಡಿಯನ್ನು ತಕ್ಷಣವೇ ಗುರುತಿಸಲಿದೆ. ಈ ಸೇವೆಯು ಐಫೋನ್‌ನಲ್ಲಿ ಮಾತ್ರ ಲಭ್ಯವಾಗಲಿದೆ. ಇನ್ನು ಐಫೋನ್‌ ಬಳಕೆದಾರರು ಅಪರಿಚಿತ ಸಂಖ್ಯೆಯಿಂದ ಕಾಲ್‌ ಸ್ವಿಕರಿಸಿದಾಗ, ಕರೆ ಮಾಡಿದವರ ಐಡಿಯನ್ನು ತಿಳಿಯಲು ಸಿರಿಯನ್ನು ಆಕ್ಟಿವ್‌ ಮಾಡಬೇಖಾಗುತ್ತದೆ. ಅಲ್ಲದೆ 'ಹೇ ಸಿರಿ, ಟ್ರೂಕಾಲರ್ ಅನ್ನು ಸರ್ಚ್‌ ಮಾಡು,' ಎಂದು ಹೇಳಬೇಕು. ಕೂಡಲೇ ಸಿರಿಯು ಬಳಕೆದಾರರ ಲೈವ್ ಕಾಲರ್ ಐಡಿಯನ್ನು ಡಿಸ್‌ಪ್ಲೇ ಮಾಡಲಿದೆ.

ಇನ್ಮುಂದೆ ಅಪರಿಚಿತ ಕರೆ ಮಾಡುವವರ ಗುರುತು ಪತ್ತೆ ಹಚ್ಚೋದು ಸುಲಭ!

ಟ್ರೂ ಕಾಲರ್‌ ಪರಿಚಯಿಸಿರುವ ಲೈವ್ ಕಾಲರ್ ಐಡಿಯು ಟ್ರೂ ಕಾಲರ್‌ ಅಪ್ಲಿಕೇಶನ್‌ ಪ್ರೀಮಿಯಂ ಫೀಚರ್ಸ್‌ ಆಗಿದೆ. ಆದರಿಂದ ಈ ಫೀಚರ್ಸ್‌ ಅನ್ನು ಬಳಸಬೇಕಾದರೆ ಐಫೋನ್‌ ಬಳಕೆದಾರರು ಪ್ರೀಮಿಯಂ ಚಂದಾದಾರಿಕೆಯನ್ನು ಖರೀದಿಸಬೇಖಾಗುತ್ತದೆ. ಭಾರತದಲ್ಲಿ ಟ್ರೂ ಕಾಲರ್‌ ಪ್ರೀಮಿಯಂ ಚಂದಾದರಿಕೆಯು ಎರಡು ರೀತಿಯಲ್ಲಿ ಲಭ್ಯವಿದೆ. ಇದರಲ್ಲಿ ಪ್ರೀಮಿಯಂ ಮತ್ತು ಗೋಲ್ಡ್ ಪ್ರೀಮಿಯಂ ಎಂದು ಹೆಸರಿಸಲಾಗಿದೆ. ಆದರಿಂದ ಒಬ್ಬ ವೈಯಕ್ತಿಕ ಸದಸ್ಯರ ಪ್ರೀಮಿಯಂ ಚಂದಾದಾರಿಕೆಯು ವರ್ಷಕ್ಕೆ 529ರೂ. ಆಗಿದೆ. ಇನ್ನು ಗೋಲ್ಡ್ ಪ್ಲಾನ್ ಬೆಲೆ ವರ್ಷಕ್ಕೆ 5,000ರೂ. ಆಗಿದೆ.

ಇನ್ಮುಂದೆ ಅಪರಿಚಿತ ಕರೆ ಮಾಡುವವರ ಗುರುತು ಪತ್ತೆ ಹಚ್ಚೋದು ಸುಲಭ!

ಇನ್ನು ಕಳೆದ ವರ್ಷ ಟ್ರೂ ಕಾಲರ್‌ ಐಫೋನ್‌ ಬಳಕೆದಾರರಿಗಾಗಿ ಹೊಸ ಅಪ್ಡೇಟ್‌ ಪರಿಚಯಿಸಿತ್ತು. ಅದರಂತೆ ಐಫೋನ್ ಬಳಕೆದಾರರು ಅಪ್ಲಿಕೇಶನ್ ತೆರೆಯದೆ ಸಂಖ್ಯೆಗಳನ್ನು ಸರ್ಚ್‌ ಮಾಡಲು ಅವಕಾಶ ನೀಡಿದೆ. ಜೊತೆಗೆ ಐಫೋನ್‌ ಬಳಕೆದಾರರಿಗೆ ಟ್ರೂ ಕಾಲರ್‌ ಅಪ್ಲಿಕೇಶನ್‌ ಸಾಕಷ್ಟು ಸುರಕ್ಷತೆಯನ್ನು ನೀಡಲಿದೆ. ಇದು ಕಾಲರ್ ಐಡಿ ಜೊತೆಗೆ ಎಮೋಜಿಗಳನ್ನು ಸಹ ಪ್ರದರ್ಶಿಸುವ ಸಾಮರ್ಥ್ಯವನ್ನು ಹೊಂದಿದೆ. ಆಪಲ್‌ ಐಫೋನ್‌ ಬಳಕೆದಾರರು ಸ್ಪ್ಯಾಮ್ ಮತ್ತು ಸ್ಕ್ಯಾಮ್‌ ಕರೆಗಳನ್ನು ಸುಲಭವಾಗಿ ಗುರುತಿಸುವುದಕ್ಕೆ ಇದರಿಂದ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ. ಇದಲ್ಲದೆ ಸ್ಕ್ಯಾಮ್‌ ಕರೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ ತಮ್ಮ ಸ್ನೇಹಿತರೊಂದಿಗೆ ಸಂವಹನ ನಡೆಸುವುದಕ್ಕೆ ಸಹಾಯಕವಾಗಿದೆ. ಈ ಅಪ್ಡೇಟ್‌ ಟ್ರೂ ಕಾಲರ್‌ ಸ್ಪ್ಯಾಮ್ ಕರೆಗಳ ವಿರುದ್ಧ ರಕ್ಷಣೆಯನ್ನು ನೀಡಲಿದೆ. ಜೊತೆಗೆ ವೆರಿಫೈಡ್‌ ಬ್ಯುಸಿನೆಸ್‌ ಅನ್ನು ಗುರುತಿಸಲಿದೆ. ಇದಲ್ಲದೆ ಸ್ಪ್ಯಾಮ್ ಸಂಖ್ಯೆಗಳನ್ನು ನೈಜ ಸಮಯದಲ್ಲಿ ವರದಿ ಮಾಡಲು ಅವಕಾಶ ನೀಡಲಿದೆ.

Best Mobiles in India

English summary
Live Caller ID is a premium feature on the Truecaller app and iPhone users will need to buy a premium subscription to use this feature
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+